Social Media: Instagramನಲ್ಲಿ ಎಷ್ಟು ಹೊತ್ತು ಟೈಮ್ ವೇಸ್ಟ್​ ಆಯ್ತು ಅಂತ ನೋಡೋದು ಹೀಗೆ

ಫಿಲಿಪೈನ್ಸ್ ಪ್ರಜೆಗಳು ದಿನವೊಂದಕ್ಕೆ ಸರಾಸರಿ 3 ಗಂಟೆ 57 ನಿಮಿಷಗಳನ್ನು ಸಾಮಾಜಿಕ ಜಾಲತಾಣ ಬಳಕೆಗೆ ಮೀಸಲಿಡುವ ಮೂಲಕ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಾವಿಂದು ಸಾಮಾಜಿಕ ಜಾಲತಾಣಗಳು(Social Networking) ನಮ್ಮ ದಿನನಿತ್ಯ ಬದುಕಿನ ಅವಿಭಾಜ್ಯ ಅಂಗಗಳಾಗಿ ಬದಲಾಗಿರುವ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣ ವೇದಿಕೆಗಳಿಲ್ಲದ ವಿಶ್ವವನ್ನು ನಾವಿಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಹದಿಹರೆಯದವರಲ್ಲಿ ಇನ್‌ಸ್ಟಾಗ್ರಾಮ್ (Instagram) ದೊಡ್ಡ ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಕಿರುಚಿತ್ರಗಳ ತಯಾರಿಕೆ, ನೇರ (Broadcasting) ಪ್ರಸಾರ, ಸೆಲ್ಫಿಗಳನ್ನು ಹಂಚಿಕೊಳ್ಳುವುದು, ತಾರೆಗಳನ್ನೊಳಗೊಂಡಂತೆ ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ಅನುಸರಿಸುವುದು, ಸ್ನೇಹಿತರಿಗೆ ಸಂದೇಶ ಕಳಿಸುವುದು ಈ ಎಲ್ಲ ಮನರಂಜನಾ (Entertainment Activities) ಚಟುವಟಿಕೆಗಳಿಗೆ ಇನ್‌ಸ್ಟಾಗ್ರಾಮ್ ವೇದಿಕೆಯಾಗಿ ಬದಲಾಗಿದೆ.

ಚಟುವಟಿಕೆಗಳ ದುಷ್ಪರಿಣಾಮ
ನೀವೊಂದು ವೇಳೆ ದೊಡ್ಡ ಸಂಖ್ಯೆಯ ಜನರನ್ನು ಅಥವಾ ಪುಟಗಳನ್ನು ಅನುಸರಿಸುತ್ತಿದ್ದರೆ, ಅದರಲ್ಲಿ ಪ್ರಕಟವಾಗುವ ಸುದ್ದಿಗಳ ಸಂಖ್ಯೆಯೂ ಅನಿಯಮಿತವಾಗಿದ್ದು, ನೀವು ಅವುಗಳನ್ನು ಓದಲು ಗಂಟೆಗಟ್ಟಲೆ ಸಮಯ ವ್ಯಯಿಸುವಂತೆ ಇನ್‌ಸ್ಟಾಗ್ರಾಮ್ ಮಾಡುತ್ತದೆ. ಹೀಗೆ ಹೆಚ್ಚು ಸಮಯವನ್ನು ನೀವು ಇನ್‌ಸ್ಟಾಗ್ರಾಮ್ ನಲ್ಲಿ ಕಳೆಯುವುದರಿಂದ ಅದು ನಿಮ್ಮ ಇತರ ಚಟುವಟಿಕೆಗಳ ದುಷ್ಪರಿಣಾಮ ಬೀರುತ್ತಿರುವುದು.

ನೀವು ಆ ವ್ಯಸನದಿಂದ ಹೊರಬರಲೇಬೇಕು ಎಂಬುದು ನಿಮಗೆ ಶೀಘ್ರದಲ್ಲೇ ಮನದಟ್ಟಾಗುತ್ತದೆ. ಹೀಗಾಗಿ ನೀವು ಈ ಆ್ಯಪ್‌ನಲ್ಲಿ ಎಷ್ಟು ಸಮಯ ವ್ಯಯಿಸಿದಿರಿ ಎಂದು ಲೆಕ್ಕ ಮಾಡುವುದು ತೀರಾ ಸಕಾರಣ ಕ್ರಮವಾಗಲಿದೆ. ಇನ್‌ಸ್ಟಾಗ್ರಾಮ್ ನಿಮಗೆ ಆ ಅವಕಾಶವನ್ನೂ ಒದಗಿಸಿದೆ. ಕಳೆದ 7 ದಿನಗಳಲ್ಲಿ ನೀವು ಸರಾಸರಿ ಎಷ್ಟು ಸಮಯ ವ್ಯಯಿಸಿದಿರಿ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: Good News: ಇನ್ಮುಂದೆ Instagramನ ಹೊಸ ವೈಶಿಷ್ಟ್ಯತೆಯಿಂದ ಕೂಡ ನೀವು ಹಣ ಗಳಿಸಬಹುದಂತೆ..! ಹೇಗೆ ಗೊತ್ತೇ?

ಹಂತಗಳು
ಕ್ರಮ 1: ನಿಮ್ಮ ಸ್ಮಾರ್ಟ್ ಫೋನ್‍ನಲ್ಲಿರುವ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆಯಿರಿ. ಅದರಲ್ಲಿ ಸುದ್ದಿಗಳು ತಾನಾಗಿಯೇ ಕಾಣಿಸಿಕೊಳ್ಳುವಂತಿರಬೇಕು.

ಕ್ರಮ 2: ನೀವು ನಿಮ್ಮ ಪ್ರೊಫೈಲ್‌ಗೆ ಪ್ರವೇಶ ಪಡೆಯಲು, ನಿಮ್ಮ ಪರದೆಯ ಕೆಳ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಒತ್ತಿ ಹಿಡಿಯಿರಿ.

ಕ್ರಮ 3: ನಿಮ್ಮ ಮೆನು ಆಯ್ಕೆಯು ಮೇಲ್ತುದಿಯ ಬಲಬದಿಯಲ್ಲಿನ 3 ಲಂಬವಾದ ಗೆರೆಗಳುಳ್ಳ ಮೂರು ಗೆರೆಯ ಸಂಕೇತವನ್ನು ಹೊಂದಿರುತ್ತದೆ. ಇದನ್ನು ಕ್ರಿಯಾಶೀಲಗೊಳಿಸಲು ಒತ್ತಿ ಹಿಡಿಯಿರಿ.

ಕ್ರಮ 4: ಪಟ್ಟಿಯಲ್ಲಿ ಪ್ರದರ್ಶನವಾಗುವ ‘ನಿಮ್ಮ ಚಟುವಟಿಕೆ’ಯಲ್ಲಿ ‘ಸಮಯ’ವನ್ನು ಒತ್ತಿ ಹಿಡಿಯಿರಿ. ಆಗ ನೀವು ಕಳೆದ ಒಂದು ವಾರದ ಅವಧಿಯಲ್ಲಿ ಎಷ್ಟು ಗಂಟೆಗಳ ಕಾಲ ಇನ್‌ಸ್ಟಾಗ್ರಾಮ್ ಬಳಕೆ ಮಾಡಿದ್ದಿರಿ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ.

ಸಮೀಕ್ಷೆಯ ಪ್ರಕಾರ
ಇತ್ತೀಚೆಗೆ ನಡೆದಿರುವ ಅಧ್ಯಯನ ಸಮೀಕ್ಷೆಯೊಂದರ ಪ್ರಕಾರ, ಪ್ರತಿ ಇನ್‌ಸ್ಟಾಗ್ರಾಮ್ ಬಳಕೆದಾರರು ದಿನವೊಂದಕ್ಕೆ ಸರಾಸರಿ 28 ನಿಮಿಷ ಕಾಲವನ್ನು ಇನ್ಸ್ಟಾಗ್ರಾಮ್ ಚಟುವಟಿಕೆಗಾಗಿ ಬಳಸುತ್ತಾರೆ ಎಂದು ಹೇಳಲಾಗಿದೆ. ವಿಶ್ವದಾದ್ಯಂತ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸುವವರ ಸಂಖ್ಯೆ 3.196 ಬಿಲಿಯನ್‌ನಷ್ಟಿದೆ. ಇದಕ್ಕಿಂತಲೂ ಕುತೂಹಲಕರ ಸಂಗತಿಯೆಂದರೆ, ಪ್ರತಿ ವ್ಯಕ್ತಿಯೂ ದಿನವೊಂದಕ್ಕೆ 6 ಪ್ರಮುಖ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‌ಬುಕ್, ಟ್ವಿಟ್ಟರ್‌, ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸ್ ಆ್ಯಪ್ ಹಾಗೂ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸರಾಸರಿ 2 ಗಂಟೆ 33 ನಿಮಿಷ ವ್ಯಯಿಸುತ್ತಿದ್ದಾರೆ ಎಂಬ ಅಂಶವೂ ಬಯಲಾಗಿದೆ.

ಇದನ್ನೂ ಓದಿ: Instagram ವರ್ಟಿಕಲ್ ಸ್ಕ್ರೋಲಿಂಗ್ ವಿಶೇಷತೆ ಏನು..? ಟಿಕ್‌ಟಾಕ್‌ಗೆ ಆ್ಯಪ್‌ ಹೇಗೆ ಸ್ಪರ್ಧೆಯನ್ನೊಡ್ಡಲಿದೆ..?

ಬಳಕೆಯಲ್ಲಿ ಮುಂಚೂಣಿ
ಗ್ಲೋಬಲ್ ವೆಬ್ ಇಂಡೆಕ್ಸ್ ಪ್ರಕಾರ, ಫಿಲಿಪೈನ್ಸ್ ಪ್ರಜೆಗಳು ದಿನವೊಂದಕ್ಕೆ ಸರಾಸರಿ 3 ಗಂಟೆ 57 ನಿಮಿಷಗಳನ್ನು ಸಾಮಾಜಿಕ ಜಾಲತಾಣ ಬಳಕೆಗೆ ಮೀಸಲಿಡುವ ಮೂಲಕ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಾದ ನಂತರ ಪ್ರತಿ ನಿತ್ಯ 3 ಗಂಟೆ 39 ನಿಮಿಷಗಳ ಸಾಮಾಜಿಕ ಜಾಲತಾಣಗಳನ್ನು ಬಳಸುವ ಮೂಲಕ ಬ್ರೆಜಿಲ್ ಪ್ರಜೆಗಳು ಎರಡನೆ ಸ್ಥಾನದಲ್ಲಿದ್ದಾರೆ. ಕೇವಲ 48 ನಿಮಿಷಗಳಷ್ಟು ಸಮಯವನ್ನು ಮಾತ್ರ ಸಾಮಾಜಿಕ ಜಾಲತಾಣ ಬಳಕೆಗೆ ಮೀಸಲಿಡುವ ಮೂಲಕ ಜಪಾನ್ ಪ್ರಜೆಗಳು ಕೊನೆಯ ಸ್ಥಾನದಲ್ಲಿದ್ದಾರೆ.
Published by:vanithasanjevani vanithasanjevani
First published: