ವಾಟ್ಸಪ್ (Whatsapp) ತನ್ನ ಬಳಕೆದಾರರನ್ನು ಮೆಚ್ಚಿಸಲು ಆಸಕ್ತಿದಾಯಕ ಫೀಚರ್ಸ್ಗಳನ್ನು (Features) ಬಿಡುಗಡೆ ಮಾಡುತ್ತಿದೆ. ಬಳಕೆದಾರರ ಅಗತ್ಯಗಳನ್ನು ಗುರುತಿಸಿ ಮತ್ತು ಅವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಈ ರೀತಿಯ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಅಪ್ಡೇಟ್ಸ್ ಮೆಸೇಜ್ (Message) ಅನ್ನು ನಿಮಗೆ ನೀವೇ ಮಾಡುವ ವೈಶಿಷ್ಟ್ಯವನ್ನು ರಚಿಸಲಾಗಿದೆ. ಕೆಲವರು ನಮಗೆ ನಾವೇ ಸಂದೇಶ ಕಳುಹಿಸಬೇಕು ಎಂದು ಭಾವಿಸುತ್ತಿರುತ್ತಾರೆ. ತಮ್ಮ ಕೆಲವೊಂದು ಪ್ರಮುಖ ಮಾಹಿತಿಯನ್ನು ಎಲ್ಲಿ ಗೌಪ್ಯವಾಗಿಡುವುದು ಎಂದು ಅನೇಕರಿಗೆ ತಿಳಿದಿಲ್ಲ. ಅವರು ಅದನ್ನು ಎಲ್ಲೋ ಆ್ಯಡ್ (Add) ಮಾಡಿಡುತ್ತಾರೆ ಮತ್ತು ಕೆಲವೊಮ್ಮೆ ಮರೆತುಬಿಡುತ್ತಾರೆ. ಕೆಲವರು ಮೊಬೈಲ್ ನೋಟ್ಗಳಲ್ಲಿ (Mobile Note) ಆ್ಯಡ್ ಮಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇನ್ಮುಂದೆ ವಾಟ್ಸಪ್ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವಾಟ್ಸಪ್ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದ್ದು ಈ ಮೂಲಕ ಬಳಕೆದಾರರು ಸ್ವತಃ ಸಂದೇಶವನ್ನು ಕಳುಹಿಸಬಹುದು. ಪ್ರಮುಖ ಮಾಹಿತಿಗಳು, ರಿಮೈಂಡರ್ಗಳು, ಶಾಪಿಂಗ್ ಪಟ್ಟಿ, ಫೋಟೋಗಳು, ವೀಡಿಯೊಗಳು ಇತ್ಯಾದಿಗಳನ್ನು ಅವರ ಚಾಟ್ನಲ್ಲಿ ಉಳಿಸಬಹುದು.
ಇದರಿಂದ ಬಳಕೆದಾರರಿಗೆ ಬೇಕಾದ ವಿಷಯಗಳನ್ನು ಎಲ್ಲೋ ಹುಡುಕದೆ ಅವರ ಚಾಟ್ ತೆರೆದರೆ ಅದರಲ್ಲಿ ನೋಡಬಹುದಾಗಿದೆ. ಅವರು ಮುಚ್ಚಿಟ್ಟ ಎಲ್ಲಾ ವಿವರಗಳು ಅದರಲ್ಲಿ ಕಾಣುತ್ತವೆ. ಮತ್ತು ನೀವು ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: ವಾಟ್ಸಪ್ ಸ್ಟೇಟಸ್ನಲ್ಲಿ ಇನ್ಮುಂದೆ ವಾಯ್ಸ್ ಮೆಸೇಜ್ ಕೂಡ ಹಂಚಿಕೊಳ್ಬಹುದು! ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ
ಯಾವ ರೀತಿ ಬಳಸುವುದು?
ಈ ಫೀಚರ್ಸ್ ಮೂಲಕ ಬಳಕೆದಾರರು ತಮಗೆ ಬೇಕಾದ ಮೆಸೇಜ್ಅನ್ನು, ಫೋಟೋ, ವಿಡಿಯೋಗಳನ್ನು, ಅಗತ್ಯ ಮಾಹಿತಿಗಳನ್ನು ನಿಮ್ಮ ಪರ್ಸನಲ್ ಚಾಟ್ಗೆ ಕಳುಹಿಸಿ ಇಡಬಹುದಾಗಿದೆ. ಇದರಿಂದ ಯಾವುದೇ ಬೇರೆ ಅಪ್ಲಿಕೇಶನ್ನಲ್ಲಿ ಆ್ಯಡ್ ಮಾಡಿಟ್ಟು ಹುಡುಕಬೇಕಾದ ಅವಶ್ಯಕತೆ ಇರುವುದಿಲ್ಲ.
ವಾಟ್ಸಪ್ನ ವಾಯ್ಸ್ ಮೆಸೇಜ್ ಫೀಚರ್:
ಹೇಗಿರಲಿದೆ ಈ ಫೀಚರ್:
ವಾಟ್ಸಪ್ನಲ್ಲಿ ಈ ಹಿಂದೆ ಬಳಕೆದಾರರು ತನ್ನ ಸ್ಟೇಟಸ್ಗಳಲ್ಲಿ ವಿಡಿಯೋ, ಫೋಟೋ, ಲಿಂಕ್,ಬರಹಗಳನ್ನು ಮಾತ್ರ ಹಂಚಿಕೊಳ್ಳುವ ಅವಕಾಶಗಳಿತ್ತು. ಇದೀಗ ಇನ್ನುಮುಂದೆ ವಾಯ್ಸ್ ಮೆಸೇಜ್ ಅನ್ನು ಕೂಡ ಸ್ಟೇಟಸ್ನಲ್ಲಿ ಹಾಕಬಹುದಾಗಿದೆ. ಈ ಫೀಚರ್ ಮೊದಲಿಗೆ ಐಒಎಸ್ ಬಳಕೆದಾರರಿಗೆ ಬರಲಿದೆ ನಂತರದಲ್ಲಿ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಬರಲಿದೆ ಎಂದು ಹೇಳಿದ್ದಾರೆ.
ಈ ಫೀಚರ್ಸ್ನಲ್ಲಿವಾಯ್ಸ್ ಮೆಸೇಜ್ ಅನ್ನು 30 ಸೆಕೆಂಡ್ಗಳ ಕಾಲ ಶೇರ್ ಮಾಡಬಹುದಾಗಿದೆ. ಇಇದುವರೆಗೆ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಎಮಬ ಮತ್ತೊಂದು ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಮಾತ್ರ ಬಂದಿದೆ.
ಡೆಸ್ಕ್ಟಾಪ್ ಬಳಕೆದಾರರಿಗೆ ಸ್ಕ್ರೀನ್ ಲಾಕ್
ವಾಟ್ಸಪ್ ಪ್ರಸ್ತುತ ಡೆಸ್ಕ್ಟಾಪ್ ಬಳಕೆದಾರರಿಗೆ ಹೊಸದೊಂದು ಫೀಚರ್ ಅನ್ನು ತಂದಿದೆ. ಈ ಫೀಚರ್ ವೆಬ್ ಬಳಕೆದಾರರಿಗೆ ಗೌಪ್ಯತೆಯ ಬಗ್ಗೆ ಹೆಚ್ಚು ಭದ್ರತೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಮೆಟಾ ಮಾಲೀಕತ್ವದ ಕಂಪನಿ ಬಳಕೆದಾರರಿಗೆ ಈಗ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೀವು ಪ್ರತಿ ಬಾರಿ ಡೆಸ್ಕ್ಟಾಪ್ನಲ್ಲಿ ವಾಟ್ಸಪ್ ಅನ್ನು ತೆರೆದಾಗ, ನಿಮ್ಮ ಪಾಸ್ವರ್ಡ್ ಅನ್ನು ನಮೂದಿಸಲು ನಿಮ್ಮನ್ನು ಇದು ಕೇಳುತ್ತದೆ. ಇದರಿಂದ ಬೇರೆ ಯಾವುದೇ ವ್ಯಕ್ತಿಗಳಿಗೆ ನಿಮ್ಮ ಚಾಟ್ಗಳನ್ನು ಓದಲು, ನಿಮ್ಮ ವಾಟ್ಸಪ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ