HOME » NEWS » Tech » AIRTEL BRINGS RS 97 PREPAID PLAN WITH 2GB DATA FOR 14 DAYS HAS

ಏರ್​ಟೆಲ್​ ಪ್ರಿಪೇಯ್ಡ್​​ ಪ್ಲಾನ್: ರೂ. 97 ರಿಚಾರ್ಜ್​ ಮಾಡಿದರೆ 2 GB ಡೇಟಾ ಉಚಿತ

Airtel: ಏರ್​ಟೆಲ್​ ಬಿಡುಗಡೆ ಮಾಡಿದ ರೂ.97 ರ ಪ್ರಿಪೇಯ್ಡ್​​ ಪ್ಲಾನ್​ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಲಭ್ಯವಿದೆ. ಕಳೆದ ವರ್ಷ ಏರ್​​ಟೆಲ್​ ಸಂಸ್ಥೆ ರೂ.97 ರ ಪ್ಲಾನ್​ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 1.5 GB ಉಚಿತ ಡೇಟಾದ ಜೊತೆಗೆ 350 ನಿಮಿಷಗಳ ಕರೆಯನ್ನು ನೀಡಿತ್ತು. ಈ ಬಾರಿಯು ಏರ್​ಟೆಲ್​ ಮತ್ತದೇ ಪ್ಲಾನ್​ ಅನ್ನು ಗ್ರಾಹಕರಿಗೆ ನೀಡಿದ್ದು, ಅನ್​ಲಿಮಿಟೆಡ್​ ಲೋಕಲ್​, ಎಸ್​ಟಿಡಿ, ರೋಮಿಂಗ್​ ಕರೆಯನ್ನು ನೀಡುತ್ತಿದೆ. ಈ ಪ್ಲಾನ್​ ಅನ್ನು ಗ್ರಾಹಕರು 14 ದಿನಗಳ ಕಾಲ ಬಳಸಬಹುದಾಗಿದೆ.

Harshith AS | news18
Updated:July 18, 2019, 6:21 PM IST
ಏರ್​ಟೆಲ್​ ಪ್ರಿಪೇಯ್ಡ್​​ ಪ್ಲಾನ್: ರೂ. 97 ರಿಚಾರ್ಜ್​ ಮಾಡಿದರೆ 2 GB ಡೇಟಾ ಉಚಿತ
ಏರ್​ಟೆಲ್​ ಪ್ರಿಪೇಯ್ಡ್​​ ಪ್ಲಾನ್
  • News18
  • Last Updated: July 18, 2019, 6:21 PM IST
  • Share this:
ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್​ಟೆಲ್​ ತನ್ನ ಗ್ರಾಹಕರಿಗಾಗಿ ರೂ. 97 ರ ಪ್ರೀಪೇಯ್ಡ್​ ರಿಚಾರ್ಜ್​ ಪ್ಲಾನ್​ವೊಂದನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್​ನಲ್ಲಿ ಗ್ರಾಹಕರಿಗೆ ಅನ್​ಲಿಮಿಟೆಡ್​ ಕರೆಯ ಜೊತೆಗೆ 2 GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಅಂತೆಯೇ, 100 ಎಸ್​ಎಮ್​ಎಸ್​ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಏರ್​ಟೆಲ್​ ಬಿಡುಗಡೆ ಮಾಡಿದ ರೂ.97 ರ ಪ್ರಿಪೇಯ್ಡ್​​ ಪ್ಲಾನ್​ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಲಭ್ಯವಿದೆ. ಕಳೆದ ವರ್ಷ ಏರ್​​ಟೆಲ್​ ಸಂಸ್ಥೆ ರೂ.97 ರ ಪ್ಲಾನ್​ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 1.5 GB ಉಚಿತ ಡೇಟಾದ ಜೊತೆಗೆ 350 ನಿಮಿಷಗಳ ಕರೆಯನ್ನು ನೀಡಿತ್ತು. ಈ ಬಾರಿಯು ಏರ್​ಟೆಲ್​ ಮತ್ತದೇ ಪ್ಲಾನ್​ ಅನ್ನು ಗ್ರಾಹಕರಿಗೆ ನೀಡಿದ್ದು, ಅನ್​ಲಿಮಿಟೆಡ್​ ಲೋಕಲ್​, ಎಸ್​ಟಿಡಿ, ರೋಮಿಂಗ್​ ಕರೆಯನ್ನು ನೀಡುತ್ತಿದೆ. ಈ ಪ್ಲಾನ್​ ಅನ್ನು ಗ್ರಾಹಕರು 14 ದಿನಗಳ ಕಾಲ ಬಳಸಬಹುದಾಗಿದೆ.

ಇದನ್ನೂ ಓದಿ: ನಮ್ಮೂರಿಗೆ ಬಂದ್ಮೇಲೆ ಕನ್ನಡ ಮಾತಾಡಿಸದೆ ಬುಟ್ ಬಿಡ್ತೀವಾ: ರಾಕಿಂಗ್ ಸ್ಟಾರ್ ಯಶ್

ಇತ್ತೀಚೆಗೆ ಏರ್​ಟೆಲ್​ ಸಂಸ್ಥೆ ತನ್ನ ಗ್ರಾಹಕರಿಗಾಗಿ  148 ರೂ.ಗಳ ಪ್ಲಾನ್​ವೊಂದನ್ನು ಪರಿಚಯಿಸಿದೆ. ಇದರಲ್ಲಿ 3 GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಫ್ಲಾನ್​​ನಡಿಯಲ್ಲಿ ಏರ್​​ಟೆಲ್​ ಟಿವಿ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಅಂತೆಯೇ, ವಿಂಕ್​ ಮ್ಯೂಸಿಕ್​ ಆ್ಯಪ್​ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

ಇನ್ನು 148 ರೂ.ಗಳ ಪ್ಲ್ಯಾನ್​ನಲ್ಲಿ ಉಚಿತ ಹಲೋ ಟ್ಯೂನ್ ಆಯ್ಕೆಯ ನ್ನು ಏರ್​ಟೆಲ್ ತನ್ನ ಗ್ರಾಹಕರಿಗೆ ನೀಡಿದೆ. ಈ ಹಿಂದೆ ಏರ್​ಟೆಲ್​ನಲ್ಲಿ ಹಲೋ ಟ್ಯೂನ್​ ಆಯ್ಕೆಗಾಗಿ 36 ರೂ.ಗಳನ್ನು ಪಾವತಿಸಬೇಕಿತ್ತು. ಆದರೆ 148 ರಿಚಾರ್ಜ್​ ಪ್ಲ್ಯಾನ್​ನಲ್ಲಿ ವಿಂಕ್ ಮ್ಯೂಸಿಕ್ ಆ್ಯಪ್​ ಮೂಲಕ 15 ಭಾಷೆಗಳಲ್ಲಿನ ಗೀತೆಯನ್ನು ಹಲೋ ಟ್ಯೂನ್ ಆಗಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಆಫರ್​ 28 ದಿನಗಳಿಗೆ ಮಾತ್ರ. ಆ ಬಳಿಕ ಹಲೋ ಟ್ಯೂನ್ ನವೀಕರಿಸಲು ತಿಂಗಳ ಚಾರ್ಜ್​ 30 ರೂ. ಪಾವತಿಸಬೇಕಾಗುತ್ತದೆ.

First published: July 13, 2019, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories