ಆಧಾರ್ ಕಾರ್ಡ್​ನಲ್ಲಿ ದಾಖಲಾದ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?; ಇಲ್ಲಿದೆ ಮಾಹಿತಿ

Aadhaar Card: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI ) ಆಧಾರ್ ಬಯೋಮೆಟ್ರಿಕ್ ಐಡಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಆನ್​​ಲೈನ್​ನಲ್ಲಿ ಆಧಾರ್ ಕಾರ್ಡ್ ವೆರಿಫೈ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ

news18-kannada
Updated:October 31, 2020, 12:52 PM IST
ಆಧಾರ್ ಕಾರ್ಡ್​ನಲ್ಲಿ ದಾಖಲಾದ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?; ಇಲ್ಲಿದೆ ಮಾಹಿತಿ
Aadhaar Card: ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI ) ಆಧಾರ್ ಬಯೋಮೆಟ್ರಿಕ್ ಐಡಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಆನ್​​ಲೈನ್​ನಲ್ಲಿ ಆಧಾರ್ ಕಾರ್ಡ್ ವೆರಿಫೈ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ
  • Share this:
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI ) ಆಧಾರ್ ಬಯೋಮೆಟ್ರಿಕ್ ಐಡಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಆನ್​​ಲೈನ್​ನಲ್ಲಿ ಆಧಾರ್ ಕಾರ್ಡ್ ವೆರಿಫೈ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ವೆಬ್​ಸೈಟ್​ ಮತ್ತು  mAadhaar ಮೊಬೈಲ್ ಆ್ಯಪ್ ಮೂಲಕ ಆಧಾರ್ ಕಾರ್ಡ್ ವೆರಿಫೈ ಮಾಡಬಹುದಾಗಿದೆ.

ಪ್ರಾರಂಭದಲ್ಲಿ ಇಂಟರ್​​ನೆಟ್​ ಮೂಲಕ  uidai.gov.in ವೆಬ್​ಸೈಟ್​​ಗೆ ಭೇಟಿ ನೀಡಿ. ನಂತರ ಅಲ್ಲಿ ಕೇಳಲಾಗಿರುವ ‘ವೆರಿಫೈ ಆಧಾರ್ ನಂಬರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಆಧಾರ್ ನಂಬರ್ ವೆರಿಫೈ ಮಾಡಿಕೊಳ್ಳಬೇಕು. ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಬೇಕು.

ಪ್ರಮುಖವಾಗಿ ಲಿಂಗ, ರಾಜ್ಯ ಮುಂತಾದ ಮಾಹಿತಿಯನ್ನು ಕೇಳಲಾಗಿರುತ್ತದೆ. ಅದರ ಜೊತೆಗೆ ಫೋನ್ ನಂಬರ್ ಅನ್ನು ನಮೂದಿಸುವ ಆಯ್ಕೆ ಇರಲಿದೆ.

ಬಳಕೆದಾರ ನಮೂದಿಸಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಹೋಲಿಕೆಯಾದ ನಂತರ ಆಧಾರ್ ಕಾರ್ಡ್ ವೆರಿಫೈ ಆಗುತ್ತದೆ.

ಇನ್ನು mAadhaar ಆ್ಯಪ್​​ ಮೂಲಕವೂ ವೆರಿಫೈ ಮಾಡಬಹುದಾಗಿದೆ. ಡೌನ್ಲೋಡ್ ಮಾಡಿದ ಆ್ಯಪ್​ನಲ್ಲಿ ಕ್ಯೂ ಆರ್  ಕೋಡ್​​ ಆಯ್ಕೆಯನ್ನು ನೀಡಲಾಗಿದೆ. ಸ್ಕ್ಯಾನ್​ ಮಾಡುವ ಮೂಲಕ ಆಧಾರ್ ಕಾರ್ಡ್ ವೆರಿಫೈ ಮಾಡಬಹುದಾಗಿದೆ
First published: October 31, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading