HOME » NEWS » Tech » AJIO BUSINESS LAUNCHES SAMBANDHAM IN A UNIQUE DIGITAL AVATAAR WITH A HOST OF SPECIAL BENEFITS FOR RETAILERS ZP

AJIO ಬಿಸಿನೆಸ್‌ನಿಂದ ಡಿಜಿಟಲ್ ಸಂಬಂಧಮ್ ಶಾಪಿಂಗ್ ಉತ್ಸವ

ಕೋವಿಡ್-19 ಮುಂದೊಡ್ಡಿರುವ ಸವಾಲುಗಳನ್ನು ಮೀರಿ ನಿಲ್ಲಲು ಮತ್ತು ತಮ್ಮ ವ್ಯವಹಾರಗಳನ್ನು ಬೆಳೆಸಲು ಹಾಗೂ ಅಭಿವೃದ್ಧಿಪಡಿಸಲು ಭಾರತದಾದ್ಯಂತ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳಿಗೆ ಸಂಬಂಧಮ್ ಒಂದು ಸದಾವಕಾಶ.

news18-kannada
Updated:October 14, 2020, 11:17 PM IST
AJIO ಬಿಸಿನೆಸ್‌ನಿಂದ ಡಿಜಿಟಲ್ ಸಂಬಂಧಮ್ ಶಾಪಿಂಗ್ ಉತ್ಸವ
ಆಜಿಯೋ
  • Share this:
ಆಜಿಯೋ ಬಿಸಿನೆಸ್ ಇಂದು (ಅಕ್ಟೋಬರ್ 14) ತನ್ನ ವಾರ್ಷಿಕ ಬೃಹತ್ ವ್ಯಾಪಾರ ಪ್ರದರ್ಶನ 'ಸಂಬಂಧಮ್' ಅನ್ನು ವಿಶಿಷ್ಟ ಡಿಜಿಟಲ್ ಸ್ವರೂಪದಲ್ಲಿ ಭಾರತದಾದ್ಯಂತ ಪ್ರಾರಂಭಿಸಿದೆ. ಪ್ರಸ್ತುತ ಕೋವಿಡ್-19 ಪರಿಸ್ಥಿತಿಯಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದಾದ ಜನಸಂದಣಿಯುಳ್ಳ ಮಾರುಕಟ್ಟೆ ಸ್ಥಳಗಳಿಗೆ ಹೋಗದೆಯೇ, ಮುಂಬರುವ ಹಬ್ಬದ ಋತುವಿಗಾಗಿ ಸರಕುಗಳನ್ನು ಸಂಗ್ರಹಿಸಲು ಈ ಉಪಾಯ ಕಂಡುಕೊಂಡಿದೆ. ಇಂದಿನಿಂದ ಶುರುವಾಗುವ ಸಂಬಂಧಮ್​ ಅಕ್ಟೋಬರ್ 16ರಂದು ಮುಕ್ತಾಯಗೊಳ್ಳಲಿದ್ದು, ಈ ಆನ್‌ಲೈನ್ ಶಾಪಿಂಗ್ ಉತ್ಸವವು ಚಿಲ್ಲರೆ ವ್ಯಾಪಾರಿಗಳಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಿದೆ.

ವೈವಿಧ್ಯಮಯ ಹಬ್ಬದ ಉಡುಪು ಮತ್ತು ಪಾದರಕ್ಷೆಗಳ ಜೊತೆಗೆ, ಸಂಬಂಧಮ್‌ನಲ್ಲಿ ಕನ್ನಡಿ ಕೆಲಸವನ್ನು ಎತ್ತಿ ತೋರಿಸುವ ಕಸೂತಿಯಿರುವ ಲೆಹೆಂಗಾ ಚೋಲಿ ಸೇರಿದಂತೆ ಸಾಂಪ್ರದಾಯಿಕ ವಸ್ತುಗಳ ವಿಶೇಷ ಸಂಗ್ರಹ ಇರಲಿದೆ. ಟಸ್ಸರ್ (ಅಸ್ಸಾಂ), ಕಾಂಚಿಪುರಂ, ಪೋಚಂಪಲ್ಲಿ ಮತ್ತು ಮೈಸೂರು ಮಾದರಿಯ ರೇಷ್ಮೆ ಸೀರೆಗಳು, ಧೋತಿ ಶೈಲಿಯ ಬಾಟಮ್‌ಗಳೊಂದಿಗೆ ಕುರ್ತಾಗಳು, ಶರ್ವಾನಿ, ಕೊಲ್ಹಾಪುರಿ ಚಪ್ಪಲಿಗಳು, ಇತ್ಯಾದಿ...1500 ಕ್ಕೂ ಹೆಚ್ಚಿನ ಬ್ರಾಂಡ್‌ಗಳ ಒಂದು ಲಕ್ಷ ಶೈಲಿಗಳನ್ನು ಒಳಗೊಂಡಿರುವ ಆನ್‌ಲೈನ್ ಕ್ಯಾಟಲಾಗ್ ಮೂಲಕ ಈ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ವಿನ್ಯಾಸ, ಗುಣಮಟ್ಟ ಮತ್ತು ಬೆಲೆಯಂತಹ ಅಂಶಗಳ ಬಗ್ಗೆ ಚಿಲ್ಲರೆ ವ್ಯಾಪಾರಿಗಳು ಮಾರಾಟಗಾರರೊಂದಿಗೆ ವೀಡಿಯೊ ಕರೆಗಳು ಮತ್ತು ಸಂದೇಶಗಳ ಮೂಲಕ ಚರ್ಚಿಸಬಹುದು ಮತ್ತು ಮಾತುಕತೆ ನಡೆಸಬಹುದಾಗಿದೆ. ಅವರಿಗೆ ವ್ಯಾಪಾರ, ಟ್ರೆಂಡ್‌ಗಳು, ಶೈಲಿಗಳು ಮತ್ತು ಉತ್ಪನ್ನ ಮೂಲದ ಕುರಿತು ತಜ್ಞ ಸಲಹೆಗಳನ್ನೂ ನೀಡಲಾಗುವುದು.

ಅಷ್ಟೇ ಅಲ್ಲದೆ, ಈ ಕಾರ್ಯಕ್ರಮದ ಅಂಗವಾಗಿ ಭಾರತದ ಮೊದಲ ಡಿಜಿಟಲ್ ರ್ಯಾಂಪ್ ಪ್ರದರ್ಶನವನ್ನೂ ಆಯೋಜಿಸಲಾಗುತ್ತಿದ್ದು, ಇದು ಭಾರತದ ಅಗ್ರ 20 ಬ್ರಾಂಡ್‌ಗಳ ಇತ್ತೀಚಿನ ಉಡುಪು ಮತ್ತು ಪಾದರಕ್ಷೆಗಳ ಸಂಗ್ರಹವನ್ನು ಪ್ರದರ್ಶಿಸಲಿದೆ. ಚಿಲ್ಲರೆ ವ್ಯಾಪಾರಿಗಳು ರ್ಯಾಂಪ್ ಪ್ರದರ್ಶನದಿಂದ ನೇರವಾಗಿ ತಮ್ಮ ಆಯ್ಕೆಯ ಉಡುಪು ಮತ್ತು ಪಾದರಕ್ಷೆಗಳನ್ನು ಆರಿಸಲು ಮತ್ತು ಆರ್ಡರ್ ಮಾಡುವುದು ಸಾಧ್ಯವಿರುತ್ತದೆ. ಚಿಲ್ಲರೆ ವ್ಯಾಪಾರಿಗಳಿಗೆ ಕಾರು, ಬೈಕು, ಟಿವಿ, ರೆಫ್ರಿಜರೇಟರ್, ಮೈಕ್ರೊವೇವ್ ಓವನ್, ಕಿಚನ್ ವೇರ್, ವಾಟರ್ ಹೀಟರ್ ಮತ್ತು ಟ್ಯಾಬ್ಲೆಟ್ ಸೇರಿದಂತೆ ಅನೇಕ ಬಹುಮಾನ ಮತ್ತು ಪ್ರೋತ್ಸಾಹದ ಕೊಡುಗೆಗಳೂ ಇರಲಿವೆ.

ಇದರ ಜೊತೆಗೆ, ಆಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿನ ಶಾಪಿಂಗ್ ಅನುಭವದ ಹೊರತಾಗಿ, ಚಿಲ್ಲರೆ ವ್ಯಾಪಾರಿಗಳು ಆಜಿಯೋ ವ್ಯಾಪಾರ ಮುಖ್ಯಸ್ಥರೊಂದಿಗೆ ಸಂವಹನ ನಡೆಸುವ ಮತ್ತು ಮಾರುಕಟ್ಟೆ ಪ್ರವೃತ್ತಿಗಳು ಹಾಗೂ ವ್ಯಾಪಾರಾವಕಾಶಗಳನ್ನು ಚರ್ಚಿಸಲು ಅನುವುಮಾಡಿಕೊಡುವ ವರ್ಚುವಲ್ ಬಿಸಿನೆಸ್ ಮೀಟ್ ಅನ್ನೂ ಸಂಬಂಧಮ್ ಆಯೋಜಿಸಲಿದೆ.

ಕೋವಿಡ್-19 ಮುಂದೊಡ್ಡಿರುವ ಸವಾಲುಗಳನ್ನು ಮೀರಿ ನಿಲ್ಲಲು ಮತ್ತು ತಮ್ಮ ವ್ಯವಹಾರಗಳನ್ನು ಬೆಳೆಸಲು ಹಾಗೂ ಅಭಿವೃದ್ಧಿಪಡಿಸಲು ಭಾರತದಾದ್ಯಂತ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳಿಗೆ ಸಂಬಂಧಮ್ ಒಂದು ಸದಾವಕಾಶ. ಸಂಬಂಧಮ್‌ನಲ್ಲಿ ಭಾಗವಹಿಸಲು, ಚಿಲ್ಲರೆ ವ್ಯಾಪಾರಿಗಳು https://register.ajiosambandam.com/ ಗೆ ಲಾಗ್ ಇನ್ ಮಾಡಬಹುದು ಮತ್ತು ಕಾರ್ಯಕ್ರಮಕ್ಕಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಯ ನಂತರ, ಚಿಲ್ಲರೆ ವ್ಯಾಪಾರಿಗಳು ಉನ್ನತ ಬ್ರಾಂಡ್‌ಗಳಿಂದ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು ಮತ್ತು ಪೋರ್ಟಲ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ರಿವಾರ್ಡ್ ಪಾಯಿಂಟ್‌ಗಳನ್ನೂ ಗಳಿಸಬಹುದಾಗಿದೆ.
Youtube Video

ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
Published by: zahir
First published: October 14, 2020, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories