149 ರೂ.ಗೆ ದಿನಕ್ಕೆ 2 ಜಿಬಿ ಡೇಟಾ ಘೊಷಿಸಿದ ಏರ್​ಟೆಲ್​!


Updated:June 11, 2018, 6:13 PM IST
149 ರೂ.ಗೆ ದಿನಕ್ಕೆ 2 ಜಿಬಿ ಡೇಟಾ ಘೊಷಿಸಿದ ಏರ್​ಟೆಲ್​!

Updated: June 11, 2018, 6:13 PM IST
ನವದೆಹಲಿ: ಭಾರತೀಯ ಇಂಟರ್​ನೆಟ್​ ಮಾರುಕಟ್ಟೆಯಲ್ಲಿ ಡೇಟಾ ವಾರ್​ ನಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ರಿಲಯನ್ಸ್​ ಜಿಯೋಗೆ ಸೆಡ್ಡು ಹೊಡೆಯುವ ಕುರಿತು ಸದಾ ಚಿಂತನೆ ನಡೆಸಿರುವ ಭಾರತೀ ಏರ್​ಟೆಲ್​ ಇದೀಗ ಹೊಸ ಆಫರ್​ ಘೊಷಿಸಿದ್ದು, ಇದರಿಂದ ಜಿಯೋಗೆ ಭಾರೀ ಮಟ್ಟದಲ್ಲೇ ಪೆಟ್ಟು ಬೀಳಬಹುದು ಎನ್ನಲಾಗಿದೆ.

ಹೊಸ ಆಫರ್ ನಲ್ಲಿ ಏನೀದೆ..?
ಇದೇ ಜನವರಿಲ್ಲಿ ಏರ್​ಟೆಲ್ 149 ರೂ. ರೀಚಾರ್ಜ್ ಪ್ಯಾಕ್​ನ್ನು ಘೋಷಿಸಿತ್ತು, ಇದೀಗ ಈ ಪ್ಯಾಕ್​ನ್ನು ಮಾರ್ಪಾಡು ಮಾಡಿರುವ ಕಂಪನಿ, ಈ ವರೆಗೆ 28 ದಿನಕ್ಕೆ ಸಿಗುತ್ತಿದ್ದ 1GB ಡೇಟಾ ಬದಲಾಗಿ 2GB ಡೇಟಾ ನೀಡಲು ತೀರ್ಮಾನಿಸಿದೆ. ಇದರ ಜೊತೆಗೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿ ಲಭ್ಯವಿವೆ.

ರಿಲಯನ್ಸ್​​ ಜಿಯೋ ರೂ.149ಕ್ಕೆ ಅನಿಯಮಿತ ಕರೆ ಹಾಗೂ ದಿನಕ್ಕೆ 1.5 ಜಿಬಿ ಡೇಟಾವನ್ನು ಘೊಷಿಸಿತ್ತು, ಈ ಆಫರ್​ ಕೇವಲ 28 ದಿನಕ್ಕೆ ಲಭ್ಯವಿತ್ತು.

ಇತ್ತೀಚೆಗಷ್ಟೇ ಏರ್​ಟೆಲ್​ ರೂ.499ಗೆ ಪ್ರೀಪೇಯ್ಡ್​ ಪ್ಲಾನ್​ ಘೋಷಿಸಿತ್ತು, ಈ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿಯಂತೆ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯವನ್ನು 82 ದಿನಕ್ಕೆ ಏರ್​ಟೆಲ್​ ಘೋಷಿಸಿತ್ತು. ಅಲ್ಲದೇ ರೋಮಿಂಗ್​ನಲ್ಲಿರಬೇಕಾದರೆ ಉಚಿತ ಇನ್​ಕಮಿಂಗ್​ ಹಾಗೂ ಓಟ್​ ಗೋಯಿಂಗ್​ ಸೌಲಭ್ಯ ಕೂಡಾ ಆಫರ್​ನಲ್ಲಿ ಹೇಳಿಕೊಂಡಿತ್ತು.

 
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...