• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Boat Smartwatch: ಬೋಟ್​ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ

Boat Smartwatch: ಬೋಟ್​ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ

ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್​​ವಾಚ್

ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್​​ವಾಚ್

ಮ್ಯೂಸಿಕ್​ ಆ್ಯಕ್ಸೆಸರೀಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿರುವ ಬೋಟ್​ ಕಂಪೆನಿ ಇದೀಗ ಮಾರುಕಟ್ಟೆಗೆ ಸ್ಮಾರ್ಟ್​​ವಾಚ್ ​ಒಂದನ್ನು ಪರಿಚಯಿಸಲು ಸಜ್ಜಾಗಿ ನಿಂತಿದೆ. ಇದು ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಎಂಬ ಹೆಸರನ್ನು ಹೊಂದಿದ್ದು ಹಲವಾರು ಫೀಚರ್ಸ್​ಗಳನ್ನು ಇದು ಹೊಂದಿದೆ.

ಮುಂದೆ ಓದಿ ...
 • Share this:

  ಸ್ಮಾರ್ಟ್​ವಾಚ್​​ಗಳು (Smartwatch) ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಹಿಂದೆಲ್ಲಾ ಕೇವಲ ಸಮಯವನ್ನು ನೋಡಲೆಂದೇ ವಾಚ್​ಗಳನ್ನು ಬಳಸುತ್ತಿದ್ದರು. ಆದರೆ ಈಗ ಸ್ಮಾರ್ಟ್​​ವಾಚ್​ಗಳೇ ಒಂದು ಟ್ರೆಂಡ್ (Trend) ಆಗಿಬಿಟ್ಟಿದೆ. ಆದರೆ ಸ್ಮಾರ್ಟ್​ವಾಚ್​ಗಳಿಗಾಗಿಯೇ ಕೆಲವೊಂದು ಕಂಪೆನಿಗಳು ಸಹ ಹುಟ್ಟಿಕೊಂಡಿದೆ. ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾಗಿರುವ ಬೋಟ್​ ಕಂಪೆನಿ ಇದೀಗ ಹೊಸ ಸ್ಮಾರ್ಟ್​​ವಾಚ್​ ಒಂದನ್ನು ಪರಿಚಯಿಸಿದೆ. ಬೋಟ್​ ಕಂಪೆನಿ ಮ್ಯೂಸಿಕ್ ಆ್ಯಕ್ಸೆಸರೀಸ್​ಗಳನ್ನು ಮಾರುಕಟ್ಟೆಗೆ ಪricರಯಿಸುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ಇದೀಗ ಸ್ಮಾರ್ಟ್​ವಾಚ್​ ವಲಯದಲ್ಲೂ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಬೋಟ್​ ಕಂಪೆನಿಯ (Boat Company) ಈ ಸ್ಮಾರ್ಟ್​​ವಾಚ್​ ಉತ್ತಮ ಡಿಸ್​​ಪ್ಲೇ, ಬ್ಯಾಟರಿ ಫೀಚರ್ಸ್​ಗಳನ್ನು ಸಹ ಹೊಂದಿದೆ.


  ಮ್ಯೂಸಿಕ್​ ಆ್ಯಕ್ಸೆಸರೀಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದಿರುವ ಬೋಟ್​ ಕಂಪೆನಿ ಇದೀಗ ಮಾರುಕಟ್ಟೆಗೆ ಸ್ಮಾರ್ಟ್​​ವಾಚ್ ​ಒಂದನ್ನು ಪರಿಚಯಿಸಲು ಸಜ್ಜಾಗಿ ನಿಂತಿದೆ. ಇದು ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಎಂಬ ಹೆಸರನ್ನು ಹೊಂದಿದ್ದು ಹಲವಾರು ಫೀಚರ್ಸ್​ಗಳನ್ನು ಇದು ಹೊಂದಿದೆ.


  ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್​​ವಾಚ್ ಡಿಸ್​ಪ್ಲೇ ವಿನ್ಯಾಸ


  ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್‌ 1.83 ಇಂಚಿನ ಹೆಚ್​​ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 550 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ 2.5D ಕರ್ವ್‌ ಫೀಚರ್​​ ಅನ್ನು ಹೊಂದಿದ್ದು ಸ್ಮಾರ್ಟ್​​ವಾಚ್​ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದೆ.


  ಇದನ್ನೂ ಓದಿ: ಇನ್ಮುಂದೆ ಐಫೋನ್​ಗಳು ಗೋಲ್ಡ್​ ಬಣ್ಣದಲ್ಲೂ ಖರೀದಿಗೆ ಲಭ್ಯ! ಕಾರಣವೇನು ಗೊತ್ತಾ?


  ಬ್ಲೂಟೂತ್​ ಕಾಲಿಂಗ್ ಫೀಚರ್​


  ಇನ್ನು ಬೋಟ್​ ಕಂಪೆನಿಯ ಈ ಹೊಸ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರಿಗೆ ಬರುವಂತಹ ಎಲ್ಲಾ ಕರೆಗಳನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಲ್ಲಿ 10 ಕಾಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಲು ಅನುಮತಿಸಲಿದೆ. ಈ ಸ್ಮಾರ್ಟ್ ವಾಚ್ ಮೈಕ್ರೊಫೋನ್ ಮತ್ತು ಸ್ಪೀಕರ್‌ನೊಂದಿಗೆ ಬರಲಿದೆ.


  ನೂರಕ್ಕೂ ಹೆಚ್ಚು ಕ್ಲೌಡ್​ ಫೇಸ್​


  ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್‌ ಸ್ಲೀಪಿಂಗ್‌ ಮತ್ತು ಬ್ಲಡ್‌ ಆಕ್ಸಿಜನ್‌ ಮಾನಿಟರ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ 100 ಕ್ಕೂ ಹೆಚ್ಚು ಕ್ಲೌಡ್ ವಾಚ್ ಫೇಸ್‌ಗಳನ್ನು ಹೊಂದಿದ್ದು, ವಾಟರ್‌ ಪ್ರೂಫ್‌ಗಾಗಿ IP68 ರೇಟಿಂಗ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ವಾಚ್ 240mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10 ದಿನಗಳ ಬ್ಯಾಟರಿ ಬ್ಯಾಕಪ್​ ಅನ್ನು ನೀಡಲಿದೆ. ಇದನ್ನು ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.


  ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್​​ವಾಚ್


  ಬೆಲೆ ಮತ್ತು ಲಭ್ಯತೆ


  ಭಾರತದಲ್ಲಿ ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್ ವಾಚ್ 1,799 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್‌ ಆಕ್ಟಿವ್‌ ಬ್ಲಾಕ್‌, ಚೆರ್ರಿ ಬ್ಲಾಸಮ್ ಮತ್ತು ಡೀಪ್ ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್ ಈಗ ಫ್ಲಿಪ್‌ಕಾರ್ಟ್ ಮತ್ತು ಕಂಪೆನಿಯ ಅಧಿಕೃತ ವೆಬ್​ಸೈಟ್​ನಲ್ಲಿ ಖರೀದಿಗೆ ಲಭ್ಯವಿದೆ.
  ಬೋಟ್​ ಸ್ಟಾರ್ಮ್​ ಪ್ರೋ ಕಾಲ್ ಸ್ಮಾರ್ಟ್​​​ವಾಚ್​


  ಇನ್ನು ಬೋಟ್‌ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಹೊಸ ಬೋಟ್‌ ಸ್ಟಾರ್ಮ್‌ ಪ್ರೋ ಕಾಲ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದು 100 ಕ್ಲೌಡ್-ಆಧಾರಿತ ವಾಚ್‌ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಫ್ಲೂಯಿಡ್ UI ಮತ್ತು ASAP ಚಾರ್ಜ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ದಿನವಿಡೀ ನಿಮ್ಮ ಆಕ್ಟಿವಿಟಿಗಳನ್ನು ಟ್ರ್ಯಾಕ್‌ ಮಾಡುವ 700 ಕ್ಕೂ ಹೆಚ್ಚು ಆಕ್ಟಿವ್‌ ಮೋಡ್‌ಗಳನ್ನು ಹೊಂದಿದೆ

  Published by:Prajwal B
  First published: