Airtel ಬಳಕೆದಾರರಿಗೆ 6 ಸಾವಿರ ರೂ.ಗಳ ಕ್ಯಾಶ್‌ಬ್ಯಾಕ್ ಆಫರ್: ಇಲ್ಲಿದೆ ಸಂಪೂರ್ಣ ವಿವರ

Airtel Cashback Offer: ಸ್ಯಾಮ್‌ಸಂಗ್, ಒಪ್ಪೊ, ರಿಯಲ್‌ಮಿ, ನೋಕಿಯಾ, ಟೆಕ್ನೋ, ಲೆನೊವೊ, ಮೋಟೋರೋಲಾ, ಇನ್ಫಿನಿಕ್ಸ್, ವಿವೋ, ಐಟೆಲ್, ಶ್ಯೋಮಿ ಹಾಗೂ ಲಾವಾ ಮೊದಲಾದ ಬ್ರ್ಯಾಂಡ್‌ಗಳ ಸಾಕಷ್ಟು ಫೋನ್‌ಗಳ ಮೇಲೆ ಏರ್‌ಟೆಲ್‌ನ ಇತ್ತೀಚಿನ 6,000 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಅನ್ವಯಾಗುತ್ತದೆ.

Bharti Airtel

Bharti Airtel

  • Share this:
Airtel Cashback Offer:  ಪ್ರೀಪೇಯ್ಡ್ ಬಳಕೆದಾರರಿಗಾಗಿ ಏರ್‌ಟೆಲ್ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಆಯ್ಕೆಮಾಡಿದ ಡಿವೈಸ್‌ಗಳ ಖರೀದಿಯ ಮೇಲೆ ಕಂಪನಿಯು 6,000 ರೂ. ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಕಡಿಮೆ ಬೆಲೆಯ ಫೋನ್‌ಗಳಿಗೆ ಮಾತ್ರ ಈ ಕ್ಯಾಶ್‌ಬ್ಯಾಕ್ ಆಫರ್ ದೊರೆಯುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಹಾಗಾದರೆ ಈ ಆಫರ್ ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.

ವಿವರಗಳು

ಸ್ಯಾಮ್‌ಸಂಗ್, ಒಪ್ಪೊ, ರಿಯಲ್‌ಮಿ, ನೋಕಿಯಾ, ಟೆಕ್ನೋ, ಲೆನೊವೊ, ಮೋಟೋರೋಲಾ, ಇನ್ಫಿನಿಕ್ಸ್, ವಿವೋ, ಐಟೆಲ್, ಶ್ಯೋಮಿ ಹಾಗೂ ಲಾವಾ ಮೊದಲಾದ ಬ್ರ್ಯಾಂಡ್‌ಗಳ ಸಾಕಷ್ಟು ಫೋನ್‌ಗಳ ಮೇಲೆ ಏರ್‌ಟೆಲ್‌ನ ಇತ್ತೀಚಿನ 6,000 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಅನ್ವಯಾಗುತ್ತದೆ. 12,000 ರೂ.ಗಳವರೆಗಿನ ಡಿವೈಸ್‌ಗಳ ಖರೀದಿಗೆ ಮಾತ್ರವೇ ಈ ಆಫರ್ ಅನ್ವಯವಾಗುತ್ತದೆ.

ಕ್ಯಾಶ್‌ಬ್ಯಾಕ್ ಅಲ್ಲದೆಯೇ ಒಂದು ವರ್ಷದ ಮಾನ್ಯತೆ ಇರುವ ಉಚಿತ ಸ್ಕ್ರೀನ್ ಬದಲಾವಣೆ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದು. ಏರ್‌ಟೆಲ್ ಥ್ಯಾಂಕ್ಸ್ ಬೆನಿಫಿಟ್ಸ್ ಭಾಗವಾಗಿ 30 ದಿನಗಳ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಶನ್‌, ವಿಂಕ್ ಮ್ಯೂಸಿಕ್ ಅನ್ನು ಯಾವುದೇ ಶುಲ್ಕವಿಲ್ಲದೆ ಪಡೆದುಕೊಳ್ಳಬಹುದು. ಸ್ಮಾರ್ಟ್‌ಫೋನ್ ಖರೀದಿಗೆ ಮುನ್ನ, ನೀವು ಖರೀದಿಸುವ ಡಿವೈಸ್ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪಡೆಯಲಿದೆಯೇ ಇಲ್ಲವೇ ಎಂಬುದನ್ನು ಏರ್‌ಟೆಲ್‌ನ ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

ಗ್ರಾಹಕರು ತಮ್ಮ ಫೋನ್ ಸಂಖ್ಯೆಗೆ 249 ರೂ. ಅಥವಾ ಇದಕ್ಕಿಂತ ಹೆಚ್ಚಿನ ದರದ ಪ್ಯಾಕ್ ಮೂಲಕ ರೀಚಾರ್ಜ್ ಮಾಡಿದರೆ ಮಾತ್ರ ಏರ್‌ಟೆಲ್ ತನ್ನ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ಆಫರ್ ನೀಡಲಿದೆ ಎಂಬುದಾಗಿ ತಿಳಿಸಿದೆ. ಈ ಪ್ರೀಪೇಯ್ಡ್ ಯೋಜನೆಯು 1.5 ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 ಎಸ್‌ಎಂಎಸ್, ಉಚಿತ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಶನ್ ಹಾಗೂ ಸಾಕಷ್ಟು ಆಫರ್‌ಗಳನ್ನು ಒದಗಿಸುತ್ತದೆ.

ನೀವು 6,000 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಪಡೆದುಕೊಳ್ಳಬೇಕಾದಲ್ಲಿ ಗ್ರಾಹಕರು ಈ ಪ್ಯಾಕ್ ಅನ್ನು ಸತತ 36 ತಿಂಗಳ ಕಾಲ ಖರೀದಿಸಬೇಕಾಗುತ್ತದೆ. ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಅನ್ನು ಎರಡು ಇನ್‌ಸ್ಟಾಲ್‌ಮೆಂಟ್‌ಗಳಲ್ಲಿ ನೀಡಲಾಗುತ್ತದೆ. 18 ತಿಂಗಳ ನಂತರ ಮೊದಲ ಇನ್‌ಸ್ಟಾಲ್‌ಮೆಂಟ್‌ನಂತೆ 2,000 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದ್ದು 36 ತಿಂಗಳು ಪೂರ್ಣಗೊಂಡ ನಂತರ ಎರಡನೆಯ ಇನ್‌ಸ್ಟಾಲ್‌ಮೆಂಟ್‌ನಂತೆ ಉಳಿದ 4,000 ರೂ. ಅನ್ನು ಏರ್‌ಟೆಲ್ ನೀಡುತ್ತದೆ.

ಕ್ಯಾಶ್‌ಬ್ಯಾಕ್ ಅನ್ನು ನಿಮ್ಮ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಹೊಸ ಫೋನ್ ಬಳಸಿದ 30 ದಿನಗಳೊಳಗೆ ಹೊಸ 4ಜಿ ಹ್ಯಾಂಡ್‌ಸೆಟ್ ರೀಚಾರ್ಜ್ ಮಾಡಿದರೆ ಮಾತ್ರ ಯಾವುದೇ ಬಳಕೆದಾರರಿಗೆ ಆಫರ್ ಪಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ಮೊದಲನೇ ಕ್ಯಾಶ್‌ಬ್ಯಾಕ್‌ ಪಡೆದುಕೊಳ್ಳಲು ವಿಫಲವಾದಲ್ಲಿ, ಅವರಿಗೆ ಎರಡನೇ ಕ್ಯಾಶ್‌ಬ್ಯಾಕ್ ಪಡೆಯುವ ಅರ್ಹತೆ ಇರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು. ಈ ಆಫರ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಲಭ್ಯವಿಲ್ಲ ಕೇವಲ ಪ್ರೀಪೇಯ್ಡ್ ಗ್ರಾಹಕರು ಮಾತ್ರವೇ ಆಫರ್ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ: Moto E40: 48MP ಕ್ಯಾಮೆರಾ, 5 ಸಾವಿರ mAh ಬ್ಯಾಟರಿ… ಕೇವಲ 10 ಸಾವಿರಕ್ಕೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!​

Airtel: 48 ರೂ.ಗೆ 3GB ಡೇಟಾ...ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಬೇರೆ ಪ್ರಯೋಜನ ಏನಿದೆ?

Airtel Prepaid Plans: ಏರ್​​ಟೆಲ್ ಗ್ರಾಹಕರು​ ದೀರ್ಘಾವದಿಯ ಯೋಜನೆಯನ್ನು ಅಳವಡಿಸಿಕೊಂಡಿದ್ದರು ಸಹ ಕೆಲವೊಮ್ಮೆ ಅಧಿಕ ಡೇಟಾ ಪ್ರಯೋಜನಗಳು ಸಿಗುವುದಿಲ್ಲ. ಅದರಲ್ಲೂ ಸಿನಿಮಾ, ಗೇಮಿಂಗ್​, ಸ್ಟ್ರೀಮಿಂಗ್​ ಶೋಗಳಿಗಾಗಿ ಬಳಸುತ್ತಿದ್ದರೆ ನಿರೀಕ್ಷೆಗಿಂತ ಹೆಚ್ಚಿನ ಡೇಟಾ ಬಳಸಬೇಕಾಗುತ್ತದೆ. ಆ ಸಮಯದಲ್ಲಿ ಏರ್​ಟೆಲ್​ ಒದಗಿಸುವ ಡೇಟಾ ಪ್ಯಾಕ್​ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗಾಗಿ​ ಅಂತಹ ಸಮಸ್ಯೆಯನ್ನು ಹೋಗಲಾಡಿಸಲು ಏರ್​ಟೆಲ್ ಆಫರ್​ ಹೊರಡಿಸಿದ್ದು,​ 48 ರೂ.ನಿಂದ ಆರಂಭವಾದ ಯೋಜನೆಗಳನ್ನು ಪರಿಚಯಿಸಿದೆ. ಇದರ ಮೂಲಕ ಹೆಚ್ಚಿನ ಡೇಟಾ ಪ್ರಯೋಜನ ಪಡೆಯಬಹುದಾಗಿದೆ.

ಅದರಂತೆ 199 ರೂ ಪ್ಯಾಕ್​ ಅಳವಡಿಸಿದರೆ 30 ದಿನಗಳ ಚಂದಾದಾರಿಕೆಯೊಂದಿದೆ ಏರ್​ಟೆಲ್​ ಎಕ್ಸ್​ಟ್ರಿಮ್​ ಮೊಬೈಲ್​ ಆ್ಯಪ್, ಏರ್​ಟೆಲ್​ ಥ್ಯಾಂಕ್ಸ್​ ಅಥವಾ ಥರ್ಡ್​ ಪಾರ್ಟಿ ರೀಚಾರ್ಜ್​ ಪೋರ್ಟಲ್​ ​ ಮೂಲಕ ಪ್ರವೇಶ ಪಡೆಯಬಹುದಾದ ಆಯ್ಕೆಯನ್ನು ನೀಡುತ್ತಿದೆ.

100ರೂ.ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು:

ಏರ್‌ಟೆಲ್ ರೂ. 100 ರೂ ಅಡಿಯಲ್ಲಿ ನಾಲ್ಕು ಡೇಟಾ ಪ್ಲಾನ್‌ಗಳನ್ನು ಬರುತ್ತದೆ. ಅದರಲ್ಲಿ 48 ರೂ.ವಿನ ಪ್ಲಾನ್​ 3 GB ಡೇಟಾ, 78 ರೂ. ಪ್ಲಾನ್​ 5GB ಡೇಟಾ ಮತ್ತು 89 ರೂ ಪ್ಲಾನ್ 6GB ಡೇಟಾ ಮತ್ತು 12 GB ಡೇಟಾವನ್ನು ನೀಡುತ್ತದೆ. 89 ರೂ ಯೋಜನೆಬ ಮೂಲಕ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ಉಚಿತ ಹಲೋ ಟ್ಯೂನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.
Published by:Harshith AS
First published: