news18-kannada Updated:January 18, 2021, 1:33 PM IST
Airtel, BSNL, Jio, Vi offer
ಪ್ರಸಿದ್ಧ ಟಿಲಿಕಾಂ ಕಂಪೆನಿಯಾದ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್ ಹಾಗೂ ವೊಡಾಫೋಮ್-ಐಡಿಯಾ ತಮ್ಮ ಗ್ರಾಹಕರಿಗಾಗಿ 365 ದಿನಗಳ ದೀರ್ಘಕಾಲದ ಅತ್ಯುತ್ತಮ ವ್ಯಾಲಿಡಿಟಿ ಪ್ಯಾಕ್ ಅನ್ನು ನೀಡುತ್ತಿದೆ. ಇದರಿಂದ ಗ್ರಾಹಕರು ತಿಂಗಳು-ತಿಂಗಳು ರೀಚಾರ್ಜ್ ಮಾಡುವುದನ್ನು ತಪ್ಪಿಸಿ ವರ್ಷಕ್ಕೆ ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು. ಏರ್ಟೆಲ್, 1498 ರೂ.: ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ 1498 ರೂ. ಗಳ ಒಂದು ವರ್ಷದ ವಿಶೇಷ ಪ್ಲ್ಯಾನ್ ಒಂದನ್ನು ಪರಿಚಯಿಸಿದೆ. ಇದರಲ್ಲಿ 24 ಜಿಬಿ ಡೇಟಾ ಸಿಗಲಿದ್ದು, 3600 ಫ್ರೀ ಎಸ್ಎಂಎಸ್ ಹಾಗೂ ಒಂದು ವರ್ಷ ಅನಿಯಮಿತ ಕರೆಯ ಆಫರ್ ಇದೆ.
ಏರ್ಟೆಲ್, 2498 ರೂ.: ಇದುಕೂಡ 365 ದಿನಗಳ ವ್ಯಾಲಿಡಿಟಿ ಪ್ಯಾಕ್ ಆಗಿದ್ದು, ಪ್ರಿಪೇಯ್ಡ್ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಉಪಯೋಗಿಸಬಹುದು. ಜೊತೆಗೆ ದಿನಕ್ಕೆ 100 ಎಸ್ಎಂಎಸ್ ದೊರೆಯಲಿದೆ.
WhatsApp: ಸಾರ್ವಜನಿಕ ಹುಡುಕಾಟದಲ್ಲಿ ಅನೇಕ ಸಂಖ್ಯೆಗಳನ್ನು ಸೋರಿಕೆ ಮಾಡುತ್ತಿರುವ ವಾಟ್ಸಾಪ್: ಗ್ರಾಹಕರು ಎಚ್ಚರಿಕೆ!
ಏರ್ಟೆಲ್, 2698 ರೂ.: ಏರ್ಟೆಲ್ನ ಈ ಪ್ಲ್ಯಾನ್ ತುಂಬಾನೇ ವಿಶೇಷವಾಗಿದ್ದು, ಪ್ರತಿದಿನ 2 ಜಿಬಿ ಡೇಟಾ ಜೊತೆಗೆ ಅಪರಿಮಿತ ಕರೆ ಹಾಗೂ 100 ಉಚಿತ ಎಸ್ಎಮ್ಎಸ್ ಸಿಗಲಿದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆ ಪ್ರಯೋಜನವನ್ನು ಪಡೆಯಬಹುದಾಗಿದೆ.
ಬಿಎಸ್ಎನ್ಎಲ್, 1999 ರೂ.: ಬಿಎಸ್ಎನ್ಎಲ್ ಇತ್ತೀಚೆಗಷ್ಟೆ ಪರಿಚಯಿಸಿರುವ ಈ 1999 ರೂಪಾಯಿಯ ಪ್ರಿಪೇಯ್ಡ್ ಪ್ಲ್ಯಾನ್ನಲ್ಲಿ 60 ದಿನಗಳ ಲೋಕ್ಧನ್ ಚಂದಾದಾರಿಕೆ ಹಾಗೂ ಒಂದು ವರ್ಷ ಎರೋಸ್ ನೌ ಚಂದಾದಾರಿಕೆ ಪ್ರಯೋಜನ ಪಡೆಯಬಹುದು. ಅಲ್ಲದೆ ಒಂದು ವರ್ಷಗಳ ಕಾಲ ಪ್ರತಿ ದಿನ 3 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್ಎಂಎಸ್ ಉಚಿತ ಸಿಗಲಿದೆ.
ಬಿಎಸ್ಎನ್ಎಲ್, 2399 ರೂ.: ಬಿಎಸ್ಎನ್ಎಲ್ ಸಂಸ್ಥೆ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 365 ದಿನಗಳ 2399 ಮೌಲ್ಯದ ಮತ್ತೊಂದು ಆಕರ್ಷಕ ಆಫರ್ ನೀಡಿದೆ. ಇದರಲ್ಲಿ ಪಿಆರ್ಬಿಟಿ ಹಾಗೂ ಎರೋಸ್ ನೌ ಚಂದಾದಾರಿಕೆ ಪ್ರಯೋಜನ ಪಡೆಯಬಹುದು. ಗಣರಾಜ್ಯೋತ್ಸವದ ಪ್ರಯುಕ್ತ ಈ ಪ್ಲ್ಯಾನ್ ಅನ್ನು 72 ದಿನಗಳ ಕಾಲ ಮುಂದುವರೆಸಲಾಗಿದೆ.
ಜಿಯೋ, 2121 ರೂ.: ಜಿಯೋ ಪ್ರಿಪೇಯ್ಡ್ ಗ್ರಾಹಕರು 336 ದಿನಗಳ ಕಾಲ ಇದರ ಪ್ರಯೋಜ ಪಡೆಯಬಹುದು. ದಿನಕ್ಕೆ 1.5 ಜಿಬಿ ಅತಿ ವೇಗದ ಡೇಟಾ ಸಿಗಲಿದ್ದು, ಅನಿಯಮಿತ ಕರೆ, 100 ಎಸ್ಎಂಎಸ್ ಹಾಗೂ ಜಿಯೋ ಆ್ಯಪ್ನ ಚಂದಾದಾರಿಕೆ ಕೂಡ ಸಿಗಲಿದೆ.
ಸ್ಮಾರ್ಟ್ಫೋನ್ ಮೂಲಕ ನಿಯಂತ್ರಿಸಬಹುದಾದ ಸ್ಮಾರ್ಟ್ಬಲ್ಬ್; ಮನೆ ಬೆಳಗಿಸಲು ಯಾವ ಬಲ್ಬ್ ಬೆಸ್ಟ್?
ಜಿಯೋ, 2399 ರೂ.: ಈ ಆಫರ್ನಲ್ಲಿ ದಿನಕ್ಕೆ 2 ಜಿಬಿ ಡೇಟಾ ನೀಡಲಾಗುತ್ತಿದ್ದು, ಅಪರಿಮಿತ ಕರೆ ಜೊತೆ 100 ಎಸ್ಎಂಎಸ್ ಉಚಿತವಾಗಿ ಉಪಯೋಗಿಸಬಹುದು. ಜೊತೆಗೆ ಜಿಯೋ ಆ್ಯಪ್ನ ಚಂದಾದಾರಿಕೆ ಕೂಡ ಸಿಗಲಿದೆ.
ಜಿಯೋ, 2599 ರೂ.: ಈ ಪ್ರಿಪೇಯ್ಡ್ ಪ್ಲ್ಯಾನ್ನಲ್ಲಿ ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆ, 100 ಎಸ್ಎಂಎಸ್ ಜೊತೆ ಒಂದು ವರ್ಷದ ಡಿಸ್ನಿ+ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆ ಪ್ರಯೋಜನವನ್ನು ಪಡೆಯಬಹುದಾಗಿದೆ.
ವಿಐ 1499 ರೂ.: ವೊಡಾಫೋನ್ – ಐಡಿಯಾದ 365 ದಿನಗಳ ಈ ಪ್ಲ್ಯಾನ್ನಲ್ಲಿ ದಿನಕ್ಕೆ 1.5 ಜಿಬಿ ಉಚಿತ ಡೇಟಾವಿದ್ದು ಒಟ್ಟು 3600 ಎಸ್ಎಮ್ಎಸ್ ಜೊತೆಗೆ ವಿಐ ಮೂವಿಸ್ ಹಾಗೂ ಟಿವಿಯ ಚಂದಾದಾರಿಕೆ ಸಿಗಲಿದೆ.
Published by:
Vinay Bhat
First published:
January 18, 2021, 1:33 PM IST