• Home
 • »
 • News
 • »
 • tech
 • »
 • Smartwatches: ಭಾರತದ ಮಾರುಕಟ್ಟೆಗೆ ಲಾಂಚ್ ಆಗ್ತಿದೆ ಹೊಸ ಸ್ಮಾರ್ಟ್​​ವಾಚ್! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

Smartwatches: ಭಾರತದ ಮಾರುಕಟ್ಟೆಗೆ ಲಾಂಚ್ ಆಗ್ತಿದೆ ಹೊಸ ಸ್ಮಾರ್ಟ್​​ವಾಚ್! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

ಝೆಬ್ರೋನಿಕ್ಸ್​ ಐಕಾನಿಕ್​ ಲೈಟ್​ ಸ್ಮಾರ್ಟ್​​ವಾಚ್​

ಝೆಬ್ರೋನಿಕ್ಸ್​ ಐಕಾನಿಕ್​ ಲೈಟ್​ ಸ್ಮಾರ್ಟ್​​ವಾಚ್​

ಇದೀಗ ಭಾರತದ ಮಾರುಕಟ್ಟೆಗೆ ಝೆಬ್ರಾನಿಕ್ಸ್​ ಕಂಪನಿಯ ಹೊಸ ಸ್ಮಾರ್ಟ್​​ವಾಚ್​ ಅನ್ನು ಲಾಂಚ್ ಮಾಡಿದೆ. ಝೆಬ್ರಾನಿಕ್ಸ್​ ಕಂಪನಿ ಇದರ ಕ್ವಾಲಿಟಿಯ ಸ್ಪೀಕರ್​, ಹೆಡ್​​ಫೋನ್ಸ್​, ಇಯರ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಝೆಬ್ರಾನಿಕ್ಸ್​ ಐಕಾನಿಕ್​ ಲೈಟ್​ ಎಂಬ ಸ್ಮಾರ್ಟ್​ವಾಚ್ ಅನ್ನು ಬಿಡುಗಡೆ ಮಾಡುತ್ತಿದೆ.

ಮುಂದೆ ಓದಿ ...
 • Share this:

  ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ (Technology Market) ಇತ್ತೀಚೆಗೆ ಭಾರೀ ಅಭಿವೃದ್ಧಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್​​ವಾಚ್​ಗಳು (Smartwatches). ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್​ ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಸ್ಮಾರ್ಟ್​​ವಾಚ್​ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಯಾರ ಕೈ ನೋಡಿದ್ರೂ ಸ್ಮಾರ್ಟ್​​ವಾಚ್​ಗಳೇ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಈ ಸಾಧನದಲ್ಲಿರುವಂತಹ ಫೀಚರ್​ಗಳು (Features) ಅಂತಾನೇ ಹೇಳ್ಬಹುದು. ಇತ್ತೀಚಿನ ಸ್ಮಾರ್ಟ್​​ವಾಚ್​ಗಳು ಮೊಬೈಲ್​ಗಳಂತೆಯೇ ಫೀಚರ್​​ಗಳನ್ನು ಹೊಂದಿದೆ ಎಂದರೆ ತಪ್ಪಾಗದು. ಬ್ಲೂಟೂತ್ ಕಾಲಿಂಗ್​ ಫೀಚರ್ (Bluetooth Calling Feature)​ ಆಗಿರಬಹುದು, ಮೆಸೇಜಿಂಗ್ ಫೀಚರ್​, ಸ್ಪೋರ್ಟ್ಸ್​ ಫೀಚರ್ಸ್​ ಇವೆಲ್ಲವೂ ಗ್ರಾಹಕರನ್ನು ಹೆಚ್ಚು ಗಮನಸೆಳೆದಿದೆ.


  ಇದೀಗ ಭಾರತದ ಮಾರುಕಟ್ಟೆಗೆ ಝೆಬ್ರಾನಿಕ್ಸ್​ ಕಂಪನಿಯ ಹೊಸ ಸ್ಮಾರ್ಟ್​​ವಾಚ್​ ಅನ್ನು ಲಾಂಚ್ ಮಾಡಿದೆ. ಝೆಬ್ರಾನಿಕ್ಸ್​ ಕಂಪನಿ ಇದರ ಕ್ವಾಲಿಟಿಯ ಸ್ಪೀಕರ್​, ಹೆಡ್​​ಫೋನ್ಸ್​, ಇಯರ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಝೆಬ್ರಾನಿಕ್ಸ್​ ಐಕಾನಿಕ್​ ಲೈಟ್​ ಎಂಬ ಸ್ಮಾರ್ಟ್​ವಾಚ್ ಅನ್ನು ಬಿಡುಗಡೆ ಮಾಡುತ್ತಿದೆ.


  ಝೆಬ್ರಾನಿಕ್ಸ್​​ ಐಕಾನಿಕ್​ ಲೈಟ್​ ಸ್ಮಾರ್ಟ್​​ವಾಚ್ ಫೀಚರ್ಸ್


  ಈ ಹೊಸ ಝೆಬ್ರಾನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲ್ಡ್​ 2.5D ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​ಪ್ಲೇ ಆಲ್‌ವೇಸ್‌ ಆನ್‌ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ 10 ಇನ್‌ಬಿಲ್ಟ್‌ ಕನೆಕ್ಟ್​ ಮಾಡಬಹುದಾದ ಹಾಗೂ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ. ಇನ್ನು ಇದರಲ್ಲಿ ಹೃದಯ ಬಡಿತ ಮಾನಿಟರ್, SpO2 ಮಾನಿಟರ್, ರಕ್ತದೊತ್ತಡ ಮಾನಿಟರ್ ಮತ್ತು ನಿದ್ರೆ ಮಾನಿಟರ್ ಅನ್ನು ಕೂಡ ಟ್ರ್ಯಾಕ್​ ಮಾಡುತ್ತದೆ.


  ಇದನ್ನೂ ಓದಿ: ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! ಇಲ್ಲಿದೆ ಕಂಪ್ಲೀಟ್ ಮಾಹಿತಿ


  ಸ್ಪೋರ್ಟ್ಸ್​​ ಫೀಚರ್ಸ್​


  ಇನ್ನು ಈ ಝೆಬ್ರಾನಿಕ್ಸ್​ ಐಕಾನಿಕ್​ ಲೈಟ್​ ಸ್ಮಾರ್ಟ್​ವಾಚ್​ ನಿಮ್ಮ ಕ್ಯಾಲೊರಿ ವಿವರ ಮತ್ತು ನೀವು ಸಂಚರಿಸುವ ಅಂತರವನ್ನು ಟ್ರ್ಯಾಕ್ ಮಾಡುವ ಫೀಚರ್​ ಅನ್ನು ಒಳಗೊಂಡಿದೆ. ಇವೆಲ್ಲದರ ಜೊತೆಗೆ, ದೇಹದ ಉಸಿರಾಟದ ಬಗ್ಗೆಯೂ ಟ್ರ್ಯಾಕ್​ ಮಾಡುತ್ತದೆ. ಇನ್ನು ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, ಝೆಬ್‌ ಫಿಟ್‌ 20 ಆ್ಯಪ್​ ಮೂಲಕ ಇವೆಲ್ಲವನ್ನೂ ಟ್ರ್ಯಾಕ್ ಗಮನಿಸಬಹುದಾಗಿದೆ. ಇದರೊಂದಿಗೆ ಪ್ರಮುಖ ಫೀಚರ್ಸ್‌ ಆದ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿಗೆ ಸಹ ಸಪೋರ್ಟ್​ ಆಗುತ್ತದೆ. ಇನ್ನು ಈ ಸ್ಮಾರ್ಟ್​​ವಾಚ್ IP67 ರೇಟಿಂಗ್ ಅನ್ನು ಹೊಂದಿರುವುದು ಮತ್ತಷ್ಟು ವಿಶೇಷವಾಗಿದೆ.


  ಝೆಬ್ರೋನಿಕ್ಸ್​ ಐಕಾನಿಕ್​ ಲೈಟ್​ ಸ್ಮಾರ್ಟ್​​ವಾಚ್​


  ಬ್ಯಾಟರಿ ಫೀಚರ್ಸ್​


  ಝೆಬ್ರಾನಿಕ್ಸ್​ ಐಕಾನಿಕ್​ ಲೈಟ್​ ಸ್ಮಾರ್ಟ್​​ವಾಚ್​ 250mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಸ್ಮಾರ್ಟ್​ವಾಚ್​ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 5 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಬ್ಯಾಟರಿ ವಿಷಯದಲ್ಲಿ ಈ ಸ್ಮಾರ್ಟ್​​ವಾಚ್‌, ಬೋಟ್‌ ವೇವ್‌ ಎಲೆಕ್ರ್ಟಾ ಅಥವಾ ನಾಯ್ಸ್‌ ಐಕಾನ್‌ 2 ಅನ್ನು ಹೋಲಿಕೆ ಮಾಡಿದರೆ ಇವು 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿವೆ. ಈ ಮೂಲಕ ಪೆಬಲ್ ಫ್ರಾಸ್ಟ್, ಬೋಟ್ ವೇವ್ ಎಲೆಕ್ಟ್ರಾ ಸೇರಿದಂತೆ ಇನ್ನಿತರೆ ವಾಚ್‌ಗಳ ವಿರುದ್ಧ ಈ ವಾಚ್‌ ಇನ್ನಷ್ಟು ಪೈಪೋಟಿ ನೀಡಲಿದೆ ಎಂದು ವರದಿಗಳು ಹೇಳಿವೆ.


  ಬೆಲೆ ಮತ್ತು ಲಭ್ಯತೆ


  ಝೆಬ್ರಾನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 2,999 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ಅನ್ನು ಖರೀದಿ ಮಾಡುವ ಪ್ಲ್ಯಾನ್​ನಲ್ಲಿದವರು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್​​ವಾಚ್​ ಗೋಲ್ಡ್​, ನೀಲಿ, ಕಪ್ಪು ಮತ್ತು ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ಖರೀದಿ ಮಾಡುವ ಅವಕಾಶವಿದೆ.

  Published by:Prajwal B
  First published: