US Airports: ಅಮೆರಿಕದಲ್ಲಿ 5G Technology ಸಮಸ್ಯೆಯಿಂದಾಗಿ ಕೆಲ ವಿಮಾನ ಹಾರಾಟ ರದ್ದುಗೊಳಿಸಿದ Air India

5ಜಿ ಸಂಪರ್ಕ ತಂತ್ರಜ್ಞಾನವನ್ನು ರನ್ ವೇ ಪಕ್ಕದಲ್ಲೇ ಸ್ಥಾಪಿಸುವುದರಿಂದ ವಿಮಾನ ಮೇಲಕ್ಕೆ ಹಾರುವಾಗ ಪೈಲಟ್‌ಗಳು ಅತಿ ಮುಖ್ಯವಾಗಿ ಅವಲಂಬಿಸಿರುವ ಸುರಕ್ಷತಾ ಸಾಧನಗಳು ಹಾಗೂ ಪ್ರತಿಕೂಲ ಹವಾಮಾನ ಸಂದರ್ಭಗಳಲ್ಲಿ ಕೆಳಗಿಳಿಯಲು ತೊಡಕನ್ನುಂಟು ಮಾಡುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೆರಿಕದ ವಿಮಾನ (US Airports) ನಿಲ್ದಾಣಗಳಲ್ಲಿ 5ಜಿ ಸಂಪರ್ಕ ತಂತ್ರಜ್ಞಾನವನ್ನು(5G Connectivity Technology) ಅಳವಡಿಸಲಾಗುತ್ತಿರುವುದರಿಂದ ಏರ್ ಇಂಡಿಯಾ ಅಮೆರಿಕಗೆ ನಡೆಸುತ್ತಿದ್ದ ತನ್ನ ಕಾರ್ಯಾಚರಣೆಯನ್ನು ಕಡಿತಗೊಳಿಸಿದೆ.ಈ ಕುರಿತು ಟ್ವೀಟ್ ಮಾಡಿರುವ ಏರ್ ಇಂಡಿಯಾ,(Air India) “ಅಮೆರಿಕದಲ್ಲಿ 5ಜಿ ಸಂಪರ್ಕ ಅಳವಡಿಸಲಾಗುತ್ತಿರುವುದರಿಂದ ಭಾರತದಿಂದ ಅಮೆರಿಕಗೆ ನಡೆಸಲಾಗುತ್ತಿರುವ ಕಾರ್ಯಾಚರಣೆಯನ್ನು ಕಡಿತಗೊಳಿಸಲಾಗಿದೆ, ಇಲ್ಲವೇ ಪರಿಷ್ಕರಿಸಲಾಗಿದೆ. ಈ ಬದಲಾವಣೆಯು ಜನವರಿ 19, 2022ರಿಂದ ಅನ್ವಯಿಸಲಿದೆ. ಈ ಕುರಿತ ನವೀಕರಣಗೊಂಡ ಮಾಹಿತಿಯನ್ನು(Information) ಆದಷ್ಟು ಶೀಘ್ರವೇ ನೀಡಲಾಗುವುದು” ಎಂದು ಬುಧವಾರ ಹೇಳಿದೆ.

ಪ್ರತಿಕೂಲ ಪರಿಣಾಮ
5ಜಿ ಸಂಪರ್ಕ ತಂತ್ರಜ್ಞಾನವನ್ನು ಪರಿಚಯಿಸುವ ಅಮೆರಿಕ ಸರ್ಕಾರದ ಹಾಲಿ ಯೋಜನೆಯಿಂದ ವಿಮಾನ ಪ್ರಯಾಣಗಳ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಇದರಿಂದ 1.25 ಮಿಲಿಯನ್ ಅಮೆರಿಕ ಪ್ರಯಾಣಿಕರ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದ್ದು, ಕನಿಷ್ಠ ಪಕ್ಷ 15 ಸಾವಿರ ವಿಮಾನಗಳು, ಅತ್ಯಗತ್ಯವಾಗಿರುವ ಸರಕುಗಳು ಹಾಗೂ 40 ಅತಿ ದೊಡ್ಡ ವಿಮಾನ ನಿಲ್ದಾಣಗಳ ಮೂಲಕ ದೇಶದಲ್ಲಿ ಪ್ರತಿ ವರ್ಷ ನಡೆಯುವ ಟನ್‍ಗಟ್ಟಲೆ ಸರಕು ಸಾಗಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ” ಎಂದು ಯುನೈಟೆಡ್‌ ಏರ್‌ಲೈನ್ಸ್ ಇತ್ತೀಚೆಗೆ ಹೇಳಿದೆ.

5ಜಿ ಸಂಪರ್ಕ ತಂತ್ರಜ್ಞಾನ
5ಜಿ ಸಂಪರ್ಕ ತಂತ್ರಜ್ಞಾನವನ್ನು ರನ್ ವೇ ಪಕ್ಕದಲ್ಲೇ ಸ್ಥಾಪಿಸುವುದರಿಂದ ವಿಮಾನ ಮೇಲಕ್ಕೆ ಹಾರುವಾಗ ಪೈಲಟ್‌ಗಳು ಅತಿ ಮುಖ್ಯವಾಗಿ ಅವಲಂಬಿಸಿರುವ ಸುರಕ್ಷತಾ ಸಾಧನಗಳು ಹಾಗೂ ಪ್ರತಿಕೂಲ ಹವಾಮಾನ ಸಂದರ್ಭಗಳಲ್ಲಿ ಕೆಳಗಿಳಿಯಲು ತೊಡಕನ್ನುಂಟು ಮಾಡುತ್ತದೆ ಎಂದು ಅದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ನಾವು ಯಾವುದೇ ಕಾರಣಕ್ಕೂ ಸುರಕ್ಷತಾ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಅದು ಕೊನೆಯಾಗುವವರೆಗೂ. ಆದರೆ, ಇತರ ದೇಶಗಳ ಸರ್ಕಾರಗಳು 5ಜಿ ಸಂಪರ್ಕ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಅಳವಡಿಕೆಯನ್ನು ಖಾತ್ರಿಗೊಳಿಸುವಂತಹ ನೀತಿಗಳನ್ನು ಜಾರಿಗೊಳಿಸಿದ್ದು, ನಾವು ಅದನ್ನಷ್ಟೇ ಜಾರಿಗೊಳಿಸುವಂತೆ ಅಮೆರಿಕ ಸರ್ಕಾರವನ್ನು ಕೇಳುತ್ತಿದ್ದೇವೆ.

ಇದನ್ನೂ ಓದಿ: Explained: ಈ ವಿಮಾನ ಸಂಸ್ಥೆಗಳು ಸದ್ಯಕ್ಕೆ ತಮ್ಮ ಸೇವೆ ನಿಲ್ಲಿಸಿವೆ, ಇನ್ನು ಕೆಲವು ಭಾರೀ ಡಿಸ್ಕೌಂಟ್ ಕೊಡುತ್ತಿವೆ

ರೇಡಿಯೋ ತರಂಗಾಂತರ
ಇಲ್ಲವಾದರೆ, ಕೆಲವು ನಿರ್ದಿಷ್ಟ ವಿಮಾನಗಳಲ್ಲಿ ಸುರಕ್ಷತಾ ವ್ಯವಸ್ಥೆಗಳಾದ ಆಟೋಪೈಲಟ್, ಹೆಡ್ಸ್-ಅಪ್-ಡಿಸ್ಪ್ಲೇ, ಟೆರೈನ್ ವಾರ್ನಿಂಗ್ ಹಾಗೂ ಪಿಚ್ ಕಂಟ್ರೋಲ್ ಗಳಿಗೆ ಮಾಹಿತಿ ನೀಡಲು ಅಳವಡಿಸಲಾಗಿರುವ ರೇಡಿಯೋ ತರಂಗಾಂತರಗಳು ರಾಜಿಗೊಳಗಾಗುವಂತಾಗುತ್ತವೆ. ಇದರಿಂದ ಪ್ರಮುಖ ನಗರಗಳಾದ ಹೂಸ್ಟನ್, ನೆವಾರ್ಕ್, ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ಹಾಗೂ ಚಿಕಾಗೊಗಳಿಗೆ ಕಾರ್ಯಾಚರಣೆ ನಡೆಸುವ 787s, 777s, 737s ಹಾಗೂ ಪ್ರಾದೇಶಿಕ ವಿಮಾನ ಹಾರಾಟಗಳ ಮೇಲೆ ಗಮನಾರ್ಹ ಪರಿಣಾಮ ಉಂಟಾಗಲಿದೆ ಎಂದು ಅದು ವಿವರಿಸಿದೆ.

“ದುರದೃಷ್ಟವಶಾತ್, ಈ ಪ್ರಕ್ರಿಯೆಯಿಂದ 2022ರಲ್ಲಿ ಸಾವಿರಾರು ವಿಮಾನಗಳ ಹಾರಾಟ ರದ್ದು ಮತ್ತು ಈ ಉದ್ಯಮದ ಮೇಲೆ ಅವಲಂಬಿತರಾಗಿರುವ ಸಾವಿರಾರು ಗ್ರಾಹಕರಿಗೆ ತೊಡಕನ್ನುಂಟು ಮಾಡುತ್ತದೆ. ಅಲ್ಲದೆ ಈ ಸ್ಥಳಗಳಿಗೆ ಸರಕು ಸಾಗಣೆ ವಿಮಾನಗಳ ಪ್ರಯಾಣವೂ ರದ್ದುಗೊಳ್ಳುವುದರಿಂದ ಈಗಾಗಲೇ ನಾಜೂಕಿನ ಸ್ಥಿತಿಯಲ್ಲಿರುವ ಪೂರೈಕೆ ಸರಪಳಿ ಮತ್ತಷ್ಟು ಹದಗೆಡಲಿದೆ. ಈ ಕುರಿತು ನಾವು ಬೈಡನ್ ಆಡಳಿತದ ಮೇಲೆ ಒತ್ತಡ ಹೇರಿದ್ದು, ಶೀಘ್ರವೇ ಕಾರ್ಯೋನ್ಮುಖವಾಗಿ ವಿಶ್ವದಾದ್ಯಂತ ಕಾರ್ಯಸಾಧುವಾಗಿರುವ ಇಂತಹ ಸಾಮಾನ್ಯ ತಿಳಿವಳಿಕೆಯನ್ನು ಅಮೆರಿಕದಲ್ಲೂ ಅಳವಡಿಸಬೇಕು ಎಂದು ಮನವಿ ಮಾಡುತ್ತೇವೆ” ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Omicron Effect: ಶೇ. 20 ರಷ್ಟು ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ

ಪ್ರಯಾಣಿಕರು ಆತಂಕ
ಬುಧವಾರ ವಿಮಾನ ಸಂಸ್ಥೆಯ ಅಧಿಕಾರಿಗಳು ಈ ಸಂಬಂಧ ಅಮೆರಿಕ ವೈಮಾನಿಕ ಸುರಕ್ಷತಾ ನಿಗಾ ಪಡೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಿದ್ದರು. ಇದರ ಫಲಿತಾಂಶವಾಗಿ ರಾತ್ರಿ 9.30 ಗಂಟೆಯಾದರೂ ಗುರುವಾರದ ತನ್ನ ವಿಮಾನ ಪ್ರಯಾಣ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿರಲಿಲ್ಲ. ಇದರಿಂದ ಹಲವಾರು ಪ್ರಯಾಣಿಕರು ಆತಂಕಕ್ಕೊಳಗಾಗುವಂತಾಯಿತು. ಹಾಗೆಯೇ ವಾರದ ಉಳಿದ ದಿನಗಳಿಗೂ ಅಮೆರಿಕಗೆ ವಿಮಾನ ಪ್ರಯಾಣ ಇರಲಿದೆಯೊ ಅಥವಾ ಅವುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆಯೋ ಎಂಬುದರ ಕುರಿತೂ ವಿಮಾನಯಾನ ಸಂಸ್ಥೆ ಪ್ರಕಟಿಸಿರಲಿಲ್ಲ.
Published by:vanithasanjevani vanithasanjevani
First published: