HOME » NEWS » Tech » AIRTEL BIG BANG 50 CASHBACK ON MOBILE RECHARGE HG

Airtel Big Offer: ಪ್ರಿಪೇಯ್ಡ್ ಪ್ಲಾನ್​​​ ರೀಚಾರ್ಜ್​ ಮಾಡಿದರೆ ಸಿಗಲಿದೆ ಶೇ.50ರಷ್ಟು ಕ್ಯಾಶ್​ಬ್ಯಾಕ್​!

ಏರ್​ಟೆಲ್​ 40 ರೂ.ವಿನ ಕ್ಯಾಶ್​ಬ್ಯಾಕ್​ ಒದಗಿಸುತ್ತಿದೆ. ಇದು ಅಮೆಜಾನ್​ ಪೇ ವಾಲೆಟ್​ನಲ್ಲಿ ಮೂರು ದಿನಗಳವರೆಗೆ ಇರುತ್ತದೆ.

news18-kannada
Updated:October 17, 2020, 4:33 PM IST
Airtel Big Offer: ಪ್ರಿಪೇಯ್ಡ್ ಪ್ಲಾನ್​​​ ರೀಚಾರ್ಜ್​ ಮಾಡಿದರೆ ಸಿಗಲಿದೆ ಶೇ.50ರಷ್ಟು ಕ್ಯಾಶ್​ಬ್ಯಾಕ್​!
airtel
  • Share this:
ಟೆಲಿಕಾಂ ಸಂಸ್ಥೆಯಾದ ಏರ್​ಟೆಲ್​​ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಏನಾದರೊಂದು ಆಫರ್​ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಮಾತ್ರವಲ್ಲದೆ, ಗ್ರಾಹಕರಿಗೆ ಕೊಡುಗೆಯನ್ನು ನೀಡುತ್ತಿರುತ್ತದೆ. ಅದರಂತೆ ಇದೀಗ ಕ್ಯಾಶ್​ಬ್ಯಾಕ್​ ಆಫರ್​ ಅನ್ನು ನೀಡುತ್ತಿದೆ.

ಏರ್​ಟೆಲ್​ ಅಮೆಜಾನ್​ ಪೇ ಮೂಲಕ​ ಗ್ರಾಹಕರಿಗೆ ಶೇ.50 ರಷ್ಟು ಕ್ಯಾಶ್​ಬ್ಯಾಕ್​ ನೀಡುತ್ತಿದೆ. ಅಂದರೆ ಗ್ರಾಹಕರು ಅಮೆಜಾನ್​ ಪೇ ಮೂಲಕ ಪ್ರಿಪೇಯ್ಡ್​ ರೀಚಾರ್ಜ್​ ಮಾಡಿದರೆ ಅಂತವರಿಗೆ ಈ ಕೊಡುಗೆ ಸಿಗಲಿದೆ. ಅಕ್ಟೋಬರ್​ 30ರವೆಗೆ ಮಾತ್ರ ಈ ಸೇವೆ ಬಳಕೆಗೆ ಸಿಗಲಿದೆ.

ಏರ್​ಟೆಲ್​ 40 ರೂ.ವಿನ ಕ್ಯಾಶ್​ಬ್ಯಾಕ್​ ಒದಗಿಸುತ್ತಿದೆ. ಇದು ಅಮೆಜಾನ್​ ಪೇ ವಾಲೆಟ್​ನಲ್ಲಿ ಮೂರು ದಿನಗಳವರೆಗೆ ಇರುತ್ತದೆ. ಗ್ರಾಹಕರು ಅದನ್ನು ಯಾವುದೇ ಶಾಪಿಂಗ್​ ಅಥವಾ ರೀಚಾರ್ಜ್ ಮಾಡಲು ಬಳಸಬಹುದಾಗಿದೆ.

ಇನ್ನು ಏರ್​ಟೆಲ್ ಈ ಕೊಡುಗೆಯನ್ನು ಪಡೆಯಲು ಕೆಲವು ಷರತ್ತು ಹಾಕಿದೆ. ಏರ್​ಟೆಲ್​ ನೀಡುತ್ತಿರುವ ಈ ಕ್ಯಾಶ್​ಬ್ಯಾಕ್​ ಆಫರ್​ ಅಮೆಜಾನ್ ಆ್ಯಪ್​​ ಅಥವಾ ವೆಬ್​ಸೈಟ್​ ಬಳಸಿದರೆ ಮಾತ್ರ ಸಿಗಲಿದೆ.

ಏರ್​ಟೆಲ್​ ಆ್ಯಪ್​ ಅಥವಾ ಅಮೆಜಾನ್​ ಪೇ ಯುಪಿಐನಲ್ಲಿ ಕ್ಯಾಶ್​ಬ್ಯಾಕ್​ ಆಫರ್​ ಇರುವುದಿಲ್ಲ ಎಂದು ತಿಳಿಸಿದೆ.
Youtube Video

50ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಅನಿಲ್ ಕುಂಬ್ಳೆ; ಜಂಬೋ ಫೋಟೋಗ್ರಾಫಿಯ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ!
Published by: Harshith AS
First published: October 17, 2020, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories