ಲ್ಯಾಪ್ಟಾಪ್ಗಳು (Laptops) ಇತ್ತೀಚಿನ ಕಾಲಮಾನದಲ್ಲಿ ಭಾರೀ ಅಗತ್ಯವಿರುವ ಸಾಧನವಾಗಿದೆ. ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಈ ಲ್ಯಾಪ್ಟಾಪ್ನಂತಹ ಸಾಧನಗಳಲ್ಲಿ ಮಾಡಿ ಮುಗಿಸಬಹುದಾಗಿದೆ. ಲ್ಯಾಪ್ಟಾಪ್ ವಲಯದಲ್ಲಿ ಇತ್ತೀಚೆಗೆ ಹಲವಾರು ಲ್ಯಾಪ್ಟಾಪ್ಗಳನ್ನು ಪ್ರಸಿದ್ಧ ಟೆಕ್ ಕಂಪೆನಿಗಳು ಬಿಡುಗಡೆ ಮಾಡಿದೆ. ಇದೀಗ ಜನಪ್ರಿಯ ಟೆಕ್ ಕಂಪೆನಿಯಾಗಿರುವ ಏಸರ್ ಕಂಪೆನಿ (Acer Company) ಇದೀಗ ಏಕಕಾಲದಲ್ಲಿ 3 ಲ್ತಾಪ್ಟಾಪ್ಗಳನ್ನು ಮಾರುಕಟ್ಟೆಗೆ ಎಂಟ್ರಿ ನೀಡಲು ರೆಡಿಯಾಗಿದೆ. ಏಸರ್ ಆಸ್ಪೈರ್ 3 ಸೀರಿಸ್ನ (Acer Aspire 3 Series) ಲ್ಯಾಪ್ಟಾಪ್ಗಳು ಇದಾಗಿದ್ದು, ಬೇರೆ ಬೇರೆ ರೀತಿಯ ಫೀಚರ್ಸ್ ಅನ್ನು ಇದು ಒಳಗೊಂಡಿದೆ.
ಏಸರ್ ಕಂಪೆನಿ ಮೂರು ಹೊಸ ಲ್ಯಾಪ್ಟಾಪ್ಗಳನ್ನು ಅನಾವರಣಗೊಳಿಸಿದೆ. ಈ ಮೂರು ಲ್ಯಾಪ್ಟಾಪ್ಗಳು ಯುಎಸ್ಬಿ ಟೈಪ್-ಸಿ ಪೋರ್ಟ್, ಹೆಚ್ಡಿಎಂಐ 2.1 ಪೋರ್ಟ್ಗಳು ಮತ್ತು ವೈ-ಫೈ 6E ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ. ಹೀಗೇ ಇನ್ನೂ ಹಲವಾರು ಫೀಚರ್ಸ್ ಅನ್ನು ಇದು ಒಳಗೊಂಡಿದ್ದು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಏಸರ್ ಕಂಪೆನಿ ಬಿಡುಗಡೆ ಮಾಡಿರುವ ಲ್ಯಾಪ್ಟಾಪ್ಗಳು ಯಾವುದೆಲ್ಲಾ?
ಏಸರ್ ಕಂಪೆನಿ ಬಿಡುಗಡೆ ಮಾಡಿರುವ ಮೂರು ಲ್ಯಾಪ್ಟಾಪ್ಗಳಲ್ಲಿ ಏಸರ್ ಅಸ್ಪೈರ್ 3 (A314-36P) ಲ್ಯಾಪ್ಟಾಪ್, ಏಸರ್ ಆಸ್ಪೈರ್ 3 (A315-510P) ಲ್ಯಾಪ್ಟಾಪ್ ಮತ್ತು ಏಸರ್ ಆಸ್ಪೈರ್ 3 (A317-55P) ಎಂದು ಗುರುತಿಸಲಾಗಿದೆ. ಇದು ಬೇರೆ ಬೇರೆ ವೇರಿಯಂಟ್ಗಳಲಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ: ಐಫೋನ್ ಅನ್ನೇ ಹೋಲುವ ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆ! ಹೇಗಿದೆ ಗೊತ್ತಾ ಫೀಚರ್ಸ್?
ಫೀಚರ್ಸ್ ಹೇಗಿದೆ?
ಡಿಸ್ಪ್ಲೇ ವಿನ್ಯಾಸ
ಏಸರ್ ಕಂಪೆನಿ ಬಿಡುಗಡೆ ಮಾಡಿರುವ ಮೂರು ಲ್ಯಾಪ್ಟಾಪ್ಗಳಲ್ಲಿ ಏಸರ್ ಅಸ್ಪೈರ್ 3 (A314-36P) ಲ್ಯಾಪ್ಟಾಪ್ ಮತ್ತು ಏಸರ್ ಅಸ್ಪೈರ್ 3 (A317-55P) 14 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1,920x1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಆದರೆ ಆಸ್ಪೈರ್ 3 (A315-510P) ಲ್ಯಾಪ್ಟಾಪ್ ಮಾತ್ರ 15.6 ಇಂಚಿನ ಫುಲ್ ಹೆಚ್ಡಿ ಐಪಿಎಸ್ ಡಿಸ್ಪ್ಲೇಯನ್ನು ಒಳಗೊಂಡಿರುತ್ತದೆ ಎಂದು ಕಂಪೆನಿ ತಿಳಿಸಿದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ನು ಈ ಲ್ಯಾಪ್ಟಾಪ್ಗಳು ಆಕ್ಟಾ-ಕೋರ್ ಇಂಟೆಲ್ ಕೋರ್ i3-N305 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳು ಇಂಟೆಲ್ ಯುಹೆಚ್ಡಿ ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿವೆ. ಹಾಗೆಯೇ 8ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿವೆ. ಇನ್ನುಳಿದಂತೆ ಈ ಲ್ಯಾಪ್ಟಾಪ್ ಹೆಚ್ಡಿ ವೆಬ್ಕ್ಯಾಮ್, ಮೈಕ್ರೊಫೋನ್ ಮತ್ತು ಸ್ಟೀರಿಯೋ ಸ್ಪೀಕರ್ಗಳನ್ನು ಒಳಗೊಂಡಿದೆ. ವಿಶೇಷವಾಗಿ ಈ ಲ್ಯಾಪ್ಟಾಪ್ಗಳು ಟಚ್ಪ್ಯಾಡ್ ಮತ್ತು ಸ್ಟ್ಯಾಂಡರ್ಡ್ ಕೀಬೋರ್ಡ್ ಅನ್ನು ಸಹ ನೀಡಲಾಗಿದೆ.
ಬ್ಯಾಟರಿ ಹಾಗೂ ಇತರೆ ಫೀಚರ್ಸ್
ಇದಲ್ಲದೆ ಏಸರ್ ಕಂಪೆನಿ ಬಿಡುಗಡೆ ಮಾಡಿರುವ ಈ ಮೂರು ಲ್ಯಾಪ್ಟಾಪ್ಗಳು 45W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್ಬಿ ಟೈಪ್- ಎ 3.2 ಜೆನ್ 1 ಪೋರ್ಟ್ಗಳು ಮತ್ತು ಯುಎಸ್ಬಿ ಟೈಪ್ ಸಿ 3.2 ಜೆನ್ 2 ಪೋರ್ಟ್ ಅನ್ನು ಒಳಗೊಂಡಿವೆ. ಇದಲ್ಲದೆ ಹೆಚ್ಡಿಎಮ್ಐ ಪೋರ್ಟ್, ಹೆಡ್ಫೋನ್ ಜ್ಯಾಕ್ ಮತ್ತು ಆಡಿಯೋ ಲೈನ್-ಔಟ್ ಪೋರ್ಟ್ ಅನ್ನು ಕೂಡ ಪಡೆದುಕೊಂಡಿವೆ. ಜೊತೆಗೆ ವೈಫೈ 6ಇ ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ.
ಬೆಲೆ ಮತ್ತು ಲಭ್ಯತೆ
ಏಸರ್ ಕಂಪೆನಿಯ ಈ ಮೂರು ಲ್ಯಾಪ್ಟಾಪ್ಗಳು ಯುಎಸ್ ನ ಮಾರುಕಟ್ಟೆಗಳಲ್ಲಿ ಮಾತ್ರ ಅನಾವರಣಗೊಂಡಿದೆ. ಇದರಲ್ಲಿ ಏಸರ್ A314-36P ಬೆಲೆ $479.99 ಅಂದರೆ ಭಾರತದಲ್ಲಿ ಅಂದಾಜು 39,000ರೂಪಾಯಿ ಹೊಂದಿದೆ. ಇದಲ್ಲದೆ A315-510P ಬೆಲೆ $499.99 ಅಂದರೆ ಭಾರತದಲ್ಲಿ ಸುಮಾರು 41,000ರೂಪಾಯಿ ಆಗಿರುತ್ತದೆ. ಇನ್ನು ಏಸರ್ A317-55P ಲ್ಯಾಪ್ಟಾಪ್ ಇನ್ನೂ ಮಾರುಕಟ್ಟೆಯಲ್ಲಿ ಬಿಡುಗಡಯಾಗಬೇಕಿರುವುದರಿಂದ ಇದರ ಬೆಲೆ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ