HOME » NEWS » Tech » AIRTEL NOW OFFER ZEE5 SUBSCRIPTION WITH RS 79 PREPAID PLAN NEW RS 289 PACK LAUNCHED HG

Airtel Prepaid Plan: 79 ರೂ ಪ್ರಿಪೇಯ್ಡ್​​ ಪ್ಲಾನ್​ನಲ್ಲಿ ಇದೆಯಾ ಇಷ್ಟೆಲ್ಲ ಬೆನಿಫಿಟ್​!

Airtel: ಇದೀಗ​​ 79 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಮೂಲಕ ಗ್ರಾಹಕರಗೆ ಜೀ5 ಕ್ಯಾಟಲೊಗ್​ ಚಂದಾದಾರಿಕೆಯನ್ನು ನೀಡುತ್ತಿದೆ.

news18-kannada
Updated:July 8, 2020, 3:26 PM IST
Airtel Prepaid Plan: 79 ರೂ ಪ್ರಿಪೇಯ್ಡ್​​ ಪ್ಲಾನ್​ನಲ್ಲಿ ಇದೆಯಾ ಇಷ್ಟೆಲ್ಲ ಬೆನಿಫಿಟ್​!
ಏರ್​​ಟೆಲ್
  • Share this:
ಭಾರ್ತಿ ಏರ್​​ಟೆಲ್​  ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಪ್ರಯೋಜನ ಸಿಗುವಂತ ಅನೇಕ ಪ್ರಿಪೇಯ್ಡ್​​ ಪ್ಲಾನ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ​​ 79 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಮೂಲಕ ಗ್ರಾಹಕರಗೆ ಜೀ5 ಕ್ಯಾಟಲೊಗ್​ ಚಂದಾದಾರಿಕೆಯನ್ನು ನೀಡುತ್ತಿದೆ. ಏರ್​ಟೆಲ್​​ ಥ್ಯಾಕ್ಸ್​​​ ಅಪ್ಲಿಕೇಶನ್​ ಅಡಿಯಲ್ಲಿ ಡಿಜಿಟಲ್​​​​ ಸ್ಟೋರ್​ ವಿಭಾಗದಲ್ಲಿ ಈ ಪ್ಲಾನ್​ ಲಭ್ಯವಿದೆ. ಏರ್​​ಟೆಲ್​​ ಎಲ್ಲಾ ಗ್ರಾಹಕರಿಗೆ ಈ ಅನುಕೂಲಕರ ಪ್ಲಾನ್​ ಲಭ್ಯವಿದೆ.

ರೂಪಾಯಿ 289 ಪ್ರಿಪೇಯ್ಡ್​ ಪ್ಲಾನ್​:

ಏರ್​​ಟೆಲ್​​ 289 ರೂಪಾಯಿ ಪ್ಲಾನ್​​ ಮೂಲಕ ಹಲವಾರು ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಪ್ಲಾನ್​ನಲ್ಲಿ ಬಳಕೆದಾರರಿಗೆ ಪ್ರತಿದಿನ 1.5ಜಿಬಿ ಡೇಟಾ ಜೊತೆಗೆ 100 ಎಸ್​ಎಮ್​ಎಸ್​ ಉಚಿತವಾಗಿ ನೀಡುತ್ತಿದೆ.  ಮಾತ್ರವಲ್ಲದೆ, ಜೀ5 ಕ್ಯಾಟಲೊಗ್​​ ಚಂದಾದಾರಿಕೆಯನ್ನು ನೀಡುತ್ತಿದೆ. ಏರ್​ಟೆಲ್​ ಎಕ್ಸ್​ಟ್ರೀಮ್​​​ ಪ್ರೀಪಿಯಂ ಚಂದಾದಾರಿಕೆ, ಉಚಿತ ಹೆಲೋಟ್ಯೂನ್​, ವಿಂಕ್​ ಮ್ಯೂಸಿಕ್​, ಉಚಿತ ಆನ್​ಲೈನ್​​ ತರಗತಿ ಗ್ರಾಹಕರು ಈ ಆಫರ್​ ಮೂಲಕ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ, 150 ಕ್ಯಾಶ್​ಬ್ಯಾಕ್​ ಪಡೆಯುವ ಮೂಲಕ ಒಂದು ವರ್ಷದ ಫಾಸ್ಟ್​ಟ್ಯಾಗ್​​​ ಪಡೆಯಬಹುದಾಗಿದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಕೊರೋನಾ ಸಮಯದಲ್ಲಿ ಅನೇಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಟೆಲಿಕಾಂ ಕಂಪೆನಿಗಳು ಕಡಿಮೆ ಬೆಲೆಯ ಪ್ಲಾನ್​ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅನೇಕರು ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಆನ್​ಲೈನ್​ ಫ್ಲಾಟ್​ಫಾರ್ಮ್​ಗಳ ಮೂಲಕ ಮನರಂಜನೆ ಚಾನೆಲ್​ ಅನ್ನು ವೀಕ್ಷಿಸುತ್ತಿದ್ದಾರೆ. ಅದಕ್ಕೆಂದೆ ಏರ್​ಟೆಲ್​ ಜೀ5 ಕ್ಯಾಟಲಾಗ್​ ಚಂದಾದಾರಿಕೆಯನ್ನು ನೀಡಿದೆ.

Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು

Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು

Published by: Harshith AS
First published: July 8, 2020, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories