• Home
 • »
 • News
 • »
 • tech
 • »
 • Airtel Data Plan: ಗ್ರಾಹಕರಿಗಾಗಿ ಏರ್ಟೆಲ್ ಬಿಡುಗಡೆ ಮಾಡುತ್ತಿದೆ 99 ರೂಪಾಯಿಯ ಡಾಟಾ ಪ್ಲ್ಯಾನ್!

Airtel Data Plan: ಗ್ರಾಹಕರಿಗಾಗಿ ಏರ್ಟೆಲ್ ಬಿಡುಗಡೆ ಮಾಡುತ್ತಿದೆ 99 ರೂಪಾಯಿಯ ಡಾಟಾ ಪ್ಲ್ಯಾನ್!

ಏರ್ಟೆಲ್

ಏರ್ಟೆಲ್

ಏರ್ಟೆಲ್​ನ ಈ ಪ್ರಿಪೇಯ್ಡ್ ಪ್ಲ್ಯಾನ್ ಅತ್ಯಂತ ಅಗ್ಗದ ಯೋಜನೆಯಾಗಿದೆ. ಇತ್ತೀಚೆಗೆ ಏರ್ಟೆಲ್​ ಬಿಡುಗಡೆ ಮಾಡುತ್ತಿರುವ ಯೋಜನೆಗಳು ಗ್ರಾಹಕರನ್ನು ಬಹಳಷ್ಟು ಆಕರ್ಷಿಸುತ್ತಿದೆ.ಇದು ಗ್ರಾಹಕರಿಗೆ ಬಹಳಷ್ಟು ಪ್ರಯೋಜನಗಳನ್ನು ಕೂಡಾ ನೀಡುತ್ತಿದ್ದು, ಅವುಗಳ ವೆಚ್ಚ ಕೂಡಾ ಬಹಳ ಕಡಿಮೆ.

 • Share this:

  ಇತ್ತೀಚಿನ ದಿನಗಳಲ್ಲಿ  ಟೆಲಿಕಾಂ ಕಂಪನಿಗಳು (Telecom Company) ದಿನದಿಂದ ದಿನಕ್ಕೆ ತನ್ನ ಪ್ರಿಪೇಯ್ಡ್ ಆಫರ್​ನಲ್ಲಿ (Prepaid Offer) ಏನಾದರೊಂದು ಬದಲಾವಣೆಯನ್ನು ತರುತ್ತಲೇ ಇರುತ್ತಾರೆ. ಅದೇ  ರೀತಿ ಗ್ರಾಹಕರು ಕೂಡ ತಮಗೆ ಬೇಕಾದ ನೆಟ್​ವರ್ಕ್​ನ ಸಿಮ್​ ಅನ್ನು ಆಯ್ಕೆ ಮಾಡುತ್ತಾರೆ. ಜಿಯೋ(Jio) , ಏರ್ಟೆಲ್ (Airtel), ವೊಡಫೋನ್ ಐಡಿಯಾ (Vi) ಈ ಕಂಪನಿಗಳು ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಕಂಪನಿಗಳಾಗಿವೆ. ಈ ಕಂಪನಿಗಳು ವರ್ಷದಿಂದ ವರ್ಷಕ್ಕೆ  ತನ್ನ ಡೇಟಾ ಪ್ಲ್ಯಾನ್ (Data Plan) ಜೊತೆಗೆ ಅದರ ಬೆಲೆಯನ್ನು ಹೆಚ್ಚು ಕಡಿಮೆ ಮಾಡುತ್ತಿರುತ್ತದೆ. ಇದೀಗ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್ ಗ್ರಾಹಕರಿಗಾಗಿ ಕೇವಲ 99 ರೂಪಾಯಿಗೆ ಪ್ರಿಪೇಯ್ಡ್​  ಡೇಟಾ ಮತ್ತು ಕಾಲಿಂಗ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇದು ಅತೀ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್ ಅಂತಾನೂ ಹೇಳ್ಬಹುದು.


  ಏರ್ಟೆಲ್​ನ ಈ ಪ್ರಿಪೇಯ್ಡ್ ಪ್ಲ್ಯಾನ್ ಅತ್ಯಂತ ಅಗ್ಗದ ಯೋಜನೆಯಾಗಿದೆ. ಇತ್ತೀಚೆಗೆ ಏರ್ಟೆಲ್​ ಬಿಡುಗಡೆ ಮಾಡುತ್ತಿರುವ ಯೋಜನೆಗಳು ಗ್ರಾಹಕರನ್ನು ಬಹಳಷ್ಟು ಆಕರ್ಷಿಸುತ್ತಿದೆ.ಇದು ಗ್ರಾಹಕರಿಗೆ ಬಹಳಷ್ಟು ಪ್ರಯೋಜನಗಳನ್ನು ಕೂಡಾ ನೀಡುತ್ತಿದ್ದು, ಅವುಗಳ ವೆಚ್ಚ ಕೂಡಾ ಬಹಳ ಕಡಿಮೆ. ನೀವು ವ್ಯಾಲಿಡಿಟಿ ಉಳಿಸಿಕೊಳ್ಳಲು ಕಡಿಮೆ ಬೆಲೆಯ ಯೋಜನೆಯನ್ನು ಹುಡುಕುತ್ತಿದ್ದರೆ, ಏರ್ ಟೆಲ್ ನ ಈ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಿದೆ.


   99 ರೂಪಾಯಿಯ ಪ್ರಿಪೇಯ್ಡ್​ ಪ್ಲ್ಯಾನ್:


  99 ರೂಪಾಯಿಗಳ ಏರ್ಟೆಲ್​ನ ಪ್ರಿಪೇಯ್ಡ್​ ಪ್ಲ್ಯಾನ್ ತುಂಬಾ ಕಡಿಮೆ ಬೆಲೆಯದ್ದಾಗಿದೆ. ಈ ಪ್ರಿಪೇಯ್ಡ್ ಯೋಜನೆಯ ಪ್ರಕಾರ, ಇದು ಅಗ್ಗದ ಯೋಜನೆಯಾಗಿದ್ದು, ಗ್ರಾಹಕರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಈ ಯೋಜನೆಯ ವಿಶೇಷತೆಯ  ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.


  ಇದನ್ನೂ ಓದಿ: 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

   ಈ ಯೋಜನೆಯ ಪ್ರಯೋಜನಗಳೇನು ? 


  ಏರ್ಟೆಲ್​ನ ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇದು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು ಒಂದು ತಿಂಗಳ ವ್ಯಾಲಿಡಿಟಿಯನ್ನು ಸಹ ಪಡೆಯಬಹುದು. ಇದು ನಿಮ್ಮ ಬಜೆಟ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ.


  Airtel is launching Rs 99 data plan for customers
  ಸಾಂಕೇತಿಕ ಚಿತ್ರ


  ಇನ್ನು ಈ ಪ್ಲಾನ್ ನ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಈ ಯೋಜನೆಯಲ್ಲಿ ಇಂಟರ್ನೆಟ್ ಅಗತ್ಯಗಳ ಬಗ್ಗೆ ಹೇಲಬೇಕಾದರೆ ಇದು 200 MB ಡೇಟಾವನ್ನು ಕೂಡಾ ನೀಡುತ್ತದೆ.  ನೀವು ಕೂಡಾ ಏರ್ಟೆಲ್ ಗ್ರಾಹಕರಾಗಿದ್ದರೆ, ಈ ಪ್ಲಾನ್ ಅನ್ನು ಆಕ್ಟಿವ್ ಮಾಡಿಕೊಳ್ಳಬಹುದು.


  ಇದು ಇತ್ತೀಚೆಗೆ ಬಿಡುಗಡೆಯಾದ ಏರ್ಟೆಲ್​ನ ಹೊಸ ಯೊಜನೆಯಾಗಿದ್ದು. ಗ್ರಾಹಕರ ಅನುಕೂಲದ ದೃಷ್ಟಿಯಿಂದ ಇದನ್ನು ರಚಿಸಲಾಗಿದೆ ಎಂದು ತಂತ್ರಜ್ಞರು ಹೇಳುತ್ತಾರೆ.


  ಈ ಹಿಂದಿನ ಏರ್ಟೆಲ್ ಪ್ರಿಪೇಯ್ಡ್​ ಪ್ಲ್ಯಾನ್:


  ಏರ್ಟೆಲ್ 249 ರೂಪಾಯಿ ಯೋಜನೆಯನ್ನು ಈ ಹಿಂದೆಯೇ ಪರಿಚಯಿಸಲಾಗಿತ್ತು. ಆದರೀಗ ಹೆಚ್ಚುವರಿಯಾಗಿ 500MB ಉಚಿತ ಡೇಟಾವನ್ನು ಸೇರಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯೋಜನೆಯು ದಿನಕ್ಕೆ 1.5GB ಉಚಿತ ಡೇಟಾವನ್ನು ನೀಡುತ್ತದೆ ಮತ್ತು ಈಗ ದೈನಂದಿನ ಒಟ್ಟು ಡೇಟಾ ಮಿತಿಯನ್ನು 2GB ಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಈ ಯೋಜನೆಯು ಅನಿಯಮಿತ ಧ್ವನಿ ಕರೆ, 100 SMS ಮತ್ತು ಏರ್ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಸಹ ನೀಡುತ್ತಿದೆ.


  ಪ್ರಯೋಜನಗಳು:


  249 ರೂಪಾಯಿ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ಆದರೆ ಇದಕ್ಕೂ ಮೊದಲು ದಿನಕ್ಕೆ 1.5GB ಡೇಟಾವನ್ನು ನೀಡುತ್ತಾ ಬಂದಿದೆ, ಇದು ಒಟ್ಟು ಡೇಟಾದ 42GB ಯ ಮೊತ್ತವಾಗಿದೆ, ಆದರೀಗ ಬಳಕೆದಾರರು 2GB ಡೇಟಾವನ್ನು ಪಡೆಯುವ ಮೂಲಕ ಒಟ್ಟು 56GB ಅನ್ನು 28 ದಿನಗಳ ಮಾನ್ಯತೆಯೊಂದಿಗೆ ಪಡೆಯಬಹುದು.


  ಏರ್ಟೆಲ್  ಥ್ಯಾಂಕ್ಸ್ ಆ್ಯಪ್​​ನಿಂದ 500 mb ಫ್ರೀ:


  ನಂತರ ನೀವು ಈಗಾಗಲೇ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಹೊಂದಿಲ್ಲದಿದ್ದರೆ ಅದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ರಿಡೀಮ್ ಉಚಿತ 500MB ಡೇಟಾ ಆಯ್ಕೆಯನ್ನು ಆಯ್ಕೆಮಾಡಿ.

  Published by:Prajwal B
  First published: