ಭಾರತೀಯ ಮಾರುಕಟ್ಟೆ ಜನಪ್ರಿಯ ಸ್ಮಾರ್ಟ್ವಾಚ್ (Smartwatch) ಕಂಪನಿಯಾಗಿರುವ ಬೌಲ್ಟ್ ಕಂಪನಿ (Boult Company) ಇದೀಗ ಹೊಸ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚಿಗಷ್ಟೇ ಡ್ರಿಫ್ಟ್, ಕಾಸ್ಮಿಕ್ ಮತ್ತು ರಿಡ್ಜ್ ಸೇರಿದಂತೆ ಮೂರು ವಿಶೇಷ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆಗೊಳಿಸಿದ್ದ ಬೌಲ್ಟ್ ಕಂಪನಿ ಇದೀಗ ದೇಶದಲ್ಲಿ ಬೌಲ್ಟ್ ರೋವರ್ (Boult Rover Smartwatch) ಎಂಬ ವಿಶೇಷ ಸ್ಮಾರ್ಟ್ವಾಚ್ ಅನ್ನು ಪರಿಚಯಿಸಿದೆ. ಸ್ಮಾರ್ಟ್ವಾಚ್ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವಂತಹ ಸಾಧನಗಳಾಗಿದೆ. ಇದು ಮೊಬೈಲ್ನಂತೆಯೇ ಫೀಚರ್ಸ್ಗಳನ್ನು ಹೊಂದಿರುವುದರಿಂದ ಇದು ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಹೌದು, ಸ್ಮಾರ್ಟ್ವಾಚ್ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಕಂಪನಿಯೆಂದರೆ ಅದು ಬೌಲ್ಟ್. ಇದೀಗ ಈ ಕಂಪನಿ ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು ವಾಟರ್ ಪ್ರೂಫ್ ಸ್ಮಾರ್ಟ್ವಾಚ್ ಆಗಿದ್ದು, ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದೆ. ಇದ ವೈಶಿಷ್ಟ್ಯಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ಫೀಚರ್ಸ್
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೊಸ ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ಬಾಡಿಯನ್ನು ಮಿಶ್ರಲೋಹದಿಂದ ತಯಾರಿಸಲಾಗಿದ್ದು, ರೌಂಡ್ ಫೇಸ್ ಮಾದರಿಯಲ್ಲಿ ಇದರ ವಿನ್ಯಾಸವನ್ನು ರಚಿಸಲಾಗಿದೆ. ಈ ಸ್ಮಾರ್ಟ್ವಾಚ್ನ ಎರಡೂ ಬದಿಗಳಲ್ಲಿ ಎರಡು ಬಟನ್ ಗಳನ್ನು ನೀಡಲಾಗಿದೆ. ಇನ್ನು ಈ ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ.
ಇದನ್ನೂ ಓದಿ: ಹೊಸವರ್ಷದ ಮೊದಲ ಸ್ಮಾರ್ಟ್ಫೋನ್ ಆಗಲಿದೆ ರೆಡ್ಮಿ ನೋಟ್ 12 ಸೀರಿಸ್
ಈ ಸ್ಮಾರ್ಟ್ವಾಚ್ನ ಡಿಸ್ಪ್ಲೇ ಫೀಚರ್ ಬಗ್ಗೆ ಹೇಳುವುದಾದರೆ, ಶ್ರೀಇದು 1.3 ಇಂಚಿನ ಚಿಕ್ಕದಾದ ಹಾಗೂ ಶಕ್ತಿಯುತವಾದ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 600 ನಿಟ್ಸ್ ಬ್ರೈಟ್ನೆಸ್ ನೀಡಲಿದೆ ಎಂದು ಕಂಪನಿ ವರದಿಯಲ್ಲಿ ತಿಳಿಸಿದೆ. ಹಾಗೆಯೇ ಈ ವಾಚ್ನಲ್ಲಿ ನೋಟಿಫಿಕೇಶನ್ ಕೂಡ ಪಡೆಯಬಹುದಾಗಿದೆ ಮತ್ತು ವಾಯ್ಸ್ ಕಂಟ್ರೋಲ್ ಮೂಲಕ ಕೆಲ ಫೀಚರ್ಸ್ಗಳನ್ನು ನಿಯಂತ್ರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ಅನ್ನು 2,999 ರೂ. ಗಳ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ವಾಚ್ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಕ್ಲಾಸಿಕ್ ಸ್ವಿಚ್ ಆವೃತ್ತಿಯು ಕಂದು ಬೆಲ್ಟ್ನ ಸ್ಮಾರ್ಟ್ವಾಚ್ ಹಾಗೂ ಫ್ಲಿಪ್ ಆವೃತ್ತಿಯಲ್ಲಿ ಕಪ್ಪು, ನೀಲಿ ಮತ್ತು ಹಸಿರು ಬೆಲ್ಟ್ನ ಬಣ್ಣಗಳಲ್ಲಿ ಬೌಲ್ಟ್ ರೋವರ್ ಸ್ಮಾರ್ಟ್ವಾಚ್ ಅನ್ನು ಖರೀದಿಸಬಹುದು.
ವಿಶೇಷವೆಂದರೆ, ಈ ಎರಡೂ ಬೆಲ್ಟ್ಗಳನ್ನು ಉಚಿತವಾಗಿ ನೀಡುವುದಾಗಿ ಬೌಲ್ಟ್ ಕಂಪನಿ ತಿಳಿಸಿದೆ. ಇನ್ನು ಗ್ರಾಹಕರು ಈ ಸ್ಮಾರ್ಟ್ವಾಚ್ ಅನ್ನು ಖರೀದಿಸುವುದಾದರೆ ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಮತ್ತು ಜನಪ್ರಿಯ ಇಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.
ಇತರ ಫೀಚರ್ಸ್
ಬೌಲ್ಟ್ ಕಂಪನಿಯ ಈ ಹೊಸ ಸ್ಮಾರ್ಟ್ವಾಚ್ ನಲ್ಲಿ 100 ರೀತಿಯ ಸ್ಪೋರ್ಟ್ಸ್ ಮೋಡ್ ಆಯ್ಕೆಗಳಿವೆ. ಈ ವಾಚ್ನಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ಅನ್ನು ಸಹ ಅಳವಡಿಸಲಾಗಿದೆ. ಇನ್ನು ಇದರಲ್ಲಿ ಹಾರ್ಟ್ಬೀಟ್ ಮಾನಿಟರ್, ನಿದ್ರೆ ಟ್ರ್ಯಾಕ್ ಮಾನಿಟರ್, ಬಿಪಿ ಹೀಗೆ ಹಲವಾರು ಫೀಚರ್ಸ್ಗಳನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 10 ದಿನಗಳವರೆಗೆ ನಿರಂತರವಾಗಿ ಬಳಸಬಹುದಾಗಿದೆ. ಜೊತೆಗೆ ಒಮ್ಮೆ ಫುಲ್ ಚಾರ್ಜ್ ಆಗ್ಬೇಕಾದರೆ 2 ಗಂಟೆ 30 ನಿಮಿಷಗಳು ಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ