Airtel: ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ಏರ್‌ಟೆಲ್! ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತ

Disney+ Hotstar: ಟೆಲಿಕಾಂ ಆಪರೇಟರ್ ತನ್ನ ಪೋರ್ಟ್ ಫೋಲಿಯೋಗೇ 399 ಮತ್ತು 839 ರೂಪಾಯಿಗಳ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಸೇರಿಸಿದೆ. ಹೊಸ ಪ್ರೀಪೇಯ್ಡ್ ಯೋಜನೆಗಳು ವಿಭಿನ್ನ ಪ್ರಯೋಜನಗಳು ಮತ್ತು ವ್ಯಾಲಿಡಿಟಿಯೊಂದಿಗೆ ಬರುತ್ತವೆ.

Airtel/ ಏರ್‌ಟೆಲ್

Airtel/ ಏರ್‌ಟೆಲ್

  • Share this:
    ರಿಲಯನ್ಸ್ ಜಿಯೋ (Reliance Jio) ತನ್ನ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+ Hotstar) ಚಂದಾದಾರಿಕೆಯೊಂದಿಗೆ (subscription ) ಹೊಸ ಪ್ರೀಪೇಯ್ಡ್ ಯೋಜನೆಗಳನ್ನು (New Prepaid Plans) ಅನಾವರಣಗೊಳಿಸಿದ ಒಂದು ದಿನದ ನಂತರ ಏರ್‌ಟೆಲ್ (Airtel) ಸಹ ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (Reacharge Plans) ಪ್ರಾರಂಭಿಸಿದೆ.

    ಟೆಲಿಕಾಂ ಆಪರೇಟರ್ ತನ್ನ ಪೋರ್ಟ್ ಫೋಲಿಯೋಗೇ 399 ಮತ್ತು 839 ರೂಪಾಯಿಗಳ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಸೇರಿಸಿದೆ. ಹೊಸ ಪ್ರೀಪೇಯ್ಡ್ ಯೋಜನೆಗಳು ವಿಭಿನ್ನ ಪ್ರಯೋಜನಗಳು ಮತ್ತು ವ್ಯಾಲಿಡಿಟಿಯೊಂದಿಗೆ ಬರುತ್ತವೆ. ಎರಡೂ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಮೂರು ತಿಂಗಳವರೆಗೆ ನೀಡುತ್ತವೆ. ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯು ಇಲ್ಲಿದೆ ನೋಡಿ.

    ಏರ್ಟೆಲ್ ನ 399 ರೂಪಾಯಿಗಳ ಪ್ರೀಪೇಯ್ಡ್ ಪ್ಲ್ಯಾನ್

    ಏರ್‌ಟೆಲ್ 399 ರೂಪಾಯಿಗಳ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಘೋಷಿಸಿದ್ದು, ಇದು ಪ್ರತಿದಿನ 2.5 ಜಿಬಿ ಡೇಟಾ, ದಿನಕ್ಕೆ 100 ಎಸ್ಎಂಎಸ್ ಮತ್ತು ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಧ್ವನಿ ಕರೆಯನ್ನು ಹೊಂದಿದೆ. ಇದಲ್ಲದೆ, ಗ್ರಾಹಕರು ಮೂರು ತಿಂಗಳ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತಾರೆ. ಈ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಎಡಿಷನ್, ಅಪೊಲೊ 24x7 ಸರ್ಕಲ್ ಮತ್ತು ಹೆಚ್ಚಿನವುಗಳ ಒಂದು ತಿಂಗಳ ಉಚಿತ ಪ್ರಯೋಗವೂ ಸೇರಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ.

    ಇದನ್ನೂ ಓದಿ: Safety Gadgets For Ladies: ಮಹಿಳೆಯರೇ, ಈ 5 ಸುರಕ್ಷತಾ ಗ್ಯಾಜೆಟ್​​​ಗಳನ್ನು​ ಬ್ಯಾಗ್​ನಲ್ಲಿ ಇಟ್ಟುಕೊಂಡಿರಿ

    ಏರ್‌ಟೆಲ್ ನ 839 ರೂಪಾಯಿಗಳ ಪ್ರೀಪೇಯ್ಡ್ ಪ್ಲ್ಯಾನ್

    ಏರ್‌ಟೆಲ್ ಈಗ 839 ರೂಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಸಹ ನೀಡುತ್ತಿದೆ, ಇದು ಪ್ರತಿದಿನ 2 ಜಿಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ 100 ಎಸ್ಎಂಎಸ್ ಸಹ ಸೇರಿದೆ. ಮೇಲೆ ತಿಳಿಸಿದಂತೆ, ಗ್ರಾಹಕರು ಮೂರು ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಏರ್‌ಟೆಲ್ ಎಕ್ಸ್ಟ್ರೀಮ್ ಮೊಬೈಲ್ ಪ್ಯಾಕ್, 100 ರೂಪಾಯಿಗಳ ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್ ಮತ್ತು ಹೆಚ್ಚಿನದನ್ನು ಸಹ ಪಡೆಯುತ್ತಾರೆ. ಪ್ರೀಪೇಯ್ಡ್ ಯೋಜನೆಯನ್ನು ನೀವು ಖರೀದಿಸಿದ ನಂತರ 84 ದಿನಗಳವರೆಗೆ ಮಾನ್ಯವಾಗಿರುತ್ತದೆ.

    ರಿಲಯನ್ಸ್ ಜಿಯೋ ಹೊಸದಾಗಿ ಪರಿಚಯಿಸಿದ 4 ಪ್ರೀಪೇಯ್ಡ್ ಯೋಜನೆಗಳು ಹೇಗಿವೆ?

    ರಿಲಾಯನ್ಸ್ ಜಿಯೋ ನಾಲ್ಕು ಪ್ರೀಪೇಯ್ಡ್ ಯೋಜನೆಗಳನ್ನು ಘೋಷಿಸಿದೆ, ಎಲ್ಲವೂ ಬಹುತೇಕವಾಗಿ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹೊಸ 333 ರೂಪಾಯಿಗಳ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್ ಗೆ ಅನಿಯಮಿತ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು 1.5 ಜಿಬಿ ದೈನಂದಿನ ಡೇಟಾ ಒಳಗೊಂಡಿದೆ. ಒಮ್ಮೆ ಒದಗಿಸಿದ ಡೇಟಾ ಖಾಲಿಯಾದ ನಂತರ, ಬಳಕೆದಾರರು 64 ಕೆಬಿಪಿಎಸ್ ವೇಗವನ್ನು ಪಡೆಯುತ್ತಾರೆ. ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.

    ಇದನ್ನೂ ಓದಿ: 2022 KTM 390: 2 ರೈಡಿಂಗ್ ಮೋಡ್‌ಗಳೊಂದಿಗೆ ಬಿಡುಗಡೆಯಾಗಿದೆ ಈ ಅಡ್ವೆಂಚರ್ ಬೈಕ್! ಕೇವಲ 6999 ರೂಪಾಯಿಗೆ ಖರೀದಿಸಿ

    ನಿಮ್ಮ ಬಜೆಟ್ ಸ್ವಲ್ಪ ಕಡಿಮೆ ಇದ್ದರೆ, ನೀವು 151 ರೂಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಖರೀದಿಸಬಹುದು. ಇದು ಒಟ್ಟು 8 ಜಿಬಿ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಗ್ರಾಹಕರಿಗೆ ಧ್ವನಿ ಕರೆಗಳು ಸಿಗುವುದಿಲ್ಲ. ಇದು ವ್ಯಾಲಿಡಿಟಿ ಅವಧಿಯೊಂದಿಗೆ ಬರುವುದಿಲ್ಲ ಮತ್ತು ಇದು ನಿಮ್ಮ ಅಸ್ತಿತ್ವದಲ್ಲಿರುವ ಪ್ರೀಪೇಯ್ಡ್ ಯೋಜನೆಯ ಪ್ರಕಾರ ಮಾನ್ಯವಾಗಿರುತ್ತದೆ.

    ಜಿಯೋ ಬಿಡುಗಡೆ ಮಾಡಿದ ಮೂರನೇ ಯೋಜನೆ 583 ರೂಪಾಯಿದ್ದಾಗಿದೆ. ಇದು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಎಂಎಸ್ ಮತ್ತು ದಿನಕ್ಕೆ 1.5 ಜಿಬಿ ಡೇಟಾವನ್ನು ಒಳಗೊಂಡಿದೆ. ನೀವು ಅದನ್ನು ಖರೀದಿಸಿದ ನಂತರ ಇದು 56 ದಿನಗಳವರೆಗೆ ಮಾನ್ಯವಾಗಿರುತ್ತದೆ. ಕೊನೆಯದಾಗಿ, ಹೊಸ 783 ರೂಪಾಯಿಗಳ ಪ್ರೀಪೇಯ್ಡ್ ಜಿಯೋ ಪ್ಯಾಕ್ ಸಹ ಇದೆ, ಅದು ಅದೇ ಪ್ರಯೋಜನಗಳನ್ನು ನೀಡುತ್ತದೆ ಮತ್ತು ವ್ಯತ್ಯಾಸ ಇರುವುದು ಬರೀ ವ್ಯಾಲಿಡಿಟಿಯಲ್ಲಿ ಎಂದು ಹೇಳಬಹುದು. ಇದು 84 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ.
    Published by:Harshith AS
    First published: