Airtel Cashback: ಈ ಸ್ಮಾರ್ಟ್​​ಫೋನ್ಸ್​​​​​ ಖರೀದಿಸಿದ್ರೆ 6,000 ರೂ. ಕ್ಯಾಶ್​ಬ್ಯಾಕ್​​ ನೀಡಲಿರುವ ಏರ್​​ಟೆಲ್​​

ಪ್ರಮುಖ ಬ್ರ್ಯಾಂಡ್‌ಗಳಿಂದ ಅಂದಾಜು 12,000 ರೂ ವರೆಗಿನ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಏರ್‌ಟೆಲ್ ಆಕರ್ಷಕ ಕ್ಯಾಶ್‌ಬ್ಯಾಕ್ 6,000 ರೂ ನೀಡುತ್ತದೆ. 150 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಈ ಪ್ರಯೋಜನಕ್ಕಾಗಿ ಅರ್ಹವಾಗಿವೆ.

Airtel

Airtel

  • Share this:
ಮೇರಾ ಪೆಹ್ಲಾ ಸ್ಮಾರ್ಟ್‌ಫೋನ್(ನನ್ನ ಮೊದಲ ಮೊಬೈಲ್​) ಕಾರ್ಯಕ್ರಮದ ಭಾಗವಾಗಿ ಏರ್‌ಟೆಲ್ (Airtel) 12,000 ರೂ. ವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಬಳಕೆದಾರರಿಗೆ 6000 ರೂ. ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. ಏರ್‌ಟೆಲ್ ಬಳಕೆದಾರರು  249 ರೂ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಯಾಕ್​​ ಅನ್ನು 36 ತಿಂಗಳುಗಳವರೆಗೆ ರೀಚಾರ್ಜ್ ಮಾಡುವ ಮಾಡಬೇಕು ನಂತರ ಸಂಪೂರ್ಣ ಕ್ಯಾಶ್‌ಬ್ಯಾಕ್ ಸಿಗಲಿದೆ. ಇದು ಏರ್‌ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳವ ಪ್ರಯತ್ನವಾಗಿದೆ. ಪ್ರಮುಖ ಬ್ರ್ಯಾಂಡ್‌ಗಳಿಂದ ಅಂದಾಜು 12,000 ರೂ ವರೆಗಿನ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಏರ್‌ಟೆಲ್ ಆಕರ್ಷಕ ಕ್ಯಾಶ್‌ಬ್ಯಾಕ್ 6,000 ರೂ ನೀಡುತ್ತದೆ. 150 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಈ ಪ್ರಯೋಜನಕ್ಕಾಗಿ ಅರ್ಹವಾಗಿವೆ.

ಯಾರಿಗೆ ಸಿಗಲಿದೆ 6 ಸಾವಿರ ರೂ. ಕ್ಯಾಶ್​ಬ್ಯಾಕ್​?

6000 ರೂ.ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಪಡೆಯಲು, ಏರ್‌ಟೆಲ್ ಗ್ರಾಹಕರು 249 ರೂ. ಅಥವಾ ಅದಕ್ಕಿಂತ ಹೆಚ್ಚಿನ ಏರ್‌ಟೆಲ್ ಪ್ರಿಪೇಯ್ಡ್ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಗ್ರಾಹಕರು ಎರಡು ಭಾಗಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ - ಮೊದಲ ಕಂತು 2000 ರೂ. 18 ತಿಂಗಳು ಅಥವಾ 1.5 ವರ್ಷಗಳ ನಂತರ ಮತ್ತು ಉಳಿದ 4000 ರೂ. 36 ತಿಂಗಳು ಅಥವಾ ಮೂರು ವರ್ಷದ ಅವಧಿಯ ನಂತರ. ಮತ್ತಷ್ಟು ಮಾಹಿತಿಗೆ ಬಳಕೆದಾರರ ಏರ್‌ಟೆಲ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: Airtel: 48 ರೂ.ಗೆ 3GB ಡೇಟಾ...ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಬೇರೆ ಪ್ರಯೋಜನ ಏನಿದೆ?

ಉದಾಹರಣೆಗೆ, ಗ್ರಾಹಕರು 6000 ರೂ ಬೆಲೆಯ ಸಾಧನವನ್ನು ಆರಿಸಿದರೆ, ಗ್ರಾಹಕರು ಡೇಟಾ ಕೋಟಾಗಳು ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆದ ನಂತರ ಮೂರು ವರ್ಷಗಳ ಅಂತ್ಯದ ವೇಳೆಗೆ ಸಂಪೂರ್ಣ ಕ್ಯಾಶ್‌ಬ್ಯಾಕ್ ಅನ್ನು ಪ್ರತಿ ಏರ್‌ಟೆಲ್ ಪ್ರಿಪೇಯ್ಡ್ ರೀಚಾರ್ಜ್‌ನೊಂದಿಗೆ ನೀಡುತ್ತದೆ. 36 ತಿಂಗಳ ಕೊನೆಯಲ್ಲಿ, ಗ್ರಾಹಕರು 6000 ರೂಪಾಯಿಗಳ ಆಕರ್ಷಕ ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಪಡೆಯುತ್ತಾರೆ, ಗ್ರಾಹಕರು ಡಿಜಿಟಲ್ ಸಂಪರ್ಕದಲ್ಲಿರಲು ಸಾಧ್ಯವಾಗುವಾಗ ಮೊಬೈಲ್​​ನಲ್ಲಿನ ತನ್ನ ಸಂಪೂರ್ಣ ಹೂಡಿಕೆಯನ್ನು ಮರಳಿ ಪಡೆಯುತ್ತಾರೆ.

ಒಂದು ಬಾರಿ ಉಚಿತ ಸ್ಕ್ರೀನ್ ಬದಲಿಸಬಹುದು

ಏರ್ಟೆಲ್ ಈ ಪ್ರೋಗ್ರಾಂ ಅನ್ನು ಆಯ್ಕೆ ಮಾಡುವ ಗ್ರಾಹಕರು ಹಾನಿಗೊಳಗಾದ ಸಂದರ್ಭದಲ್ಲಿ ಸರ್ವಿಫೈ ಮೂಲಕ ಒಂದು ಬಾರಿ ಉಚಿತ ಸ್ಕ್ರೀನ್ ಬದಲಿಸಲು ಅರ್ಹರಾಗಿರುತ್ತಾರೆ. ಇದು 12,000 ರೂ.ಸ್ಮಾರ್ಟ್ ಫೋನ್ ಗೆ ಸ್ಕ್ರೀನ್ ರಿಪ್ಲೇಸ್ ಮೆಂಟ್ ಅಂದಾಜು ವೆಚ್ಚದೊಂದಿಗೆ 4800 ವರೆಗಿನ ರೂ  ಹೆಚ್ಚುವರಿ ವೆಚ್ಚದ ಲಾಭವನ್ನು ನೀಡುತ್ತದೆ. ಒಮ್ಮೆ ಗ್ರಾಹಕರು ಅರ್ಹವಾದ ರೀಚಾರ್ಜ್ ಪ್ಯಾಕ್‌ನಲ್ಲಿರುವಾಗ, ಸ್ಕ್ರೀನ್ ರಿಪ್ಲೇಸ್ಮೆಂಟ್ ದಾಖಲಾತಿಯನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ 90 ದಿನಗಳ ಅವಧಿಯಲ್ಲಿ ಮಾಡಬಹುದು.  ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳ ಜೊತೆಗೆ, ಗ್ರಾಹಕರು ತಮ್ಮ ಪ್ರಿಪೇಯ್ಡ್ ರೀಚಾರ್ಜ್‌ಗಳೊಂದಿಗೆ ವಿಶೇಷವಾದ ಏರ್‌ಟೆಲ್ ಪ್ರಯೋಜನಗಳನ್ನು ಆನಂದಿಸಬಹುದು. ಇವುಗಳಲ್ಲಿ ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನಗಳ ಪ್ರಯೋಗಾವಧಿ ಲಭ್ಯವಿರಲಿದೆ.
Published by:Kavya V
First published: