• Home
 • »
 • News
 • »
 • tech
 • »
 • Recharge Plans: ಏರ್​​ಟೆಲ್​​ನಿಂದ ಭಾರೀ ಅಗ್ಗದ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ! ಬೆಲೆ ಎಷ್ಟು?

Recharge Plans: ಏರ್​​ಟೆಲ್​​ನಿಂದ ಭಾರೀ ಅಗ್ಗದ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ! ಬೆಲೆ ಎಷ್ಟು?

ಜಿಯೋ ಕಂಪೆನಿಗೆ ನಿರಂತರವಾಗಿ ಪೈಪೋಟಿ ನೀಡುವ ಕಂಪೆನಿಯೆಂದರೆ ಏರ್​​ಟೆಲ್​. ಇದೀಗ ಈ ಕಂಪೆನಿ ಭಾರೀ ಕಡಿಮೆ ಬೆಲೆ ಹೊಂದಿದ ರೀಚಾರ್ಜ್​ ಯೋಜನೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಏರ್​​ಟೆಲ್ ಬಿಡುಗಡೆ ಮಾಡಿರುವ ಆ ರೀಚಾರ್ಜ್​ ಪ್ಲ್ಯಾನ್​ ಯಾವುದು, ಆಫರ್ಸ್​ ಏನೆಲ್ಲಾ ಇದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಮುಂದೆ ಓದಿ ...
 • Share this:

  ಭಾರತೀಯ ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಏರ್​​ಟೆಲ್(Airtel)​ ಕೂಡ ಒಂದು. ಏರ್​ಟೆಲ್​ ಕಂಪೆನಿ ತನ್ನ ಗ್ರಾಹಕರಿಗೆ ವಿಶೇಷ ರೀತಿಯ ರೀಚಾರ್ಜ್ ಪ್ಲ್ಯಾನ್​ಗಳನ್ನು (Recharge Plans) ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯವಾಗಿದೆ. ಭಾರತೀಯ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗ್ಎ ಅನುಕೂಲ ಆಗುವಂತಹ ರೀಚಾರ್ಜ್​ ಪ್ಲ್ಯಾನ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಇದೀಗ ಏರ್​​ಟೆಲ್​ ಕಂಪೆನಿ ತನ್ನ ಗ್ರಾಹಕರಿಗಾಗಿ ಭಾರೀ ಅಗ್ಗದ ರೀಚಾರ್ಜ್ ಪ್ಲ್ಯಾನ್​​ ಒಂದನ್ನು ಬಿಡುಗಡೆ ಮಾಡಿದ. ಇದು ಏರ್​​ಟೆಲ್​ನಿಂದ ಬಿಡುಗಡೆಯಾದಂತಹ ಈ ಬಾರಿಯ ಕಡಿಮೆ ಬೆಲೆಯ ರೀಚಾರ್ಜ್ (Recharge)​ ಯೋಜನೆಯಾಗಿದೆ.

  ಜಿಯೋ ಕಂಪೆನಿಗೆ ನಿರಂತರವಾಗಿ ಪೈಪೋಟಿ ನೀಡುವ ಕಂಪೆನಿಯೆಂದರೆ ಏರ್​​ಟೆಲ್​. ಇದೀಗ ಈ ಕಂಪೆನಿ ಭಾರೀ ಕಡಿಮೆ ಬೆಲೆ ಹೊಂದಿದ ರೀಚಾರ್ಜ್​ ಯೋಜನೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಏರ್​​ಟೆಲ್ ಬಿಡುಗಡೆ ಮಾಡಿರುವ ಆ ರೀಚಾರ್ಜ್​ ಪ್ಲ್ಯಾನ್​ ಯಾವುದು, ಆಫರ್ಸ್​ ಏನೆಲ್ಲಾ ಇದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

  ಏರ್​ಟೆಲ್​ನ 35 ರೂಪಾಯಿಯ ರೀಚಾರ್ಜ್​ ಪ್ಲ್ಯಾನ್

  ಏರ್‌ಟೆಲ್ ಈಗ ಹೊಸದಾಗಿ 35 ರೂಪಾಯಿ ಬೆಲೆಯ ಹೊಸ ರೀಚಾರ್ಜ್​ ಯೋಜನೆಯನ್ನು ಪರಿಚಯಿಸಿದೆ. ಆದರೆ ಈ ಯೋಜನೆಯು ಏರ್‌ಟೆಲ್‌ನ ಯಾವುದೇ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಇದರ ಬದಲಾಗಿ ಏರ್​​ಟೆಲ್​ ಮೊಬೈಲ್ ಆ್ಯಪ್​ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಅಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ ಈ 35 ರೂಪಾಯಿಯ ಪ್ರೀಪೇಯ್ಡ್​ ರೀಚಾರ್ಜ್ ಪ್ಲ್ಯಾನ್​ ಅನ್ನು ಏರ್​ಟೆಲ್ ಆ್ಯಪ್​ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

  ಈ ಯೋಜನೆಯ ಪ್ರಯೋಜನಗಳು ಹೇಗಿದೆ?

  ಏರ್‌ಟೆಲ್‌ನ 35 ರೂಪಾಯಿಯ ರೀಚಾರ್ಜ್ ಯೋಜನೆಯು 2 ದಿನಗಳ ಮಾತ್ರ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯ ಮೂಲಕ ಗ್ರಾಹಕರಿಗೆ ಒಟ್ಟು 2ಜಿಬಿ ಡೇಟಾ ಸಿಗಲಿದೆ. ಅಂದರೆ 1ಜಿಬಿ ಡೇಟಾಗೆ ನೀವು 17.5 ರೂಪಾಯಿಯಂತೆ ಪಾವತಿಸುತ್ತೀರಿ. ಹಾಗೆಯೇ ಇದರ ಬದಲಾಗಿ 19 ರೂಪಾಯಿಯ ರೀಚಾರ್ಜ್ ಪ್ಲ್ಯಾನ್​ ಹಾಗೇ ಇದೆ. ಇದು ಒಂದು ದಿನ ಮಾನ್ಯತೆಯನ್ನು ಹೊಂದಿದ್ದು, ಇದರಲ್ಲಿ 1 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. 19 ರೂಪಾಯಿಯ ಪ್ಲ್ಯಾನ್​ಗೆ ಹೋಲಿಕೆ ಮಾಡಿದ್ರೆ 35 ರೂಪಾಯಿಯ ರೀಚಾರ್ಜ್ ಪ್ಲ್ಯಾನ್​​ ಉತ್ತಮವಾಗಿದೆ ಎಂದು ಹೇಳಬಹುದು.

  ಇದನ್ನೂ ಓದಿ: ಭಾರತದ ಮೊದಲ 5ಜಿ ಟ್ಯಾಬ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

  ಏರ್​​ಟೆಲ್​ನ 319 ರೂಪಾಯಿಯ ರೀಚಾರ್ಜ್ ಪ್ಲ್ಯಾನ್​

  ಏರ್​ಟೆಲ್ ಕಂಪೆನಿ ಇತ್ತೀಚೆಗೆ 319 ರೂಪಾಯಿಯ ರೀಚಾರ್ಜ್ ಪ್ಲ್ಯಾನ್​ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ದಿನವೂ 2ಜಿಬಿ ಡೇಟಾ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್​ ವಾಯ್ಸ್‌ ಕಾಲ್‌ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ಇನ್ನಿತರೆ ಪ್ರಯೋಜನಗಳನ್ನು ಹೊಂದಿದೆ.
  ಈ ಪ್ಲ್ಯಾನ್‌ನಲ್ಲಿ ವಿಂಕ್ ಮ್ಯೂಸಿಕ್, ಉಚಿತ ಹೆಲೋಟ್ಯೂನ್ಸ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಅಪೊಲೊ 24|7 ಸರ್ಕಲ್ ಸೇರಿದಂತೆ ಹಲವು ಆಫರ್ಸ್​​ಗಳನ್ನು ಇದರಲ್ಲಿ ಪಡೆಯಬಹುದಾಗಿದೆ. ಈ  ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
  ಏರ್​​ಟೆಲ್​ನ 359 ರೂಪಾಯಿಯ ರೀಚಾರ್ಜ್ ಪ್ಲ್ಯಾನ್​

  ಏರ್‌ಟೆಲ್ ಬಿಡುಗಡೆ ಮಾಡಿದ 359 ರೂಪಾಯಿಯ ಪ್ರಿಪೇಯ್ಡ್ ಯೋಜನೆಯು ಸಹ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದರಲ್ಲಿ 2ಜಿಬಿ ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಜೊತೆಗೆ ಅನ್ಲಿಮಿಟೆಡ್​ ವಾಯ್ಸ್‌ ಕಾಲ್‌ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಇದಲ್ಲದೆ ಈ ಯೋಜನೆಯಲ್ಲಿ ಎಕ್ಸ್‌ಸ್ಟ್ರೀಮ್ ಮೊಬೈಲ್ ಆ್ಯಪ್​ಗಳ ಚಂದಾದಾರಿಕೆ, ಉಚಿತ ಹೆಲೋಟ್ಯೂನ್ಸ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಅಪೊಲೊ 24|7 ಸರ್ಕಲ್ ಸೇರಿದಂತೆ ಇತರೆ ಪ್ರಯೋಜನಗಳನ್ನು ನೀಡಲಿದ್ದು, ಈ ಪ್ಲ್ಯಾನ್​ ಕೂಡ ಒಟ್ಟು 28 ದಿನಗಳ ವ್ಯಾಲಿಡಿಟಿನ್ನು ಹೊಂದಿರುತ್ತದೆ.

  Published by:Prajwal B
  First published: