HOME » NEWS » Tech » ALERT THESE 4 BSNL RECHARGE PLANS WILL BE STOPPED AND NEW PLANS ARE HERE STG LG

BSNL Recharge: ಏಕಾಏಕಿ ನಾಲ್ಕು ರೀಚಾರ್ಜ್ ಪ್ಲ್ಯಾನ್‌ ಸ್ಥಗಿತಗೊಳಿಸಿದ BSNL: ಹೊಸ ಆಫರ್‌‌ ಹೀಗಿದೆ..!

108 ರೂ.ನ ವಿಶೇಷ ಯೋಜನೆಯಲ್ಲಿ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಕರೆಗಳಿದ್ದು, ಇದು 60 ದಿನಗಳ ಮಾನ್ಯತೆಯನ್ನು ಪಡೆದಿತ್ತು. ಆದರೆ ಈ ಯೋಜನೆಯನ್ನು ಇದೀಗ ಸ್ಥಗಿತಗೊಳಿಸಿದೆ.

news18-kannada
Updated:April 7, 2021, 10:12 AM IST
BSNL Recharge: ಏಕಾಏಕಿ ನಾಲ್ಕು ರೀಚಾರ್ಜ್ ಪ್ಲ್ಯಾನ್‌ ಸ್ಥಗಿತಗೊಳಿಸಿದ BSNL: ಹೊಸ ಆಫರ್‌‌ ಹೀಗಿದೆ..!
ಬಿಎಸ್​ಎನ್​ಎಲ್
  • Share this:
ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಏರ್‌ಟೆಲ್‌, ಬಿಎಸ್‍ಎನ್‍ಎಲ್, ಎಐ ಹೀಗೆ ಪ್ರತಿಯೊಂದು ಸಂಸ್ಥೆ ತನ್ನದೇ ಮುದ್ರೆ ಒತ್ತುವ ಮೂಲಕ ಮೂಲೆಮೂಲೆಯಲ್ಲಿನ ಜನರ ನಾಡಿಮಿಡಿತಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮಧ್ಯೆ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಟೆಲಿಕಾಂ ಸಂಸ್ಥೆಗಳು ಜಿದ್ದಿಗೆ ಬಿದ್ದಿರುವ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರಲ್ಲಿ ಯಾವ ಸಂಸ್ಥೆಗಳು ಹಿಂದೆ ಬಿದ್ದಿಲ್ಲ. ಇಂತಹದ್ದದರಲ್ಲಿ ಬಿಎಸ್‍ಎನ್‍ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಕೆಲವು ಆಫರ್‌ಗಳನ್ನು ಸ್ಥಗಿತಗೊಳಿಸುವ ಬೆನ್ನಲ್ಲೇ ಹೊಸ ಆಫರ್‌ಗಳನ್ನು ಕೊಟ್ಟಿದೆ.

ಹೌದು ಸರ್ಕಾರಿ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ಸಂಪರ್ಕ ವ್ಯವಸ್ಥೆಯಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿರುವ ಪ್ರಚಲಿತ ಹೆಸರು. ಇದೀಗ ಇದೇ ಕಂಪೆನಿ ಪ್ರೀಪೇಯ್ಡ್ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ತಂದಿರುವುದರ ಜೊತೆಗೆ ಕೆಲವು ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ.

ಮೊದಲಿನಿಂದಲೂ ಬಿಎಸ್‍ಎನ್‍ಎಲ್ ಸಂಸ್ಥೆಯು ನೀಡುತ್ತಿರುವ 47 ರೂ., 109 ರೂ., 998 ರೂ., 1098 ರೂ.ನ ಯೋಜನೆಗಳನ್ನು ರದ್ದುಗೊಳಿಸಿದೆ. ಇದಾಗಲೇ ಯಾರಾದರೂ ಈ ಯೋಜನೆಯನ್ನು ಉಪಯೋಗಿಸುತ್ತಿದ್ದಲ್ಲಿ ಇದರ ಅವಧಿ ಮುಗಿಯುವವರೆಗೂ ಬಳಕೆ ಮಾಡಿಕೊಳ್ಳಬಹುದು.

108 ರೂ.ನ ವಿಶೇಷ ಯೋಜನೆಯಲ್ಲಿ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಕರೆಗಳಿದ್ದು, ಇದು 60 ದಿನಗಳ ಮಾನ್ಯತೆಯನ್ನು ಪಡೆದಿತ್ತು. ಆದರೆ ಈ ಯೋಜನೆಯನ್ನು ಇದೀಗ ಸ್ಥಗಿತಗೊಳಿಸಿದೆ.

Investment on Gold: ಚಿನ್ನದ ಮೇಲೆ ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು?

ಹೊಸ ಪ್ರೀಪೇಯ್ಡ್ ಯೋಜನೆಗಳು

1. ರೂ. 197ಗೆ ಪ್ರತಿದಿನ 2 ಜಿಬಿ ಡೇಟಾ, 18 ದಿನಗಳ ಕಾಲ ಅನಿಯಮಿತ ಕರೆಗಳನ್ನು ನೀಡಿದೆ. ಒಂದು ವೇಳೆ ಬಳಕೆದಾರರು ದೈನಂದಿನ ಡೇಟಾ ಮಿತಿಯನ್ನು ಖಾಲಿ ಮಾಡಿದರೆ ವೇಗವನ್ನು 80 ಕೆಬಿಪಿಎಸ್‍ಗೆ ಇಳಿಸಲಾಗುತ್ತದೆ. ಜೊತೆಗೆ ಉಚಿತ ವಾಯ್ಸ್ ಕರೆಗಳು, ಪ್ರತಿದಿನ 100 ಎಸ್‍ಎಮ್‍ಎಸ್‍ನ್ನು ನೀಡಿದೆ. ಈ ಮೂಲಕ ಜಿಂಗ್ ಮ್ಯೂಸಿಕ್ ಆ್ಯಪ್‍ಗೂ ಕೂಡ ಉಚಿತ ಅವಕಾಶ ಪಡೆಯಬಹುದು. ಈ ಯೋಜನೆಯು 180 ದಿನಗಳ ಕಾಲ ಮಾನ್ಯತೆ ಹೊಂದಿದೆ.2. 365 ರೂ.ನ ಯೋಜನೆ ದರವನ್ನು 32 ರೂ.ನಷ್ಟು ಹೆಚ್ಚಿಸಲಾಗಿದೆ. ಇದೀಗ 397 ರೂ.ಗೆ ಈ ಯೋಜನೆ ಸಿಗಲಿದೆ. ಈ ಹಿಂದೆ ಇರುವ ಪ್ಲ್ಯಾನ್‍ಗಳೇ ಮುಂದುವರೆಯಲಿದ್ದು, ಬಳಕೆದಾರರು ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‍ಎಮ್‍ಎಸ್, 60 ದಿನಗಳ ಕಾಲ 2 ಜಿಬಿ ಡೇಟಾ ಸಿಗಲಿದೆ.

3. 485 ರೂ.ನ ಹೊಸ ಯೋಜನೆಯನ್ನು ಜಾರಿಗೆ ತಂದಿರುವ ಬಿಎಸ್‍ಎನ್‍ಎಲ್ ಅನಿಯಮಿತ ಎಸ್‍ಟಿಡಿ ಹಾಗೂ ಸ್ಥಳೀಯ ಕರೆಗಳು, 100 ಎಸ್‍ಎಮ್‍ಎಸ್ ನೀಡುವ ಬಗ್ಗೆ ಚಿಂತಿಸಿದೆ. ಇನ್ನು ಚಂದಾದಾರರಿಗೆ ಪ್ರತಿದಿನ 1.5 ಜಿಬಿ ಡೇಟಾ, ಜೊತೆಗೆ ಉಚಿತ ಕರೆ ಟ್ಯೂನ್ ಸಹ ಪಡೆಯಬಹುದು. ಇದು 90 ದಿನಗಳ ಕಾಲ ಮಾನ್ಯತೆ ಪಡೆದಿದೆ.

ಒಟ್ಟಿನಲ್ಲಿ ಬಿಎಸ್‍ಎನ್‍ಎಲ್ ಇನ್ನಷ್ಟು ಉತ್ತಮ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರು ಈ ಸಂಸ್ಥೆಯಿಂದ ಹಿಮ್ಮುಖರಾಗದಂತೆ ನೋಡಿಕೊಳ್ಳಲು ಶತಪ್ರಯತ್ನ ಮಾಡುತ್ತಿರುವುದಂತೂ ಸತ್ಯ.
Published by: Latha CG
First published: April 7, 2021, 10:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories