ಆ್ಯಕ್ಷನ್ ಥ್ರಿಲ್ಲರ್ 2024 ಅನ್ನು ಸಂಪೂರ್ಣವಾಗಿ OnePlus 9 Pro ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದೀಗ OTT ನಲ್ಲಿ ಸ್ಟ್ರೀಮ್ ಆಗುತ್ತಿದೆ: ನಾವೇಕೆ ರೋಮಾಂಚಿತರಾಗಿದ್ದೇವೆ ಎಂಬುದು ಇಲ್ಲಿದೆ

ಇಡೀ ಚಿತ್ರವನ್ನು OnePlus 9 Pro ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿರುವುದು ಹಾಗೂ ಇಂತಹ ಸಾಹಸಕ್ಕೆ ಇದೊಂದು ಅದ್ಭುತ ಆಯ್ಕೆ ಎಂದೇ ಹೇಳಬಹುದು.

2024 ಪೋಸ್ಟರ್

2024 ಪೋಸ್ಟರ್

 • Share this:
  ಸ್ಮಾರ್ಟ್‌ಫೋನ್ ಕ್ಯಾಮರಾಗಳು ಸುಧಾರಣೆ ಕಾಣುತ್ತಿವೆ, ಆದರೂ ಈಗ ಕೆಲವು ವರ್ಷಗಳ ಹಿಂದೆ, ಚಿತ್ರ ನಿರ್ದೇಶನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು ಸ್ಮಾರ್ಟ್‌ಫೋನ್ ಕ್ಯಾಮರಾಗಳನ್ನು ಬಳಸಿಕೊಂಡು ಫೀಚರ್-ಲೆಂಗ್ತ್ ಫಿಲ್ಮ್‌ಗಳ ಚಿತ್ರೀಕರಣ ಮಾಡಲು ಗಂಭೀರವಾಗಿ ಯೋಚಿಸುವುದಾಗಲೀ, ಅಂತಹ ಚಿತ್ರಗಳನ್ನು ಅತ್ಯಂತ ದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಯೋಚಿಸುತ್ತಾರೆ ಎಂಬುದರ ಬಗ್ಗೆ ಆಗಲೀ ನನಗೆ ಅನುಮಾನಗಳಿವೆ. ಆದರೆ, ಯಾವುದನ್ನು ಆಗುವುದು ಅಸಾಧ್ಯ ಎಂದು ಭಾವಿಸಿದ್ದೆವೋ ಈಗ ಅದು ನಿಜವಾಗಿದೆ.

  ವಿಕ್ರಮಾದಿತ್ಯ ಮೋಟ್ವಾನೆ ಅವರ ಆಂದೋಲನ್ ಪ್ರೊಡಕ್ಷನ್ಸ್ ಮತ್ತು OnePlus ಸಹಭಾಗಿತ್ವದಲ್ಲಿ 2024 ಆಕ್ಷನ್ ಥ್ರಿಲ್ಲರ್ ಅನ್ನು ಚಿತ್ರೀಕರಿಸಲಾಗಿದೆ ಮತ್ತು ಆ ಚಿತ್ರವನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ. ಇಡೀ ಚಿತ್ರವನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದ ದುಬಾರಿ ಕ್ಯಾಮರಾಗಳನ್ನು ಬಳಸಿ ಚಿತ್ರೀಕರಿಸಿಲ್ಲ, ಆದರೆ OnePlus 9 Pro 5G ಬಳಸಿಕೊಂಡು ಅದೇ ಗುಣಮಟ್ಟದ ಚಿತ್ರೀಕರಣವನ್ನು ಮಾಡಲಾಗಿದ್ದು, ನೀವು ಅಥವಾ ನಾನು ಈಗಲೇ ಈ ಮೊಬೈಲ್ ಖರೀದಿಸಬಹುದಾಗಿದೆ.  ಈ ಚಿತ್ರವನ್ನು 2024ರ ಧಾರಾವಿಯನ್ನು ಮುಖ್ಯವಾಗಿ ಇಟ್ಟುಕೊಂಡು ಚಿತ್ರೀಕರಿಸಲಾಗಿದ್ದು, ಅಲ್ಲಿ ಉಂಟಾಗುವ ವೈರಾಣು ರೋಗವು ವ್ಯಾಪಕವಾಗಿ ಹಾನಿ ಮಾಡುತ್ತದೆ ಮತ್ತು ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪ್ರಾಧಿಕಾರಿಗಳು ನಡೆದುಕೊಳ್ಳುವ ರೀತಿಯು ವಿವರಿಸಲಾಗದ ಗಾಬರಿ ಉಂಟು ಮಾಡುತ್ತದೆ. ಈ ಕಥೆಯ ಮುಖ್ಯವಾಹಿನಿಯಲ್ಲಿ ನಾಲ್ಕು ಸ್ನೇಹಿತರಿದ್ದಾರೆ ಹಾಗೂ ತಮ್ಮ ಪ್ರೀತಿಪಾತ್ರರನ್ನು ಉಳಿಸಲು, ಜೀವ ಉಳಿಸಿಕೊಳ್ಳಲು ಹಾಗೂ ನಗರದಿಂದ ತಪ್ಪಿಸಿಕೊಳ್ಳಲು ಅವರು ಎದುರಿಸುವ ಕಷ್ಟಗಳನ್ನು ಈ ಚಿತ್ರವು ನಿರೂಪಿಸುತ್ತದೆ. ಈ ಚಿತ್ರವು “ಮನುಷ್ಯ ಸ್ಫೂರ್ತಿಯ ಸಮಗ್ರ ಸಾಮರ್ಥ್ಯ ಮತ್ತು ವಿವೇಚಿತ ನಿರ್ಧಾರ”ವನ್ನು ಪ್ರದರ್ಶಿಸುವ ಉದ್ದೇಶ ಹೊಂದಿದೆ ಮತ್ತು ಈ ಸ್ಫೂರ್ತಿ ಹಾಗೂ ನಿರ್ಧಾರವು, ಸಮುದಾಯವನ್ನು ವಿನಾಶದ ಅಂಚಿನಿಂದ ಮರಳಿ ತರಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸುತ್ತದೆ.  

  ಇದು ಆಸಕ್ತಿದಾಯಕ ಕತೆಯನ್ನು ಹೊಂದಿದೆ ಹಾಗೂ Mismatched ಮತ್ತು Kota Factory ಜನಪ್ರಿಯತೆಯ ಮುಸ್ಕಾನ್ ಜಸ್ಫೆರಿ ಮತ್ತು ಮಯೂರ್ ಮೋರೆ, ಜೊತೆಗೆ ತೇಜಸ್ವಿ ಸಿಂಗ್ ಅಹ್ಲಾವತ್, ಶಾರುಲ್ ಭಾರದ್ವಾಜ್ ಮತ್ತು ಮಿಹಿರ್ ಅಹುಜಾ ಅವರಂತಹ ಪ್ರತಿಭಾನ್ವಿತ ಕಲಾವಿದರ ತಂಡವನ್ನು ಒಳಗೊಂಡಿದೆ. AK vs AK ಮತ್ತು Ghost Stories ಸಿನಿಮಾಗಳಿಂದ ಹೆಸರುವಾಸಿಯಾಗಿರುವ ಅವಿನಾಶ್ ಸಂಪತ್ ಅವರು ಈ ಚಿತ್ರಕ್ಕೆ ಕತೆ ಬರೆದಿದ್ದು, ಅಲೋಕನಂದ ದಾಸ್ ಗುಪ್ತಾ ಹಾಗೂ ಲಿನೇಶ್ ದೇಸಾಯಿ ಅವರು ಕ್ರಮವಾಗಿ ಸಂಗೀತ ಸಂಯೋಜನೆ ಮತ್ತು ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ.  ಅತ್ಯಂತ ರೋಮಾಂಚನಕಾರಿ ಸಂಗತಿ ಏನೆಂದರೆ ಇಡೀ ಚಿತ್ರವನ್ನು OnePlus 9 Pro ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರೀಕರಿಸಿರುವುದು ಹಾಗೂ ಇಂತಹ ಸಾಹಸಕ್ಕೆ ಇದೊಂದು ಅದ್ಭುತ ಆಯ್ಕೆ ಎಂದೇ ಹೇಳಬಹುದು. ಸುಧಾರಿತ ಡೈನಮಿಕ್ ಶ್ರೇಣಿ ಮತ್ತು ಬಣ್ಣಗಳ ನಿಖರತೆಗೆ ಇರುವ Hasselblad-ಟ್ಯೂನ್‌ ಮಾಡಲಾದ ಬಣ್ಣಗಳು, ಹೈ-ರೆಸಲೂಷನ್ ಇಮೇಜ್ ಕ್ಯಾಪ್ಚರ್‌ಗಾಗಿ 8K 30 fps ಬೆಂಬಲ, ಹೈ-ಕ್ವಾಲಿಟಿ ಸ್ಲೊ-ಮೋಷನ್‌ಗಾಗಿ 4K 120, OIS, HDR ಮತ್ತು ಅದ್ಭುತ AF ಸಿಸ್ಟಂ ಇದೆ. ಈ ಎಲ್ಲ ವೈಶಿಷ್ಟ್ಯಗಳು ಇದರಲ್ಲಿ ಇರುವುದರಿಂದಾಗಿ, ಈ ಎಲ್ಲವನ್ನೂ ನೀಡಬಲ್ಲ ಸಾಕಷ್ಟು ಇತರ ಕ್ಯಾಮರಾ ಸಿಸ್ಟಂಗಳು ಮಾರುಕಟ್ಟೆಯಲ್ಲಿ ಇಲ್ಲ ಎಂದೇ ಹೇಳಬಹುದು.

  ಫೋನಿನ Nightscape Video 2.0 ಮೋಡ್‌ಗಳು ಮತ್ತು ಅಲ್ಟ್ರಾ-ವೈಡ್ ಕ್ಯಾಮರಾವನ್ನು ಚಿತ್ರೀಕರಣದಾದ್ಯಂತ ಬಳಸಿಕೊಂಡಿರುವುದಾಗಿ ಚಿತ್ರತಂಡವೇ ಹೇಳಿಕೊಂಡಿದೆ, ಅಲ್ಲದೆ, ಇಡೀ ಚಿತ್ರವನ್ನು ರಾತ್ರಿ ವೇಳೆಯಲ್ಲಿಯೇ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದೆ. ಏಕೆ ಎಂಬುದನ್ನು ತಿಳಿಯಲು ನೀವು ಈ ಚಿತ್ರವನ್ನು ವೀಕ್ಷಿಸಲೇಬೇಕು.

  ಪ್ರೊಫೆಷನಲ್ ಸಿನಿ ಕ್ಯಾಮರಾಗಳು ಶೀಘ್ರದಲ್ಲಿಯೇ ಯಾವಾಗ ಬೇಕಾದರೂ ಬದಲಾಗಬಹುದು, ಆದರೆ, ಸ್ಮಾರ್ಟ್‌ಫೋನ್ ಕ್ಯಾಮರಾಗಳು ಇಂತಹ ಮಹತ್ವದ ಬದಲಾವಣೆಗೆ ಕಾರಣವಾಗುತ್ತಿವೆ ಎಂಬುದನ್ನು ನೋಡಲು ಖುಷಿಯಾಗುತ್ತಿದ್ದು, ಅವುಗಳನ್ನು ಬಳಸಿಕೊಂಡು ಫೀಚರ್-ಲೆಂಗ್ತ್ ಫಿಲ್ಮ್‌ಗಳನ್ನು ಚಿತ್ರೀಕರಿಸಬಹುದು ಎಂಬುದು ಈಗ ಆಶ್ಚರ್ಯಕರ ಸಂಗತಿಯಾಗಿ ಉಳಿದುಕೊಂಡಿಲ್ಲ. ಈ ಗುಣಮಟ್ಟದ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವು ಇದೀಗ ಬಳಸಲು ಸುಲಭಸಾಧ್ಯವಾಗಿದೆ ಎಂಬುದೂ ಸಹ ಇನ್ನೊಂದು ಸಂತಸದ ಸಂಗತಿಯಾಗಿದೆ. 

  ನಮ್ಮೊಳಗಿರುವ ಚಿತ್ರ ನಿರ್ದೇಶಕನನ್ನು ಬೆಳಕಿಗೆ ತರದೇ ಇರಲು ಈಗ ಯಾವ ಕಾರಣಗಳೂ ಉಳಿದಿಲ್ಲ. 
  Published by:Soumya KN
  First published: