ಇತ್ತೀಚೆಗೆ ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology) ಗ್ಯಾಜೆಟ್ಗಳ (Gadgets) ಮೇಲಿನ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವಂತಹ ಫೀಚರ್ಸ್ ಅಂತಾನೇ ಹೇಳ್ಬಹುದು. ಈ ಗ್ಯಾಜೆಟ್ಗಳ ಬಗ್ಗೆ ಮಾತಾಡುತ್ತಾ ಹೋದಾಗ ಮೊದಲು ನೆನಪಾಗೋದೇ ಸ್ಮಾರ್ಟ್ವಾಚ್ಗಳು. ಸ್ಮಾರ್ಟ್ವಾಚ್ಗಳು ಇತ್ತೀಚಿನ ಕಾಲಮಾನದಲ್ಲಿ ತನ್ನದೇ ಆದ ಒಂದು ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಎಲ್ಲಿ ಹೋದರೂ ಸ್ಮಾರ್ಟ್ವಾಚ್ಗಳದ್ದೇ (Smartwatch) ಹಾವಳಿ. ಹಿಂದೆಲ್ಲಾ ಈ ವಾಚ್ಗಳನ್ನು ಕೇವಲ ಸಮಯ ನೋಡಲು ಬಳಸುತ್ತಿದ್ದರು. ಆದರೆ ಈಗ ಸಮಯದ ಜೊತೆಗೆ, ಆರೋಗ್ಯದ ಕಾಳಜಿಯನ್ನು ಈ ಸ್ಮಾರ್ಟ್ವಾಚ್ನಲ್ಲಿ ನೋಡಬಹುದಾಗಿದೆ. ಅದರಲ್ಲು ಜನಪ್ರಿಯ ಕಂಪನಿಗಳಲ್ಲಿ ಒಂದಾದ ನಾಯ್ಸ್ ಕಂಪೆನಿ (Noise Company) ಇದೀಗ ಮಾರುಕಟ್ಟೆಗೆ ಹೊಸ ಸ್ಮಾರ್ಟ್ವಾಚ್ ಅನ್ನು ಲಾಂಚ್ ಮಾಡಿದೆ.
ಸ್ಮಾರ್ಟ್ವಾಚ್ ಕಂಪೆನಿಗಳಲ್ಲಿ ಒಂದಾದ ನಾಯ್ಸ್ ಕಂಪನಿ ಇದೀಗ ಹೊಸ ನಾಯ್ಸ್ಫಿಟ್ ಟ್ವಿಸ್ಟ್ ಸ್ಮಾರ್ಟ್ವಾಚ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್ಗಳನ್ನು ಇದು ಒಳಗೊಂಡಿದೆ.
ಡಿಸ್ಪ್ಲೇ ವಿನ್ಯಾಸ ಹೇಗಿದೆ?
ನಾಯ್ಸ್ಫಿಟ್ ಟ್ವಿಸ್ಟ್ ಸ್ಮಾರ್ಟ್ವಾಚ್ 1.38 ಇಂಚಿನ ಟಿಎಫ್ಟಿ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 550 ನಿಟ್ಸ್ ಬ್ರೈಟ್ನೆಸ್ ಅನ್ನು ನೀಡಲಿದೆ. ಇದು 100 ಕ್ಕೂ ಹೆಚ್ಚು ಕಸ್ಟಮೈಸ್ಡ್ ವಾಚ್ ಫೇಸ್ಗಳೊಂದಿಗೆ ಬರುತ್ತದೆ. ಇನ್ನು ವಿಶೇಷವಾಗಿ ಈ ಸ್ಮಾರ್ಟ್ವಾಚ್ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, ವೃತ್ತಾಕಾರದ ಪ್ಯಾನೆಲ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್ವಾಚ್ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ರೇಟೆಡ್ನೊಂದಿಗೆ ರಚಿಸಲ್ಪಟ್ಟಿದೆ.
ಇದನ್ನೂ ಓದಿ: ಕೇವಲ 1 ಸಾವಿರ ಪಾವತಿಸಿದರೆ 55 ಇಂಚಿನ ಸ್ಮಾರ್ಟ್ಟಿವಿ ಲಭ್ಯ! 29 ಸಾವಿರ ರೂಪಾಯಿ ರಿಯಾಯಿತಿ
ಇತರೆ ಫೀಚರ್ಸ್
ನಾಯ್ಸ್ಫಿಟ್ ಟ್ವಿಸ್ಟ್ ಸ್ಮಾರ್ಟ್ವಾಚ್ನಲ್ಲಿ ಇನ್ ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಟೆಕ್ನಾಲಜಿ ಮೂಲಕ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಕೂಡ ಪಡೆಯಬಹುದಾಗಿದೆ. ಈ ಫೀಚರ್ ಮೂಲಕ ಕಾಲ್ ರಿಸೀವ್ ಮಾಡಲು ಮತ್ತು ಕಟ್ ಮಾಡಲು ಅವಕಾಶವಿರುತ್ತದೆ. ಇನ್ನು ಸ್ಮಾರ್ಟ್ವಾಚ್ನಲ್ಲಿ ಹಲವು ಅನುಕೂಲಕರ ಫೀಚರ್ಸ್ಗಳನ್ನು ಸಹ ನೀಡಲಾಗಿದೆ. ಇದರಲ್ಲಿ ಇನ್ಬಿಲ್ಟ್ ಕ್ಯಾಲ್ಕುಲೇಟರ್, ನೋಟಿಫಿಕೇಶನ್ ಡಿಸ್ಪ್ಲೇ , ವೆದರ್ ಮತ್ತು ಸ್ಟಾಪ್ ಅಪ್ಡೇಟ್, ಫೋಟೋಸ್ ಮತ್ತು ವೀಡಿಯೊಗಳಿಗಾಗಿ ಕ್ಯಾಮರಾಗೆ ರಿಮೋಟ್ ಪ್ರವೇಶ, ಮ್ಯೂಸಿಕ್ ಕಂಟ್ರೋಲ್ ಫೀಚರ್ಸ್ ಸೇರಿವೆ.
ಬ್ಯಾಟರಿ ಫೀಚರ್ಸ್
ನಾಯ್ಸ್ಫಿಟ್ ಟ್ವಿಸ್ಟ್ ಸ್ಮಾರ್ಟ್ವಾಚ್ನ ಬ್ಯಾಟರಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ. ಇದು ಬ್ಲೂಟೂತ್ ಕರೆಗಾಗಿ ಟ್ರೂ ಸಿಂಕ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಸ್ಪೀಡ್ ಕನೆಕ್ಟಿವಿಟಿ, ನೆಟ್ವರ್ಕ್ಗಳು ಮತ್ತು ಕಡಿಮೆ ವಿದ್ಯುತ್ ಬಳಕೆಯನ್ನು ನೀಡುತ್ತದೆ. ಇದಲ್ಲದೆ ಸ್ಮಾರ್ಟ್ವಾಚ್ ಸ್ಮಾರ್ಟ್ ಡಿಎನ್ಡಿ, ರಿಮೈಂಡರ್ ಫೀಚರ್ಸ್ಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಕಾಲ್ ಹಿಸ್ಟರಿ ಮತ್ತು ಡಯಲ್ ಪ್ಯಾಡ್ ಅನ್ನು ಓಪನ್ ಮಾಡಬಹುದು. ಜೊತೆಗೆ ಈ ಡಿವೈಸ್ನಲ್ಲಿ ಹೃದಯ ಬಡಿತದ ಮಾನಿಟರಿಂಗ್, SpO2 ಸೆನ್ಸಿಂಗ್, ನಿದ್ರೆಯ ಮಾದರಿಗಳು ಮತ್ತು ಬಿಪಿ ಮಾನಿಟರಿಂಗ್ ಸೇರಿದಂತೆ 100ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್ಗಳನ್ನು ನೀಡಲಿದೆ.
ಬೆಲೆ ಮತ್ತು ಲಭ್ಯತೆ
ನಾಯ್ಸ್ಫಿಟ್ ಟ್ವಿಸ್ಟ್ ಸ್ಮಾರ್ಟ್ವಾಚ್ ಭಾರತದಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ವಾಚ್ನ ಬೆಲೆ ಕೇವಲ 1,999 ರೂಪಾಯಿ ಆಗಿರುತ್ತದೆ. ಇನ್ನು ಇದೇ ಜನವರಿ 12 ರಿಂದ ನಾಯ್ಸ್ ಕಂಪೆನಿಯ ಇ ಸ್ಟೋರ್ ಮತ್ತು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್ವಾಚ್ ಗ್ರಾಹಕರಿಗೆ ಟ್ವಿಸ್ಟ್ ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ರೋಸ್ ಪಿಂಕ್, ಸ್ಪೇಸ್ ಬ್ಲೂ ಮತ್ತು ಗೋಲ್ಡ್ ವೈನ್ ಬಣ್ಣಗಳಲ್ಲಿ ಮಾರುಕಟ್ಟಯಲ್ಲಿ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ