ಹೊಸ ಏರ್’ಟೆಲ್ ಟಿವಿ ಆ್ಯಪ್: 300ಕ್ಕೂ ಹೆಚ್ಚು ಲೈವ್ ಟಿವಿ; 6000 ಟಿವಿ ಶೋಗಳು


Updated:December 29, 2017, 5:49 PM IST
ಹೊಸ ಏರ್’ಟೆಲ್ ಟಿವಿ ಆ್ಯಪ್: 300ಕ್ಕೂ ಹೆಚ್ಚು ಲೈವ್ ಟಿವಿ; 6000 ಟಿವಿ ಶೋಗಳು
A Bharti Airtel office building is pictured in Gurugram, previously known as Gurgaon, on the outskirts of New Delhi, India April 21, 2016. REUTERS/Adnan Abidi/File Photo

Updated: December 29, 2017, 5:49 PM IST
ನವದೆಹಲಿ: ಭಾರ್ತಿ ಏರ್’ಟೆಲ್ ಸಂಸ್ಥೆಯು ತನ್ನ ಏರ್ಟೆಲ್ ಟಿವಿ ಆ್ಯಪನ್ನು ಪರಿಷ್ಕರಿಸಿದೆ. ಹೊಸ ಆವೃತ್ತಿಯ ಆ್ಯಪ್ ಹೊಸ ಫೀಚರ್’ಗಳನ್ನ ಮತ್ತು ಹೊಸ ರೀತಿಯ ಯೂಸರ್ ಇಂಟರ್ಫೇಸ್ ಹೊಂದಿದೆ. 300ಕ್ಕೂ ಹೆಚ್ಚು ಲೈವ್ ಟಿವಿ, 6 ಸಾವಿರಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಜನಪ್ರಿಯ ಟಿವಿ ಶೋಗಳು ಈ ಪರಿಷ್ಕೃತ ಆ್ಯಪ್’ನಲ್ಲಿ ಸಿಗಲಿವೆ. 29 ಹೆಚ್’ಡಿ ಚಾನೆಲ್’ಗಳನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ. ಆಯಾ ಪ್ರದೇಶದ ಕಂಟೆಂಟ್’ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುತ್ತಿದೆ. ಕನ್ನಡ ಸೇರಿದಂತೆ ಭಾರತದ 15 ಭಾಷೆಗಳ ವಿಡಿಯೋಗಳು ಮತ್ತು ಲೈವ್ ಟಿವಿಗಳು ಈ ಆ್ಯಪ್’ನಲ್ಲಿ ಲಭ್ಯವಿವೆ. ಐಫೋನ್ ಮತ್ತು ಆಂಡ್ರಾಯ್ಡ್ ಫೋನುಗಳಲ್ಲಿ ಈ ನೂತನ ಆವೃತ್ತಿಯ ಏರ್ಟೆಲ್ ಟಿವಿ ಆ್ಯಪ್ ಲಭ್ಯವಿದೆ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...