Google Update: ಗೂಗಲ್​ ಟ್ರಾನ್ಸ್​ಲೇಟ್​ ಬಳಸ್ತೀರಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದ್ಲೇಬೇಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನಪ್ರಿಯ ಟೆಕ್ ಕಂಪೆನಿಯಾಗಿರುವ ಗೂಗಲ್ ಒಂದಲ್ಲೊಂದು ಫೀಚರ್ಸ್​ಗಳನ್ನು ಬಳಕೆದಾರರಿಗೆ ನೀಡುತ್ತಲೇ ಇದೀಗ. ಇದೀಗ ಕಂಪೆನಿ ಗೂಗಲ್​ ಟ್ರಾನ್ಸಲೇಟ್​ನಲ್ಲಿ ಹೊಸ ಫೀಚರ್ ತಂದಿದ್ದು, ಇನ್ಮುಂದೆ ಫೋಟೋದಲ್ಲಿರುವಂತಹ ಟೆಕ್ಟ್​ ಅನ್ನು ಸಹ ಅನುವಾದ ಮಾಡಿಕೊಳ್ಳಬಹುದು. 

  • News18 Kannada
  • 4-MIN READ
  • Last Updated :
  • New Delhi, India
  • Share this:

    ಟೆಕ್ ದೈತ್ಯ ಗೂಗಲ್(Google) ಬಳಕೆದಾರರಿಗೆ ಮ್ಯಾಪ್​, ಜಿಮೇಲ್, ಕ್ರೋಮ್ (Chrome), ಡಾಕ್ಸ್, ಗೂಗಲ್ ಡ್ರೈವ್‌ನಂತಹ ಹಲವಾರು ಉಪಯುಕ್ತ ಅಪ್ಲಿಕೇಶನ್‌ಗಳನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಗೂಗಲ್ ಅನುವಾದವು ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ. ಇದಕ್ಕೆ ಕಾರಣವೆಂದರೆ ಇದು ಹೊಂದಿರುವಂದತ ಅತ್ಯುತ್ತಮ ಅನುವಾದ ವೈಶಿಷ್ಟ್ಯಗಳು. ಆದರೆ ಅದನ್ನು ಉತ್ತಮಗೊಳಿಸಲ ಗೂಗಲ್​ ಕಾಲಕಾಲಕ್ಕೆ ಹೊಸ ಹೊದ ಆಯ್ಕೆಗಳನ್ನು ಸೇರಿಸುತ್ತಲೇ ಇರುತ್ತದೆ. ಇದರ ಭಾಗವಾಗಿ, ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಅನುವಾದವು ಇತ್ತೀಚೆಗೆ ಫೋಟೋಗಳಲ್ಲಿನ ಪಠ್ಯವನ್ನು (Image Text) ಇತರ ಭಾಷೆಗಳಿಗೆ ಭಾಷಾಂತರಿಸುವ ಸಾಧನವನ್ನು ಪರಿಚಯಿಸಿದೆ.


    ಜನಪ್ರಿಯ ಟೆಕ್ ಕಂಪೆನಿಯಾಗಿರುವ ಗೂಗಲ್ ಒಂದಲ್ಲೊಂದು ಫೀಚರ್ಸ್​ಗಳನ್ನು ಬಳಕೆದಾರರಿಗೆ ನೀಡುತ್ತಲೇ ಇದೀಗ. ಇದೀಗ ಕಂಪೆನಿ ಗೂಗಲ್​ ಟ್ರಾನ್ಸಲೇಟ್​ನಲ್ಲಿ ಹೊಸ ಫೀಚರ್ ತಂದಿದ್ದು, ಇನ್ಮುಂದೆ ಫೋಟೋದಲ್ಲಿರುವಂತಹ ಟೆಕ್ಟ್​ ಅನ್ನು ಸಹ ಅನುವಾದ ಮಾಡಿಕೊಳ್ಳಬಹುದು.


    ಫೋಟೋ ಟ್ರಾನ್ಸಲೇಟ್ ಫೀಚರ್​


    ಈ ಹಿಂದೆ, ಡೆಸ್ಕ್‌ಟಾಪ್ ವಾಯ್ಸ್​ ಅನ್ನು ಪಠ್ಯಕ್ಕೆ ಭಾಷಾಂತರಿಸಲು ಮತ್ತು ಟೈಪ್​ ಮಾಡಿದ ಕಂಟೆಂಟ್​ ಅನ್ನು ಭಾಷಾಂತರಿಸಲು ಮಾತ್ರ ಸೀಮಿತವಾಗಿತ್ತು. ಇದಕ್ಕಾಗಿ ಗೂಗಲ್​ ಟ್ರಾನ್ಸಲೇಟ್​ ಬಹಳಷ್ಟು ಉಪಯುಕ್ತವಾಗಿದೆ. ಆದರೆ ಈಗ ಹೊಸ ವೈಶಿಷ್ಟ್ಯದೊಂದಿಗೆ ಚಿತ್ರದಲ್ಲಿರುವ ಪಠ್ಯವನ್ನು ಆಯ್ಕೆಯ ಭಾಷೆಯಲ್ಲಿ ಅನುವಾದಿಸಬಹುದು. ಈ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಗೂಗಲ್​ ಅನುವಾದ ವೆಬ್‌ಸೈಟ್‌ಗೆ ಹೋಗಿ ಮತ್ತು ಅನುವಾದಿಸಬೇಕಾದ ಪಠ್ಯವನ್ನು ಹೊಂದಿರುವ ಚಿತ್ರವನ್ನು ಅಪ್‌ಲೋಡ್ ಮಾಡಿದರೆ ಆಯ್ತು.


    ಇದನ್ನೂ ಓದಿ: ಈ ದೇಶದಲ್ಲಿ ಭಾರೀ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಂಟರ್ನೆಟ್​​! ಬೆಲೆ ಎಷ್ಟು ಗೊತ್ತಾ?


    ಇನ್ನು ಈ ಹೊಸ ಫೀಚರ್​ ಗೂಗಲ್ ವೆಬ್​ ಬ್ರೌಸರ್ ಅನ್ನು ಹೊಂದಿರುವವರಿಗೆ ಮಾತ್ರ ಲಭ್ಯವಿದೆ. ಈ ಮೂಲಕ ಬಳಕೆದಾರರು ವೆಬ್​ ಬ್ರೌಸರ್​ಗಳಲ್ಲಿ ಗೂಗಲ್​​ ಟ್ರಾನ್ಸ್​​ಲೇಟ್​ ನಲ್ಲಿ ಫೋಟೋವನ್ನು ಅಪ್ಲೋಡ್​ ಮಾಡುವ ಮೂಲಕ ತಾವು ಟ್ರಾನ್ಸ್​​​ಲೇಟ್​ ಮಾಡಲು ಬಯಸುವ ಫೋಟೋವನ್ನು ಅನುವಾದ ಮಾಡ್ಬಹುದು. ಇನ್ನು ನೀವು ಟ್ರಾನ್ಸ್​ಲೇಟ್​ ಮಾಡಲು ಬಯಸುವ ಫೋಟೋವನ್ನು ಅಪ್​ಲೋಡ್​ ಮಾಡಿದ ತಕ್ಷಣ ಅಲ್ಲಿ ನಿಮಗೆ ಫ್ರಂ ಲ್ಯಾಂಗ್ವೇಜ್​ ಮತ್ತು ಡಿಟೆಕ್ಟ್ ಲ್ಯಾಂಗ್ವೇಜ್​ ಎಂಬ ಆಯ್ಕೆ ಸಿಗುತ್ತದೆ. ಇನ್ನು ಈ ಮೂಲಕ ಹಲವಾರು ಭಾಷೆಯಲ್ಲಿ ನೀವು ಟ್ರಾನ್ಸ್​​ಲೇಟ್​ ಮಾಡಿಕೊಳ್ಳಬಹುದು.


    ಫೋಟೋ ಟೆಕ್ಸ್ಟ್​ ಅನ್ನು ಟ್ರಾನ್ಸ್​ಲೇಟ್​ ಮಾಡುವುದು ಹೇಗೆ?


    ಹಂತ 1: ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಮೊದಲಿಗೆ ಗೂಗಲ್ ಟ್ರಾನ್ಸ್​​ಲೇಟ್​ ವೆಬ್‌ಸೈಟ್ ಓಪನ್ ಮಾಡಿ.


    ಹಂತ 2: ನಂತರ ಮೇಲಿನ ಬಲ ಮೂಲೆಯಲ್ಲಿ ಕಂಡುಬರುವ "ಚಿತ್ರಗಳು" ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.


    ಸಾಂಕೇತಿಕ ಚಿತ್ರ


    ಹಂತ 3: ನೀವು ಅನುವಾದಿಸಲು ಬಯಸುವ ಚಿತ್ರಕ್ಕಾಗಿ ನಿಮ್ಮ ಕಂಪ್ಯೂಟರ್ ಅನ್ನು ಬ್ರೌಸ್ ಮಾಡಿ.


    ಹಂತ 4: ಅನುವಾದಕ್ಕಾಗಿ ನೀವು jpg, jpeg ಅಥವಾ png ಮಾದರಿ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಈ ಸ್ವರೂಪದಲ್ಲಿಲ್ಲದ ಚಿತ್ರದಲ್ಲಿರುವ ಪಠ್ಯವನ್ನು ಅನುವಾದಿಸಲಾಗುವುದಿಲ್ಲ.


    ಹಂತ 5: ಅಪ್‌ಲೋಡ್ ಮಾಡಿದ ನಂತರ ನೀವು ಅನುವಾದಿಸಲು ಬಯಸುವ ವಿಷಯವನ್ನು ಅಲ್ಲಿ ಕಾಣಬಹುದು.




    130 ಭಾಷೆಗಳಲ್ಲಿ ಟ್ರಾನ್ಸ್​ಲೇಟ್​ ಮಾಡಿ


    ಗೂಗಲ್​ ನೀಡುವ ಈ ಹೊಸ ಅಪ್ಡೇಟ್​​ನೊಂದಿಗೆ, ಡೆಸ್ಕ್‌ಟಾಪ್ ಗೂಗಲ್ ಟ್ರಾನ್ಸ್​ಲೇಟ್​ನಲ್ಲಿ ಚಿತ್ರಗಳಿಂದ ಪಠ್ಯವನ್ನು 130 ವಿವಿಧ ಭಾಷೆಗಳಿಗೆ ಅನುವಾದಿಸಬಹುದು. ನೀವು ಈ ವೈಶಿಷ್ಟ್ಯವನ್ನು ಬಳಸಿದಾಗ, ಚಿತ್ರಗಳ ಪಠ್ಯವನ್ನು ಡೀಫಾಲ್ಟ್ ಆಗಿ ಹೊಂದಿಸಲಾದ ಭಾಷೆಗೆ ಅನುವಾದಿಸಲಾಗುತ್ತದೆ. ನೀವು ಅನುವಾದಿಸಿದ ಚಿತ್ರವನ್ನು ಡೌನ್‌ಲೋಡ್ ಮಾಡಬಹುದು ಅಥವಾ ಪ್ರಯಾಣದಲ್ಲಿರುವಾಗ ಇತರರಿಗೆ ತೋರಿಸಲು ಅನುವಾದಿತ ಪಠ್ಯವನ್ನು ಕಾಪಿ ಮಾಡಬಹುದು.

    Published by:Prajwal B
    First published: