HOME » NEWS » Tech » AIRTEL JIO AND VI OFFER A RANGE OF PREPAID PLANS THAT GIVE 1 5GB DAILY DATA AT 28 DAYS HG

Airtel, Jio and Vi; ಒಂದೇ ಬೆಲೆಯ ಪ್ರಿಪೇಯ್ಡ್​ ಯೋಜನೆಗಳು; ಯಾವ ಕಂಪನಿ ಪ್ಲಾನ್​ನಲ್ಲಿದೆ ಹೆಚ್ಚು ಬೆನಿಫಿಟ್ಸ್​?

ವೊಡಾಫೋನ್​, ಜಿಯೋ ಒಂದೇ ದರದ ಹೊಸ ಪ್ರಿಪೇಯ್ಡ್​ ಯೋಜನೆಯನ್ನ ಪರಿಚಯಿಸಿದೆ. ಇದರ ಮೂಲಕ ಹಲವು ಕೊಡುಗೆಯನ್ನು ನೀಡಿದೆ. ಹಾಗಿದ್ದರೆ, ಒಂದೇ ದರದಲ್ಲಿ ಪರಿಚಯಿಸಿದ ಮೂರು ಪ್ಲಾನ್​ಗಳ ಪೈಕಿ ಯಾವುದು ಬೆಸ್ಟ್​ ತಿಳಿಯೋಣ..

news18-kannada
Updated:March 26, 2021, 8:59 AM IST
Airtel, Jio and Vi; ಒಂದೇ ಬೆಲೆಯ ಪ್ರಿಪೇಯ್ಡ್​ ಯೋಜನೆಗಳು; ಯಾವ ಕಂಪನಿ ಪ್ಲಾನ್​ನಲ್ಲಿದೆ ಹೆಚ್ಚು ಬೆನಿಫಿಟ್ಸ್​?
Airtel vs Jio vs VI
  • Share this:
ಟೆಲಿಕಾಂ ಕಂಪನಿಗಳಾದ ಜಿಯೋ, ಏರ್​ಟೆಲ್​, ವೊಡಾಫೋನ್​ ಆಗಾಗ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಮತ್ತು ಹೆಚ್ಚಿನ ಪ್ರಯೋಜನ ಸಿಗುವಂತೆ ಕಡಿಮೆ ಬೆಲೆಯ ಮತ್ತು ಅಧಿಕ ಡೇಟಾ ಒದಗಿಸುವ ಪ್ಲಾನ್ ಪರಿಚಯಿಸುತ್ತಿರುತ್ತದೆ. ಅದರಂತೆ ಇದೀಗ ಏರ್​ಟೆಲ್​. ವೊಡಾಫೋನ್​, ಜಿಯೋ ಒಂದೇ ದರದ ಹೊಸ ಪ್ರಿಪೇಯ್ಡ್​ ಯೋಜನೆಯನ್ನ ಪರಿಚಯಿಸಿದೆ. ಇದರ ಮೂಲಕ ಹಲವು ಕೊಡುಗೆಯನ್ನು ನೀಡಿದೆ. ಹಾಗಿದ್ದರೆ, ಒಂದೇ ದರದಲ್ಲಿ ಪರಿಚಯಿಸಿದ ಮೂರು ಪ್ಲಾನ್​ಗಳ ಪೈಕಿ ಯಾವುದು ಬೆಸ್ಟ್​ ತಿಳಿಯೋಣ..

399 ರೂ. ಯೋಜನೆ:

ಜಿಯೋ. ವೊಡಾಫೋನ್, ಏರ್​ಟೆಲ್​ ಈ ಮೂರು ಕಂಪನಿಗಳು 399 ರೂ.ವಿನ ಪ್ರಿಪೇಯ್ಡ್​ ಪ್ಲಾನ್​ ಅನ್ನು ಪರಿಚಯಿಸಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಷ್ಟು ಮಾತ್ರವಲ್ಲದೆ, ಪ್ರತಿದಿ 1.5ಜಿಬಿ ಡೇಟಾ ನೀಡುತ್ತಿದೆ.ಅದರ ಜೊತೆಗೆ 100 ಎಸ್​ಎಮ್​ಎಸ್​ ಉಚಿತವಾಗಿ ಒದಗಿಸುತ್ತಿದೆ.

ಏರ್​ಟೆಲ್​ ಕಂಪೆನಿ ಈ ಪ್ರಿಪೇಯ್ಡ್​ ಪ್ಲಾನ್ ಅಳವಡಿಸಿಕೊಂಡವರಿಗೆ ಎಕ್ಸ್​​ಟ್ರಿಮ್​ ಪ್ರಿಮಿಯಂ, ವಿಂಕ್​ ಮ್ಯೂಸಿಕ್​ ಮತ್ತು ಶಾ ಅಕಾಡೆಮಿಯ ಉಚಿತ ಚಂದಾದಾರಿಕೆ ಒದಗಿಸುತ್ತಿದೆ. ಜೊತೆಗೆ ಉಚಿತ ಹಲೋಟ್ಯೂನ್​ ಮತ್ತು ಫಾಸ್ಟ್​ ಟ್ಯಾಗ್​ ಖರೀದಿಸುವವರಿಗೆ 150 ರೂ ಕ್ಯಾಶ್​​ಬ್ಯಾಕ್ ಆಫರ್​ ನೀಡುತ್ತಿದೆ.

ಇನ್ನು ವೊಡಾಫೋನ್ ಬಳಕೆದಾರರು ವಿಐ ಸಿನಿಮಾ ಮತ್ತು ಟಿವಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಜಿಯೋ ಬಳಕೆದಾರರಿಗಾಗಿ ಜಿಯೋ ಆ್ಯಪ್​ ಉಚಿತವಾಗಿ ನೀಡುತ್ತಿದೆ.

Airtel Rs 249 vs Vi Rs 249 vs Jio Rs 199:

ಏರ್​​ಟೆಲ್​ ಮತ್ತು ವೊಡಾಫೊನ್​ ಐಡಿಯಾ 249 ರೂ ಪ್ರಿಪೇಯ್ಡ್​ ಪ್ಲಾಣ್​ ಮೂಲಕ ಒಂದೇ ಸಮನಾದ ಸೌಲಭ್ಯವನ್ನು ನೀಡುತ್ತದೆ. ಜಿಯೋ ಅದಕ್ಕಿಂತ ಕಡಿಮೆ ಬೆಲೆ ಸೌಲಭ್ಯವನ್ನು ನೀಡುತ್ತಿದೆ. ಈ ಪ್ಲಾನ್ ಮೂಲಕ 1.5ಜಿಬಿ ಡೇಟಾ ನೀಡುತ್ತದೆ. ಜೊತೆಗೆ 100 ಎಸ್​ಎಮ್ಎಸ್​ ಒದಗಿಸುತ್ತದೆ. 28 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದೆ.ಏರ್​​ಟೆಲ್​ 279 ಮತ್ತು 289 ಪ್ಲಾನ್​ ಪರಿಚಯಿಸಿದೆ. ಇದರ ಮೂಲಕ 1.5ಜಿಬಿ ಡೇಟಾ ಒದಗಿಸುತ್ತಿದೆ. ಜೊತೆಗೆ ಹೆಚ್​ಡಿಎಫ್​ಸಿ ಲೈಫ್​ ಇನ್ಶುರೆನ್ಸ್​, ಉಚಿತ ಹೆಲೋ ಟ್ಯೂನ್​ ಮತ್ತು 150 ರೂ.ವಿನ ಫಾಸ್ಟ್​ ಟ್ಯಾಗ್​ ಕ್ಯಾಶಗ್​ಬ್ಯಾಕ್​ ಆಫರ್​ ನೀಡುತ್ತಿದೆ.

Airtel Rs 598 vs Jio Rs 555 vs Vi Rs 599 prepaid plan:

ಈ ಮೂರು ಟೆಲಿಕಾಂ ಕಂಪೆನಿಗಳು ವಿವಿಧ ಬೆಲೆಯ ಪ್ರಿಪೇಯ್ಡ್​ ಪ್ಲಾನ್ ಪರಿಚಯಿಸಿದರು. ಒಂದೇ ರೀತಿಯ ಪ್ರಯೋಜನವನ್ನು ಒದಗಿಸುತ್ತಿದೆ. ಗ್ರಾಹಕರಿಗಾಗಿ ಪ್ರತಿದಿನ 1.5ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಮತ್ತು 100 ಎಸ್​ಎಮ್​ಎಸ್​ ನೀಡುತ್ತಿದೆ. 84 ದಿನಗಳ ವ್ಯಾಲಿಡಿಟಿ ಈ ಪ್ಲಾನ್​ ಹೊಂದಿದೆ.

ಅಷ್ಟು ಮಾತ್ರವಲ್ಲದೆ ಏರ್​ಟೆಲ್​ ಏಕ್ಸ್​ಟ್ರಿಮ್​ ಪ್ರಿಮಿಯಂ, ಉಚಿತ ಹಲೋಟ್ಯೂನ್​, ವಿಂಕ್​ ಮ್ಯೂಸಿಕ್​ ಮತ್ತು ಉಚಿತ ಆನ್​ಲೈನ್ ಕೋರ್ಸ್​ ನೋಡುವ ಅವಲಾಶ ಇದರಲ್ಲಿದೆ. ಜೊತೆಗೆ ಫಾಸ್ಟ್​ಟ್ಯಾಗ್ ಖರೀದಿಸುವವರಿಗೆ 150 ರೂ ಕ್ಯಾಶ್​ಬ್ಯಾಕ್​ ಸಿಗಲಿದೆ.
Youtube Video

ವೊಡಾಫೊನ್​ ಐಡಿಯಾ ಈ ಪ್ಲಾನ್​ ಅಳವಡಿಸಿಕೊಂಡವರಿಗೆ  ಪ್ರತದಿನ ರಾತ್ರಿ ಮತ್ತು ವಾರಂತ್ಯದಲ್ಲಿ ರೋಲ್ಓವರ್​ ಡೇಟಾ ಒದಗಿಸುತ್ತಿದೆ ಜೊತೆಗೆ ವಿಐ ಸಿನಿಮಾ ನೋಡುವ ಸೌಲಭ್ಯ. ಜಿಯೋ ಬಳಕೆದಾರರಿಗೆ ಜಿಯೋ ಟಿವಿ ಮತ್ತು ಆ್ಯಪ್​ ಬಳಸುವ ಅವಕಾಶ ನೀಡಿದೆ.
Published by: Harshith AS
First published: March 26, 2021, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories