• Home
  • »
  • News
  • »
  • tech
  • »
  • ‌Samsung Galaxy: ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

‌Samsung Galaxy: ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ ವಾಚ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ ವಾಚ್

ಸ್ಯಾಮ್‌ಸಂಗ್‌ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ ವಾಚ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಆಗಿದ್ದು, ಈಗಾಗಲೇ ಹಲವಾರು ಪ್ರೀಬುಕ್‌ ಆಗಿದ್ದು. ಗ್ರಾಹಕರಿಂದ ಬಹಳಷ್ಟು ಬೇಡಿಕೆಗಳು ಕೂಡ ಬರುತ್ತಿದೆ. ಇದರ ವಿನ್ಯಾಸ ಮತ್ತು ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ...

  • Share this:

    ಸ್ಮಾರ್ಟ್‌ವಾಚ್‌ಗಳು (Smartwatch) ಈಗಿನ ಟೆಕ್ನಾಲಜಿ  (Technology) ಮಾರುಕಟ್ಟೆಯಲ್ಲಿರುವ ಟ್ರೆಂಡಿಂಗ್‌ (Trending) ಬ್ರಾಂಡ್‌ಗಳಾಗಿವೆ. ಇತ್ತೀಚಿಗೆ ಈ ಸ್ಮಾರ್ಟ್‌ವಾಚ್‌ಗಳ ಮೇಲಿನ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದ ಕೆಲವೊಂದು ಜನಪ್ರಿಯ ಕಂಪನಿಗಳು ಹೊಸ ಹೊಸ ವರ್ಷನ್‌ನಲ್ಲಿ (New Version) ಸ್ಮಾರ್ಟ್‌ವಾಚ್‌ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಆದರೆ ಕೆಲವೊಂದು ಸ್ಮಾರ್ಟ್‌ವಾಚ್‌ಗಳು ಉತ್ತಮ ಗುಣಮಟ್ಟದ ಫೀಚರ್ಸ್‌ (Features) ಅನ್ನು ಹೊಂದಿದ್ದು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಸ್ಯಾಮ್‌ಸಂಗ್‌ ಕಂಪನಿ (Samsung Company) ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ (Samsung Galaxy 5 Pro) ಎಂಬ ಸ್ಮಾರ್ಟ್‌ವಾಚ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈವರೆಗೆ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿರುವಂತಹ ಸ್ಮಾರ್ಟ್‌ವಾಚ್‌ ಬ್ರಾಂಡ್‌ಗಳಿಗೆ ಹೋಲಿಸಿದರೆ ಈ ಗ್ಯಾಲಕ್ಸಿ ಪ್ರೊ ಸ್ಮಾರ್ಟ್‌ವಾಚ್‌ ತುಂಬಾ ವಿಶೇಷವಾಗಿದೆ.


    ಸ್ಯಾಮ್‌ಸಂಗ್‌ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ವಾಚ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಆಗಿದ್ದು ಇದರ ವಿನ್ಯಾಸ ಮತ್ತು ಫೀಚರ್ಸ್‌ ಬಗ್ಗೆ ಈ ಕೆಳಗೆ ನೀಡಲಾಗಿದೆ. ಈ ಬ್ರಾಂಡ್‌ಗೆ ಈಗಾಗಲೇ ಹಾಲವಾರು ಪ್ರಿಬುಕ್‌ ಆಗಿದ್ದು. ಗ್ರಾಹಕರಿಂದ ಬಹಳಷ್ಟು ಬೇಡಿಕೆಗಳು ಕೂಡ ಬರುತ್ತಿದೆ.


    ವಿನ್ಯಾಸ:


    ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ನ ಡಿಸ್‌ಪ್ಲೇಯನ್ನು ವೃತ್ತಾಕಾರದಲ್ಲಿ ರಚಿಸಲಾಗಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಸ್ಮಾರ್ಟ್‌ವಾಚ್‌ 410mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೆ ಇದೀಗ ಬಿಡುಗಡೆಯಾದ ಗ್ಯಾಲಕ್ಸಿ 5 ಪ್ರೊ ಇದಕ್ಕಿಂತ ಒಳ್ಳೆಯ ಗುಣಮಟ್ಟದ ಅಂದರೆ 590 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.ಇನ್ನು ಈ ಸ್ಮಾರ್ಟ್‌ವಾಚ್‌ 46.5 ಗ್ರಾಂ ತೂಕವನ್ನು ಹೊಂದಿದೆ. ನಂತರ ಈ ವಾಚ್‌ನ ಹಿಂಭಾಗದಲ್ಲಿ ಬಯೋ ಆ್ಯಕ್ಟಿವ್‌ ಸೆನ್ಸಾರ್‌ ಅನ್ನು ಕೂಡ ಹೊಂದಿದೆ. ಈ ಸೆನ್ಸಾರ್‌ಗಳನ್ನು ಆರೋಗ್ಯದಲ್ಲಿರುವ ಏರುಪೇರನ್ನು ತಿಳಿಸುವಂತೆ ಮಾಡುತ್ತದೆ.


    ಇದನ್ನೂ ಓದಿ: ಇನ್ಮುಂದೆ ಬಾಡಿಗೆಗೆ ಸಿಗುತ್ತೆ ನೋಕಿಯಾ X30 5G ಸ್ಮಾರ್ಟ್‌ಫೋನ್, ಆದ್ರೆ ಕಂಡೀಷನ್ಸ್​ ಅಪ್ಲೈ!


    ‌ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ವಾಚ್‌ನ ಫೀಚರ್ಸ್:


    ಡಿಸ್‌ಪ್ಲೇ


    1.4 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್‌ W920 ಡ್ಯುಯಲ್‌ ಕೋರ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.


    A new smartwatch will be launched by Samsung
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ವಾಚ್


    ಸ್ಟೋರೇಜ್‌


    ಈ ಸ್ಮಾರ್ಟ್‌ವಾಚ್‌ನ ಸ್ಟೋರೇಜ್‌ ಬಗ್ಗೆ ಹೇಳುವುದಾದರೆ ಇದು 1.5 ಜಿಬಿ ರ್‍ಯಾಮ್ ಮತ್ತು 16 ಜಿಬಿ ಇಂಟರ್ನಲ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.


    ಬ್ಯಾಟರಿ


    ಇದರ ಬ್ಯಾಟರಿ ಸಾಮರ್ಥ್ಯ 590mAh ಆಗಿದ್ದು ಸಾಮಾನ್ಯ ಬಳಕೆಯಲ್ಲಿ 2 ದಿನಗಳವರೆಗೆ ಚಾರ್ಜ್‌ ಉಳಿಯುತ್ತದೆ.


    ಬಣ್ಣಗಳು


    ಈ ಸ್ಮಾರ್ಟ್‌ಫೋನ್‌ ಟೈಟಾನಿಯಮ್‌ ಕಪ್ಪು ಮತ್ತು ಗ್ರೇ ಕಲರ್‌ನಲ್ಲಿ ಲಭ್ಯವಿದೆ.


    ಹೇಗೆ ಕೆಲಸಮಾಡುತ್ತದೆ?


    ಗ್ಯಾಲಕ್ಸಿ 5 ಪ್ರೊ ಯಾವರೀತಿ ಕೆಲಸಮಾಡುತ್ತದೆಯೆಂದರೆ ಇದು ಎರಡು ಆ್ಯಪ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅವುಗಳು ಯಾವುದೆಂದರೆ ಗ್ಯಾಲಕ್ಸಿ ವೇರೆಬಲ್‌ ಮತ್ತು ಗ್ಯಾಲಕ್ಸಿ ಹೆಲ್ತ್‌


    A new smartwatch will be launched by Samsung
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ವಾಚ್


    ಈ ಎರಡು ಆ್ಯಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿದರೆ ನಿಮಗೆ ನಿಮ್ಮ  ವಾಚ್‌ನ ಡಿಸ್‌ಪ್ಲೇ, ಸ್ಟೋರೇಜ್‌, ಹೆಲ್ತ್‌ ಈ ಎಲ್ಲದರ ಬಗ್ಗೆ ಈ ಆ್ಯಪ್‌ ಮೂಲಕ ನಿರ್ವಹಿಸಬಹುದಾಗಿದೆ.


    ಇದಲ್ಲದೆ ನಡೆಯುವ ಹೆಜ್ಜೆ, ಹೃದಯ ಬಡಿತ, ನಿದ್ರೆಯ ಲೆಕ್ಕಾಚಾರ, ರಕ್ತದ ಆಮ್ಲಜನಕ ಇವುಗಳನ್ನೆಲ್ಲಾ ತಿಳಿಸುತ್ತದೆ. ಇದರಿಂದ ವೈದ್ಯರಿಗೆ ಆರೋಗ್ಯದ ಬಗ್ಗೆ ತಿಳಿಯಲು ಸುಲಭವಾಗುತ್ತದೆ.


    ಈ ಸ್ಮಾರ್ಟ್‌ವಾಚ್‌ ಅರೋಗ್ಯದ ಬಗ್ಗೆ‌ ಟಿಪ್ಸ್‌ ಅನ್ನು ನೀಡುವುದರಿಂದ ಬಳಕೆದಾರರಿಗೆ ತಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.


    ಜಿಪಿಎಸ್‌ ಟ್ರ್ಯಾಕಿಂಗ್‌


    ಇದು ಬಹಳ ಉತ್ತಮ ಫೀಚರ್‌ ಅಂತ ಹೇಳಬಹುದು. ಇದರಲ್ಲಿ ಬಳಕೆದಾರರು ಎಲ್ಲಿಯಾದರು ಹೋಗುವಾಗ ದಾರಿ ತಪ್ಪಿದರೆ ಇದನ್ನು ಟ್ರ್ಯಾಕ್‌ ಮಾಡಿ ಸರಿಯಾದ ದಾರಿಯಲ್ಲಿ ಹೋಗುವಂತೆ ಗೂಗಲ್‌ ಮ್ಯಾಪ್‌ ಮೂಲಕ ಸಹಾಯಮಾಡುತ್ತದೆ.


    A new smartwatch will be launched by Samsung
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ವಾಚ್


    ಬೆಲೆ ಮತ್ತು ಲಭ್ಯತೆ


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ 5 ಪ್ರೊ ಸ್ಮಾರ್ಟ್‌ವಾಚ್‌ ಅನ್ನು ಒಮ್ಮೆ ಚಾರ್ಜ್‌ ಮಾಡಿದರೆ ಮತ್ತೆ 2 ದಿನಗಳವರೆಗೆ ಚಾರ್ಜ್‌ ಮಾಡುವ ಅವಶ್ಯಕತೆ ಇರುವುದಿಲ್ಲ.


    ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!


    ಇನ್ನು ಈ ಗ್ಯಾಲಕ್ಸಿ ಪ್ರೊ ಸ್ಮಾರ್ಟ್‌ವಾಚ್‌ ಅನ್ನು ಜಿಪಿಎಸ್‌ ಅಳವಡಿಕೆ ಮಾತ್ರ ಇದ್ದು ಖರೀದಿ ಮಾಡುವುದಾದರೆ 44,999 ರೂಪಾಯಿ. ಒಂದು ವೇಳೇ ಜಿಪಿಎಸ್‌ + LTE ಹೊಂದಿದ ಸ್ಮಾರ್ಟ್‌ವಾಚ್‌ ಖರೀದಿ ಮಾಡುವುದಾದರೆ 49,999 ರೂಪಾಯಿ ಪಾವತಿಸಬೇಕು.

    Published by:Harshith AS
    First published: