• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Earbuds Launch: ಸ್ಟೈಲಿಶ್​ ಲುಕ್​ನಲ್ಲಿ ಮಾರುಕಟ್ಟೆಗೆ ಹೊಸ ಇಯರ್​ಬಡ್ಸ್​ ಎಂಟ್ರಿ! ಫೀಚರ್ಸ್​ ಕೇಳಿದ್ರೆ ಕಳೆದುಹೋಗ್ತೀರಾ!

Earbuds Launch: ಸ್ಟೈಲಿಶ್​ ಲುಕ್​ನಲ್ಲಿ ಮಾರುಕಟ್ಟೆಗೆ ಹೊಸ ಇಯರ್​ಬಡ್ಸ್​ ಎಂಟ್ರಿ! ಫೀಚರ್ಸ್​ ಕೇಳಿದ್ರೆ ಕಳೆದುಹೋಗ್ತೀರಾ!

ಜಬ್ರಾ ಎಲೈಟ್​ 5 ಇಯರ್​ಬಡ್ಸ್​

ಜಬ್ರಾ ಎಲೈಟ್​ 5 ಇಯರ್​ಬಡ್ಸ್​

Earbuds: ಇದೀಗ ಜನಪ್ರಿಯ ಟೆಕ್ ಕಂಪೆನಿಯಾಗಿರುವ ಜಬ್ರಾ ಭಾರತದಲ್ಲಿ ಹೊಸ ಇಯರ್​ಬಡ್ಸ್​ ಅನ್ನು ಪರಿಚಯಿಸಿದೆ. ಈ ಇಯರ್​​ಬಡ್ಸ್​​ಗೆ ಎಲೈಟ್​​ 5 ಟಿಡಬ್ಲೂಎಸ್​​ ಎಂದು ಹೆಸರಿಸಲಾಗಿದೆ. ಇನ್ನು ಈ ಡಿವೈಸ್​ ನಾಯ್ಸ್​​ ಕ್ಯಾನ್ಸಲಿಂಗ್​ ಫೀಚರ್​ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ.

ಮುಂದೆ ಓದಿ ...
  • Share this:

    ಟೆಕ್ನಾಲಜಿ ಕಂಪೆನಿಗಳು (Technology Company) ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಮುಂದುವರೆದಿದೆ. ಈ ಕಂಪೆನಿಗಳು ಮಾರುಕಟ್ಟೆಗೆ ಹೊಸ ಹೊಸ ಡಿವೈಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಜನರನ್ನು ತನ್ನತ್ತ ಸೆಲೆಯುವ ಪ್ರಯತ್ನ ಮಾಡುತ್ತಿರುತ್ತದೆ. ಈ ಹೊಸ ಡಿವೈಸ್​ಗಳಲ್ಲಿ (Tech Device) ಇಯರ್​​ಬಡ್ಸ್​​​ಗಳು (Earbuds) ಸಹ ಒಂದು. ಈಗ ಎಲ್ಲಿ ನೋಡಿದರೂ ನಾವು ಇಯರ್​​ಬಡ್ಸ್​ಗಳನ್ನೇ ನೋಡಬಹುದಾಗಿದೆ. ಹಿಂದೆಲ್ಲಾ ಯಾವುದೇ ಹಾಡು, ಕಾಲ್​ನಲ್ಲಿ ಮಾತನಾಡುವಾಗ ಇಯರ್​ಫೋನ್​ಗಳನ್ನು (Earphones) ಯೂಸ್​ ಮಾಡ್ತಾ ಇದ್ರು. ಆದರೆ ಈಗ ಇಯರ್​​ಬಡ್ಸ್​ಗಳೇ ಒಂದು ಟ್ರೆಂಡ್​ ಆಗಿಬಿಟ್ಟಿದೆ. ಇದಕ್ಕೆ ಮೂಲ ಕಾರಣ ಈ ಡಿವೈಸ್​ಗಳು ಹೊಂದಿರುವಂತಹ ಫೀಚರ್ಸ್​ಗಳಂತಾನೇ ಹೇಳ್ಬಹುದು.


    ಇದೀಗ ಜನಪ್ರಿಯ ಟೆಕ್ ಕಂಪೆನಿಯಾಗಿರುವ ಜಬ್ರಾ ಭಾರತದಲ್ಲಿ ಹೊಸ ಇಯರ್​ಬಡ್ಸ್​ ಅನ್ನು ಪರಿಚಯಿಸಿದೆ. ಈ ಇಯರ್​​ಬಡ್ಸ್​​ಗೆ ಎಲೈಟ್​​ 5 ಟಿಡಬ್ಲೂಎಸ್​​ ಎಂದು ಹೆಸರಿಸಲಾಗಿದೆ. ಇನ್ನು ಈ ಡಿವೈಸ್​ ನಾಯ್ಸ್​​ ಕ್ಯಾನ್ಸಲಿಂಗ್​ ಫೀಚರ್​ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ.


    ಜಬ್ರಾ ಎಲೈಟ್​​ 5 ಟಿಡಬ್ಲ್ಯೂಎಸ್​ ಇಯರ್​​ಬಡ್ಸ್​ ಫೀಚರ್ಸ್​


    ಜಬ್ರಾ ಎಲೈಟ್‌ 5 ಟ್ರೂ ವೈರ್​ಲೆಸ್​ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿವೆ. ಈ ಇಯರ್‌ಬಡ್ಸ್‌ಗಳು ಹೈಬ್ರಿಡ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಹೊಂದಿವೆ. ಇದು ಇಯರ್‌ಬಡ್ಸ್‌ನಲ್ಲಿ ಇನ್​​ಬಿಲ್ಡ್​​ ಆಗಿ ರಿಯಾಕ್ಷನ್‌ ಮೈಕ್ರೋಫೋನ್‌ಗಳು ಮತ್ತು ಫೀಡ್‌ಫಾರ್ವರ್ಡ್ ಮೈಕ್ರೊಫೋನ್‌ಗಳು ಹೊರಭಾಗದಲ್ಲಿ ಇರುವ ಹೆಚ್ಚಿನ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಕ್ಯಾನ್ಸಲ್‌ ಮಾಡಲಿದೆ.


    ಇದನ್ನೂ ಓದಿ: ಈ ರೀಚಾರ್ಜ್​ನಲ್ಲಿ ಡೇಟಾ, ಓಟಿಟಿ ಸೌಲಭ್ಯಗಳು ಉಚಿತ! ಎಷ್ಟು ಬೆಲೆ?


    ಚಿಪ್​ಸೆಟ್​ನ ಕಾರ್ಯನಿರ್ವಹಣೆ


    ಇನ್ನು ಈ ಇಯರ್‌ಬಡ್ಸ್‌ ಮತ್ತೊಂದು ವಿಶೇಷತೆ ಎಂದರೆ ಹಿಯರ್‌ ಥ್ರೋ ಟೆಕ್ನಾಲಜಿಗೆ ಬೆಂಬಲಿಸುವುದು. ಇದರಿಂದ ನೀವು ಇಯರ್‌ಬಡ್ಸ್‌ಗಳನ್ನು ತೆಗೆದುಹಾಕದೆಯೇ ಸುತ್ತಮುತ್ತಲಿನ ಶಬ್ದಗಳನ್ನು ಕೇಳಬಹುದು.


    ಜಬ್ರಾ ಎಲೈಟ್​ 5 ಇಯರ್​ಬಡ್ಸ್​


    ಅಂದರೆ ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೊಂದಿದ್ದರು ಸಹ ಹಿಯರ್‌ ಥ್ರೋ ಮೂಲಕ ಸುತ್ತಲಿನ ಶಬ್ದವನ್ನು ಆಲಿಸಬಹುದಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಕ್ವಾಲ್ಕಾಮ್‌ QCC3050 ಬ್ಲೂಟೂತ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 6-mic ಸೆಟಪ್‌ನೊಂದಿಗೆ ಬರುತ್ತದೆ.


    ಬ್ಯಾಟರಿ ಫೀಚರ್ಸ್​


    ವಿಶೇಷವಾಗಿ ಜಬ್ರಾ ಕಂಪೆನಿಯ ಈ ಇಯರ್​ಬಡ್ಸ್​ ಅನ್ನು ಏಕಕಾಲದಲ್ಲಿ ಎರಡು ಡಿವೈಸ್​ಗಳಿಗೆ ಕನೆಕ್ಟ್​​ ಮಾಡಬಹುದಾಗಿದೆ. ಇದು ಬ್ಲೂಟೂತ್ 5.2 ಆವೃತ್ತಿಯನ್ನು ಬೆಂಬಲಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಇಯರ್‌ಬಡ್ಸ್‌ IP55 ರೇಟಿಂಗ್ ಅನ್ನು ಹೊಂದಿದ್ದು, ಒಟ್ಟು 28 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ನೀಡಲಿದೆ.




    ಆದರೆ ಎಎನ್​ಸಿ ಆಕ್ಟಿವ್‌ ಮಾಡಿದ ಸಮಯದಲ್ಲಿ 7 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ನೀಡಲಿದೆ. ಇನ್ನು ಈಇಯರ್​ಬಡ್ಸ್ ಅನ್ನು 10 ನಿಮಿಷಗಳ ಕಾಲ ಚಾರ್ಜ್ ಮಾಡಿದ್ರೆ ಒಂದು ಗಂಟೆಗಳ ಕಾಲ ಪ್ಲೇ ಟೈಂ ಅನ್ನು ನೀಡಲಿದೆ. ಜೊತೆಗೆ, ನೀವು ಜಬ್ರಾ ಸೌಂಡ್‌ ಪ್ಲಸ್‌ ಅಪ್ಲಿಕೇಶನ್ ಮೂಲಕ EQ ಸೆಟ್ಟಿಂಗ್ಸ್‌ ಅನ್ನು ಕಸ್ಟಮೈಸ್ ಮಾಡಬಹುದಾಗಿದೆ. ಹಾಗೆಯೇ ಸ್ಪಾಟಿಫೈ ಟ್ಯಾಪ್ ಪ್ಲೇಬ್ಯಾಕ್ ಅನ್ನು ಬಳಸಬಹುದು ಎಂದು ವರದಿಯಾಗಿದೆ.


    ಜಬ್ರಾ ಎಲೈಟ್​ 5 ಇಯರ್​ಬಡ್ಸ್​ ಬೆಲೆ ಮತ್ತು ಲಭ್ಯತೆ


    ಜಬ್ರಾ ಎಲೈಟ್‌ 5 ಇಯರ್‌ಬಡ್ಸ್‌ ಭಾರತದಲ್ಲಿ 14,999 ರೂ. ಬೆಲೆಯನ್ನು ಹೊಂದಿದೆ. ಇದು ಫೆಬ್ರವರಿ 10 ರಿಂದ ಜನಪ್ರಿ ಇಕಾಮರ್ಸ್​ ವೆಬ್​ಸಯಟ್ ಆಗಿರುವ ಅಮೆಜಾನ್ ಇಂಡಿಯಾದ ಮೂಲಕ ಸೇಲ್‌ ಪ್ರಾರಂಭವಾಗಲಿದ್ದು, ಟೈಟಾನಿಯಂ ಕಪ್ಪು ಮತ್ತು ಗೋಲ್ಡ್ ಬೀಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗುತ್ತದೆ.

    Published by:Prajwal B
    First published: