49ರೂ. ರೀಚಾರ್ಜ್​ ಮಾಡಿ ದಿನಕ್ಕೆ 3 ಜಿಬಿ ಇಂಟರ್​ನೆಟ್​ ಸೇವೆ ಪಡೆಯಿರಿ


Updated:April 22, 2018, 6:33 PM IST
49ರೂ. ರೀಚಾರ್ಜ್​ ಮಾಡಿ ದಿನಕ್ಕೆ 3 ಜಿಬಿ ಇಂಟರ್​ನೆಟ್​ ಸೇವೆ ಪಡೆಯಿರಿ

Updated: April 22, 2018, 6:33 PM IST
ನವದೆಹಲಿ: ಜಿಯೋನೊಂದಿಗೆ ತೀವ್ರ ಜಿದ್ದಾಜಿದ್ದಿಗೆ ಬಿದ್ದಿರುವ ಏರ್​ಟೆಲ್​ ಇದೀಗ 2ಜಿ/3ಜಿಯಿಂದ 4ಜಿಗೆ ಅಪ್​ಡೇಟ್​ ಆಗಲು ಬಯಸುವ ಗ್ರಾಹಕರಿಗೆ ದಿನಕ್ಕೆ ಉಚಿತ 3 ಜಿಬಿ ಇಂಟರ್​ನೆಟ್​ ಮುಂದಾಗಿದೆ.

ಈಗಾಗಲೇ ಪೋಸ್ಟ್​ಪೇಯ್ಡ್​ ಹಾಗೂ ಪ್ರೀಪೇಯ್ಡ್​ ಗ್ರಾಹಕರಿಗೆ ಒಂದು ಜಿಬಿ ಇಂಟರ್​ನೆಟ್​ ಉಚಿತ ಸೇವೆ ನೀಡುತ್ತಿದ್ದ ಏರ್​ಟೆಲ್​ ಈ ಆಫೋರ್​ನೊಂದಿಗೆ 49ರೂ. ರಿಚಾರ್ಜ್​ ಮಾಡಿಸಿದರೆ ದಿನಕ್ಕೆ 3 ಜಿಬಿ ಇಂಟರ್​ನೆಟ್​ ಸೇವೆ ಒದಗಿಸಲು ಮುಂದಾಗಿದ್ದು, ಈ ಆಫರ್​ ಕೇವಲ 2ಜಿ/3ಜಿಯಿಂದ 4ಜಿಗೆ ಅಪ್​ಡೇಟ್​ ಆಗಲು ಬಯಸುವ ಗ್ರಾಹಕರಿಗೆ ಮಾತ್ರಾ ನೀಡುವುದಾಗಿ ಹೇಳಿಕೊಂಡಿದೆ.

ರಿಲಾಯನ್ಸ್ ಜಿಯೋಈ ಕೂಡಾ ಈ ಮಾದರಿಯ ಆಫರ್​ ನೀಡುತ್ತಿದ್ದು, 49 ರೂ.ಗೆ 1 ಜಿಬಿ ಇಂಟರ್​ನೆಟ್​ ಸೇವೆಯನ್ನು 30ನಗಳ ಕಾಲ ನೀಡುತ್ತದೆ. ಆದರೆ ಈ ಪ್ಯಾಕ್​ನಲ್ಲಿ ಉಚಿತ ಕಾಲಿಂಗ್​ ಸೇವೆ ಕೂಡಾ ಜಿಯೋ ನೀಡುತ್ತದೆ. ಇನ್ನು 51ರೂ.ಗೆ ಹೈಸ್ಪೀಡ್​ ಡೇಟಾ ಪ್ಲಾನ್​ ನೀಡುತ್ತಿರುವ ಜಿಯೋ 3 ಜಿಬಿ ಇಂಟರ್​ನೆಟ್​ ಸೇವೆ ಒದಗಿಸುತ್ತದೆ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ ಏರ್​ಟೆಲ್​ ರೀಚಾರ್ಜ್​ ಮಾಡುವ ಮುನ್ನಾ ಗ್ರಾಹಕರು ಈ ಸೇವೆ ತಮಗೂ ಲಭ್ಯವಿದೆಯೇ ಎಂದು ಚೆಕ್​ ಮಾಡಿಕೊಳ್ಳಬೇಕಿದೆ. ಏಕೆಂದರೆ ಈ ಅಫರ್​ಗಳು ನಿರ್ಧಿಷ್ಟ ಸ್ಥಳಗಳಿಗೆ ಮೀಸಲಾಗಿರುತ್ತದೆ. ಈಗಾಗಲೇ ಏರ್ಟೆಲ್​ 92 ರೂ.ಗೆ 7 ದಿನಗಳ ವ್ಯಾಲಿಡಿಟಿಗೆ 6ಜಿಬಿ ಇಂಟರ್​ನೆಟ್​ ಸೇವೆ ನೀಡುತ್ತಿದೆ. ಆದರೆ ಇ ಎಲ್ಲಾ ಆಫರ್​ಗಳು ಪ್ರದೇಶಕ್ಕನುಗುಣವಾಗಿ ಬದಲಾಗುತ್ತವೆ.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ