ಭಾರತದ ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಖಾಸಗಿ ಟೆಲಿಕಾಂ ಕಂಪೆನಿಗಳು ತನ್ನ ಉತ್ತಮ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಬಿಡುಗಡೆ ಮಾಡುತ್ತಿರುತ್ತಾರೆ. ಟೆಲಿಕಾಂ ಕಂಪೆನಿಗಳಲ್ಲಿ ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಜಿಯೋ. ಈ ಕಂಪೆನಿ ಟೆಲಿಕಾಂ ಕಂಪೆನಿಗಳಲ್ಲಿ ಭಾರೀ ಕಡಿಮೆ ಬೆಲೆಯ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದೆ. ಜಿಯೋಗೆ ಪ್ರಬಲ ಪೈಪೋಟಿ ನೀಡುತ್ತಾ ಬರುತ್ತಿರುವ ಕಂಪೆನಿಯೆಂದರೆ ಅದು ಏರ್‌ಟೆಲ್ (Airtel). ಈ ಕಂಪೆನಿ ಇದೀಗ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ವ್ಯಾಲಿಡಿಟಿ ಅವಧಿಯನ್ನು ಬಯಸುವವರಿಗೆ ಇದು ಉತ್ತಮವಾಗಿದೆ.
ಭಾರತೀಯ ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ್ದು, ಈ ಯೋಜನೆಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಏರ್ಟೆಲ್ನ 455 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಬಿಡುಗಡೆ ಮಾಡಿದಂತಹ 455 ರೂಪಾಯಿಗಳ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ಈ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳು, 900 ಎಸ್‌ಎಮ್‌ಎಸ್ ಮತ್ತು 6 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ವ್ಯಾಲಿಡಿಟಿ ಅವಧಿಯೊಳಗಡೆ ಡೇಟಾ ಖಾಲಿಯಾದರೆ ಪ್ರತಿ ಎಮ್ಬಿ ಗೆ 50 ಪೈಸೆ ಶುಲ್ಕ ನೀಡುವ ಮೂಲಕ ಹೆಚ್ಚುವರಿ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಇದರ ಹೊರತಾಗಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಮೂರು ತಿಂಗಳವರೆಗೆ ಅಪೋಲೋ 24/ 7 ನ ಹೆಚ್ಚುವರಿ ಪ್ರಯೋಜನವನ್ನೂ ಸಹ ಪಡೆಯಬಹುದು. ಹಾಗೆಯೇಫಾಸ್ಟ್ಟ್ಯಾಗ್ನಲ್ಲಿ 100 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್ ಸೌಲಭ್ಯವೂ ಸಿಗಲಿದೆ.
ಏರ್ಟೆಲ್ನ 719 ರೂಪಾಯಿಗಳ ರೀಚಾರ್ಜ್ ಯೋಜನೆ
ಏರ್‌ಟೆಲ್ ಕಂಪೆನಿ ತನ್ನ ಗ್ರಾಹಕರಿಗಾಗಿ 719 ರೂಪಾಯಿಯಲ್ಲಿ 84 ದಿನಗಳ ಮಾನ್ಯತೆಯೊಂದಿಗೆ ಹಲವು ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಓಟಿಟಿ ಸೇವೆ ಹಾಗೂ ಪ್ರತಿದಿನವೂ ಡೇಟಾ ಸೌಲಭ್ಯವನ್ನು ಪಡೆಯಬಹುದು. ಇನ್ನು ಈ ಯೋಜನೆ ಮೂಲಕ ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್, ಎಸ್‌ಟಿಡಿ ಮತ್ತು ರೋಮಿಂಗ್ ಕರೆ ಉಚಿತವಾಗಿ ಲಭ್ಯವಾಗುತ್ತದೆ. ಇದರಲ್ಲಿ ದಿನಕ್ಕೆ 100 ಎಸ್‌ಎಂಎಸ್ ಹಾಗೂ ದೈನಂದಿನ 1.5 GB ಡೇಟಾ ಸೌಲಭ್ಯ ದೊರೆಯುತ್ತದೆ.
ಇನ್ನು ಈ ಯೋಜನೆಯ ಓಟಿಟಿ ಆಫರ್ಸ್ ಬಗ್ಗೆ ಹೇಳುವುದಾದರೆ, ಇಲ್ಲಿ ಗ್ರಾಹಕರು 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನ ಉಚಿತ ಚಂದಾದಾರಿಕೆ ಸೌಲಭ್ಯವನ್ನು ಪಡೆಯಬಹುದು. ಹಾಗೆಯೇ ರಿವಾರ್ಡ್‌ಮಿನಿ ಚಂದಾದಾರಿಕೆ, ಮೂರು ತಿಂಗಳವರೆಗೆ ಅಪೋಲೋ 24 / 7 ಸೇವೆ, ಫಾಸ್ಟ್ಯಾಗ್‌ನಲ್ಲಿ 100 ರೂಪಾಯಿಗಳ ಕ್ಯಾಶ್‌ಬ್ಯಾಕ್ ಹಾಗೂ ಉಚಿತ ವಿಂಕ್ ಮ್ಯೂಸಿಕ್ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಬಳಕೆ ಮಾಡಿಕೊಂಡು ರೀಚಾರ್ಜ್ ಮಾಡಿದ್ರೆ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ.
ಏರ್ಟೆಲ್ನ 839 ರೂಪಾಯಿಯ ರೀಚಾರ್ಜ್ ಯೋಜನೆ
ಏರ್‌ಟೆಲ್ ನ 839 ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ಯೋಜನೆ ಮೂಲಕ ಗ್ರಾಹಕರು ದಿನಕ್ಕೆ 2 ಜಿಬಿ ಡೇಟಾವನ್ನು ಬಳಕೆ ಮಾಡಬಹುದು. ಈ ಡೇಟಾ ಸಂಪೂರ್ಣವಾಗಿ ಮುಗಿದ ನಂತರ ಡೇಟಾ ವೇಗವು 64 Kbps ವರೆಗೆ ಇಳಿಕೆಯಾಗುತ್ತದೆ.
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!
ಇನ್ನು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ರೀಚಾರ್ಜ್ ಮಾಡಿದರೆ ಉಚಿತ 2 ಜಿಬಿ ಹೆಚ್ಚುವರಿಯಾಗಿ ಡೇಟಾ ಕೂಪನ್ ಅನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಸಿಗುವಂತಹ ಪ್ರಯೋಜನಗಳು ಎಲ್ಲವೂ ಈ ಹಿಂದೆ ಬಿಡುಗಡೆಯಾಗಿರುವ 719 ರೂಪಾಯಿಗಳ ಪ್ರೀಪೇಯ್ಡ್ ಪ್ಲ್ಯಾನ್ಗಳಂತೆಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ