ಈಗಂತೂ ಎಲ್ಲೇ ನೋಡಿದರೂ, ಕೇಳಿದರೂ 'ಕೆಲಸದಿಂದ ವಜಾಗೊಳಿಸಿದ್ದಾರಂತೆ (Layoff), ಎರಡು ತಿಂಗಳ ಸಂಬಳ ಕೊಟ್ಟು ತೆಗೆದು ಹಾಕಿದ್ದಾರಂತೆ’ ಅನ್ನೋ ಮಾತುಗಳೇ ಹರಿದಾಡುತ್ತಿವೆ. ಕೆಲವು ದೊಡ್ಡ ದೊಡ್ಡ ಪ್ರತಿಷ್ಠಿತ ಕಂನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ (Employees) ಎರಡು ಮೂರು ತಿಂಗಳ ಸಂಬಳವನ್ನು ನೀಡಿ ಹಠಾತ್ತನೆ ಕೆಲಸದಿಂದ (Job) ತೆಗೆದು ಹಾಕಿದರೆ, ಇನ್ನೂ ಕೆಲವು ಚಿಕ್ಕ ಪುಟ್ಟ ಕಂಪೆನಿಗಳು ಏನೂ ದುಡ್ಡು ಕೊಡದೆ ಉದ್ಯೋಗಿಗಳನ್ನು ‘ನಾಳೆಯಿಂದ ಕೆಲಸಕ್ಕೆ ಬರಬೇಡಿ’ ಅಂತ ಹೇಳಿರುವ ಉದಾಹರಣೆಗಳು ಸಹ ಇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹೀಗೆ ಕೆಲಸದಿಂದ ದಿಢೀರನೆ ತೆಗೆದು ಹಾಕಿದ್ದು ಅನೇಕರಿಗೆ ದೊಡ್ಡ ತಲೆ ನೋವಾಗಿರುತ್ತದೆ ಅಂತ ಹೇಳಬಹುದು. ಕೆಲವರಿಗಂತೂ ಅದು ಮೊದಲನೇ ಕೆಲಸವಾಗಿದ್ದರೆ, ಅಲ್ಲಿ ಅವರಿಗೆ ಕೆಲಸ ಕಳೆದುಕೊಂಡಿರುವವರಿಗೆ ತುಂಬಾನೇ ನಿರಾಶೆ ಆಗುತ್ತದೆ. ಏಕೆಂದರೆ ಜೀವನದಲ್ಲಿನ ಮೊದಲ ಉದ್ಯೋಗ ಅನೇಕ ಕಾರಣಗಳಿಗಾಗಿ ಸ್ಪೆಷಲ್ ಆಗಿರುತ್ತದೆ ಅಂತ ಹೇಳಬಹುದು. ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ ಬೆಂಗಳೂರಿನ ಉದ್ಯೋಗಿಯ ಜೊತೆಗೆ ನಡೆದಿದೆ ನೋಡಿ.
ಅಮೆಜಾನ್ ನ ಎರಡನೇ ಸುತ್ತಿನ ಲೇ-ಆಫ್ ನಲ್ಲಿ ಕೆಲಸ ಕಳೆದುಕೊಂಡ ಬೆಂಗಳೂರು ಉದ್ಯೋಗಿ
ಪ್ರತಿಷ್ಠಿತ ಕಂಪೆನಿಯಾದ ಅಮೆಜಾನ್ ತನ್ನ ಎರಡನೇ ಸುತ್ತಿನ ಲೇ-ಆಫ್ ಅನ್ನು ಘೋಷಿಸಿದ ನಂತರ, ಟೆಕ್ ದೈತ್ಯನ ನಿರ್ಧಾರದಿಂದ ಬಾಧಿತರಾದ 9,000 ಜನರಲ್ಲಿ ಒಬ್ಬರಾದ ಬೆಂಗಳೂರಿನ ಉದ್ಯೋಗಿಯೊಬ್ಬರು ತಮ್ಮ ಮೊದಲ ಕೆಲಸವನ್ನು ಇಷ್ಟು ಬೇಗ ಕಳೆದುಕೊಂಡಿರುವುದು ನಿರಾಶಾದಾಯಕವಾಗಿದೆ ಎಂದು ಹಂಚಿಕೊಂಡಿದ್ದಾರೆ ನೋಡಿ.
ಇದನ್ನೂ ಓದಿ: ವಿಂಡೋಸ್‌ಗಾಗಿ ಹೊಸ ಡೆಸ್ಕ್‌ಟಾಪ್ ಆ್ಯಪ್ ಬಿಡುಗಡೆ ಮಾಡಿದ ವಾಟ್ಸಾಪ್; ಹೇಗೆಲ್ಲಾ ಕೆಲಸ ಮಾಡಲಿದೆ ಹೊಸ ಫೀಚರ್
ಹರಿ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಮೊದಲ ಕೆಲಸವೆ ಅಮೆಜಾನ್ ಅಂತಹ ದೊಡ್ಡ ಕಂಪೆನಿಯಲ್ಲಿ ಸಿಕ್ಕಿತ್ತು, ಆದರೆ ಇಲ್ಲಿ ಕೇವಲ ಒಂಬತ್ತು ತಿಂಗಳು ಮಾತ್ರವೇ ಕೆಲಸ ಮಾಡುವ ಹಾಗಾಯ್ತು.
"ಇತ್ತೀಚಿಗೆ ಅಮೆಜಾನ್ ನಲ್ಲಿ ನಡೆದ ಲೇ-ಆಫ್ ಸಾಫ್ಟ್‌ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಆಗಿದ್ದ ನನ್ನ ಮೇಲೆ ತುಂಬಾನೇ ಪರಿಣಾಮ ಬೀರಿದೆ. ಇಂದು ಅಧಿಕೃತವಾಗಿ ನನ್ನ ಕೊನೆಯ ಕೆಲಸದ ದಿನ" ಎಂದು ಕುಮಾರ್ ಲಿಂಕ್ಡ್ಇನ್ ನಲ್ಲಿ ಬರೆದು ಕೊಂಡಿದ್ದಾರೆ.
"ನನ್ನ ಮೊದಲ ಕೆಲಸ ಇಷ್ಟು ಬೇಗ ಕೊನೆಗೊಂಡಿರುವುದು ನನಗೆ ತುಂಬಾನೇ ನಿರಾಶಾದಾಯಕವಾಗಿದ್ದರೂ, ಈ ಒಂದು ಒಳ್ಳೆಯ ಅವಕಾಶಕ್ಕಾಗಿ ನಾನು ತುಂಬಾನೇ ಕೃತಜ್ಞನಾಗಿದ್ದೇನೆ. ಅಮೆಜಾನ್ ನಲ್ಲಿ ಕೆಲಸ ಮಾಡಿದಷ್ಟು ದಿನಗಳು ನಾನು ಅನೇಕ ಅದ್ಭುತ ಜನರನ್ನು ಭೇಟಿಯಾದೆ, ಅವರು ಈಗ ಈ ಪ್ರತಿಕೂಲ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡುತ್ತಿದ್ದಾರೆ” ಎಂದು ಸಹ ಕುಮಾರ್ ಬರೆದು ಕೊಂಡಿದ್ದಾರೆ.
ಇದು ಅಮೆಜಾನ್ ನಲ್ಲಿ ನಡೆಯುತ್ತಿರುವುದು ಎರಡನೇ ಮಾಸ್ ಲೇ-ಆಫ್
ಮಾರ್ಚ್ 20 ರಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಉದ್ಯೋಗಿಗಳಿಗೆ ಬರೆದ ಒಂದು ಪತ್ರದಲ್ಲಿ, ಇದು ಕಂಪನಿಯ ದೀರ್ಘಕಾಲೀನ ಲಾಭಕ್ಕಾಗಿ ತೆಗೆದುಕೊಂಡ "ಕಠಿಣ ನಿರ್ಧಾರ" ಎಂದು ಹೇಳಿದರು. ಕೇವಲ ಎರಡು ತಿಂಗಳ ಹಿಂದೆಯಷ್ಟೆ ಸುಮಾರು 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ನಂತರ ಈ ರೀತಿಯ ಲೇ-ಆಫ್ ನಡೆದಿದ್ದು ಇದು ಎರಡನೆಯ ಬಾರಿ ಅಂತ ಹೇಳಲಾಗುತ್ತಿದೆ.
ಈ ಎರಡು ಲೇ-ಆಫ್ ಗಳನ್ನು ಒಟ್ಟಿಗೆ ಏಕೆ ಘೋಷಿಸಲಾಗಿಲ್ಲ ಎಂದು ಜಸ್ಸಿ ವಿವರಿಸಿದ್ದಾರೆ ನೋಡಿ. "ಕೆಲವು ತಿಂಗಳ ಹಿಂದೆ ನಾವು ಮೊದಲನೇ ಲೇ-ಆಫ್ ಮಾಡಿದ್ದಾಗ ಎರಡನೇ ಲೇ-ಆಫ್ ಬಗ್ಗೆ ಮಾಹಿತಿಯನ್ನು ಏಕೆ ನೀಡಿರಲಿಲ್ಲ ಅಂತ ಅನೇಕರು ನಮಗೆ ಕೇಳಬಹುದು. ಇದಕ್ಕೆ ಸಂಕ್ಷಿಪ್ತ ಉತ್ತರವೆಂದರೆ ಎಲ್ಲಾ ತಂಡಗಳು ಆ ಲೇ-ಆಫ್ ನ ಕೊನೆಯಲ್ಲಿ ತಮ್ಮ ತಂಡದ ಮತ್ತು ಕೆಲಸದ ವಿಶ್ಲೇಷಣೆಗಳನ್ನು ಮಾಡಿರಲಿಲ್ಲ ಮತ್ತು ಸೂಕ್ತವಾಗಿ ವಿಶ್ಲೇಷಣೆ ಮಾಡದ ಹೊರತು ಲೇ-ಆಫ್ ಮಾಡುವುದು ಸರಿಯಲ್ಲ ಅಂತ ನಾವು ಈ ನಿರ್ಧಾರಗಳನ್ನು ಆಗ ಹಂಚಿಕೊಳ್ಳಲಿಲ್ಲ" ಎಂದು ಅವರು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ