ಏರ್​ಟೆಲ್​ ದೀಪಾವಳಿ ಧಮಾಕಾ: 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಪಡೆಯಿರಿ..!

ದೀಪಾವಳಿ ಪ್ರಯುಕ್ತ ಏರ್​ಟೆಲ್ ಕಂಪನಿ ಐದು ಹೊಸ ಯೋಜನೆಗಳನ್ನು ಪರಿಚಯಿಸಿದೆ ’ Airtel launches 5 new prepaid plans

zahir | news18
Updated:November 6, 2018, 1:11 PM IST
ಏರ್​ಟೆಲ್​ ದೀಪಾವಳಿ ಧಮಾಕಾ: 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಪಡೆಯಿರಿ..!
ಏರ್​ಟೆಲ್ 148 ರೂ. ರಿಚಾರ್ಜ್ ಪ್ಲ್ಯಾನ್: ಏರ್‌ಟೆಲ್‌ನ 148 ರೂ. ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, 300 ಎಸ್‌ಎಂಎಸ್ ಮತ್ತು ಏರ್​ಟೆಲ್ ಟು ಏರ್​ಟೆಲ್ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ದೊರೆಯಲಿದೆ. ಇದರ ವಾಲಿಡಿಟಿ 28 ದಿನಗಳು.
  • News18
  • Last Updated: November 6, 2018, 1:11 PM IST
  • Share this:
-ನ್ಯೂಸ್ 18 ಕನ್ನಡ

ನೀವು ಏರ್​ಟೆಲ್ ಬಳಕೆದಾರರಾಗಿದ್ದರೆ, ಈ ದೀಪಾವಳಿ ಹಬ್ಬದಂದು ನಿಮಗೊಂದು ಸಿಹಿ ಸುದ್ದಿಯಿದೆ. ದೀಪಾವಳಿ ಪ್ರಯುಕ್ತ ಏರ್​ಟೆಲ್ ಹೊಸ ಬಳಕೆದಾರರಿಗೆ 178 , 229, 344, 559 ಮತ್ತು 495 ರೂ. ಪ್ಲಾನಿನ ಐದು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನಿನಲ್ಲಿ ನೀವು ಕರೆ, ಮೆಸೇಜ್ ಮತ್ತು ಇಂಟರ್​ನೆಟ್​ ಸೇವೆಯನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದು.

178 ರೂ. ಪ್ಲಾನ್
ಹೊಸ ಏರ್​ಟೆಲ್ ಸಿಮ್​ಗೆ 178 ರೂಪಾಯಿಗಳ ರಿಚಾರ್ಜ್​ ಮಾಡಿಕೊಳ್ಳಬೇಕು. ಇದರಿಂದ ಮುಂದಿನ 28 ದಿನಗಳ ಕಾಲ ಅನಿಯಮಿತ ಕರೆ ಸೌಲಭ್ಯ , ಪ್ರತಿದಿನ 100 ಉಚಿತ ಸಂದೇಶಗಳನ್ನು ಕಳುಹಿಸಬಹುದು. ಇದಲ್ಲದೆ ಈ ಪ್ಲಾನಿನಲ್ಲಿ ಒಟ್ಟು 28GB ಡೇಟಾ ಪ್ಯಾಕ್ ಸಿಗಲಿದ್ದು, ಪ್ರತಿನಿತ್ಯ 1 ಜಿಬಿ ಇಂಟರ್ನೆಟ್ ಡೇಟಾವನ್ನು ಬಳಸಿಕೊಳ್ಳಬಹುದು.

229 ರೂ. ಪ್ಲಾನ್​
ಏರ್​ಟೆಲ್ ಪರಿಚಯಿಸಿರುವ ಈ ಪ್ಲಾನ್​ನನ್ನು ಹೊಸ ಸಿಮ್ ಬಳಕೆದಾರರು ಸದುಪಯೋಗ ಪಡಿಸಿಕೊಳ್ಳಬಹುದು. ಇಲ್ಲಿ ದಿನನಿತ್ಯ 100 SMS ಮತ್ತು ಅನಿಯಮಿತ ಕರೆಯನ್ನು ಮಾಡಬಹುದು. ಹಾಗೆಯೇ ಪ್ರತಿನಿತ್ಯ 1.4GB ಇಂಟರ್​ನೆಟ್​ ಡೇಟಾವನ್ನು ಬಳಸಬಹುದು. ಇದು ಕೂಡ 28 ದಿನಗಳ ವಾಲಿಟಿಡಿಯನ್ನು ಹೊಂದಿರುತ್ತದೆ.

344 ರೂ. ಪ್ಲಾನ್ ಈ ಪ್ಲಾನ್ ಕೂಡ 178 ರೂ. ಮತ್ತು 229 ರೂ. ಯೋಜನೆಯಂತೆ ಅನಿಯಮಿತ ಕರೆ, 100 sms ಅನ್ನು ಉಚಿತವಾಗಿ ನೀಡುತ್ತದೆ. ಆದರೆ ಇಲ್ಲಿ ನಿಮಗೆ ಪ್ರತಿನಿತ್ಯ 2GB ಇಂಟರ್​ನೆಟ್ ಡೇಟಾ ದೊರೆಯಲಿದೆ. 28 ದಿನಗಳ ಈ ಪ್ಲಾನಿನಲ್ಲಿ ನಿಮಗೆ ಒಟ್ಟು 56GB ಡೇಟಾ ಪ್ಯಾಕ್ ಸಿಗಲಿದೆ.

495 ರೂ. ಪ್ಲಾನ್
495 ರೂ. ಪ್ಲಾನಿನಲ್ಲಿ ಅನಿಯಮಿತ ಕರೆ ಮತ್ತು ಪ್ರತಿನಿತ್ಯ 100sms ಅನ್ನು ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ನೀವು ಪ್ರತಿದಿನ 1.4 GB ಇಂಟರ್​ನೆಟ್ ಡೇಟಾ ಪಡೆದುಕೊಳ್ಳಬಹುದು. ಇದರ ವಾಲಿಟಿಡಿಯು 84 ದಿನಗಳಾಗಿರುತ್ತದೆ.

ಇದನ್ನೂ ಓದಿ: ಲವ್ - ಸೆಕ್ಸ್ ​- ದೋಖಾ: ಭಕ್ತನ ರೂಪದಲ್ಲಿ ಎಂಟ್ರಿ ಕೊಟ್ಟು ಅತ್ಯಾಚಾರ ಎಸೆಗಿದ ಅಮೆರಿಕನ್ ಭೂಪ..!

559 ರೂ. ಪ್ಲಾನ್
ಇದು 90 ದಿನಗಳ ವಾಲಿಟಿಡಿಯ ಪ್ಲಾನ್. 495 ರೂ.ನಲ್ಲಿ ನೀಡಲಾಗಿರುವ ಅದೇ ಆಫರ್​ನ್ನು ಇಲ್ಲಿ ಕೂಡ ನೀಡಲಾಗಿದೆ. ಇಲ್ಲಿ ಪ್ರತಿದಿನ ಅನಿಯಮಿತ ಕರೆ,  100sms ಪಡೆದುಕೊಳ್ಳಬಹುದು.​  117 GB ಇಂಟರ್​ನೆಟ್​ ಡೇಟಾ ನೀಡಲಾಗಿರುವ ಈ ಪ್ಲಾನಿನಲ್ಲಿ ಪ್ರತಿನಿತ್ಯ 1.4 GB ಡೇಟಾ ಬಳಸಿಕೊಳ್ಳಬಹುದು. ಈ ಎಲ್ಲ ಆಫರ್​ಗಳು ಕೇವಲ ಏರ್​ಟೆಲ್​ ಹೊಸ ಸಿಮ್​ ಬಳಕೆದಾರರಿಗೆ ಅನ್ವಯಿಸಲಿದೆ.

First published: November 6, 2018, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading