• Home
 • »
 • News
 • »
 • tech
 • »
 • Lenovo Yoga 9i: ಲೆನೋವೋ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಹೊಸ ಲ್ಯಾಪ್​ಟಾಪ್​! ಬೆಲೆ ಎಷ್ಟು?

Lenovo Yoga 9i: ಲೆನೋವೋ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಹೊಸ ಲ್ಯಾಪ್​ಟಾಪ್​! ಬೆಲೆ ಎಷ್ಟು?

ಲೆನೋವೋ ಯೋಗ 9ಐ ಲ್ಯಾಪ್​ಟಾಪ್

ಲೆನೋವೋ ಯೋಗ 9ಐ ಲ್ಯಾಪ್​ಟಾಪ್

ಜನಪ್ರಿಯ ಲ್ಯಾಪ್​ಟಾಪ್​ ಕಂಪೆನಿಗಳಲ್ಲಿ ಒಂದಾದ ಲೆನೋವೋ ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್​ಟಾಪ್​ ಒಂದನ್ನು ಲಾಂಚ್ ಮಾಡಿದೆ. ಇದನ್ನು ಲೆನೋವೋ ಯೋಗಾ 9ಐ ಎಂದು ಹೆಸರಿಸಲಾಗಿದ್ದು, ಇದು ಈಗಿನ 13ನೇ ಜೆನ್ ಮಾದರಿಯ​ ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ.

 • Share this:

  ಲ್ಯಾಪ್​ಟಾಪ್​ಗಳು (Laptops) ಇತ್ತೀಚಿನ ಕಾಲಮಾನದಲ್ಲಿ ಅಗತ್ಯ ಸಾಧನವಾಗಿಬಿಟ್ಟಿದೆ. ಯಾವುದೇ ಕಚೇರಿ ಕೆಲಸವಾಗಿದ್ದರೂ, ಗೇಮರ್​ಗಳಿಗೆ (Gamers) ಲ್ಯಾಪ್​​ಟಾಪ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಆದರೆ ಈ ಲ್ಯಾಪ್​ಟಾಪ್​ಗಳು ಯಾಕೆ ಇಷ್ಟು ಅಭಿವೃದ್ಧಿಯಾಗಿದೆ ಎಂದು ಕೇಳುವುದಾದರೆ ಇದರ ಗಾತ್ರವೇ ಕಾರಣ ಅಂತಾನೂ ಹೇಳ್ಬಹುದು. ಸಣ್ಣ ಗಾತ್ರದಲ್ಲಿರುವಂತಹ ಈ ಸಾಧನವನ್ನು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಇದರಿಂದ ಎಲ್ಲಿ ಬೇಕಾದರೂ ಹೋಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಮಾರುಕಟ್ಟೆಗೆ ಇತ್ತೀಚೆಗೆ ಹೊಸ ಹೊಸ ಲ್ಯಾಪ್​ಟಾಪ್​ಗಳು ಅನಾವರಣವಾಗುತ್ತಿದ್ದು, ಇದೀಗ ಜನಪ್ರಿಯ ಲೆನೋವೋ ಕಂಪೆನಿಯಿಂದ (Lenovo Company) ಮಾರುಕಟ್ಟೆಗೆ ಹೊಸ ಲ್ಯಾಪ್​ಟಾಪ್​​ ಒಂದು ಎಂಟ್ರಿ ನೀಡಲು ರೆಡಿಯಾಗಿದೆ. 


  ಜನಪ್ರಿಯ ಲ್ಯಾಪ್​ಟಾಪ್​ ಕಂಪೆನಿಗಳಲ್ಲಿ ಒಂದಾದ ಲೆನೋವೋ ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್​ಟಾಪ್​ ಒಂದನ್ನು ಲಾಂಚ್ ಮಾಡಿದೆ. ಇದನ್ನು ಲೆನೋವೋ ಯೋಗ 9ಐ ಎಂದು ಹೆಸರಿಸಲಾಗಿದ್ದು, ಇದು ಈಗಿನ 13ನೇ ಜೆನ್ ಮಾದರಿಯ​ ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ.


  ಲೆನೋವೋ ಯೋಗ 9ಐ ಲ್ಯಾಪ್​ಟಾಪ್ ಫೀಚರ್ಸ್​


  ಲೆನೋವೋ ಯೋಗ 9ಐ 10 ಪಾಯಿಂಟ್ ಮಲ್ಟಿ ಟಚ್ ಸಪೋರ್ಟ್‌ನೊಂದಿಗೆ 14 ಇಂಚಿನ 4ಕೆ ಓಎಲ್​​ಇಡಿ ಪ್ಯೂರ್‌ಸೈಟ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ ಹೆಚ್​​ಡಿಆರ್​ 500 ಮತ್ತು ಡಾಲ್ಬಿ ವಿಷನ್ ಜೊತೆಗೆ 100 ಪ್ರತಿಶತ DCI-P3 ಬಣ್ಣದ ಕವರೇಜ್ ಅನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
  ಪ್ರೊಸೆಸರ್ ಸಾಮರ್ಥ್ಯ


  ಲೆನೋವೋ ಯೋಗ 9ಐ ನಾಲ್ಕು ಕಾರ್ಯಕ್ಷಮತೆ ಪಿ ಕೋರ್‌ಗಳು ಮತ್ತು ಎಂಟು ದಕ್ಷತೆ ಇ ಕೋರ್‌ಗಳೊಂದಿಗೆ 13 ನೇ ಜೆನ್ ಇಂಟೆಲ್‌ ಕೋರ್‌ i7-1360P ಸಿಪಿಯುನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಸಂಯೋಜಿತ ಇಂಟೆಲ್‌ ಐರಿಸ್‌ ಎಕ್ಸ್‌ಇ ಗ್ರಾಫಿಕ್ಸ್ ಅನ್ನು ಈ ಪ್ರೊಸೆಸರ್ ಪಡೆದುಕೊಂಡಿದೆ. ಇನ್ನು ಈ ಲ್ಯಾಪ್​ಟಾಪ್​ನ ಸ್ಟೋರೇಜ್​ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಇದು 16ಜಿಬಿ ರ್‍ಯಾಮ್ ಮತ್ತು 1ಟಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.


  ಲೆನೋವೋ ಯೋಗ 9ಐ ಲ್ಯಾಪ್​ಟಾಪ್


  ಬ್ಯಾಟರಿ ಫೀಚರ್ಸ್​


  ಲೆನೋವೋ ಯೋಗ 9ಐ ಲ್ಯಾಪ್​ಟಾಪ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಬರೋಬ್ಬರಿ 12 ಗಂಟೆಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಇನ್ನು ಈ ಬ್ಯಾಟರಿ ಚಾರ್ಜಿಂಗ್​​ಗಾಗಿ 100W ವೇಗದ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಲ್ಯಾಪ್​ಟಾಪ್​ ವಿಶೇಷವಾಗಿ ಯುಎಸ್​ಬಿ ಟೈಪ್​ ಸಿ ಚಾರ್ಜಿಂಗ್ ಅಡಾಪ್ಟರ್​ ಅನ್ನು ಹೊಂದಿದೆ.


  ಇತರೆ ಫೀಚರ್ಸ್​


  ಇನ್ನು ಈ ಯೋಗ ಲ್ಯಾಪ್‌ಟಾಪ್ ಬ್ಯಾಕ್‌ಲಿಟ್ ಕೀಬೋರ್ಡ್, ToF ಸೆನ್ಸಾರ್​ 1080p IR ವೆಬ್‌ಕ್ಯಾಮ್, ಗೌಪ್ಯತೆಗಾಗಿ ಕ್ಯಾಮೆರಾ ಶಟರ್ ಮತ್ತು ಪ್ರಿಸಿಶನ್ ಪೆನ್ 2 ಆಯ್ಕೆ ಪಡೆದುಕೊಂಡಿದ್ದು, ಒಟ್ಟಾರೆಯಾಗಿ 15.25mm ದಪ್ಪ ಇದ್ದು, ಈ ಮೂಲಕ 1.4 ಕೆಜಿ ತೂಕ ಹೊಂದಿದೆ. ಹಾಗೆಯೇ ಇದರ ಬಾಡಿ ಅಲ್ಯೂಮಿನಿಯಂನಿಂದ ಕೂಡಿದ್ದು, ಪ್ರೀಮಿಯಂ ನೋಟದೊಂದಿಗೆ ಹೆಚ್ಚು ರಕ್ಷಣಾತ್ಮಕವಾಗಿದೆ.


  ಬೆಲೆ ಮತ್ತು ಲಭ್ಯತೆ


  ಇನ್ನು ಭಾರತದಲ್ಲಿ ಲೆನೋವೋ ಯೋಗ 9ಐ ಲ್ಯಾಪ್‌ಟಾಪ್‌ಗೆ 1,74,990 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ ಓಟ್‌ಮೀಲ್ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.


  ಇದನ್ನೂ ಓದಿ: ಐಫೋನ್​ನಲ್ಲಿ ಯಾರಿಗೂ ಗೊತ್ತಿರದ ಸೆಟ್ಟಿಂಗ್ಸ್​ಗಳಿವು! ಏನದು ಈಗಲೇ ನೋಡಿ


  ವಿಶೇಷವಾಗಿ ಲೆನೋವೋ ಯೋಗ 9ಐ ಲ್ಯಾಪ್​ಟಾಪ್ ಅನ್ನು ಪ್ರೀಬುಕಿಂಗ್ ಮೂಲಕವೂ ಖರೀದಿ ಮಾಡಬಹುದಾಗಿದೆ. ಆದರೆ ಜನವರಿ 29ರಿಂದ ಲೆನೋವೋ ಸ್ಟೋರ್​ಗಳಲ್ಲಿ, ಅಮೆಜಾನ್​, ಕ್ರೋಮಾ ಹಾಗೂ ರಿಲಯನ್ಸ್​ ಸ್ಟೋರ್​ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್​ಟಾಪ್​ ಲೆನೋವೋ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವಂತಹ ಹೊಸ ಲ್ಯಾಪ್​ಟಾಪ್ ಆಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು