ಇತ್ತೀಚೆಗೆ ಟೆಕ್ನಾಲಜಿಗಳು (Technology) ಬಹಳಷ್ಟು ಅಭಿವೃದ್ಧಿಯಾಗಿದೆ. ಇದರಿಂದ ಎಷ್ಟು ಪ್ರಯೋಜನವಾಗುತ್ತಿದೆಯೋ ಅಷ್ಟೇ ದುನಷ್ಪರಿಣಾಮಗಳು ಕೂಡ ಆಗುತ್ತಿದೆ. ಟೆಕ್ ಕಂಪನಿಗಳು (Tech Company) ದಿನ ಕಳೆದಂತೆ ಹೊಸ ಹೊಸ ಸಾಧನಗಳನ್ನು ಜಗತ್ತಿಗೆ ಪರಿಚಯಿಸುತ್ತಲೇ ಇದ್ದಾರೆ. ಇದೀಗ ಬಹಳ ಮುಂಚೂಣಿಯಲ್ಲಿರುವ ಸಾಧಗಳೆಂದರೆ ಅಮೆಜಾನ್ ಇಕೋ (Amazon Echo) ಸಾಧನಗಳಂತಾನೇ ಹೇಳ್ಬಹುದು.ಅದ್ರಲ್ಲೂ ನಾವು ಅಮೆಜಾನ್ನ ಅಲೆಕ್ಸಾವನ್ನು ಹೆಚ್ಚಿನ ಕಡೆಗಳಲ್ಲಿ ನೋಡಬಹುದಾಗಿದೆ. ಯಾವುದೇ ಮ್ಯೂಸಿಕ್, ಸಿನೆಮಾಗಳನ್ನು ನೋಡಬೇಕಾದರೂ ಈ ಅಲೆಕ್ಸಾ (Alexa) ತುಂಬಾನೇ ಸಹಕಾರಿಯಾಗುತ್ತದೆ. ಈ ಅಲೆಕ್ಸಾ ಮ್ಯೂಸಿಕ್ ಪ್ಲೇ ಮಾಡಲು, ಅಲಾರಂ, ನ್ಯೂಸ್, ಹವಾಮಾನ ಅಪ್ಡೇಟ್ಗಳನ್ನು ನೀಡುವುದರೆ ಜೊತೆಗೆ ಬಳಕೆದಾರರಿಗೆ ತುಂಬಾನೇ ಸಹಕಾರಿಯಾಗುತ್ತದೆ. ಇದು ನಮ್ಮ ಆದೇಶಗಳಿಗೆ ತಕ್ಕಂತರ ಕಾರ್ಯನಿರ್ವಹಿಸುವಂತಹ ಒಂದು ಸಾಧನ ಅಂತಾನೇ ಹೇಳ್ಬಹುದು.
ಅಲೆಕ್ಸಾ ಎಂಬುದು ಒಂದು ಧ್ವನಿ ನಿಯಂತ್ರಿಸುವ ಮತ್ತು ಆಲಿಸುವ ಸಾಧನವಾಗಿದ್ದು ಗೂಗಲ್ ಅಸಿಸ್ಟಂಟ್ನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಕೆಲವೊಂದು ಬಾರಿ ಬಳಕೆದಾರರ ಮಾತುಗಳನ್ನು ಗೌಪ್ಯವಾಗಿ ಆಲಿಸುತ್ತದೆ ಎಂಬ ಸುದ್ದಿಯೂ ಹರಿದಾಟುತ್ತಿದೆ. ಆದ್ದರಿಂದ ಅಲೆಕ್ಸಾವನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು
ಫಾಕ್ಸ್ ನ್ಯೂಸ್ನ ವರದಿಯ ಪ್ರಕಾರ
"ಅಲೆಕ್ಸಾವನ್ನು ಖರೀದಿಸುವ ಪ್ರತಿಯೊಬ್ಬರೂ ಅದು ನಿಮ್ಮ ಮಾತುಗಳನ್ನು ಆಗಾಗ ರೆಕಾರ್ಡ್ ಮಾಡುತ್ತಿರಬಹುದು ಎಂಬುದನ್ನು ಅರಿತುಕೊಳ್ಳಬೇಕು, ಆದ್ದರಿಂದ ನೀವು ಎಲ್ಲಿ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಇದರಿಂದ ನಿಮಗೆ ಯಾವುದೇ ಗೊಂದಲಗಳೂ ಇರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಐಫೋನ್ನಲ್ಲಿ ಮೆಸೇಜ್ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ಓದಲೇ ಬೇಕು!
ಮಲಗುವ ಕೋಣೆಗಳಲ್ಲಿ ಇಡಬೇಡಿ
ಈ ಅಲೆಕ್ಸಾನಂತಹ ಸಾಧನಗಳನ್ನು ಎಂದಿಗೂ ಮಲಗುವ ರೂಂಗಳಲ್ಲಿ ಅಥವಾ ಬಾತ್ ರೂಂಗಳಲ್ಲಿ ಇಡಬೇಡಿ ಎಂದು ತಂತ್ರಜ್ಞರು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. ಏಕೆಂದರೆ ಈ ಅಲೆಕ್ಸಾ ನಿಮಗೆ ಗೊತ್ತಿಲ್ಲದ ಹಾಗೆಯೇ ರೆಕಾರ್ಡಿಂಗ್ ಮಾಡಿಕೊಂಡು ಅಮೆಜಾನ್ ಸಿಬ್ಬಂದಿಗೆ ಆಲಿಸುವ ಅವಕಾ ಸಿಗುತ್ತದೆ. ಆದ್ದರಿಂದ ನಿಮ್ಮ ಗೌಪ್ಯವಾದ ಮಾಹಿತಿಗಳನ್ನು ನೀವು ಹಚ್ಚಾಗಿ ನಿಮ್ಮ ಮಲಗುವ ಕೋಣೆಗಳಲ್ಲಿ ಮಾತನಾಡುವುದರಿಂದ ನ ಇಮಗೆ ಸೇಫ್ ಆದ ಜಾಗಗಳಲ್ಲಿ ಇರಿಸಿ ಎಂದು ತಂತ್ರಜ್ಞರು ಸಲಹೆ ನೀಡಿದ್ದಾರೆ.
ಅಮೆಜಾನ್ನ ಈ ಬಗ್ಗೆ ವರದಿ
ಅಮೆಜಾನ್ ಈ ವರದಿಯನ್ನು ಗಮನಿಸಿ ಈ ರೆಕಾರ್ಡಿಂಗ್ ಅನ್ನು ನಮ್ಮ ಸಾಧನಗಳ ಬೆಳವಣಿಗೆಯನ್ನು ಉದ್ದೇಶಿಸಿ ಆಲಿಸಲಾಗುತ್ತದೆ. ಇದಲ್ಲದೆ ಈ ಆಯ್ಕೆಯನ್ನು ನಮ್ಮ ಸಿಬ್ಬಂದಿಗಳಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ನೀಡಲಾಗಿದೆ. ಆದರೆ ಗ್ರಾಹಕರನ್ನು ಗುರುತಿಸುವಂತಹ ಮಾಹಿತಿಯನ್ನು ಸಂಯೋಜಿಸುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಇಂಡೀ100 ವರದಿ ಮಾಡಿದೆ.
ಸೆಟ್ಟಿಂಗ್ ಮೂಲಕ ಆಫ್ ಮಾಡಬಹುದು
ಇನ್ನು ಈ ಅಲೆಕ್ಸಾ ರೆಕಾರ್ಡಿಂಗ್ ಆಯ್ಕೆಯನ್ನು ನೀವು ಮೊಬೈಲ್ನಲ್ಲಿ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಸೆಟ್ಟಿಂಗ್ನಲ್ಲಿ ಆಫ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ