ಐಫೋನ್ಗಳು (IPhones) ಪ್ರತೀ ಬಾರಿ ಬಿಡುಗಡೆಯಾದಾಗ ಮಾರುಕಟ್ಟೆಯಲ್ಲಿ ಏನಾದರೊಂದು ಸಂಚಲನ ಮೂಡಿಸೋದು ಗ್ಯಾರಂಟಿ. ಅದೇ ರೀತಿ ಇತ್ತೀಚೆಗೆ ಮಾರುಕಟ್ಟೆಗೆ ಬಹಳಷ್ಟು ನಕಲಿ ಐಫೋನ್ಗಳು ಬರುತ್ತಿದೆ ಎಂಬ ಸುದ್ದಿಯೂ ಹಬ್ಬಿದೆ. ಹೌದು ಇದು ಖಂಡಿತವಾಗಿಯೂ ನಿಜ. ಆದರೆ ಕೆಲವೊಂದು ಕಂಪೆನಿಗಳು (Mobile Company) ಈಗ ಐಫೋನ್ನಂತೆ ಫೀಚರ್ಸ್ಗಳನ್ನು ಹೋಲುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದ್ರಲ್ಲೂ ಯಾವುದೇ ಸಾಧನಗಳನ್ನು ನಕಲು ಮಾಡುವಂತಹ ಸಾಮರ್ಥ್ಯ ಇದ್ದರೆ ಅದು ಚೀನಿಯರಿಗೆ ಮಾತ್ರ ಸಾಧ್ಯ. ಯಾಕೆಂದರೆ ಅವರು ಈ ಕಾರ್ಯಗಳಲ್ಲಿ ಎತ್ತಿದ ಕೈ. ಇದೀಗ ಐಫೋನ್ಗಳಿಗೆ ಟಕ್ಕರ್ ನೀಡಲು ಹೊಸ ಸ್ಮಾರ್ಟ್ಫೋನ್ (Smartphone) ಒಂದು ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಮಾತ್ರ ಐಫೋನ್ನಂತೆಯೇ ಫೀಚರ್ಸ್ಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇದೀಗ ಲೇಎಕೋ ಎಂಬ ಕಂಪೆನಿ ಐಫೋನ್ಗಳನ್ನೇ ಹೋಲುವ ಸ್ಮಾರ್ಟ್ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದ್ದು ಐಫೋನ್ ಮಾರುಕಟ್ಟೆಗೆ ಸ್ಪರ್ಧೆ ನೀಡಲು ಸಜ್ಜಾಗಿದೆ. ಹಾಗಿದ್ರೆ ಲೇಎಕೋ ಖಮಪೆನಿ ಬಿಡುಗಡೆ ಮಾಡಿರುವ ಆ ಸ್ಮಾರ್ಟ್ಫೋನ್ ಯಾವುದು? ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ಈ ಲೇಕನದಲ್ಲಿ ತಿಳಿಯಿರಿ.
ಲೇಎಕೋ ಬ್ರಾಂಡ್ (LeEco Brand)
ಇದೀಗ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲೇಎಕೋ ಎಂಬ ಸ್ಮಾರ್ಟ್ಫೋನ್ ಕಂಪೆನಿ ಹೊಸ ಮೊಬೈಲ್ ಅನ್ನು ಪರಿಚಯಿಸಿದೆ. ಇದಕ್ಕೆ ಲೇಎಕೋ ಎಸ್1 ಪ್ರೋ ಎಂದು ಹೆಸರಿಡಲಾಗಿದೆ. ಈ ಸ್ಮಾರ್ಟ್ಫೋನ್ ಒಂದು ರೀತಿಯಲ್ಲಿ ನೋಡುವುದಾದರೆ ಇದು ಐಫೋನ್ 14 ಪ್ರೋ ಸ್ಮಾರ್ಟ್ಫೋನ್ ಅನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಐಫೋನ್ಗಳಿಗೆ ಪೈಪೋಟಿ ನೀಡುವುದು ಖಚಿತವಾಗಿದೆ.
ಇದನ್ನೂ ಓದಿ: ಬಿಡುಗಡೆಗೂ ಮೊದಲೇ ಲೀಕ್ ಆಯ್ತು ಒಪ್ಪೋ ಫೈಂಡ್ ಎಕ್ಸ್ 6 ಸ್ಮಾರ್ಟ್ಫೋನ್ ಫೀಚರ್ಸ್!
ಫೀಚರ್ಸ್ ಹೇಗಿದೆ?
ಲೇಎಕೋ ಕಂಪೆನಿಯ ಹೊಸ ಸ್ಮಾರ್ಟ್ಫೋನ್ನ ಡಿಸ್ಪ್ಲೇ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.5 ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದ್ದು, ಇದು 720x1600px ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ನೀಡುತ್ತಿರುವುದು ವಿಶೇಷವಾಗಿದೆ. ಇದೇ ರೀತಿಯಲ್ಲಿ ಆ್ಯಪಲ್ ಐಫೋನ್ 14 ಪ್ರೋ ಫೋನ್ ಸಹ 6.1 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಆದರೆ ಈ ಫೋನ್ 4ಕೆ ರೆಸಲ್ಯೂಶನ್ ಸಾಮರ್ಥ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತದೆ. ಜೊತೆಗೆ ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ನೀಡಲಾಗಿದೆ.
ಕ್ಯಾಮೆರಾ ಫೀಚರ್ಸ್
ಮುಖ್ಯವಾಗಿ ಲೇಎಕೋ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ನೋಡಿದ್ರೆ ಆ್ಯಪಲ್ ಫೋನ್ಗಳಲ್ಲಿರುವಂತೆಯೇ ಅನಿಸುತ್ತದೆ. ಆ್ಯಪಲ್ ಐಫೋನ್ಗಳು ಕ್ಯಾಮೆರಾ, ಪ್ರೊಸೆಸರ್ಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಹೊಸ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?‘
ಈ ಲೋಎಕೋ ಕಂಪೆನಿಯ ಹೊಸ ಸ್ಮಾರ್ಟ್ಫೋನ್ 12nm ಜ್ಹಂರುಯ್ (Zhanrui) T7510 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿದೆ. ಇನದನು ಈ ಸ್ಮಾರ್ಟ್ಫೋನ್ 8ಜಿಬಿ ರ್ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಲಭ್ಯ ಇರಲಿದೆ.
ಬ್ಯಾಟರಿ ಫೀಚರ್ಸ್
ಈ ಲೇಎಕೋ ಎಸ್1 ಪ್ರೋ (LeEco S1 Pro) ಸ್ಮಾರ್ಟ್ಫೋನ್ 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಆದರೆ ಆ್ಯಪಲ್ ಐಫೋನ್ 14 ಪ್ರೋ ಸ್ಮಾರ್ಟ್ಫೋನ್ ಇದಕ್ಕಿಂತ 10 ಪಟ್ಟು ಹೆಚ್ಚು ಹೊಂದಿದ್ದು, 20W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಲೇಎಕೋ ಎಸ್1 ಪ್ರೋ ಸ್ಮಾರ್ಟ್ಫೋನ್ ಗೆ ಚೀನಾದಲ್ಲಿ CNY 899 ಅಂದರೆ ಭಾರತದಲ್ಲಿ ಸುಮಾರು 10,900 ರೂಪಾಯಿ ಎಂದು ಬೆಲೆ ನಿಗದಿ ಮಾಡಲಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದು ಆ್ಯಪಲ್ ಫೋನ್ನಂತೆ ಕಾಣಿಸುವ ಈ ಫೋನ್ನ ಬೆಲೆ 10,900 ರೂ.ಗಳಾದರೆ ಐಫೋನ್ 14 ಪ್ರೊ ಬೆಲೆ 1,29,900 ರೂ. ಇದೆ . ಅಂದರೆ ಅಗ್ಗದ ದರದಲ್ಲಿ ನೀವು ಐಫೋನ್ ಶೈಲಿಯ ಫೋನ್ ಅನ್ನು ಸುಲಭದಲ್ಲಿ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ