Smartwatch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್

ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್

ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾಗಿರುವ ಅರ್ಬನ್ ಸಂಸ್ಥೆ ಇದೀಗ ತನ್ನ ಬ್ರಾಂಡ್​ನ ಅಡಿಯಲ್ಲಿ ಅರ್ಬನ್​ ಫಿಟ್​ Z ಸ್ಮಾರ್ಟ್​​ವಾಚ್​ ಅನ್ನು ಮಾರುಕಟ್ಟೆಗೆ ಲಾಂಚ್​ ಮಾಡಿದೆ. ಈ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

  • Share this:

    ಒಂದು ಸಮಯದಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಿಟ್ಟರೆ ಬೇರೆ ಯಾವುದೇ ಸಾಧನಗಳಿಗೆ ಬೇಡಿಕೆಯೇ ಇರಲಿಲ್ಲ. ಆದರೆ ಟೆಕ್ನಾಲಜಿ ಅಭಿವೃದ್ಥಿಯಾದಂತೆ ಟೆಕ್​ ಡಿವೈಸ್​ಗಳಿಗೆ (Tech Device) ಎಲ್ಲದಕ್ಕೂ ಭಾರೀ ಬೇಡಿಕೆಯಿದೆ. ಅದ್ರಲ್ಲೂ ಸ್ಮಾರ್ಟ್​​ವಾಚ್​ಗಳ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಸ್ಮಾರ್ಟ್​​ವಾಚ್​ಗಳಿಗಂತೂ ಎಲ್ಲಿಲ್ಲದ ಬೇಡಿಕೆ. ಹಿಂದೆಲ್ಲಾ ವಾಚ್​ಗಳನ್ನು ಕೇವಲ ಸಮಯ ನೋಡಲೆಂದು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ ಸ್ಮಾರ್ಟ್​ವಾಚ್ (Smartwatch)​ ಬಂದ ಮೇಲೆ ವಾಚ್ ಧರಿಸುವುದೇ ಒಂದು ಫ್ಯಾಶನ್ (Fasion) ಆಗಿಬಿಟ್ಟಿದೆ. ಮುಖ್ಯವಾಗಿ ಈ ಸ್ಮಾರ್ಟ್​​ವಾಚ್​ನಲ್ಲಿರುವಂತಹ ಫೀಚರ್ಸ್​ಗಳು ಹೆಚ್ಚು ಜನರನ್ನು ಆಕರ್ಷಿಸಿದೆ ಎಂದು ಹೇಳ್ಬಹುದು. ಸ್ಮಾರ್ಟ್​​ವಾಚ್​ಗಳು ತನ್ನ ವಿಶೇಷ ವಿನ್ಯಾಸದ ಮೂಲಕ, ಅಗ್ಗದ ಬೆಲೆಯಲ್ಲಿ (Budget Price) ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, ಬಹಳಷ್ಟು ಗ್ರಾಹಕರನ್ನು ಇದು ಹೊಂದಿದೆ.


    ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾಗಿರುವ ಅರ್ಬನ್ ಸಂಸ್ಥೆ ಇದೀಗ ತನ್ನ ಬ್ರಾಂಡ್​ನ ಅಡಿಯಲ್ಲಿ ಅರ್ಬನ್​ ಫಿಟ್​ Z ಸ್ಮಾರ್ಟ್​​ವಾಚ್​ ಅನ್ನು ಮಾರುಕಟ್ಟೆಗೆ ಲಾಂಚ್​ ಮಾಡಿದೆ. ಈ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.


    ಅರ್ಬನ್​ ಫಿಟ್​ ಝಡ್​ ಸ್ಮಾರ್ಟ್​​ವಾಚ್​ ಡಿಸ್​ಪ್ಲೇ ವಿನ್ಯಾಸ


    ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ 1.4 ಇಂಚಿನ ಸೂಪರ್ ಅಮೋಲ್ಡ್​ ಫ್ಲೂಯಿಡ್ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು ಆಲ್‌ವೇಸ್‌ ಆನ್ ಡಿಸ್‌ಪ್ಲೇ (AOD) ಫೀಚರ್ಸ್‌ ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಆಂಟಿ-ಗ್ಲೇರ್ ಸಹ ಹೊಂದಿದೆ.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​​ನಲ್ಲೂ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡ್ಬಹುದು! ಹೇಗೆ ಗೊತ್ತಾ?


    100 ಕ್ಕೂ ಹೆಚ್ಚು ವಾಚ್ ಫೇಸ್‌ ಆಯ್ಕೆ


    ಅರ್ಬನ್​ ಫಿಟ್​ ಝಡ್ ಸ್ಮಾರ್ಟ್​​​ ವಾಚ್​ ಅತ್ಯಾಕರ್ಷಕ ನೋಟದೊಂದಿಗೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿರುವ ಈ ವಾಚ್‌ ನೂರಕ್ಕೂ ಹೆಚ್ಚು ವಾಚ್ ಫೇಸ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ 24×7 ಹೃದಯ ಬಡಿತ ಟ್ರ್ಯಾಕಿಂಗ್, SpO2 ಮಾನಿಟರಿಂಗ್, ರಕ್ತದೊತ್ತಡ ಟ್ರ್ಯಾಕಿಂಗ್‌ಗಾಗಿ ಡ್ಯುಯಲ್ ಸೆನ್ಸಾರ್​ ಜೊತೆಗೆ ರಿಯಲ್‌ಟೆಕ್‌ ಚಿಪ್‌ಸೆಟ್ ಅನ್ನು ಸಹ ಇದು ಪಡೆದುಕೊಂಡಿದೆ.


    ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್


    60 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್​ಗಳು


    ಅರ್ಬನ್ ಫಿಟ್ Z ದೈಹಿಕ ಚಟುವಟಿಕೆಗಳ ಮೇಲೆ ಹೆಚ್ಚು ಕಾಳಜಿ ವಹಿಸಲಿದ್ದು, ಇದರಲ್ಲಿ 60 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ ಗಳ ಮೂಲಕ ಬಳಕೆದಾರರಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ. ಜೊತೆಗೆ ಈ ವಾಚ್‌ ಬ್ಲೂಟೂತ್ ಕರೆ ಫೀಚರ್ಸ್‌ ಸಹ ಪಡೆದುಕೊಂಡಿದ್ದು, ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆಯನ್ನು ಒದಗಿಸಲಾಗಿದೆ. ಈ ವಾಚ್‌ವಿಷಯದಲ್ಲಿ ಪ್ರಮುಖ ಆಸಕ್ತಿದಾಯಕ ಫೀಚರ್ಸ್‌ ಎಂದರೆ ಇಯರ್‌ಬಡ್ಸ್‌ ಅನ್ನು ವಾಚ್‌ನೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿನ ಇನ್‌ಬಿಲ್ಟ್‌ ಸ್ಟೋರೇಜ್ ನಲ್ಲಿ ಮ್ಯೂಸಿಕ್‌ ಸ್ಟೋರ್‌ ಮಾಡಲು ಅನುವು ಮಾಡಿಕೊಡುತ್ತದೆ.


    ಬ್ಯಾಟರಿ ಫೀಚರ್ಸ್


    ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ 10 ದಿನಗಳ ಬ್ಯಾಟರಿ ಬ್ಯಾಕಪ್‌ ಹೊಂದಿದ್ದು, ಇದಕ್ಕಾಗಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಹ ಬೆಂಬಲಿಸಲಿದೆ. ಇನ್ನುಳಿದಂತೆ ಈ ವಾಚ್‌ ಅಲಾರಾಂ ಗಡಿಯಾರ, ನೀರು ಕುಡಿಯುವ ಜ್ಞಾಪನೆ, ಹವಾಮಾನ ನವೀಕರಣಗಳು, ಟೈಮರ್ ಮತ್ತು ಇನ್ನೂ ಹೆಚ್ಚಿನ ಸೌಲಭ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಇನ್ನು ನೀರಿನಿಂದ ಈ ಸ್ಮಾರ್ಟ್​​ವಾಚ್​ನ ರಕ್ಷಣೆಗಾಗಿ IP67 ರೇಟಿಂಗ್‌ ಅನ್ನು ಅಳವಡಿಸಲಾಗಿದೆ.




    ಬೆಲೆ ಮತ್ತು ಲಭ್ಯತೆ


    ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 5,999 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದ್ದು, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಅರ್ಬನ್‌ ಕಂಪೆನಿಯ ಅಧಿಕೃತ ಸೈಟ್‌ ಮೂಲಕ ಖರೀದಿಗೆ ಅವಕಾಶವಿದೆ. ಜೊತೆಗೆ ಕೆಲವು ಆಫ್‌ಲೈನ್‌ ಸ್ಟೋರ್‌ ಮೂಲಕವೂ ಈ ಸ್ಮಾರ್ಟ್​ವಾಚ್​ ಅನ್ನು ಖರೀದಿ ಮಾಡಬಹುದು. ಇನ್ನು ಈ ವಾಚ್‌ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಕಪ್ಪು ಸಿಲಿಕೋನ್ ಸ್ಟ್ರಾಪ್ ಮತ್ತು ಬ್ರೌನ್ ಚರ್ಮದ ಪಟ್ಟಿ ಹಾಗೂ ಗ್ರೇ ಸಿಲಿಕೋನ್ ಸ್ಟ್ರಾಪ್ ಮತ್ತು ಬ್ಲ್ಯಾಕ್‌ ಚರ್ಮದ ಪಟ್ಟಿ ಎಂಬ ಆಯ್ಕೆಯಲ್ಲಿ ಲಭ್ಯವಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು