ಏರ್​ಟೆಲ್ ಹೊಸ ಆಫರ್: 148 ರೂ. ಪ್ಲ್ಯಾನ್​ನಲ್ಲಿ ಅನಿಯಮಿತ ಕರೆ ಜೊತೆಗೆ 3 GB ಡೇಟಾ ಉಚಿತ..!

ಈ ಪ್ಲ್ಯಾನ್​ನಲ್ಲಿ ಉಚಿತ ಹಲೋ ಟ್ಯೂನ್ ಆಯ್ಕೆ ಅವಕಾಶವನ್ನು ಏರ್​ಟೆಲ್ ತನ್ನ ಗ್ರಾಹಕರಿಗೆ ನೀಡಿದೆ. ಈ ಹಿಂದೆ ಏರ್​ಟೆಲ್​ನಲ್ಲಿ ಹಲೋ ಟ್ಯೂನ್​ ಆಯ್ಕೆಗಾಗಿ 36 ರೂ.ಗಳನ್ನು ಪಾವತಿಸಬೇಕಿತ್ತು.

zahir | news18
Updated:July 6, 2019, 8:45 PM IST
ಏರ್​ಟೆಲ್ ಹೊಸ ಆಫರ್: 148 ರೂ. ಪ್ಲ್ಯಾನ್​ನಲ್ಲಿ ಅನಿಯಮಿತ ಕರೆ ಜೊತೆಗೆ 3 GB ಡೇಟಾ ಉಚಿತ..!
ಸಾಂದರ್ಭಿಕ ಚಿತ್ರ
 • News18
 • Last Updated: July 6, 2019, 8:45 PM IST
 • Share this:
ಏರ್​ಟೆಲ್ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್​ ಪ್ಲ್ಯಾನ್​ವೊಂದನ್ನು ಪರಿಚಯಿಸಿದೆ. ಈ ಹಿಂದೆ 1699 ರೂ. ವಾರ್ಷಿಕ ರಿಚಾರ್ಜ್​ ಯೋಜನೆ ಪರಿಚಿಸಿದ್ದ ಏರ್​ಟೆಲ್ ಈ ಬಾರಿ ಕಡಿಮೆ ಮೊತ್ತ ರಿಚಾರ್ಜ್ ಪ್ಲ್ಯಾನ್​ ಪ್ರಸ್ತುತ ಪಡಿಸಿರುವುದು ವಿಶೇಷ. ಹಲವು ಆಫರ್​ಗಳನ್ನು ಒಳಗೊಂಡಿರುವ 148 ರೂ. ಪ್ಲ್ಯಾನ್​ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

3GB ಡೇಟಾ ಮತ್ತು ಅನಿಯಮಿತ ಕರೆ:
ಏರ್​ಟೆಲ್ ಪರಿಚಯಿಸಿರುವ 148 ರೂ.ಗಳ ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಕರೆಗಳ ಸೌಲಭ್ಯ ಪಡೆಯಲಿದ್ದಾರೆ. ಇದರೊಂದಿಗೆ 3GB ಇಂಟರ್​ನೆಟ್​ ಡೇಟಾ ಕೂಡ ದೊರೆಯಲಿದ್ದು, ಇದರ ಬಳಕೆಗೆ ನಿಯಮಿತ ದಿನಾಂಕವನ್ನು ನೀಡಲಾಗಿಲ್ಲ ಎಂಬುದು ವಿಶೇಷ. 28 ದಿನಗಳ ವಾಲಿಟಿಡಿ ಹೊಂದಿರುವ ಈ ಯೋಜನೆಯಲ್ಲಿ ಗ್ರಾಹಕರು ತಮ್ಮ ಇಂಟರ್​ನೆಟ್​ ಡೇಟಾವನ್ನು ಬಳಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಪ್ಲ್ಯಾನ್​ನಲ್ಲಿ ಉಚಿತ ಏರ್​ಟೆಲ್ ಟಿವಿ ಚಂದಾದಾರಿಕೆ ಕೂಡ ಗ್ರಾಹಕರಿಗೆ ದೊರೆಯಲಿದೆ. ಹಾಗೆಯೇ ವಿಂಕ್ ಮ್ಯೂಸಿಕ್​ ಆ್ಯಪ್​ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

ಉಚಿತ ಹಲೋ ಟ್ಯೂನ್ಸ್:
ಈ ಪ್ಲ್ಯಾನ್​ನಲ್ಲಿ ಉಚಿತ ಹಲೋ ಟ್ಯೂನ್ ಆಯ್ಕೆ ಅವಕಾಶವನ್ನು ಏರ್​ಟೆಲ್ ತನ್ನ ಗ್ರಾಹಕರಿಗೆ ನೀಡಿದೆ. ಈ ಹಿಂದೆ ಏರ್​ಟೆಲ್​ನಲ್ಲಿ ಹಲೋ ಟ್ಯೂನ್​ ಆಯ್ಕೆಗಾಗಿ 36 ರೂ.ಗಳನ್ನು ಪಾವತಿಸಬೇಕಿತ್ತು. ಆದರೆ 148 ರಿಚಾರ್ಜ್​ ಪ್ಲ್ಯಾನ್​ನಲ್ಲಿ ವಿಂಕ್ ಮ್ಯೂಸಿಕ್ ಆ್ಯಪ್​ ಮೂಲಕ 15 ಭಾಷೆಗಳಲ್ಲಿನ ಗೀತೆಯನ್ನು ಹಲೋ ಟ್ಯೂನ್ ಆಗಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಆಫರ್​ 28 ದಿನಗಳಿಗೆ ಮಾತ್ರ. ಆ ಬಳಿಕ ಹಲೋ ಟ್ಯೂನ್ ನವೀಕರಿಸಲು ತಿಂಗಳ ಚಾರ್ಜ್​ 30 ರೂ. ಪಾವತಿಸಬೇಕಾಗುತ್ತದೆ.

ದೀರ್ಘಾವಧಿ ಪ್ಲ್ಯಾನ್​ ಬೇಡದವರಿಗೆ ಈ ಆಫರ್:
ಏರ್​ಟೆಲ್ ಈಗಾಗಲೇ 1699 ರೂ.ಗಳ ಒಂದು ವರ್ಷದ ಪ್ಲ್ಯಾನ್​ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಪ್ರತಿದಿನ 1.4 ಡೇಟಾ ನೀಡಲಾಗುತ್ತಿದೆ. ಅದರೊಂದಿಗೆ ದಿನಲೂ 100 ಎಸ್​ಎಂಎಸ್​ಗಳನ್ನು ಕಳುಹಿಸಬಹುದು. ಆದರೆ ಈ ದೀರ್ಘಾವಧಿಯ ಪ್ಲ್ಯಾನ್​ಗೆ ವಿರುದ್ದವಾಗಿ ಏರ್​ಟೆಲ್​ 148 ರೂ. ಯೋಜನೆಯನ್ನು ಹೊರ ತಂದಿದೆ. ಏಕೆಂದರೆ ತಿಂಗಳಾವಧಿಯ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಏರ್​ಟೆಲ್ ಹೇಳಿಕೊಂಡಿದೆ.ಇದನ್ನೂ ಓದಿ: ಸಚಿನ್ ದಾಖಲೆ ಛಿದ್ರ: ಹೊಸ ಮೈಲುಗಲ್ಲು ಬರೆದ ರೋಹಿತ್ ಶರ್ಮಾ
First published:July 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres