ಇತ್ತೀಚೆಗೆ ಸ್ಮಾರ್ಟ್ಫೋನ್ (Smartphone), ಸ್ಮಾರ್ಟ್ವಾಚ್, ಹೆಡ್ಫೋನ್ಗಳಂತಹ ಸ್ಮಾರ್ಟ್ ಡಿವೈಸ್ಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತಿವೆ. ಈ ಎಲ್ಲದರ ಮಧ್ಯೆ ಸ್ಮಾರ್ಟ್‌ಟಿವಿ ಸಹ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನವಾಗಿದೆ. ಹಿಂದಿನ ಟಿವಿಗಳೆಲ್ಲವೂ ಸಾಮಾನ್ಯವಾಗಿ ಸೀರಿಯಲ್ (Serial), ಸಿನಿಮಾ, ನ್ಯೂಸ್ನಂತಹ ಚಾನೆಲ್ಗಳನ್ನು ಮಾತ್ರ ನೀಡುತ್ತಿತ್ತು. ಆದರೆ ಈಗಿನ ಸ್ಮಾರ್ಟ್ಟಿವಿಗಳು, ಮೊಬೈಲ್ನಂತೆಯೇ ಫೀಚರ್ಸ್ ಅನ್ನು ಹೊಂದಿದೆ. ಈ ಫೀಚರ್ಸ್ಗಳೇ ಈಗ ಹೆಚ್ಚಿನ ಜನರನ್ನು ಆಕರ್ಷಿಸಿದೆ ಎಂದು ಹೇಳ್ಬಹುದು. ಈ ಸ್ಮಾರ್ಟ್ಟಿವಿಗಳು ಕೈಗೆಟಕುವ ದರದಲ್ಲಿ ಉತ್ತಮ ಫೀಚರ್ಸ್ಗಳನ್ನು ಹೊಂದಿಕೊಂಡು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಜನಪ್ರಿಯ ಸ್ಮಾರ್ಟ್‌ಟಿವಿ (SmartTv) ಕಂಪೆನಿಯಾಗಿರುವ ಬ್ಲೂಪಂಕ್ಟ್ (Bluepunkt Tv) ಇದೀಗ ಹೊಸ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.
ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಬ್ಲೂಪಂಕ್ಟ್ ಟಿವಿ ಲಾಂಚ್ ಮಾಡಲಾಗಿದ್ದು, ನೀವೇನಾದರೂ 10,000 ರೂ. ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಲು ಮುಂದಾದರೆ ಈ ಬ್ಲೂಪಂಕ್ಟ್ ಟಿವಿಯನ್ನು ಕೊಂಡುಕೊಳ್ಳಬಹುದಾಗಿದೆ.
ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ ವಿನ್ಯಾಸ
ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ 24 ಇಂಚಿನ ಹೆಚ್ಡಿ ರೆಡಿ ಡಿಸ್‌ಪ್ಲೇ ಹೊಂದಿದ್ದು, 300ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಫೀಚರ್ ಮೂಲಕ ಯಾವುದೇ, ಎಷ್ಟೇ ಬಿಸಿಲಿನ ಸಂದರ್ಭದಲ್ಲೂ ವೀಕ್ಷಣೆ ಮಾಡಬಹುದಾಗಿದೆ. ನೋಡುಗರಿಗೆ ಉತ್ತಮ ಅನುಭವವನ್ನು ಇದು ನೀಡುತ್ತದೆ.
ಇದನ್ನೂ ಓದಿ: ವಾಟ್ಸಾಪ್ಗೆ ಟಕ್ಕರ್ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್ ಪರಿಚಯಿಸಿದ ಕಂಪೆನಿ
ಇದರೊಂದಿಗೆ ಈ ಸ್ಮಾರ್ಟ್‌ಟಿವಿ 20 ವ್ಯಾಟ್ ಸೌಂಡ್ ಔಟ್‌ಪುಟ್ ನೀಡಲಿದ್ದು, ಇದಕ್ಕಾಗಿ ಎರಡು ಬಾಟಮ್-ಫೈರಿಂಗ್ ಸ್ಪೀಕರ್‌ಗಳು ಮತ್ತು ತಲ್ಲೀನಗೊಳಿಸುವ ಆಡಿಯೋ ಅನುಭವಕ್ಕಾಗಿ ಸರೌಂಡ್ ಸೌಂಡ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಹಾಗೆಯೇ ಈ ಟಿವಿ ಏರ್ ಸ್ಲಿಮ್ ವಿನ್ಯಾಸವನ್ನು ಪಡೆದಕೊಂಡಿದ್ದು, ಈ ಮೂಲಕ ಅತ್ಯುತ್ತಮ ನೋಟವನ್ನು ಪಡೆದುಕೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ
ಈ ಹೊಸ ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ A354 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 2.4 GHz ವೈಫೈ ವೇಗವು ಈ ಟಿವಿಯ ಕಾರ್ಯಕ್ಷಮತೆಯನ್ನು ಹೆಚ್ಚಿಗೆ ಮಾಡಿದೆ. ಇದರ ಜೊತೆಗೆ 512 ಎಮ್ಬಿ ರ್‍ಯಾಮ್ ಹಾಗೂ 4 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿಕೊಂಡಿದೆ.
ಇನ್ನು ಚಿತ್ರದ ಗುಣಮಟ್ಟಕ್ಕಾಗಿ ಡಿಜಿಟಲ್ ನಾಯ್ಸ್ ಫಿಲ್ಟರ್ ಮತ್ತು A+ ಪ್ಯಾನೆಲ್ ಆಯ್ಕೆ ಇದರಲ್ಲಿದ್ದು, ಟಿವಿಯು ಪಿಸಿಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಬಹು ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ಯುಟ್ಯೂಬ್ ಸೇರಿದಂತೆ ರಿಮೋಟ್‌ನಲ್ಲಿ ಮೀಸಲಾದ ಶಾರ್ಟ್‌ಕಟ್ ಕೀಗಳ ಆಯ್ಕೆ ಇರುವುದರಿಂದ ಬಳಕೆದಾರರಿಗೆ ಬಳಕೆ ಮಾಡಲು ಇನ್ನೂ ಸಹಕಾರಿಯಾಗುತ್ತದೆ.
ಓಟಿಟಿ ಪ್ಲಾಟ್ಫಾರ್ಮ್ಸ್ ಲಭ್ಯ
ಈ ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ ಸ್ಮಾರ್ಟ್ ಪ್ರೀಮಿಯಂ ಟಿವಿ, ಪ್ರೈಮ್ ವಿಡಿಯೋ, ಝೀ5, ವೂಟ್ ಹಾಗೂ ಸೋನಿ ಲೀವ್ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಸುಲಭ ಚಂದಾದಾರಿಕೆ ಪ್ರವೇಶವನ್ನು ಪಡೆಯಬಹುದಾಗಿದೆ. ಹಾಗಿದ್ರೆ ಉತ್ತಮ ಗುಣಮಟ್ಟದಲ್ಲಿ, ಬಹಳಷ್ಟು ಮನರಂಜನೆ ನೀಡುವ ಸ್ಮಾರ್ಟ್‌ಟಿವಿಯನ್ನು ಪಡೆಯಬೇಕಾದರೆ ಈ ಸ್ಮಾರ್ಟ್‌ಟಿವಿ ಉತ್ತಮವಾಗಿದೆ.
ಬೆಲೆ ಮತ್ತು ಲಭ್ಯತೆ
ಬ್ಲೂಪಂಕ್ಟ್ ಈ ಸ್ಮಾರ್ಟ್‌ಟಿವಿಯನ್ನು ಅತ್ಯಂತ ಅಗ್ಗದ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಸ್ಮಾರ್ಟ್ಟಿವಿಗೆ 7,499 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದರೆ ಆಫರ್ ಮೂಲಕ ಇದನ್ನು 6,499 ರೂಪಾಯಿಗೆ ಖರೀದಿ ಮಾಡಬಹುದು ಎಂದು ಕಂಪೆನಿ ಹೇಳಿದೆ. ಇನ್ನು ಈ ಆಫರ್ ಸೇಲ್ ಇದೇ ಫೆಬ್ರವರಿ 7 ರಿಂದ ಪ್ರಾರಂಭವಾಗಿದ್ದು, ಇದೇ ಫೆಬ್ರವರಿ 12 ರವರೆಗೆ ಮಾತ್ರ ಲಭ್ಯವಿರುತ್ತದೆ. ಅಂದರೆ ಇಂದಿನಿಂದ ಕೇವಲ 2 ದಿನಗಳವರೆಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ