ಹೊಸ ಸಿಮ್​ ಪಡೆಯಲು ಆಧಾರ್​ ನಂಬರ್​ ಕಡ್ಡಾಯವಲ್ಲ

news18
Updated:May 3, 2018, 9:50 PM IST
ಹೊಸ ಸಿಮ್​ ಪಡೆಯಲು ಆಧಾರ್​ ನಂಬರ್​ ಕಡ್ಡಾಯವಲ್ಲ
news18
Updated: May 3, 2018, 9:50 PM IST
ನವದೆಹಲಿ: ಹೊಸ ಸಿಮ್​ ಕಾರ್ಡ್​ ಪಡೆಯುವವರಿಗೆ ಆಧಾರ್​ ನಂಬರ್​ ನೋಂದಣಿ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಮೊಬೈಲ್​ ಸಿಮ್​ ಕೊಳ್ಳಲು ಗ್ರಾಹಕರ ಗುರುತಿನ ಚೀಟಿ ಅಥವಾ ಚಾಲನೆ ಪರವಾನಗಿ ಇದ್ದರೆ ಸಾಕು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಬೇಡ, ಅಲ್ಲದೇ ಮೊಬೈಲ್​ ಸಿಮ್ ಆಪರೇಟರ್​ಗಳು ಈ ಎರಡು ದಾಖಲೆಗಳನ್ನು ನೀಡಿದ ಸಂದರ್ಭದಲ್ಲಿ ಮೊಬೈಲ್​ ನೀಡಲು ಹಿಂದೇಟು ಹಾಕಬಾರದು. ಪ್ರತಿಯೊಂದಕ್ಕೂ ಆಧಾರ್​ ಕಡ್ಡಾಯವಲ್ಲ ಎಂದು ಸುಪ್ರೀಂ ಆದೇಶಿಸಿದೆ.

ಭಾರತ ಸರಕಾರ ನೀಡಿರುವ ಅಧಿಕೃತ ಬಯೋಮೆಟ್ರಿಕ್‌ ಗುರುತಾಗಿರುವ ಆಧಾರ್‌ ಕಾರ್ಡ್‌ ಅತೀ ಮುಖ್ಯ ದಾಖಲೆಯಾದರೂ, ಮೊಬೈಲ್‌ ಸಿಮ್‌ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ. ಅದರ ಬದಲಿಗೆ ಬೇರೆ ಗುರುತಿನ ಪತ್ರಗಳನ್ನು ಸ್ವೀಕರಿಸಿ ಸಿಮ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಆದರೆ ಅಧಿಕಾರಿಯೊಬ್ಬರ ಮಾಹಿತಿಗಳ ಪ್ರಕಾರ, ಸಿಮ್ ಮತ್ತು ಆಧಾರ್​ ನಂಬರ್​ ಎರಡೂ ಮುಖ್ಯವಾಗಿದ್ದು, ಈ ಕ್ಷಣಕ್ಕೆ ಆಧಾರ್​​ ನಂಬರ್​ ಪಡೆದುಕೊಳ್ಳದೇ ಇದ್ದರೂ ಮುಂದಿನ ದಿನಗಳಲ್ಲಿ ಆಧಾರ್​ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ ಎಂದು ಹೇಳಿದ್ದಾರೆ.
First published:May 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...