Airtel: 48 ರೂ.ಗೆ 3GB ಡೇಟಾ...ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಬೇರೆ ಪ್ರಯೋಜನ ಏನಿದೆ?

Airtel Prepaid Plans: 199 ರೂ ಪ್ಯಾಕ್​ ಅಳವಡಿಸಿದರೆ 30 ದಿನಗಳ ಚಂದಾದಾರಿಕೆಯೊಂದಿದೆ ಏರ್​ಟೆಲ್​ ಎಕ್ಸ್​ಟ್ರಿಮ್​ ಮೊಬೈಲ್​ ಆ್ಯಪ್, ಏರ್​ಟೆಲ್​ ಥ್ಯಾಂಕ್ಸ್​ ಅಥವಾ ಥರ್ಡ್​ ಪಾರ್ಟಿ ರೀಚಾರ್ಜ್​ ಪೋರ್ಟಲ್​ ​ ಮೂಲಕ ಪ್ರವೇಶ ಪಡೆಯಬಹುದಾದ ಆಯ್ಕೆಯನ್ನು ನೀಡುತ್ತಿದೆ

Bharti Airtel

Bharti Airtel

  • Share this:
    Airtel Prepaid Plans: ಏರ್​​ಟೆಲ್ ಗ್ರಾಹಕರು​ ದೀರ್ಘಾವದಿಯ ಯೋಜನೆಯನ್ನು ಅಳವಡಿಸಿಕೊಂಡಿದ್ದರು ಸಹ ಕೆಲವೊಮ್ಮೆ ಅಧಿಕ ಡೇಟಾ ಪ್ರಯೋಜನಗಳು ಸಿಗುವುದಿಲ್ಲ. ಅದರಲ್ಲೂ ಸಿನಿಮಾ, ಗೇಮಿಂಗ್​, ಸ್ಟ್ರೀಮಿಂಗ್​ ಶೋಗಳಿಗಾಗಿ ಬಳಸುತ್ತಿದ್ದರೆ ನಿರೀಕ್ಷೆಗಿಂತ ಹೆಚ್ಚಿನ ಡೇಟಾ ಬಳಸಬೇಕಾಗುತ್ತದೆ. ಆ ಸಮಯದಲ್ಲಿ ಏರ್​ಟೆಲ್​ ಒದಗಿಸುವ ಡೇಟಾ ಪ್ಯಾಕ್​ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗಾಗಿ​ ಅಂತಹ ಸಮಸ್ಯೆಯನ್ನು ಹೋಗಲಾಡಿಸಲು ಏರ್​ಟೆಲ್ ಆಫರ್​ ಹೊರಡಿಸಿದ್ದು,​ 48 ರೂ.ನಿಂದ ಆರಂಭವಾದ ಯೋಜನೆಗಳನ್ನು ಪರಿಚಯಿಸಿದೆ. ಇದರ ಮೂಲಕ ಹೆಚ್ಚಿನ ಡೇಟಾ ಪ್ರಯೋಜನ ಪಡೆಯಬಹುದಾಗಿದೆ.

    ಅದರಂತೆ 199 ರೂ ಪ್ಯಾಕ್​ ಅಳವಡಿಸಿದರೆ 30 ದಿನಗಳ ಚಂದಾದಾರಿಕೆಯೊಂದಿದೆ ಏರ್​ಟೆಲ್​ ಎಕ್ಸ್​ಟ್ರಿಮ್​ ಮೊಬೈಲ್​ ಆ್ಯಪ್, ಏರ್​ಟೆಲ್​ ಥ್ಯಾಂಕ್ಸ್​ ಅಥವಾ ಥರ್ಡ್​ ಪಾರ್ಟಿ ರೀಚಾರ್ಜ್​ ಪೋರ್ಟಲ್​ ​ ಮೂಲಕ ಪ್ರವೇಶ ಪಡೆಯಬಹುದಾದ ಆಯ್ಕೆಯನ್ನು ನೀಡುತ್ತಿದೆ.

    100ರೂ.ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು:

    ಏರ್‌ಟೆಲ್ ರೂ. 100 ರೂ ಅಡಿಯಲ್ಲಿ ನಾಲ್ಕು ಡೇಟಾ ಪ್ಲಾನ್‌ಗಳನ್ನು ಬರುತ್ತದೆ. ಅದರಲ್ಲಿ 48 ರೂ.ವಿನ ಪ್ಲಾನ್​ 3 GB ಡೇಟಾ, 78 ರೂ. ಪ್ಲಾನ್​ 5GB ಡೇಟಾ ಮತ್ತು 89 ರೂ ಪ್ಲಾನ್ 6GB ಡೇಟಾ ಮತ್ತು 12 GB ಡೇಟಾವನ್ನು ನೀಡುತ್ತದೆ. 89 ರೂ ಯೋಜನೆಬ ಮೂಲಕ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ಉಚಿತ ಹಲೋ ಟ್ಯೂನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

    ಏರ್‌ಟೆಲ್ 251 ರೂ.ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು:

    ಏರ್​​ಟೆಲ್ 119 ರೂ ಡೇಟಾ ಪ್ಲಾನ್: ಈ ಪ್ಲಾನ್ ಮೂಲಕ 15ಜಿಬಿ ಡೇಟಾವನ್ನು ಮತ್ತು ಎಕ್ಸ್ ಸ್ಟ್ರೀಮ್ ಮೊಬೈಲ್ ಪ್ಯಾಕ್ ಗೆ ಪ್ರವೇಶವನ್ನು ನೀಡುತ್ತದೆ. ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕಂಟೆಂಟ್‌ಗೆ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್ ಸಾಧನಗಳಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್‌ನಲ್ಲಿ 30 ದಿನಗಳ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಜೊತೆಗೆ ErosNow (Hindi), ManoramaMax (Malayalam) ಮತ್ತು Hoichoi (Bengali) OTT ಚಾನೆಲ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕೊಡುಗೆಯನ್ನು ಪಡೆಯಲು ಚಂದಾದಾರರು ತಮ್ಮ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು. ಈ ಯೋಜನೆಗಳನ್ನು ನೋಡಿದರೆ, ಏರ್‌ಟೆಲ್ ರೂ 119 ಪ್ಲಾನ್ ರೂ. 98 ಡೇಟಾ ಪ್ಲಾನ್ ಗಿಂತ ಹೆಚ್ಚು ಲಾಭದಾಯಕ ಎಂದು ತೀರ್ಮಾನಿಸಬಹುದು ಏಕೆಂದರೆ ಇದು 3 ಜಿಬಿಗಿಂತ ಹೆಚ್ಚು ಡೇಟಾವನ್ನು ನೀಡುತ್ತದೆ

    ಇದನ್ನು ಓದಿ: Leaked Users Data: ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಮಾಡುತ್ತಿದೆ ಈ 14 ಆ್ಯಪ್​ಗಳು! ಎಚ್ಚರ!

    ಏರ್‌ಟೆಲ್ 131 ರೂ.ವಿನ ಡೇಟಾ ಪ್ಲಾನ್: ಈ ಪ್ಲಾನ್ 100 ಎಂಬಿ ಡೇಟಾ ಜೊತೆಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಉಚಿತ ಹಲೋ ಟ್ಯೂನ್‌ಗಳು ಮತ್ತು ಉಚಿತ ವಿಂಕ್ ಸಂಗೀತ ಆನಂದಿಸಬಹುದಾಗಿದೆ

    ಏರ್​​ಟೆಲ್​ 248 ರೂ.ವಿನ ಡೇಟಾ ಪ್ಲಾನ್: ಈ ಪ್ಲಾನ್ 15 ಜಿಬಿ ಡೇಟಾ ಮತ್ತು ವಿಂಕ್ ಮ್ಯೂಸಿಕ್ ಪ್ರೀಮಿಯಂಗೆ ಪ್ರವೇಶ ನೀಡುತ್ತದೆ.

    ಏರ್​​ಟೆಲ್​ 251 ರೂ.ವಿನ ಡೇಟಾ ಪ್ಲಾನ್: ಈ ಪ್ಲಾನ್ 50GB ಡೇಟಾವನ್ನು ನೀಡುತ್ತದೆ ಮತ್ತು ಪ್ಲಾನ್ ನ ಪ್ರಸ್ತುತ ಸಿಂಧುತ್ವಕ್ಕೆ ಮಾನ್ಯವಾಗಿರುತ್ತದೆ.

    ಏರ್​ಟೆಲ್​ ಗ್ರಾಹಕರನ್ನು ಸೆಳೆಯಲು ಮತ್ತು ಹಿಡಿದಿಟ್ಟುಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿಗೇ ಗ್ರಾಹಕ ಸ್ನೇಹವನ್ನು ಪಡೆದುಕೊಳ್ಳೆಂದು ಕಡಿಮೆ ಬೆಲೆಯ ಅಧಿಕ ಡೇಟಾ ಒದಗಿಸುವ ಪ್ಲಾನ್​ಗಳನ್ನು ಒದಗಿಸುತ್ತಾ ಬಂದಿದೆ. ಡೇಟಾ ಆ್ಯಡ್​ ಪ್ಯಾಕ್​ಗಳ ಅವಶ್ಯಕತೆ ಇದ್ದು, ಅನೇಕರು ಧೀರ್ಘಾವದಿಯ ಪ್ಲಾನ್​ ಅಳವಡಿಸಿಕೊಂಡಿರುತ್ತಾರೆ. ಅಂತವರಿಗಾಘಿ ದೈನಂದಿನ ಡೇಟಾ ಖಾಲಿಯಾದಾಗ ಇಂತಹ ಪ್ಲಾನ್​ಗಳು ಬಳಕೆಗೆ ಬರುತ್ತದೆ ಮತ್ತು ಇದರ ಪ್ರಯೋಜನವನ್ನು ಪಡೆಯುತ್ತಾರೆ.

    ಜಿಯೋ ಮತ್ತು ವೊಡಾಫೋನ್​ ಐಡಿಯಾ ಕೂಡ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ಲಾಣ್​ಗಳನ್ನು ಆಗಾಗಾ ಪರಿಚಯಿಸುತ್ತಕೇ ಇರುತ್ತದೆ,
    Published by:Harshith AS
    First published: