• Home
  • »
  • News
  • »
  • tech
  • »
  • Disney plus: ಟ್ವಿಟರ್, ಮೆಟಾದ ನಂತರ ಇದೀಗ ಡಿಸ್ನಿ ಪ್ಲಸ್​ನಲ್ಲೂ ನೌಕರರ ವಜಾ! ಏನಾಯ್ತು ಈ ಮಾಧ್ಯಮಗಳಿಗೆ?

Disney plus: ಟ್ವಿಟರ್, ಮೆಟಾದ ನಂತರ ಇದೀಗ ಡಿಸ್ನಿ ಪ್ಲಸ್​ನಲ್ಲೂ ನೌಕರರ ವಜಾ! ಏನಾಯ್ತು ಈ ಮಾಧ್ಯಮಗಳಿಗೆ?

ಡಿಸ್ನಿ +

ಡಿಸ್ನಿ +

ಡಿಸ್ನಿ ದಿನದಿಂದ ದಿನಕ್ಕೆ ತನ್ನ ಕಾರ್ಯದಲ್ಲಿ ಗ್ರಾಹಕರಿಗೆ ಏನಾದರೊಂದು ಫೀಚರ್ಸ್ ಅನ್ನು ನೀಡುತ್ತಲೇ ಇತ್ತು. ಇದೀಗ ಡಿಸ್ನಿ ತನ್ನ ತ್ರೈಮಾಸಿಕದಲ್ಲಿ ಬಹಳಷ್ಟು ನಷ್ಟವನ್ನು ಹೊಂದಿದೆ ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

  • Share this:

    ಇದೀಗ ಕೆಲ ದಿನಗಳಿಂದ ಟ್ವಿಟರ್ (Twitter) ಮತ್ತು ಮೆಟಾ (Meta)  ತನ್ನ  ಕಂಪನಿಯ ನೌಕರರನ್ನು ವಜಾ ಮಾಡಿದ್ರಿಂದ ಸೋಷಿಯಲ್ ಮೀಡಿಯಾದಲ್ಲಿ (Social Media) ಬಹಳಷ್ಟು ಸಂಚಲನವನ್ನು ಮೂಡಿಸಿತ್ತು, ಆದರೆ ಇದೀಗ ಟ್ವಿಟರ್ ಮತ್ತು ಮೆಟಾದಲ್ಲಿ ಸಾಮೂಹಿಕ ವಜಾಗಳ ನಂತರ, ಡಿಸ್ನಿಯಲ್ಲಿ ವಜಾಗಳು ಅನುಸರಿಸಿದೆ. ಡಿಸ್ನಿ (Disney +) ಸಿಇಒ ಬಾಬ್ ಚಾಪೆಕ್ ಈ ಕುರಿತು ಉದ್ಯೋಗಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಕಂಪನಿಯು ಉದ್ಯೋಗಗಳನ್ನು ಕಡಿತಗೊಳಿಸಲು ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ ಎಂದು ಸೋರಿಕೆಯಾದ ಪತ್ರವು ಬಹಿರಂಗಪಡಿಸುತ್ತದೆ. ಈ ನಿರ್ಧಾರಗಳು ಡಿಸ್ನಿಯ ಲಾಭದಲ್ಲಿ ಬಹಳಷ್ಟು ಕುಸಿಯವನ್ನು ಕಂಡಿದ್ದರಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.


    ಡಿಸ್ನಿ ದಿನದಿಂದ ದಿನಕ್ಕೆ ತನ್ನ ಕಾರ್ಯದಲ್ಲಿ ಗ್ರಾಹಕರಿಗೆ ಏನಾದರೊಂದು ಫೀಚರ್ಸ್ ಅನ್ನು ನೀಡುತ್ತಲೇ ಇತ್ತು. ಇದೀಗ ಡಿಸ್ನಿ ತನ್ನ ತ್ರೈಮಾಸಿಕದಲ್ಲಿ ಬಹಳಷ್ಟು ನಷ್ಟವನ್ನು ಹೊಂದಿದೆ ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.


    ಡಿಸ್ನಿ ಲಾಭಗಳಿಸುವ ಬಗ್ಗೆ ಸಿಇಒ ಅವರ ಅಭಿಪ್ರಾಯ:


    ಡಿಸ್ನಿಯಲ್ಲಿ 1,90,000 ಜನರು ಕೆಲಸ ಮಾಡುತ್ತಾರೆ. ಕಂಪನಿಯ ಸ್ಟ್ರೀಮಿಂಗ್ ಸೇವೆಗಳು ಕಳೆದ ತ್ರೈಮಾಸಿಕದಲ್ಲಿ $1.47 ಬಿಲಿಯನ್ ನಷ್ಟವನ್ನು ದಾಖಲಿಸಿದೆ. ಇದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. 2024 ರ ಅಂತ್ಯದ ವೇಳೆಗೆ ಸ್ಟ್ರೀಮಿಂಗ್ ಲಾಭದಾಯಕವಾಗಲಿದೆ ಎಂದು ಡಿಸ್ನಿ  ಸಿಇಒ ಬಾಬ್ ಚಾಪೆಕ್ ಭರವಸೆ ನೀಡಿದ್ದಾರೆ.


    ಇದನ್ನೂ ಓದಿ: ಟ್ವಿಟರ್ ಸ್ವಾಧೀನಪಡಿಸಲು ಶಕ್ತಿ ತುಂಬಿದಾತನನ್ನೇ ಹೊರಗಟ್ಟಿದ್ದೇಕೆ ಮಸ್ಕ್? ಪರಾಗ್​ ವಜಾಗೊಳ್ಳಲು ಇದೇ ಕಾರಣ!


    ಡಿಸ್ನಿ ಕಂಪನಿಯು ನಿಗದಿಪಡಿಸಿದ ಗುರಿಗಳನ್ನು ತಲುಪುವ ಜೊತೆಗೆ ಅವರ ಸಾಮರ್ಥ್ಯದ ಬಗ್ಗೆ ಅವರು ವಿಶ್ವಾಸ ಹೊಂದಿದ್ದಾರೆ ಮತ್ತು ಕಂಪನಿಯನ್ನು  ಇವರು ಹೊಂದಿದ ಗುರಿಗಳತ್ತ ಕೊಂಡೊಯ್ಯಲು  ಈ ನಿರ್ವಹಣಾ ತಂಡವನ್ನು ರೆಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.


    After Twitter Meta employees are now dismissed in Disney Plus What happened to this media
    ಡಿಸ್ನಿ +


    ಈ ನಿರ್ಧಾರದಿಂದ ಏನು ಲಾಭ?


    ಈ ಪ್ರಯತ್ನಗಳು ಡಿಸ್ನಿ+ 2024 ರ ಆರ್ಥಿಕ ವರ್ಷದಲ್ಲಿ ಲಾಭವನ್ನು ಗಳಿಸುವ ತನ್ನ ಪ್ರಮುಖ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಹೆಚ್ಚು ಪರಿಣಾಮಕಾರಿ ಮತ್ತು ವೇಗದ ಕಂಪನಿಯನ್ನಾಗಿ ಮಾಡುತ್ತದೆ. "ಈ ಕೆಲಸವು ಎಲ್ಲಾ ಕಂಪನಿಗಳು ಮತ್ತು ಅವರ ಉದ್ಯಮವನ್ನು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬರುತ್ತದೆ" ಎಂದು ಡಿಸ್ನಿ ಸಿಇಒ ಅವರ ಪತ್ರದಲ್ಲಿ ತಿಳಿಸಲಾಗಿದೆ.


    ಡಿಸ್ನಿಗೆ ತನ್ನ ಷೇರುಗಳು ಮತ್ತು ಸ್ಟ್ರೀಮಿಂಗ್​ನಲ್ಲೂ ನಷ್ಟವನ್ನು ಕಂಡಿದೆ: 


    ಡಿಸ್ನಿಯು ತ್ರೈಮಾಸಿಕದಲ್ಲಿ ಕಡಿಮೆ ಆರ್ಥಿಕ ಫಲಿತಾಂಶಗಳನ್ನು ಪಡೆದದೆ ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಕಂಪನಿಯ ಷೇರುಗಳು ತೀವ್ರವಾಗಿ ಕುಸಿತವನ್ನು ಕಂಡಿದೆ. ಬುಧವಾರದಂದು 52 ವಾರಗಳ ಷೇರುಗಳು ಕನಿಷ್ಠ ಮಟ್ಟಕ್ಕೆ  ತಲುಪಿದೆ ಮತ್ತು ತನ್ನ ಸ್ಟ್ರೀಮಿಂಗ್ ವ್ಯವಹಾರದಲ್ಲಿ ಬರೋಬ್ಬರಿ 1.5 ಶತಕೋಟಿ ಡಾಲರ್‌ ತ್ರೈಮಾಸಿಕ ನಷ್ಟವನ್ನು ಅನುಭವಿಸಿದ ನಂತರ, ಸೇವೆಯನ್ನು ಲಾಭದಾಯಕವಾಗಿಸುವ ಪ್ರಯತ್ನದಲ್ಲಿ ಸಂಸ್ಥೆಯು ಈ ಕ್ರಮಕ್ಕೆ ಮುಂದಾಗಿದೆ. ಬುಧವಾರ ಕಂಪನಿಯ ಷೇರುಗಳು 13% ಕ್ಕಿಂತ ಹೆಚ್ಚು ಕುಸಿದಿದೆ.


    ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳು ಎಲ್ಲವೂ ಬೆಳೆಯುತ್ತಿರುವ ಸಂದರ್ಭದಲ್ಲಿ ಇಲ್ಲಿ ಡಿಸ್ನಿ ಬಹಳಷ್ಟು ನಷ್ಟವನ್ನು ಕಾಣುತ್ತಿದೆ. ಆದ್ದರಿಂದ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರಗಳನನ್ನು ಕಂಪನಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.


    ಇನ್ನು ತೀರಾ ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ಡಿಸ್ನಿ  ತನ್ನ ನೌಕರರನ್ನು ಆಯ್ಕೆ ಮಾಡುತ್ತದೆ. ತನ್ನ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ.

    First published: