ದೇಶದ ಅನೇಕ ಕಡೆಗಳಲ್ಲಿ Airtel ನೆಟ್​ವರ್ಕ್​ ಡೌನ್: ಅಡಚಣೆಗಾಗಿ ವಿಷಾದ ವ್ಯಕ್ತಪಡಿಸಿದ ಟೆಲಿಕಾಂ ಕಂಪನಿ

Airtel / ಏರ್‌ಟೆಲ್

Airtel / ಏರ್‌ಟೆಲ್

Airtel: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಏರ್ಟೆಲ್ ಮೊಬೈಲ್ ನೆಟ್ವರ್ಕ್ ಡೌನ್ ಆಗಿದೆ ಎಂದು ವರದಿಯಾಗಿದೆ. ಭಾರತದಲ್ಲಿರುವ ಅನೇಕ ಏರ್ಟೆಲ್ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು, ಇಂಟರ್ನೆಟ್ ಬಳಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಭಾರತದ ಪ್ರಮುಖ ಟೆಲಿಕಾಂ ಕಂಪನಿ (Telecom Company) ಏರ್​ಟೆಲ್ (Airtel) ದೇಶಾದ್ಯಂತ ತನ್ನ ಗ್ರಾಹಕರಿಗೆ 4G ಇಂಟರ್ನೆಟ್ (Internet) ಮತ್ತು ಧ್ವನಿ ಸೇವೆಗಳನ್ನು ಒದಗಿಸುತ್ತಿದೆ. ಏರ್​ಟೆಲ್ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳನ್ನು (Internet Service) ಒದಗಿಸುತ್ತಿದ್ದರೂ ಸಹ, ಬಳಕೆದಾರರು ತಮ್ಮ ಏರ್​ಟೆಲ್ ಇಂಟರ್ನೆಟ್ ಸಂಪರ್ಕದಲ್ಲಿ ನಿಧಾನಗತಿಯ ಅಥವಾ ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಈಗಾಗ್ಲೆ ಕೇಳಿ ಬಂದಿದೆ. ಏರ್​ಟೆಲ್ ಮತ್ತೆ ಹಳೇ ಚಾಳಿಯನ್ನೇ ಮುಂದುವರಿಸಿದ್ದು, ನಿನ್ನೆಯಿಂದ ಏರ್​ಟೆಲ್ ನೆಟ್ ವರ್ಕ್ ಸಂಪೂರ್ಣ ಸ್ಥಗಿತಗೊಂಡಿದ್ದು, ಬಳಕೆದಾರರು ದೂರುಗಳನ್ನು ಸಲ್ಲಿಸಿದ್ದಾರೆ.


  ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಏರ್​ಟೆಲ್ ಮೊಬೈಲ್ ನೆಟ್ವರ್ಕ್ ಡೌನ್ ಆಗಿದೆ ಎಂದು ವರದಿಯಾಗಿದೆ. ಭಾರತದಲ್ಲಿರುವ ಅನೇಕ ಏರ್​ಟೆಲ್ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು, ಇಂಟರ್ನೆಟ್ ಬಳಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಏರ್ ಟೆಲ್ ಕಂಪನಿಯು ಸದ್ಯಕ್ಕೆ ಸಮಸ್ಯೆಯನ್ನು ಒಪ್ಪಿಕೊಂಡಿಲ್ಲ, ಆದರೆ ಆನ್‌ಲೈನ್ ವರದಿಗಳು, ದೂರುಗಳಿಂದ ಈ ಸಮಸ್ಯೆಯು ವ್ಯಾಪಕವಾಗಿರಬಹುದೆಂದು ತಿಳಿದು ಬಂದಿದೆ. ಅಲ್ಲದೇ Airtel ನ ಅಪ್ಲಿಕೇಶನ್ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆನ್‌ಲೈನ್ ವರದಿಗಳು ಹೇಳಿವೆ.


  #Airteldown ಎಂಬುದು ಟ್ವಿಟರ್ ಟ್ರೆಂಡಿಂಗ್ ಕೂಡಾ ಆಗಿದ್ದು, ಗ್ರಾಹಕರು ಏರ್​ಟೆಲ್ ಡೌನ್ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕರೆಗಳು ಬರುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಇಂಟರ್ನೆಟ್, ವೈ-ಫೈ ಸರ್ವಿಸ್ ಕೆಲಸ ಮಾಡುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಏರ್​ಟೆಲ್ ಆ್ಯಪ್ ಕೂಡ ವರ್ಕ್ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.


  ಡೆಲ್ಲಿ, ಮುಂಬೈ, ನೋಯ್ಡಾ ಸೇರಿದಂತೆ ದೇಶದ ಹಲವಡೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಫೈಬರ್ ಇಂಟರ್ನೆಟ್, ಬ್ರಾಡ್‌ಬ್ಯಾಂಡ್, ಮೊಬೈಲ್ ನೆಟ್‌ವರ್ಕ್‌ನಿಂದ ಹಿಡಿದು ಎಲ್ಲಾ ಏರ್​ಟೆಲ್ ಸಂಪರ್ಕಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ. ಹಲವಾರು ಮಂದಿ ಏರ್​ಟೆಲ್ ಬಳಕೆದಾರರು ಟ್ವಿಟರ್ನಲ್ಲಿ ನೆಟ್ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ.


  ಇದನ್ನು ಓದಿ:Angry Birds: ಮತ್ತೆ ಫೇಮಸ್ ಆಗುತ್ತಿದೆ Game, ಈ ಮೂರು ‘ಹಕ್ಕಿ’ಗಳ ಹಿಂದೆ ಬಿದ್ದ ಜನರು!


  ಫೆಬ್ರವರಿ 11 ರಂದು ಸುಮಾರು 11:30AM ರಿಂದ ಏರ್‌ಟೆಲ್ ಇಂಟರ್ನೆಟ್‌, ಕರೆಗಳಲ್ಲಿ ಸಮಸ್ಯೆಗಳಿವೆ ಎಂದು ಔಟ್ಟೇಜ್ ಟ್ರ್ಯಾಕರ್ ಡೌನ್‌ಡೆಕ್ಟರ್ ತೋರಿಸಿದೆ. ಡೌನ್‌ಡೆಕ್ಟರ್ ಪ್ರಕಾರ, ಸುಮಾರು 3,729 ಬಳಕೆದಾರರು ಭಾರತದಾದ್ಯಂತ ತಮ್ಮ ಸಂಪರ್ಕದಲ್ಲಿ ಕಡಿತವನ್ನು ವರದಿ ಮಾಡಿರುವುದಾಗಿ ಹೇಳಿದೆ. ಹಲವು ಬಳಕೆದಾರರು ಈ ತಿಂಗಳಿನಲ್ಲಿ ಎರಡನೇ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಬಳಕೆದಾರರು ಏರ್ ಟೆಲ್ ವಿರುದ್ಧ ಗುಡುಗಿದ್ದಾರೆ. ಆದರೆ ಆದರೆ, ಏರ್ಟೆಲ್ ಬ್ರಾಡ್ ಬಾಂಡ್ ಮತ್ತು ಇಂಟರ್ ನೆಟ್ ಸ್ಥಗಿತದ ಹಿಂದಿನ ಕಾರಣ ತಿಳಿದಿಲ್ಲ.


  ಈ ಬಗ್ಗೆ ಟ್ವಿಟ್ಟರ್ ನಲ್ಲಿ ದೂರುಗಳು ಬರುತ್ತಿದ್ದಂತೆ, ಮಾಹಿತಿ ಹಂಚಿಕೊಂಡಿರುವ ಏರ್​ಟೆಲ್ ಇಂಡಿಯಾ, “ನಮ್ಮ ಇಂಟರ್ನೆಟ್ ಸೇವೆಗಳು ಕೆಲ ಸಮಯ ಅಡಚಣೆಯನ್ನು ಹೊಂದಿದ್ದವು. ಇದರಿಂದ ನಿಮಗೆ ಉಂಟಾದಂತ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಮ್ಮ ತಂಡಗಳು ನಮ್ಮ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ಕೆಲಸ ಮಾಡುತ್ತಿದೆ. ಈಗ ಸರಿಯಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದೆ,” ಎಂದು ಏರ್​ಟೆಲ್ ತಿಳಿಸಿದೆ.


  ಇದನ್ನು ಓದಿ: Osmosis: ಬಾಯಿ ಇದ್ರೂ ಸಹ ಬಾಯಿಯಿಂದ ನೀರು ಕುಡಿಯಲ್ಲ! ಈ ಜೀವಿ ಬಗ್ಗೆ ಗೊತ್ತಾ?


  ಏರ್‌ಟೆಲ್ ಪ್ರತಿಸ್ಪರ್ಧಿ, ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ನೆಟ್ ವರ್ಕ್ ಕಳೆದ ವಾರ ಮುಂಬೈ ಪ್ರದೇಶದ ಕೆಲವು ಭಾಗಗಳಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸಿತ್ತು, ಇದೇ ರೀತಿಯ ಸ್ಥಗಿತಗೊಂಡ ಕೆಲವು ದಿನಗಳ ನಂತರ ಏರ್‌ಟೆಲ್ ಈ ಸಮಸ್ಯೆ ಎದುರಿಸಿದೆ. ಆದಾಗ್ಯೂ, ಏರ್‌ಟೆಲ್ ಸ್ಥಗಿತವು ದೊಡ್ಡ ಪ್ರಮಾಣದಲ್ಲಿರುವಂತೆ ತೋರುತ್ತಿದೆ, ಏಕೆಂದರೆ ಡೌನ್‌ಡೆಕ್ಟರ್‌ನಲ್ಲಿನ ಔಟ್ಟೇಜ್ ಮ್ಯಾಪ್ ನಲ್ಲಿ ದೇಶಾದ್ಯಂತ ಏರ್​ಟೆಲ್ ನೆಟ್ವರ್ಕ್ ಸ್ಥಗಿತ ಗೊಂಡಿರುವುದು ಕಂಡು ಬಂದಿದೆ.

  Published by:Harshith AS
  First published: