Airtel: ಪ್ರಿಪೇಯ್ಡ್ ಪ್ಲಾನ್​​ಗಳ ದರ ಏರಿಕೆಯ ನಡುವೆಯೂ 4GB ಡೇಟಾ ಉಚಿತವಾಗಿ ನೀಡುತ್ತಿರುವ ಏರ್​ಟೆಲ್!

Airtel Prepaid Plans: ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕೂಪನ್ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ದರ ಏರಿಕೆಯ ನಡುವೆ ಗ್ರಾಹಕರಿಗೆ ಹೆಚ್ಚು ಭಾರವೆನಿಸದಂತೆ ಏರ್‌ಟೆಲ್ ಅಪ್ಲಿಕೇಶನ್‌ನ ಬಳಕೆದಾರರಿಗಾಗಿ ಈ ವಿಶೇಷವಾಗಿ ಆಫರ್​ ತೆರೆದಿಟ್ಟಿದೆ. ಅಪ್ಲಿಕೇಶನ್ ಬಳಸುವ ಪ್ರತಿಯೊಬ್ಬ ಗ್ರಾಹಕರಿಗೆ ಈ ಆಫರ್​ ಸಿಗಲಿದೆ.

Airtel/ ಏರ್‌ಟೆಲ್

Airtel/ ಏರ್‌ಟೆಲ್

  • Share this:
    ಜನಪ್ರಿಯ ಟೆಲಿಕಾಂ ಕಂಪನಿಯಾದ ಏರ್‌ಟೆಲ್ (Airtel) ಮಾತ್ರವಲ್ಲದೆ, ರಿಲಯನ್ಸ್​​ ಜಿಯೋ (Reliance Jio), ವೊಡಾಫೋನ್​ ಐಡಿಯಾ (Vodaphone Idea) ಪ್ರಿಪೇಯ್ಡ್​ ಪ್ಲಾನ್​ ದರಗಳನ್ನು ಏರಿಸಿದೆ. ಆದರೆ ಗ್ರಾಹಕರಿಗೆ ಹೆಚ್ಚಿನ ಭಾರವೆನಿಸದಂತೆ ಕೆಲವು ಪ್ಲಾನ್​ಗಳ ಮೇಲೆ ಈ ಕಂಪನಿಗಳು ಆಫರ್​ ಹೊರಡಿಸಿದೆ. ಅದರಂತೆ ಇದೀಗ ಏರ್​ಟೆಲ್​ ಕೂಡ ಗ್ರಾಹಕರಿಗೆ ದರ ಏರಿಕೆಯ ನಡುವೆ ಸಿಹಿ ಸುದ್ದಿ ನಿಡುವುದರ ಜೊತೆಗೆ ಉಚಿತವಾಗಿ 4GB ಡೇಟಾ ನೀಡುತ್ತಿದೆ.

    ಏರ್​ಟೆಲ್​ ಕಂಪನಿಯು ಬೆಲೆ ಏರಿಕೆಯನ್ನು ಘೋಷಿಸಿದ ನಂತರ, ಟೆಲಿಕಾಂ ಆಪರೇಟರ್ ಹೊಸ ಡೇಟಾ ಕೂಪನ್‌ಗಳನ್ನು (data Coupon) ಪರಿಚಯಿಸಿದೆ. Rs 699, Rs 479 ಮತ್ತು Rs 549 ರ ಪ್ರಿಪೇಯ್ಡ್ ಪ್ಯಾಕ್‌ಗಳೊಂದಿಗೆ ಏರ್‌ಟೆಲ್‌ನಿಂದ ಉಚಿತ 4GB ಡೇಟಾವನ್ನು ನೀಡುತ್ತಿದೆ. 350 ರೂಪಾಯಿಗಳ ರೀಚಾರ್ಜ್ ಯೋಜನೆಯೊಂದಿಗೆ ಉಚಿತ 2GB ಡೇಟಾ ಕೂಪನ್ ಲಭ್ಯವಿದೆ.

    ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕೂಪನ್ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ದರ ಏರಿಕೆಯ ನಡುವೆ ಗ್ರಾಹಕರಿಗೆ ಹೆಚ್ಚು ಭಾರವೆನಿಸದಂತೆ ಏರ್‌ಟೆಲ್ ಅಪ್ಲಿಕೇಶನ್‌ನ ಬಳಕೆದಾರರಿಗಾಗಿ ಈ ವಿಶೇಷವಾಗಿ ಆಫರ್​ ತೆರೆದಿಟ್ಟಿದೆ. ಅಪ್ಲಿಕೇಶನ್ ಬಳಸುವ ಪ್ರತಿಯೊಬ್ಬ ಗ್ರಾಹಕರಿಗೆ ಈ ಆಫರ್​ ಸಿಗಲಿದೆ. ಅದಕ್ಕಾಗಿ ಅಪ್ಲಿಕೇಶನ್​ನಲ್ಲಿ ರೀಚಾರ್ಜ್ ವಿಭಾಗಕ್ಕೆ ಹೋಗಬೇಕು ಮತ್ತು 'ಆಲ್ ಪ್ಯಾಕ್ಸ್' ಅನ್ನು ಟ್ಯಾಪ್ ಮಾಡಬೇಕು. ಇಲ್ಲಿ ನೀವು ಉಚಿತ ಡೇಟಾ ಕೂಪನ್‌ಗಳೊಂದಿಗೆ ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ಕಾಣಬಹುದು. ಈ ಯೋಜನೆಗಳ ವಿವರಗಳನ್ನು ನೋಡೋಣ:

    ಏರ್​​​ಟೆಲ್​ 3 ಪ್ರಿಪೇಯ್ಡ್ ಯೋಜನೆಗಳೊಂದಿಗೆ ಉಚಿತ 4GB ಡೇಟಾ ಕೂಪನ್ ಅನ್ನು ಪರಿಚಯಿಸಿದೆ

    ಏರ್‌ಟೆಲ್‌ನ ರೂ. 479 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಉಚಿತ 4GB ಡೇಟಾ ಕೂಪನ್ ಮತ್ತು ಅದರೊಂದಿಗೆ ದಿನಕ್ಕೆ 100 SMS ಜೊತೆಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯ ಮಾನ್ಯತೆ 56 ದಿನಗಳು. ಈ ಯೋಜನೆಯಲ್ಲಿ ನೀವು ದಿನಕ್ಕೆ 1.5GB ಡೇಟಾವನ್ನು ಸಹ ಪಡೆಯುತ್ತೀರಿ.

    ಇದನ್ನು ಓದಿ: Google Maps Speedometer ಬಳಸಿ…ಅತಿಯಾದ ವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯಿಂದ ತಪ್ಪಿಸಿ!

    ಏರ್‌ಟೆಲ್‌ನ 549 ರೂ,ವಿನ ಪ್ರಿಪೇಯ್ಡ್ ಯೋಜನೆಯಲ್ಲಿ ಲಭ್ಯವಿದೆ

    ಏರ್‌ಟೆಲ್ ಕಂಪನಿಯು ರೂ 549 ಪ್ರಿಪೇಯ್ಡ್ ಯೋಜನೆಯಲ್ಲಿ ತನ್ನ ಬಳಕೆದಾರರಿಗೆ ಉಚಿತ 4GB ಡೇಟಾ ಕೂಪನ್‌ಗಳನ್ನು ನೀಡುತ್ತಿದೆ. ಇದರೊಂದಿಗೆ ಬಳಕೆದಾರರು 2GB ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ಸಹ ಪಡೆಯಬಹುದು.

    ಅಪ್ಲಿಕೇಶನ್‌ನಲ್ಲಿ 359 ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಸಹ ನೀಡಲಾಗಿದೆ, ಇದರಲ್ಲಿ 2GB ಡೇಟಾವನ್ನು ಉಚಿತವಾಗಿ ನೀಡುವ ಕೂಪನ್ ಅನ್ನು ಯೋಜನೆಯೊಂದಿಗೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 2GB ಡೇಟಾವನ್ನು ಸಹ ಪಡೆಯುತ್ತಾರೆ. ಯೋಜನೆಯ ಮಾನ್ಯತೆ 28 ದಿನಗಳು. ಏರ್‌ಟೆಲ್‌ನ ಮತ್ತೊಂದು ಯೋಜನೆಯು 699 ರೂ ರೀಚಾರ್ಜ್ ಪ್ಯಾಕ್ ಆಗಿದೆ, ಇದರಲ್ಲಿ ಬಳಕೆದಾರರು 4GB ಡೇಟಾ ಕೂಪನ್ ಅನ್ನು ಸಹ ಪಡೆಯುತ್ತಾರೆ. ಇಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 3GB ಡೇಟಾವನ್ನು ಪಡೆಯುತ್ತಾರೆ.

    ಇದನ್ನು ಓದಿ: Redmi Note 11T 5G ಇಂದು ಮಾರುಕಟ್ಟೆಗೆ…ಖರೀದಿಸಲು ಕಾದು ಕುಳಿತ ಸ್ಮಾರ್ಟ್​ಫೋನ್ ಪ್ರಿಯರು!

    ಈ ಪ್ರಯೋಜನಗಳನ್ನು ಪಡೆಯಿರಿ...

    ಎಲ್ಲಾ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಗಳು ಒಂದು ತಿಂಗಳ Amazon Mobile Edition, 3 ತಿಂಗಳ ಅಪೊಲೊ ಸದಸ್ಯತ್ವ, ಒಂದು ವರ್ಷದ ಶಾ ಅಕಾಡೆಮಿ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ HelloTunes ಮತ್ತು Wink Music ಅಪ್ಲಿಕೇಶನ್ ಬಳಸಬಹುದಾಗಿದೆ.
    Published by:Harshith AS
    First published: