Amazon Prime: 349 ರೂ. ಯೋಜನೆಯನ್ನ ಪರಿಷ್ಕರಿಸಿದ ಏರ್​ಟೆಲ್​! ದಿನಕ್ಕೆ 2.5GB ಡೇಟಾ ಉಚಿತ!

Airtel Prepaid Plan: ಏರ್​ಟೆಲ್​ ಅಮೆಜಾನ್​​ನೊಂದಿಗೆ ಪಾಲುದಾರಿಕೆಹೊಂದಿದ್ದು, ಪ್ರೈಮ್​ ವಿಡಿಯೋ ಚಂದಾದಾರಿಕೆಯನ್ನು ನೀಡುತ್ತಿದೆ. ಪ್ರಿಪೇಯ್ಡ್​ ಬಳಕೆದಾರರಿಗೆ ಈ ಪ್ರಯೋಜನ ಸಿಗುತ್ತಿದೆ. ಮುಬಿ ಬಳಕೆದಾರರಿಗೆ ಏರ್​ಟೆಲ್​ ಎಕ್ಸ್​ಟ್ರಿಮ್​  ಮೂಲಕ ಒಟಿಟಿ ಸೇವೆ ಒದಗಿಸುತ್ತುದೆ.

Airtel

Airtel

  • Share this:
    Airtel Amazon Prime benefit: ಟೆಲಿಕಾಂ ಕಂಪನಿಗಳು ಪ್ರವೇಶ ಮಟ್ಟದ ಯೋಜನೆಗಳ ಸುಂಕವನ್ನು ಹೆಚ್ಚು ಮಾಡುತ್ತಿದೆ. ಇದರ ನಡುವೆ 500 ರೂ ಗಿಂತ ಕಡಿಮೆ ಬೆಲೆ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತಿರುವುದಲ್ಲದೆ. ಅದರ ಮೂಲಕ ಸ್ಟ್ರೀಮಿಂಗ್ ಯೋಜನೆಯನ್ನು ಒದಗಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಏರ್​ಟೆಲ್​ ಅಮೆಜಾನ್​​ನೊಂದಿಗೆ ಪಾಲುದಾರಿಕೆಹೊಂದಿದ್ದು, ಪ್ರೈಮ್​ ವಿಡಿಯೋ ಚಂದಾದಾರಿಕೆಯನ್ನು ನೀಡುತ್ತಿದೆ. ಪ್ರಿಪೇಯ್ಡ್​ ಬಳಕೆದಾರರಿಗೆ ಈ ಪ್ರಯೋಜನ ಸಿಗುತ್ತಿದೆ. ಮುಬಿ ಬಳಕೆದಾರರಿಗೆ ಏರ್​ಟೆಲ್​ ಎಕ್ಸ್​ಟ್ರಿಮ್​  ಮೂಲಕ ಒಟಿಟಿ ಸೇವೆ ಒದಗಿಸುತ್ತುದೆ.

    Airtel 349 RS. Prepaid Plan:

    ಅಂದಹಾಗೆಯೇ, ಏರ್​ಟೆಲ್​ ನಿಯಮಿತ ಪ್ರಿಪೇಯ್ಡ್​ ಯೋಜನೆಗಳಿಗೆ ಕೆಲವು ಪ್ರಯೋಜನಗಳನ್ನು ಸೇರಿಸಿದೆ. ಅದರಲ್ಲಿ ಏರ್​ಟೆಲ್​ 349 ರೂ ಪ್ರಿಪೇಯ್ಡ್​ ಪ್ಲಾನ್​ ದಿನಕ್ಕೆ 2GB ಹೈ ಸ್ಟೀಡ್​ ಡೇಟಾವನ್ನು ಒದಗಿಸುತ್ತಿತ್ತು.  ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಆದರೀಗ ಅದೇ ಪ್ಲಾನಿನ ಡೇಟಾ ಪ್ರಯೋಜನವನ್ನು ಕೊಂಚ ಬದಲಾಯಿಸಿದೆ. 2GB ಡೇಟಾ ಸಿಗುವ ಬದಲಿಗೆ 2.5GB ಡೇಟಾ ಒದಗಿಸುತ್ತಿದೆ.

    349 ರೂ ಯೋಜನೆ ಮೂಲಕ ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್​ಎಮ್​ಎಸ್​  ನೀಡುತ್ತಿದೆ. ಜೊತೆಗೆ ಅಮೆಜಾನ್ ಪ್ರೈಮ್​ ಚಂದಾದಾರಿಕೆ ಉಚಿತ ನೀಡುತ್ತಿದೆ. ಇನ್ನು ಅಮೆಜಾನ್​ ಸಿಂಧುತ್ವ 28 ದಿನಗಳವರೆಗೆ ಮಾತ್ರ ಸಿಗಲಿದೆ.

    ಹೆಚ್ಚುವರಿಯಾಗಿ ಏರ್​ಟೆಲ್​ ಎಕ್ಸ್​ಸ್ಟ್ರೀಂ ಪ್ರಿಮಿಯ., ಉಚಿತ ಹಲೋ ಟ್ಯೂನ್​, ವಿಂಕ್​ ಮ್ಯೂಸಿಕ್​, ಉಚಿತ ಆನ್​ಲೈನ್​ ಕೋರ್ಸ್​ ಮತ್ತು 100 ರೂ.  ಫಾಸ್ಟ್​ಟ್ಯಾಗ್​ ಕ್ಯಾಶ್​ಬ್ಯಾಕ್ ಒದಗಿಸುತ್ತದೆ.

    Airtel 289 RS. Prepaid Plan:

    ಏರ್​ಟೆಲ್​ 289 ರೂ. ಪ್ರಿಪೇಯ್ಡ್ ಪ್ಲಾನ್ ಮೂಲಕ ದಿನಕ್ಕೆ 1.5GB ಡೇಟಾ ಸಿಗಲಿದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. 289 ರೂ ಪ್ಲಾನ್​ ಅಳವಡಿಸಿಕೊಂಡರೆ Zee5 ಪ್ರೀಮಿಯಂಗೆ ಉಚಿತ ಚಂದಾದಾರಿಕೆಯೊಂದಿಗೆ 28 ​​ದಿನಗಳವರೆಗೆ ಮಾನ್ಯವಾಗಿರುತ್ತದೆ. ಹೆಚ್ಚುವರಿ ಪ್ರಯೋಜನವಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಗಳ ಜೊತೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂಗೆ ಚಂದಾದಾರಿಕೆಯೂ ಸೇರಿದೆ. ಗ್ರಾಹಕರು ಉಚಿತ ಹಲೋ ಟ್ಯೂನ್ಸ್ ಮತ್ತು ಫಾಸ್ಟ್‌ಟ್ಯಾಗ್ ವಹಿವಾಟುಗಳಲ್ಲಿ 150 ರೂ ಕ್ಯಾಶ್‌ಬ್ಯಾಕ್ ಸಿಗಲಿದೆ.

    Airtel 499 RS. Prepaid Plan:

    ಏರ್​​ಟೆಲ್​ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಮೂಲಕ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ರಯೋಜನ ಸಿಗಲಿದೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ಪಡೆಯುವುದರೊಂದಿಗೆ, ಬಳಕೆದಾರರು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ ಮತ್ತು 28 ದಿನಗಳವರೆಗೆ 3 ಜಿಬಿ ದೈನಂದಿನ ಡೇಟಾವನ್ನು ಪಡೆಯುತ್ತಾರೆ.

    Read Also ⇒WhatsApp: ಫೋಟೋವನ್ನ ಸ್ಟಿಕ್ಕರನ್ನಾಗಿ ಪರಿವರ್ತಿಸುವ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್!

    ಜಿಯೋ ಈಗ ತನ್ನ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಿದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್‌ಗಳನ್ನು ಪರಿಷ್ಕರಿಸಿದೆ.

    ಜಿಯೋ ನವೀಕರಿಸಿದ 499 ರೂ, 888 ರೂ ಮತ್ತು 2599 ರೂ ಯೋಜನೆಗಳ ಪೈಕಿ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ರಯೋಜನಗಳನ್ನು ನೀಡುತ್ತಿದೆ.

    ಜಿಯೋ 499 ರೂ ಪ್ಲಾನ್ ರೀಚಾರ್ಜ್​ ಮಾಡಿದರೆ 3GB ದೈನಂದಿನ ಡೇಟಾ ಸಿಗುತ್ತದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 666 ರೂ ಪ್ಲಾನ್​ ಪರಿಚಯಿಸಿದ್ದು, ಇದರ ಮೂಲಕ 2GB ದೈನಂದಿನ ಡೇಟಾ ಸಿಗಲಿದೆ. ಈ ಪ್ಲಾನ್​ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 888 ರೂ ಪ್ಲಾನ್​ ಅಳವಡಿಸಕೊಂಡರೆ ಪ್ರತಿದಿನ 2GB ಡೇಟಾ ಸಿಗಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಂತಿಮವಾಗಿ, ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನಗಳೊಂದಿಗೆ 2599 ರೂ.ವಿನ ವಾರ್ಷಿಕ ಯೋಜನೆ ಇದ್ದು, 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ 2GB ದೈನಂದಿನ ಡೇಟಾವನ್ನು ಸಿಗಲಿದೆ.

    Read Also ⇒Disney+ Hotstar: ಕೆಲವು ಪ್ರಿಪೇಯ್ಡ್ ಯೋಜನೆಗಳನ್ನ ಪರಿಷ್ಕರಿಸಿದ ಜಿಯೋ, ಹೆಚ್ಚುವರಿಯಾಗಿ 10GB ಡೇಟಾ ಉಚಿತ!

    ಈ ಎಲ್ಲಾ ಯೋಜನೆಗಳು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ನೀಡುತ್ತವೆ. ಜಿಯೋ ತನ್ನ ವೆಬ್‌ಸೈಟ್ ಅನ್ನು ಪರಿಷ್ಕರಿಸಿದ್ದು, 10 GB ಹೆಚ್ಚುವರಿ ಡೇಟಾವನ್ನು ಸಿಗಲಿದೆ ಎಂದು ಹೇಳಿದೆ.

    499 ರೂ ಪ್ಲಾನ್ ಮೂಲಕ ಹೆಚ್ಚುವರಿ 6GB ಡೇಟಾವನ್ನು ನೀಡುತ್ತದೆ. 888 ರೂ ಪ್ಲಾನ್ ಅಳವಡಿಸಿಕೊಂಡರೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಅಂತೆಯೇ 2599 ರೂ ಪ್ರಿಪೇಯ್ಡ್ ಪ್ಲಾನ್ ಅಳವಡಿಸಿಕೊಂಡರೆ 10GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.
    ಜಿಯೋ ತನ್ನ ಬಳಕೆದಾರರಿಗೆ ಆಗಾಗ ಏನಾದರೊಂದು ಕೊಡುಗೆಯನ್ನು  ನೀಡುತ್ತಿರುತ್ತದೆ. ಅದರಲ್ಲೂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸ ಯೋಜನೆಗಳನ್ನು ಮತ್ತು ಕಡಿಮೆ ಬೆಲೆಗೆ ಅಧಿಕ ಪ್ರಯೋಜನ ಒದಗಿಸುವ ಯೋಜನೆಯನ್ನು ನೀಡುತ್ತಿರುತ್ತದೆ. ಇತ್ತೀಚೆಗೆ ಜಿಯೋ ಗ್ರಾಹಕರಿಗಾಗಿ ಜಿಯೋ ಫೋನ್ ಅನಾವರಣಗೊಳಿಸಿದೆ.

    ಮಾತ್ರವಲ್ಲದೆ, ಇತ್ತೀಚೆಗೆ ಜಿಯೋ  ಹೊಸ 75 ರೂ.ವಿನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಪ್ರಸ್ತುತ ಅಗ್ಗದ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ.   ಟೆಲಿಕಾಂ ಆಪರೇಟರ್ ಜಿಯೋ ಇತ್ತೀಚೆಗೆ 39 ಮತ್ತು 69 ರೂ.ವಿನ ಜಿಯೋಫೋನ್ ಪ್ರಿಯೇಯ್ಡ್ ಯೋಜನೆಯನ್ನ ಸ್ಥಗಿತಗೊಳಿಸಿತು. ಅದರ ಬೆನ್ನಲ್ಲೇ ಇದೀಗ 75 ರೂ.ವಿನ ಪ್ಲಾನ್ ಪರಿಚಯಿಸಿದೆ.

    ಜಿಯೋಫೊನ್ ಬಳಕೆದಾರರಿಗಾಗಿ ಪರಿಚಯಿಸಿದ 75 ರೂ.ವಿನ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ದಿನಕ್ಕೆ 50 ಎಸ್ಎಮ್ಎಸ್ ಮತ್ತು ಜಿಯೋ ಟಿವಿ, ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್​​ನಂತಹ ಜಿಯೋ ಆ್ಯಪ್ ಪ್ರವೇಶವನ್ನು ನೀಡುತ್ತಿದೆ. ಈ ಪ್ಲಾನ್ ಅಳವಡಿಸಿಕೊಂಡರೆ ಅನಿಯಮಿತ ಕರೆ ಸೌಲಭ್ಯ ಮತ್ತು 200MB ಬೂಸ್ಟರ್​ನೊಂದಿಗೆ ತಿಂಗಳಿಗೆ 4ಜಿ ನೆಟ್​ವರ್ಕ್​ನಡಿಯಲ್ಲಿ 3GB ಡೇಟಾ ನೀಡುತ್ತಿದೆ. ಸದ್ಯ ವೈಬ್​ಸೈಟ್ ಮತ್ತು ಮೈಜಿಯೋ ಆ್ಯಪ್​ನಲ್ಲಿ ನೂತನ ಪ್ಲಾನ್ ಅಳವಡಿಸಲು ಸಿಗುತ್ತಿದೆ.
    Published by:Harshith AS
    First published: