Artificial Intelligence ಅಪಾಯಗಳ ಬಗ್ಗೆ ಮಾತನಾಡಲು ಗೂಗಲ್‌ ತೊರೆದ AI ಗಾಡ್‌ಫಾದರ್‌ ಜೆಫ್ರಿ ಹಿಂಟನ್‌

ಜೆಫ್ರಿ ಹಿಂಟನ್

ಜೆಫ್ರಿ ಹಿಂಟನ್

ಕೃತಕ ಬುದ್ಧಿಮತ್ತೆಯ ಗಾಡ್‌ಫಾದರ್‌ ಎಂದೇ ಕರೆಯಿಸಿಕೊಳ್ಳುವ ಜೆಫ್ರಿ ಹಿಂಟನ್‌ ಗೂಗಲ್‌ನಿಂದ ಹೊರಬಂದಿದ್ದಾರೆ. AI ಅಪಾಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಸಲುವಾಗಿ ತಮ್ಮ ಕೆಲಸವನ್ನು ತೊರೆದಿದ್ದಾಗಿ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

  • Share this:

ಕೃತಕ ಬುದ್ಧಿಮತ್ತೆಯ (Artificial Intelligence) ಗಾಡ್‌ಫಾದರ್‌ ಎಂದೇ ಕರೆಯಿಸಿಕೊಳ್ಳುವ ಜೆಫ್ರಿ ಹಿಂಟನ್‌ ಗೂಗಲ್‌ನಿಂದ (Google) ಹೊರಬಂದಿದ್ದಾರೆ. AI ಅಪಾಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಸಲುವಾಗಿ ತಮ್ಮ ಕೆಲಸವನ್ನು ತೊರೆದಿದ್ದಾಗಿ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ 75 ವರ್ಷ ವಯಸ್ಸಿನ ಜೆಫ್ರಿ ಹಿಂಟನ್ (Geoffrey Hinton), ಗೂಗಲ್‌ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ ತಾವು ಮಾಡುತ್ತಿರುವ ಕೆಲಸದ ಬಗ್ಗೆ ವಿಷಾದ ಕೂಡ ವ್ಯಕ್ತಪಡಿಸಿದ್ದರು.


AI ಅಪಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯ


ಟ್ವೀಟ್‌ನಲ್ಲಿ ಗೂಗಲ್‌ ತೊರೆದಿರುವ ಬಗ್ಗೆ ದೃಢಪಡಿಸಿರುವ ಹಿಂಟನ್‌, "ನಾನು ಗೂಗಲ್‌ ಅನ್ನು ಟೀಕಿಸುವ ಸಲುವಾಗಿ ಕೆಲಸವನ್ನು ತೊರೆದಿದ್ದೇನೆ. ವಾಸ್ತವವಾಗಿ, ಇದು ಗೂಗಲ್‌ ಮೇಲೆ ಹೇಗೆ ಪರಿಣಾಮ ಬೀರುತ್ತದೋ ಗೊತ್ತಿಲ್ಲ ಆದರೆ ನಾನು ಕೃತಕ ಬುದ್ಧಿಮತ್ತೆ (AI) ಅಪಾಯಗಳ ಬಗ್ಗೆ ಮಾತನಾಡಲು ಹೊರಟಿದ್ದೇನೆ. ಆದರೆ ಗೂಗಲ್‌ ಬಹಳ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ" ಎಂದು ಹೇಳಿದ್ದಾರೆ.


"ಗೂಗಲ್‌ ತೊರೆದಿರುವುದರಿಂದ ಈಗ ನಾನು AI ಅಪಾಯಗಳ ಬಗ್ಗೆ ನಾನು ಈಗ ಮುಕ್ತವಾಗಿ ಮಾತನಾಡಬಲ್ಲೆ. AI ತಂತ್ರಜ್ಞಾನದಲ್ಲಿ ಕೆಲವು ಭಯಾನಕವಾಗಿವೆ. ಕೃತಕ ಬುದ್ಧಿಮತ್ತೆ ಅನ್ನೋದು ಸದ್ಯ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತರಲ್ಲ. ಆದರೆ ಶೀಘ್ರದಲ್ಲೇ ಆಗಬಹುದು ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಹಿಂಟನ್‌ ಭವಿಷ್ಯ ನುಡಿದಿದ್ದಾರೆ.


ಇದನ್ನೂ ಓದಿ: 11,000 ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದ ವೋಡಾಫೋನ್ ಕಂಪನಿ!


AI ಗಾಡ್‌ಫಾದರ್‌ ಜೆಫ್ರಿ ಹಿಂಟನ್‌


ಜೆಫ್ರಿ ಹಿಂಟನ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಗೂಗಲ್‌ಗಾಗಿ ಕೆಲಸ ಮಾಡಿದ್ದಾರೆ. 2012 ರಲ್ಲಿ ಟೊರೊಂಟೊದಲ್ಲಿ ಇಬ್ಬರು ಪದವೀಧರ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವಾಗ ಅವರ ಪ್ರಮುಖ AI ಪ್ರಗತಿ ಕಂಡಿತು.


ಮಾಧ್ಯಮ ಮೂಲಗಳ ಪ್ರಕಾರ, ಈ ಮೂವರು ಫೋಟೋಗಳನ್ನು ವಿಶ್ಲೇಷಿಸಲು ಮತ್ತು ನಾಯಿಗಳು ಮತ್ತು ಕಾರುಗಳಂತಹ ಸಾಮಾನ್ಯ ಅಂಶಗಳನ್ನು ಗುರುತಿಸುವ ಅಲ್ಗಾರಿದಮ್ ಅನ್ನು ಯಶಸ್ವಿಯಾಗಿ ರಚಿಸಿದರು. ಅವರೊಂದಿಗೆ ಯೋಜನೆಯಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳಲ್ಲಿ ಒಬ್ಬರು ಈಗ ಓಪನ್‌ ಎಐ (OpenAI) ನ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.


ನ್ಯೂರಲ್ ನೆಟ್‌ವರ್ಕ್‌ಗಳಲ್ಲಿನ ಅವರ ಪ್ರವರ್ತಕ ಕೆಲಸವು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ರೂಪಿಸಿತು. ಅದು ಚಾಟ್‌ ಜಿಪಿಟಿಯಂತಹ ಇಂದಿನ ಅನೇಕ ಉತ್ಪನ್ನಗಳಿಗೆ ಶಕ್ತಿ ನೀಡುತ್ತದೆ ಎಂದು ಮಾಧ್ಯಮ ವರದಿ ಮಾಡಿದೆ. ಆದಾಗ್ಯೂ, ಮಾನವನ ಮೆದುಳು ಹೊಂದಿರುವ ಮಾಹಿತಿಯ ಮಟ್ಟವನ್ನು ಚಾಟ್‌ಬಾಟ್‌ಗಳು ಶೀಘ್ರದಲ್ಲೇ ಹಿಂದಿಕ್ಕಬಹುದು ಎಂದು ಅವರು ತಿಳಿಸಿದ್ದಾರೆ.


ಕೃತಕ ಬುದ್ಧಿಮತ್ತೆಯ ಸಾಮರ್ಥ್ಯದ ಬಗ್ಗೆ ಕಳವಳ


ಈಗ ನಾವು ನೋಡುತ್ತಿರುವುದು ಜಿಪಿಟಿ -4 ನಂತಹ ವಿಷಯಗಳು ಒಬ್ಬ ವ್ಯಕ್ತಿ ಹೊಂದಿರುವ ಸಾಮಾನ್ಯ ಜ್ಞಾನದ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ. ಇವುಗಳ ಪ್ರಗತಿಯ ದರವನ್ನು ನೋಡಿದರೆ ವಿಷಯಗಳು ಸಾಕಷ್ಟು ವೇಗವಾಗಿ ಉತ್ತಮಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ನಾವು ಈ ಬಗ್ಗೆ ಚಿಂತಿಸಬೇಕಾಗಿದೆ'' ಹಿಂಟನ್‌ ತಿಳಿಸಿದ್ದಾರೆ.




ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಹಿಂಟನ್‌ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉದ್ಯೋಗಗಳನ್ನು ತೊಡೆದುಹಾಕುವ ಮತ್ತು ಜಗತ್ತನ್ನು ಸೃಷ್ಟಿಸುವ AI ಸಾಮರ್ಥ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಅನೇಕರು "ಇನ್ನು ಮುಂದೆ ನಿಜ ಏನೆಂದು ತಿಳಿಯಲು ಸಾಧ್ಯವಾಗುವುದಿಲ್ಲ ಎಂಬ ಗಂಭೀರ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ನಕಲಿ ಚಿತ್ರಗಳು ಮತ್ತು ಪಠ್ಯದ ಹರಡುವಿಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

top videos


    ಅಂದಹಾಗೆ ಹಿಂಟನ್ ಅವರು ತಮ್ಮ ರಾಜೀನಾಮೆಗೆ ನಿರ್ಧಾರಕ್ಕೆ ವಯಸ್ಸು ಕೂಡ ಕಾರಣ ಎಂದು ಹೇಳಿದ್ದಾರೆ. ನನಗೆ 75 ವರ್ಷ. ಹಾಗಾಗಿ ಇದು ನಿವೃತ್ತಿಯ ಸಮಯ. ಇದರೊಂದಿಗೆ ನಾನು ಗೂಗಲ್ ಬಗ್ಗೆ ಕೆಲವು ಒಳ್ಳೆಯ ವಿಷಯಗಳನ್ನು ಹೇಳಲು ಬಯಸುತ್ತೇನೆ ಎಂಬುದಾಗಿ ಜೆಫ್ರಿ ಹಿಂಟನ್‌ ಹೇಳಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು