• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Lenovo Laptop: ಭಾರತಕ್ಕೆ ಲಗ್ಗೆಯಿಟ್ಟಿದೆ ಹೊಸ ಲ್ಯಾಪ್​ಟಾಪ್​! ಒಂದೇ ಚಾರ್ಜ್​​ನಲ್ಲಿ 14 ಗಂಟೆಗಳ ಬ್ಯಾಟರಿ ಬ್ಯಾಕಪ್

Lenovo Laptop: ಭಾರತಕ್ಕೆ ಲಗ್ಗೆಯಿಟ್ಟಿದೆ ಹೊಸ ಲ್ಯಾಪ್​ಟಾಪ್​! ಒಂದೇ ಚಾರ್ಜ್​​ನಲ್ಲಿ 14 ಗಂಟೆಗಳ ಬ್ಯಾಟರಿ ಬ್ಯಾಕಪ್

ಲೆನೋವೋ ಐಡಿಯಾಪ್ಯಾಡ್​ 1 ಲ್ಯಾಪ್​ಟಾಪ್​

ಲೆನೋವೋ ಐಡಿಯಾಪ್ಯಾಡ್​ 1 ಲ್ಯಾಪ್​ಟಾಪ್​

ಲ್ಯಾಪ್​ಟಾಪ್​ ವಲಯದಲ್ಲಿ ಭಾರೀ ಮುಂಚೂಣಿಯಲ್ಲಿರುವ ಲೆನೋವೋ ಕಂಪೆನಿ ಮಾರುಕಟ್ಟೆಗೆ ಐಡಿಯಾಪ್ಯಾಡ್​ 1 ಎಂಬ ಹೆಸರನ್ನು ಹೊಂದಿರುವ ಲ್ಯಾಪ್​ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್​ಟಾಪ್​ ಗೇಮರ್​ಗಳಿಗೆ ಉತ್ತಮ ಅನುಭವ ನೀಡಲಿದೆ.

 • Share this:

  ಲ್ಯಾಪ್​ಟಾಪ್​ಗಳಿಗೆ (Laptops) ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ ಬಹಳಷ್ಟು ಬೇಡಿಕೆ. ಅದಕ್ಕಾಗಿ ಕಂಪೆನಿಗಳು ಸಹ ಹೊಸ ಮಾದರಿಯ ಲ್ಯಾಪ್​ಟಾಪ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಜನಪ್ರಿಯ ಲ್ಯಾಪ್​ಟಾಪ್​ ತಯಾರಿಕ ಕಂಪೆನಿಯಾಗಿರುವ ಲೆನೋವೋ (Lenovo) ಸದ್ಯ ಲ್ಯಾಪ್​ಟಾಪ್​ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಲು ರೆಡಿಯಾಗಿದೆ. ಇದೀಗ ಲೆನೋವೋ ಕಂಪೆನಿ ಮಾರುಕಟ್ಟೆಗೆ ಹೊಸ ಲ್ಯಾಪ್​ಟಾಪ್​ ಅನ್ನು ಅನಾವರಣ ಮಾಡಿದ್ದು, ಇದಕ್ಕೆ ಲೆನೋವೋ ಐಡಿಯಾಪ್ಯಾಡ್​ 1 (Lenovo Ideapad 1 Laptop) ಎಂದು ಹೆಸರಿಡಲಾಗಿದೆ. ಈ ಲ್ಯಾಪ್‌ಟಾಪ್‌ AMD ರೈಜೆನ್‌ 3 7320U ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಲೆನೋವೋ ಕಂಪೆನಿ ಘೋಷಣೆ ಮಾಡಿದೆ. ಇನ್ನು 'ಐಡಿಯಾಪ್ಯಾಡ್ 1' ಮಲ್ಟಿ ಟಾಸ್ಟ್‌ ಫಂಕ್ಷನ್‌ ಅನ್ನು ಸಹ ಒಳಗೊಂಡಿದೆ ಎಂದು ಹೇಳಲಾಗಿದೆ.


  ಲ್ಯಾಪ್​ಟಾಪ್​ ವಲಯದಲ್ಲಿ ಭಾರೀ ಮುಂಚೂಣಿಯಲ್ಲಿರುವ ಲೆನೋವೋ ಕಂಪೆನಿ ಮಾರುಕಟ್ಟೆಗೆ ಐಡಿಯಾಪ್ಯಾಡ್​ 1 ಎಂಬ ಹೆಸರನ್ನು ಹೊಂದಿರುವ ಲ್ಯಾಪ್​ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್​ಟಾಪ್​ ಗೇಮರ್​ಗಳಿಗೆ ಉತ್ತಮ ಅನುಭವ ನೀಡಲಿದೆ.


  ಡಿಸ್​ಪ್ಲೇ ವಿನ್ಯಾಸ


  ಲೆನೋವೋ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್‌ 15 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ವೀಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD Ryzen 3 7320U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, AMD Radeon 610M ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಸಹ ಹೊಂದಿದೆ.


  ಇದನ್ನೂ ಓದಿ: ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಈ ಬಾರಿಯ ಟಾಪ್ 5 ಸ್ಮಾರ್ಟ್​ಫೋನ್‌ಗಳಿವು!


  ಲೆನೋವೋ ಇಂಡಿಯಾದ ಡೈರೆಕ್ಟರ್ ಅವರ ಅಭಿಪ್ರಾಯ


  ಈ ಲ್ಯಾಪ್‌ಟಾಪ್ ಮೂಲಕ ಬಳಕೆದಾರರು ಮಲ್ಟಿಟಾಸ್ಕ್ ಅನ್ನು ಸುಲಭವಾಗಿ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ನೀವು ಆನ್‌ಲೈನ್‌ ತರಗತಿಗಳನ್ನು ಅಟೆಂಡ್‌ ಮಾಡುವುದಕ್ಕೆ ಹಾಗೂ ಸ್ನೇಹಿತರ ಜೊತೆಗೆ ಚಾಟ್​, ವಿಡಿಯೋ ಕಾಲ್​ ಮೂಲಕ ಸಂವಹನ ನಡೆಸುವುದಕ್ಕೆ ಅವಕಾಶ ದೊರೆಯಲಿದೆ.


  ಜೊತೆಗೆ ನಿಮ್ಮ ನೆಚ್ಚಿನ ಆನ್‌ಲೈನ್‌ ಪ್ರೋಗ್ರಾಂಗಳನ್ನು ಸ್ಟ್ರೀಮ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಆದರಿಂದ ಇದು ಅತ್ಯುತ್ತಮ ಗುಣಮಟ್ಟದ ಕಾರ್ಯಕ್ಷಮತೆಯನ್ನು ಹೊಂದಿದೆ ಡಿವೈಸ್‌ ಆಗಿದೆ ಎಂದು ಲೆನೋವೋ ಇಂಡಿಯಾದ ಡೈರೆಕ್ಟರ್ ಆಪ್‌ ಕನ್ಸೂಮರ್ ಬಿಸಿನೆಸ್ ದಿನೇಶ್ ನಾಯರ್ ಹೇಳಿದ್ದಾರೆ.


  ಲೆನೋವೋ ಐಡಿಯಾಪ್ಯಾಡ್​ 1 ಲ್ಯಾಪ್​ಟಾಪ್​


  ಬ್ಯಾಟರಿ ಹಾಗೂ ಇತರೆ ಫೀಚರ್ಸ್


  ಲೆನೋವೋ ಪರಿಚಯಿಸಿರುವ ಐಡಿಯಾಪ್ಯಾಡ್​ 1 ಲ್ಯಾಪ್‌ಟಾಪ್ 720p ಹೆಚ್​ಡಿ ಇನ್‌ಬಿಲ್ಟ್‌ ಕ್ಯಾಮೆರಾವನ್ನು ಹೊಂದಿದೆ. ಇದು ಪ್ರೈವೆಸಿ ಶಟರ್‌ ಅನ್ನು ಸಹ ಹೊಂದಿದ್ದು, ಇದರಿಂದ ನಿಮ್ಮ ಲ್ಯಾಪ್​ಟಾಪ್​ ಗೆ ವಂಚಕರು ಅಟ್ಯಾಕ್ ಮಾಡಿದಾಗ ಯಾರಿಗೂ ಕಾಣದ ಹಾಗೆ ರಕ್ಷಿಸುತ್ತದೆ. ಇನ್ನು ಇದರಲ್ಲಿರುವ ಝೆನ್ 2 ಕೋರ್ ಆರ್ಕಿಟೆಕ್ಚರ್ ಮತ್ತು AMD RDNA 2 ಗ್ರಾಫಿಕ್ಸ್ ಮಲ್ಟಿ ಪಂಕ್ಷನ್‌ ಅನ್ನು ಸುಲಭಗೊಳಿಸಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಲಾಂಗ್‌ ಬ್ಯಾಟರಿ ಅವಧಿಯನ್ನು ಹೊಂದಿದ್ದು, 14 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ಹೊಂದಿರುತ್ತದೆ ಎಂದು ಹೇಳಲಾಗಿದೆ.
  ಬೆಲೆ ಮತ್ತು ಲಭ್ಯತೆ


  ಲೆನೋವೋ ಐಡಿಯಾಪ್ಯಾಡ್‌ 1 ಭಾರತದಲ್ಲಿ 44,690 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಇದನ್ನು ಇದೇ ಫೆಬ್ರವರಿ 8 ರಿಂದ ಖರೀದಿಸಬಹುದಾಗಿದ್ದು, ಕ್ಲೌಡ್ ಗ್ರೇ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ. ಇದನ್ನು ಲೆನೋವೋ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಲೆನೋವೋ ಡಾಟ್ ಕಾಮ್, ಅಮೆಜಾನ್ ಮತ್ತು ದೊಡ್ಡ ಚಿಲ್ಲರೆ ಅಂಗಡಿಗಳಲ್ಲಿ ಖರೀದಿ ಮಾಡಬಹುದಾಗಿದೆ ಎಮದು ಲೆನೋವೋ ಕಂಪೆನಿ ಹೇಳಿಕೊಂಡಿದೆ.

  Published by:Prajwal B
  First published: