ಎಂಐ, ರೆಡ್ಮಿ ಬಳಿಕ ಪೋಕೊಫೋನ್ ಮೊಬೈಲ್ ಬ್ರ್ಯಾಂಡ್ ಪರಿಚಯಿಸುತ್ತಿರುವ ಶಿಯೋಮಿ


Updated:June 27, 2018, 7:00 PM IST
ಎಂಐ, ರೆಡ್ಮಿ ಬಳಿಕ ಪೋಕೊಫೋನ್ ಮೊಬೈಲ್ ಬ್ರ್ಯಾಂಡ್ ಪರಿಚಯಿಸುತ್ತಿರುವ ಶಿಯೋಮಿ

Updated: June 27, 2018, 7:00 PM IST
-ಮನಿ ಕಂಟ್ರೋಲ್

ಬೀಜಿಂಗ್(ಜೂ.27): ಚೀನಾದ ಪ್ರಸಿದ್ಧ ಮೊಬೈಲ್ ಕಂಪನಿ ಶಿಯೋಮಿ ನೂತನ ಮೊಬೈಲ್ ಬ್ರ್ಯಾಂಡ್ ‘POCOPHONE’ ಟ್ರೇಡ್ ಮಾರ್ಕ್​ಗೆ ಯೂರೋಪ್ ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಚೀನಾ ಮೂಲದ ಟೆಕ್ನಾಲಜಿ ಬ್ಲಾಗ್ ಸ್ಪಾಟ್ ಜಿಜ್ಮೋಚೀನಾ ವರದಿ ಮಾಡಿದೆ.

ಶಿಯೋಮಿ ಸಂಸ್ಥೆ ಬಿಡುಗಡೆಗೊಳಿಸುತ್ತಿರುವ 3ನೇ ಮೊಬೈಲ್ ಬ್ರಾಂಡ್ POCOPHONE. ಈಗಾಗಲೇ ಶಿಯೋಮಿಯ ಎಂಐ ಮತ್ತು ರೆಡ್ಮಿ ಬ್ರಾಂಡ್ ಫೋನ್​ಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ. ಮೇ ತಿಂಗಳಲ್ಲಿಯೇ ಸಂಸ್ಥೆ  ಪೇಟೆಂಟ್​ಗೆ ಅರ್ಜಿ ಸಲ್ಲಿಸಿದ್ದು, ಈ ಬ್ರಾಂಡ್ ಹೆಸರಿನಲ್ಲಿ ಈಗಾಗಲೇ ಫೋನ್​ಗಳನ್ನ ಸಿದ್ಧತೆ ಮಾಡಿಟ್ಟುಕೊಂಡಿದೆ. ಪೇಟೆಂಟ್ ಸಿಕ್ಕ ಕೂಡಲೇ ಯೂರೋಪ್ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಮೊಬೈಲ್ ಉತ್ಪಾದಕರ ಪಟ್ಟಿಯಲ್ಲಿ ರೆಡ್ಮಿ ಮತ್ತು ಎಂಐಗಳ ಬದಲಿಗೆ ಶಿಯೋಮಿ ಕಮ್ಯುನಿಕೇಶನ್ ಟೆಕ್ನಾಲಜಿ ಸಂಸ್ಥೆ ಪೊಕೊಫೋನ್ ಉತ್ಪಾದನೆಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಶಿಯೋಮಿ ಸ್ಮಾರ್ಟ್ ಫೋನ್​ಗಳ ಜೊತೆ ಲ್ಯಾಪ್ ಟಾಪ್, ಎಲ್​ಇಡಿ ಟೆಲಿವಿಜನ್, ಗೃಹೋಪಯೋಗಿ ಉತ್ಪನ್ನಗಳು, ಲೈಫ್ ಸ್ಟೈಲ್ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ, ಹೊಸದಾಗಿ ಮಾರುಕಟ್ಟೆಗೆ ತರುತ್ತಿರುವ ಪೊಕೊಫೋನ್ ಬ್ರಾಂಡ್ ಅಡಿಯಲ್ಲಿ ಕೇವಲ ಸ್ಮಾರ್ಟ್​ ಫೋನ್​​ಗಳನ್ನಷ್ಟೇ ಬಿಡುಗಡೆ ಮಾಡಲಿದೆಯಾ..? ಅಥವಾ ತನ್ನೆಲ್ಲ ಉತ್ಪನ್ನಗಳನ್ನ ಬಿಡುಗಡೆಗೊಳಿಸುತ್ತಿದೆಯಾ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ