ಇದು ಟೆಕ್ನಾಲಜಿ (Technology) ಯುಗ. ಇತ್ತೀಚೆಗಂತೂ ಹೊಸ ಹೊಸ ಟೆಕ್ನಾಲಜಿಗಳು ದೇಶದೆಲ್ಲೆಡೆ ರೂಪುಗೊಳ್ಳುತ್ತಿದೆ. ಇನ್ನು ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಕೆಲವರಂತೂ ಉದ್ಯೋಗಳನ್ನು ತಮ್ಮ ಮೊಬೈಲ್ ಮೂಲಕವೇ ಸೃಷ್ಟಿ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸ್ಮಾರ್ಟ್ಫೋನ್ (Smartphone) ಹೊಂದಿರುವಂತಹ ಹೊಸ ಫೀಚರ್ಸ್ಗಳು ಅಂತಾನೇ ಹೇಳ್ಬಹುದು. ಇನ್ನು ಸ್ಮಾರ್ಟ್ಫೋನ್ಗಳಲ್ಲಿ ಬಳಸುವಂತಹ ಸೋಶಿಯಲ್ ಮೀಡಿಯಾಗಳು (Social Media) ಇತ್ತೀಚೆಗೆ ಹೆಚ್ಚಿನ ಜನರ ಉದ್ಯೋಗದ ವೇದಿಕೆಯಾಗಿಬಿಟ್ಟಿದೆ. ಈ ಸೋಶಿಯಲ್ ಮೀಡಿಯಾಗಳು ಮನರಂಜನಾ ಮಾಧ್ಯಮವಾಗಿ ಕೆಲವರನ್ನು ಆಕರ್ಷಿಸಿದೆ. ಆದರೆ ಇನ್ನೂ ಕೆಲವರು ಇದನ್ನೇ ಲಾಭವನ್ನಾಗಿ ಬಳಸಿಕೊಂಡು ತಿಂಗಳಿಗೆ ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ.
ಅದೇರೀತಿ ಇಲ್ಲೊಬ್ಬರು ಇನ್ಸ್ಟಾಗ್ರಾಮ್ ಅನ್ನೇ ತನ್ನ ವ್ಯಾಪಾರದ ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ತನ್ನ ಕೈಚಳಕದಿಂದ ತ್ಪಾದಿಸಿದ ಉತ್ಪನ್ನವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದಾರೆ.
ಸಿಮ್ರಾನ್ ಅವರ ಅಭಿಪ್ರಾಯ
ಮುಜಾಫರ್‌ಪುರದ ಸಿಮ್ರಾನ್ ಅಗರ್‌ವಾಲ್ ಎಂಬವರು ಇನ್ಸ್ಟಾಗ್ರಾಮ್ ಅನ್ನು ತಮ್ಮ ವ್ಯವಹಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ನಲ್ಲಿರುವ ಈ ಬ್ಯುಸಿನೆಸ್ ಆಯ್ಕೆಯು ಇಂದಿನ ಟೆಕ್ನಾಲಜಿ ಯುಗದಲ್ಲಿ ವ್ಯವಹಾರ ಮಾಡುವವರಿಗೆ ಉತ್ತಮ ವೇದಿಕೆಯಾಗಿದೆ ಎಂದು ಸಿಮ್ರಾನ್ ಹೇಳುತ್ತಾರೆ. ಈ ಸೋಶಿಯಲ್ ಮೀಡಿಯಾಗಳ ಮೂಲಕ ವ್ಯವಹಾರ ಪ್ರಾರಂಭಿಸಿ ಲಾಭಗಳಿಸಿದವರು ಅನೇಕರಿದ್ದಾರೆ. ಅದರಲ್ಲಿ ಸಿಮ್ರಾನ್ ಸಹ ಒಬ್ಬರು.
ಇದನ್ನೂ ಓದಿ: ಮತಗಟ್ಟೆಗಳಿಗೆ ಬಣ್ಣ ಹಚ್ಚಿ, ಭರ್ಜರಿ ಬಹುಮಾನ ಗೆಲ್ಲಿ!
ಸಿಮ್ರಾನ್ ರಾಳದಿಂದ (Resin) ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ. ಈ ರಾಳವು ದ್ರವರೂಪದ ಉತ್ಪನ್ನವಾಗಿದ್ದು, ಇದು ಹೆಪ್ಪುಗಟ್ಟಿದಾಗ ಅದು ಗಟ್ಟಿಯಾದ ವಸ್ತುವಾಗಿ ಬದಲಾಗುತ್ತದೆ. ಇದೀಗ ಸಿಮ್ರಾನ್ ಈ ರಾಳದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.
ನ್ಯೂಸ್ 18 ಜೊತೆ ಮಾತನಾಡಿದ ಸಿಮ್ರಾನ್ ಅವರು, ನಾನ ಬಿಎಸ್ಸಿ ಮಾಡಿದ್ದೇನೆ ಆದರೆ ನಮ್ಮ ಫ್ಯಾಮಿಲಿಯವರೆಲ್ಲಾ ವ್ಯಾಪಾರದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಸಿಮ್ರಾನ್ ಅವರು ಸಹ ಸ್ವಂತ ವ್ಯಾಪಾರ ಮಾಡುವ ಮೂಲಕ ವೃತ್ತಿಜೀವನವನ್ನು ಆರಂಭಿಸಿದರು ಎಂದಿದ್ದಾರೆ.
ತನ್ನ ಉತ್ಪನ್ನಕ್ಕೆ ಬೇಕಾದ ವಸ್ತುವನ್ನು ಖರೀದಿಸಲು ಎದುರಿಸಿದ ಸಮಸ್ಯೆಗಳು
ಇನ್ನು ಈಕೆ ಒಂದು ದಿನ ಈ ರಾಳದಿಂದ ತಯಾರಿಸಿದ ಉತ್ಪನ್ನವನ್ನು ಖರೀದಿಸುವ ಉದ್ದೇಶದಿಂದ ಆರ್ಡರ್ ಮಾಡುವಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಮದು ಹೇಳಿದ್ದಾರೆ. ಇದಕ್ಕಾಗಿಯೇ ಸಿಮ್ರಾನ್ ನಂತರದಲ್ಲಿ ಅವಳೇ ರಾಳ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾದರು. ಜೊತೆಗೆ ಇದನ್ನು ಇನ್ಸ್ಟಾಗ್ರಾಮ್ ಮೂಲಕ ಮಾರಾಟ ಮಾಡಲು ನಿರ್ಧರಿಸಿದರು. ಇದುವೇ ನಂತರದ ದಿನದಲ್ಲಿ ಬ್ಯುಸಿನೆಸ್ ಆಗಿ ಬೆಳವಣಿಗೆಯಾಯ್ತು ಎಂದಿದ್ದಾರೆ. ಆದರೆ ಬಿಹಾರದಲ್ಲಿ ಕೆಲವೇ ಕೆಲವು ಜನರು ಮಾತ್ರ ರಾಳ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಎಂದು ಸಿಮ್ರಾನ್ ಹೇಳುತ್ತಾರೆ.
100 ಕ್ಕೂ ಹೆಚ್ಚು ಆರ್ಡರ್ಗಳು
ಇನ್ನು ಸಿಮ್ರಾನ್ ಅವರು ಒಂದು ವರ್ಷದ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ ಪೇಜ್ ಒಂದನ್ನು ಆರಂಭಿಸಿದ್ದರು. ಇದಕ್ಕೆ ಡೆಕೊರೇಶನ್ ವಿಲ್ಲಾ ಎಂದು ಹೆಸರಿಟ್ಟಿದ್ದರು. ಖುಷಿಯ ವಿಷಯವೆಂದರೆ ಒಂದು ವರ್ಷದಲ್ಲಿ ಈ ಪೇಜ್ 100 ಕ್ಕೂ ಹೆಚ್ಚು ಆರ್ಡರ್ಗಳನ್ನು ಪಡೆದುಕೊಂಡಿದೆ ಮತ್ತು ಗ್ರಾಹಕರ ಆಯ್ಕೆಗೆ ತಕ್ಕಂತೆ ಉತ್ಪನ್ನವನ್ನೂ ನೀಡಿದ್ದೇವೆ ಎಂದಿದ್ದಾರೆ. ಇನ್ನು ತನ್ನ ರಾಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ ಮತ್ತು ಜನರೂ ಬಹಳಷ್ಟು ಈ ಉತ್ಪನ್ನಗಳನ್ನು ಇಷ್ಟಪಡುತ್ತಿದ್ದಾರೆ ಎಂದು ಹೇಳುತ್ತಾರೆ ಸಿಮ್ರಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ