ನಟ Ram Charan ಖರೀದಿಸಿದ 2.43 ಕೋಟಿ ಬೆಲೆಯ Mercedes-Maybach GLS 600 ವಿಶೇಷತೆ ಏನು ಗೊತ್ತೇ..?

ತೆಲುಗು ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ರಾಮ್ ಚರಣ್ ತೇಜ ಹೆಚ್ಚು ದುಬಾರಿ ವಾಹನಗಳನ್ನು ತಮ್ಮ ಬಳಿ ಹೊಂದಿದ್ದಾರೆ. ಈಗ ಐಷಾರಾಮಿ Mercedes-Maybach GLS 600 4Matic SUV ಕಾರನ್ನು ಖರೀದಿಸಿದ್ದಾರೆ.

ನಟ ರಾಮ್​ ಚರಣ್​

ನಟ ರಾಮ್​ ಚರಣ್​

  • Share this:
ಜಗತ್ತಿನಲ್ಲೇ ಅತ್ಯಂತ ವೈಭವೋಪೇತ SUV ಎಂದೇ ಖ್ಯಾತಿಗಳಿಸಿರುವ 2.43 ಕೋಟಿ ರೂ. ಬೆಲೆಯ Mercedes-Maybach GLS 600 4Matic SUVಯನ್ನು ತೆಲುಗು ಚಿತ್ರರಂಗದ ಖ್ಯಾಟ ನಟ ರಾಮ್ ಚರಣ್ (Actor Ram Charan)ಖರೀದಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ರಾಮ್ ಚರಣ್ ತೇಜ ಹೆಚ್ಚು ದುಬಾರಿ ವಾಹನಗಳನ್ನು ತಮ್ಮ ಬಳಿ ಹೊಂದಿದ್ದಾರೆ. ಹಾಗಾದರೆ ವಿಶ್ವದಲ್ಲಿಯೇ ಹೆಚ್ಚು ವೈಭವೋಪೇತ ಎಂದೆನಿಸಿರುವ Mercedes-Maybach GLS 600 4Matic SUV ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಜರ್ಮನ್ ಪ್ರೀಮಿಯಂ ಆಟೋಮೇಕರ್ ಮರ್ಸಿಡಿಸ್-ಬೆಂಜ್ ತನ್ನ ಹೊಸ ಫ್ಲ್ಯಾಗ್‌ಶಿಪ್ SUV – ಮರ್ಸಿಡಿಸ್ Maybach GLS 600 4 Maticನ ಆರಂಭದ ಬೆಲೆ 2.43 ಕೋಟಿ ರೂಪಾಯಿ. ಇದನ್ನು ಭಾರತದಲ್ಲಿ ಲಾಂಚ್ ಮಾಡುವುದಾಗಿ ಜೂನ್‌ನಲ್ಲಿ ಕಂಪೆನಿ ಘೋಷಿಸಿತ್ತು. ವಿಶ್ವಾದ್ಯಂತ ಐಷಾರಾಮಿ ಆಫರ್​ಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿರುವ Mercedes-Maybach ಬ್ರ್ಯಾಂಡ್‌ನಲ್ಲಿ ಇದೇ ಪ್ರಥಮ ಬಾರಿಗೆ ಮರ್ಸಿಡಿಸ್ ಬೆಂಜ್ ಲಾಂಚ್ ಮಾಡಿರುವ GLS 600 4Matic SUV ಆಗಿದೆ. ಈಗ ಈ ಕಾರನ್ನು ನಟ ರಾಮ್​ ಚರಣ್ ಖರೀದಿಸಿದ್ದಾರೆ.

ಇವುಗಳ ಮಾಡೆಲ್‌ಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ಮರ್ಸಿಡಿಸ್ ಬೆಂಜ್‌ ಕಾರುಗಳಿಗೆ ಹೋಲಿಕೆಯಾಗುತ್ತಿದ್ದು, GLS 600 4Matic, 1.05 ಕೋಟಿ ರೂ. ಬೆಲೆಬಾಳುವ Mercedes-Benz GLS SUV ಆಧರಿಸಿದೆ. Mercedes-Maybach ಕಾರಿನಲ್ಲಿ ಒಂದಿಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ವೈಭವೋಪೇತ ಫೀಚರ್‌ಗಳು, ವಿನ್ಯಾಸ ಹಾಗೂ ರಚನಾ ಸೌಕರ್ಯಗಳಿಂದ Mercedes-Maybach GLS 600 4 Matic ಅನ್ನು ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಐಷಾರಾಮಿ SUVಗಳಲ್ಲಿ ಒಂದನ್ನಾಗಿಸಿದೆ.

ಇದನ್ನೂ ಓದಿ: Javed Akhtar ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ Kangana Ranaut

ಕಂಪನಿಯು ಉಲ್ಲೇಖಿಸಿರುವಂತೆ GLS SUVಯ 50 ಯೂನಿಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ನಿಯೋಜಿಸಲಾಗಿದ್ದು, ಪ್ರಸ್ತುತ ಎಲ್ಲವೂ ಮಾರಾಟವಾಗಿದೆ ಎಂದು ಮರ್ಸಿಡಿಸ್ ತಿಳಿಸಿದೆ. ಮುಂಚಿನ ಬ್ಯಾಚ್ 2022ರ ಆರಂಭದಲ್ಲಿ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.

ವಿನ್ಯಾಸದಲ್ಲಿ ಮಾಡಿದ ಬದಲಾವಣೆಗಳೇನು?

ವಾಹನದ ವಿನ್ಯಾಸದಲ್ಲಿರುವ ಬದಲಾವಣೆಗಳನ್ನು ಹೇಳುವುದಾದರೆ ನಿಯಮಿತ GLS ನಲ್ಲಿಲ್ಲದ ಮುಂಭಾಗದ ರಚನೆಯು (ಕ್ರೋಮ್ ಹೆವಿ ನೋಸ್) ಮರ್ಸಿಡಿಸ್ Maybachನ ಆವೃತ್ತಿಯಾಗಿದೆ. ಬಂಪರ್ ಹಾಗೂ ಸೈಡ್‌ಗಳಲ್ಲಿ ಕ್ರೋಮ್ ಫಿನಿಶಿಂಗ್ ಮಾಡಲಾಗಿದ್ದು ಕಾರು ದೊಡ್ಡದಾದ ಮಿಶ್ರಲೋಹದ ಚಕ್ರಗಳನ್ನೊಳಗೊಂಡಿದ್ದು Maybach ಲೋಗೋವನ್ನು ಡಿ-ಪಿಲ್ಲರ್‌ನಲ್ಲಿ ಹೊಂದಿದೆ. SUVಯ ವೈಭವೋಪೇತ ಅಂಶಕ್ಕೆ ಮತ್ತಷ್ಟು ಪುರಾವೆಗಳನ್ನು ಸೇರಿಸುವುದಕ್ಕಾಗಿ ಹಿಂಭಾಗದಲ್ಲಿ ಕ್ರೋಮ್ ಫಿನಿಶಿಂಗ್ ಮಾಡಲಾಗಿದೆ.

ವಾಹನದ ಒಳಭಾಗದಲ್ಲಿ ಐಷಾರಾಮಿ ಅಂಶಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ವಿಷಯಗಳಿದ್ದು ಕ್ಯಾಬಿನ್ ವಿನ್ಯಾಸವು GLS ಅನ್ನು ಹೋಲುತ್ತಿದ್ದು, 12.3 ಇಂಚಿನ ಸ್ಕ್ರೀನಿಂಗ್ ಹೊಂದಿದೆ. ಅದೇ ರೀತಿ ಇದು Maybach ನಿರ್ದಿಷ್ಟ ಗ್ರಾಫಿಕ್ಸ್‌ಗಳನ್ನು ಪಡೆದುಕೊಳ್ಳಲಿದೆ. ನಪ್ಪಾ ಚರ್ಮದ ಹೊದಿಕೆಯನ್ನು ಒಳಭಾಗದಲ್ಲಿ ಕಾಣಬಹುದಾಗಿದ್ದು ಅನನ್ಯ ವಿನ್ಯಾಸಗಳೊಂದಿಗೆ ಒಳಾಂಗಣವನ್ನು ಇನ್ನಷ್ಟು ಶ್ರೀಮಂತಗೊಳಿಸಲಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್​ ಸ್ಟಾರ್​ Devaraj​: ವಿಶ್​ ಮಾಡಿದ ಪ್ರಜ್ವಲ್​ ದೇವರಾಜ್​​..!

Maybach GLSನಲ್ಲಿ ಸ್ಥಳಾವಕಾಶದ ವಿಷಯದಲ್ಲಿ ಹೆಚ್ಚಳ ಕಾಣಬಹುದಾಗಿದ್ದು ಎರಡು ಸಾಲುಗಳ ಸೀಟ್‌ಗಳನ್ನು ಹೊಂದಿದ್ದು ಹಿಂಬದಿ ಸೀಟ್‌ಗಳನ್ನು ಪೂರ್ಣವಾಗಿ 120mmನಲ್ಲಿ ಹಿಂದಕ್ಕೆ ತಳ್ಳಬಹುದಾಗಿದ್ದು ಮರ್ಸಿಡಿಸ್ ಬೆಂಜ್‌ GLS ಆವೃತ್ತಿಯು ರಿಯರ್ ಸೀಟ್ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಒದಗಿಸುತ್ತದೆ ಎಂಬುದು ಇಲ್ಲಿ ಗಮನಾರ್ಹವಾದುದಾಗಿದೆ.

ಇನ್ನೊಂದು ಮಹತ್ತರ ಅಂಶವೆಂದರೆ ಮರ್ಸಿಡಿಸ್- Maybach GLS 4-ಸೀಟರ್ ಅಥವಾ 5 ಸೀಟರ್ ತಮ್ಮದೇ ಆದ ವಿಶೇಷತೆ ಹೊಂದಿದ್ದು 4 ಸೀಟರ್ ಭದ್ರವಾದ ಸೆಂಟರ್ ಕನ್ಸೋಲ್ ಹೊಂದಿದ್ದು ರೆಫ್ರಿಜರೇಟ್ ಅನ್ನೂ ಒಳಗೊಂಡಿದ್ದು ಶಾಂಪೇನ್ ಹಾಗೂ ಇತರ ತಂಪು ಪಾನೀಯಗಳನ್ನು ಇರಿಸುವ ವ್ಯವಸ್ಥೆಯನ್ನೊಳಗೊಂಡಿದೆ. ಮಸಾಜ್ ಫಂಕ್ಷನ್‌ನೊಂದಿಗೆ ವೆಂಟಿಲೇಟೆಡ್ ಸೀಟ್‌ಗಳು, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಹೀಗೆ ಹೊರಾಂಗಣ ರಿಯರ್ ಸೀಟ್‌ಗಳು ಒರಗಿಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ.

ಇದನ್ನೂ ಓದಿ: ಹಾಸ್ಯದ ಜೊತೆಗೆ ಗಂಭೀರ ವಿಷಯ ಹೊತ್ತು ತಂದ Petromax​: ಟ್ರೇಲರ್​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ

SUV ಯು 4.0 ಲೀಟರ್‌ನ ಟ್ವಿನ್ ಟರ್ಬೊ V8 ಪೆಟ್ರೋಲ್ ಎಂಜಿನ್‌ನೊಂದಿಗೆ ಮೈಲ್ಡ್ ಹೈಬ್ರೀಡ್ ತಂತ್ರಜ್ಞಾನದೊಂದಿಗೆ ಬಂದಿದ್ದು 558 hp ಹಾಗೂ 730 Nm ತಿರುಚುವ ಶಕ್ತಿಯನ್ನು ಚಕ್ರಗಳು ಹೊಂದಿವೆ. 9-ಸ್ಪೀಡ್ ಸ್ವಯಂಚಾಲಿತ ಟ್ರಾನ್ಸ್‌ಮಿಶನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೂ ಶಕ್ತಿಯನ್ನು ಸಮನಾಗಿ ಒದಗಿಸಲಾಗಿದೆ. ‘EQ Boost’ ಹೈಬ್ರೀಡ್ ಸಿಸ್ಟಮ್ ಇದರಲ್ಲಿದ್ದು, ಇದು ಹೆಚ್ಚುವರಿ 22 hp ಹಾಗೂ 250Nm ಚಕ್ರಕ್ಕೆ ತಿರುಚುವ ಶಕ್ತಿ ನೀಡಿದೆ ಎಂದು ಮರ್ಸಿಡಿಸ್ ಬೆಂಜ್ ತಿಳಿಸಿದೆ.
Published by:Anitha E
First published: