ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ (Smartphone Company) ಜನಪ್ರಿಯ ಕಂಪೆನಿಯೆಂದರೆ ಅದು ವಿವೋ (Vivo Company). ಈ ಕಂಪೆನಿ ಇದುವರೆಗೆ ಮಾರುಕಟ್ಟೆಗೆ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ವಿವೋ ಕಂಪೆನಿಯೆಂದಾಗ ಮೊದಲು ನೆನಪಾಗೋದೆ ಆ ಸ್ಮಾರ್ಟ್ಫೋನ್ಗಳ ಕ್ಯಾಮೆರಾಗಳು. ವಿವೋ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಉತ್ತಮ ಫೀಚರ್ಸ್ವುಳ್ಳ ಕ್ಯಾಮೆರಾ ಜೊತೆಗೆ, ಗುಣಮಟ್ಟದ ಫೀಚರ್ಸ್ಗಳನ್ನು ಸಹ ಪರಿಚಯಿಸಿದೆ. ವಿವೋ ವಿ27 (Vivo V27 Series) ಸ್ಮಾರ್ಟ್‌ಫೋನ್ ಸೀರಿಸ್ ಪರಿಚಯಿಸಿದೆ. ಅದರಲ್ಲಿ ವಿವೋ V27 ಮತ್ತು ವಿವೋ V27 ಪ್ರೋ ಫೋನ್‌ಗಳ ಜೊತೆಗೆ ಸಂಸ್ಥೆಯು ವಿವೋ V27e ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 64 ಮೆಗಾ ಪಿಕ್ಸಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ಅನ್ನು ಒಳಗೊಂಡಿದೆ.
ವಿವೋ ಕಂಪೆನಿಯಿಂದ ಹೊಸ ಸ್ಮಾರ್ಟ್‌ಫೋನ್ ಒಂದ ಬಿಡುಗಡೆಯಾಗುತ್ತಿದ್ದು ಇದಕ್ಕೆ ವಿವೋ ವಿ27ಇ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾದೊಂದಿಗೆ ಇನ್ನೂ ಹಲವಾರು ಫೀಚರ್ಸ್ಗಳನ್ನು ಒಳಗೊಂಡಿದೆ.
ವಿವೋ ವಿ27ಇ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿನ್ಯಾಸ
ವಿವೋ V27e ಸ್ಮಾರ್ಟ್‌ಫೋನ್ 6.62 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ 2400 × 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಪಡೆದಿದೆ.
ಇದನ್ನೂ ಓದಿ: ಏಕಕಾಲದಲ್ಲಿ 3 ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದ ನೋಕಿಯಾ ಕಂಪೆನಿ! ಹೇಗಿದೆ ಗೊತ್ತಾ ಫೀಚರ್ಸ್?
ಕ್ಯಾಮೆರಾ ಸೆಟಪ್ ಹೇಗಿದೆ?
ವಿವೋ V27e ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ V27e ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ99 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಫನ್ಟಚ್ ಓಎಸ್ 13 ಬೆಂಬಲಿತ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 8 ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಇದು ಖರೀದಿಗೆ ಲಭ್ಯವಾಗಲಿದೆ.
ಬ್ಯಾಟರಿ ಬ್ಯಾಕಪ್
ವಿವೋ V27e ಸ್ಮಾರ್ಟ್‌ಫೋನ್ 4,600 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಇತರೆ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ, ಜಿಪಿಎಸ್, ಬೀಡೌ, ಗ್ಲೋನಾಸ್, ಗೆಲಿಲಿಯೋ, ನ್ಯಾವಿಕ್ ಮತ್ತು ಹೆಚ್ಚಿನವು ಸೇರಿವೆ.
ಬೆಲೆ ಮತ್ತು ಲಭ್ಯತೆ
ವಿವೋ V27e ಸ್ಮಾರ್ಟ್‌ಫೋನ್ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆಯು ಮಲೇಷ್ಯಾದಲ್ಲಿ RM 1,299 ಅಂದರೆ ಭಾರತದಲ್ಲಿ 24,000 ರೂಪಾಯಿ ಆಗಿದೆ. ಆದರೆ ಸದ್ಯ ಮಲೇಷ್ಯಾದಲ್ಲಿ ಮಾತ್ರ ಈ ಫೋನ್ ಲಭ್ಯವಿದೆ. ಆದರೆ ಭಾರತದಲ್ಲಿ ಯಾವಾಗ ಲಾಂಚ್ ಆಗಲಿದೆ ಎಂಬುದರ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿ ಹೊರಹಾಕಿಲ್ಲ.
ನೋಕಿಯಾ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್
ನೋಕಿಯಾ ಜಿ22 ಸ್ಮಾರ್ಟ್‌ಫೋನ್
ನೋಕಿಯಾ G22 ಸ್ಮಾರ್ಟ್‌ಫೋನ್ ಅನ್ನು ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸವನ್ನು ಮಾಡಲಾಗಿದೆ. ಇದು ಕರ್ವ್ಡ್ ಚಾರ್ಜಿಂಗ್ ಪೋರ್ಟ್ ಅಥವಾ ಫ್ಲಾಟ್ ಬ್ಯಾಟರಿಯನ್ನು ಹೊಂದಿದ್ದು ಈ ಮೂಲಕ ಬ್ಯಾಟರಿಯನ್ನು ಬದಲಾಯಿಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ ಎಂದು ನೋಕಿಯಾ ಕಂಪೆನಿ ಹೇಳಿಕೊಂಡಿದೆ. ಇದು 100% ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಬ್ಯಾಕ್, ಸೌಂಡ್ ಬಾಸ್ ಮತ್ತು ಸ್ಪಷ್ಟವಾದ ಧ್ವನಿಯನ್ನು ನೀಡುವ OZO ಪ್ಲೇಬ್ಯಾಕ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 2 ವರ್ಷಗಳ ಆಂಡ್ರಾಯ್ಡ್ ಎಂ ಓಎಸ್ ಅಪ್ಡೇಟ್‌ಗಳನ್ನು ನೀಡಲಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ