ಇತ್ತೀಚೆಗೆ ಸ್ಮಾರ್ಟ್ಫೋನ್ಗಳ (Smartphones) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಟೆಕ್ನಾಲಜಿಯ ಪ್ರಗತಿ ಅಂತಾನೇ ಹೇಳ್ಬಹುದು. ಯಾಕೆಂದರೆ ಈಗ ಯಾವುದೇ ಕೆಲಸವನ್ನು ಮೊಬೈಲ್ ಮೂಲಕವೇ ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದಾಗಿದೆ. ಕೊರೊನಾ ಎಂಬ ಸಾಂಕ್ರಾಮಿಕ ರೋಕ ಬಂದ ನಂತರವಂತೂ ಮೊಬೈಲ್ ಮಾನವರ ಜೀವನದ ಪ್ರಮುಖ ಅಂಶವಾಗಿಬಿಟ್ಟಿದೆ. ಈ ಮೊಬೈಲ್ ಬಹಳಷ್ಟು ಫೀಚರ್ಸ್ಗಳನ್ನು ಹೊಂದಿದೆ. ಅದರಲ್ಲಿ ಕಾಲ್ ಮಾಡುವ ಸೌಲಭ್ಯವೂ ಒಂದು. ಆದರೆ ಇದರಲ್ಲಿ ಇತ್ತೀಚೆಗೆ ಕಾಲ್ ಅನ್ನು ರೆಕಾರ್ಡಿಂಗ್ ಮಾಡುವ ಸೌಲಭ್ಯವೂ ಬಂದಿದೆ. ಆದರೆ ಕೆಲವೊಂದು ಸ್ಮಾರ್ಟ್ಫೋನ್ಗಳಲ್ಲಿ ಇನ್ನೂ ಈ ಸೌಲಭ್ಯ ಲಭ್ಯವಿಲ್ಲ. ಆದರೆ ಇದೀಗ ಒಪ್ಪೋ ಕಂಪೆನಿ (Oppo Company) ಹೊಸ ಓಡಯಲರ್ (ODialer App) ಎಂಬ ಆ್ಯಪ್ ಅನ್ನು ಪರiಿಚಯಿಸಿದೆ.
ಒಪ್ಪೋ ಕಂಪೆನಿ ಓಡಯಲರ್ ಎಂಬ ಆ್ಯಪ್ ಅನ್ನು ಪರಿಸಿದೆ. ಈ ಆ್ಯಪ್ ಮೂಲಕ ಕಾಲ್ ಮಾಡಿದಾಗ ಗೌಪ್ಯವಾಗಿ ರೆಕಾರ್ಡ್ ಮಾಡುವ ಸೌಲಭ್ಯವನ್ನು ನೀಡುತ್ತದೆ. ಜೊತೆಗೆ ಈ ಆ್ಯಪ್ ಮೂಲಕವೇ ಕಾಂಟ್ಯಾಕ್ಟ್ಗಳನ್ನು ಸೇವ್ ಮಾಡಿಕೊಂಡು ಕಾಲ್ ಸಹ ಮಾಡಬಹುದು. ಹಾಗಿದ್ರೆ ಇದರ ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಓಪ್ಪೋ ಕಂಪೆನಿಯ ಓಡಯಲರ್ ಆ್ಯಪ್ ಫೀಚರ್ಸ್
ಈ ಆ್ಯಪ್ನಲ್ಲಿ ಕರೆಯಲ್ಲಿ ಮಾತನಾಡುವ ವ್ಯಕ್ತಿಗೆ ಮಾಹಿತಿ/ ಸೂಚನೆ ನೀಡದೆ ಕರೆಗಳನ್ನು ರೆಕಾರ್ಡ್ ಮಾಡಬಹುದು. ಇದರೊಂದಿಗೆ ಬಳಕೆದಾರರು ಇತ್ತೀಚಿನ ಕರೆಗಳನ್ನು ಸಹ ವೀಕ್ಷಿಸಬಹುದು. ಅಲ್ಲದೇ ಬಳಕೆದಾರರ ಕರೆಗಳನ್ನು ರೆಕಾರ್ಡ್ ಮಾಡಲು, ಸ್ಪೀಡ್ ಡಯಲ್ ಜೊತೆಗೆ ವೇಗವಾಗಿ ಫೋನ್ ಕರೆ ಮಾಡಲು ಮತ್ತು ಬಳಕೆದಾರರ ಕಾಂಟ್ಯಾಕ್ಟ್ಗಳನ್ನು ಒಂದೇ ಸ್ಥಳದಲ್ಲಿ ಸೇವ್ ಮಾಡಲು ಈ ಆ್ಯಪ್ ಬಳಕೆದಾರರಿಗೆ ಸಹಕಾರಿಯಾಗಲಿದೆ.
ಹಾಗೆಯೇ ಓಡಯಲರ್ ಆ್ಯಪ್ ಇತ್ತೀಚಿನ ಆಂಡ್ರಾಯ್ಡ್ 12 (Android 12) ಅಥವಾ ಅದಕ್ಕಿಂತ ಮುಂದಿನ ಆಪ್ರೇಟಿಂಗ್ ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಅಪ್ಲಿಕೇಶನ್ ಸರಳ ಆಪರೇಟಿಂಗ್ ಆಯ್ಕೆಗಳನ್ನು ಪಡೆದಿದ್ದು, ಬಳಕೆದಾರರಿಗೆ ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆ್ಯಪ್ಗಳ ಬಳಕೆ ದೂರ ಮಾಡಲಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯ
ಸದ್ಯ ಒಪ್ಪೋ ಸಂಸ್ಥೆ ಪರಿಚಯಿಸಿರುವ ಓಡಯಲರ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಇದು ಉತ್ತಮ ಫೀಚರ್ಸ್ ಅನ್ನು ಹೊಂದಿದ್ದು, ಗೌಪ್ಯತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಅಂದಹಾಗೆ ಓಡಯಲರ್ ಅಪ್ಲಿಕೇಶನ್ ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ 5000+ ಡೌನ್ಲೋಡ್ಗಳನ್ನು ಪಡೆದುಕೊಂಡಿದೆ, ಜೊತೆಗೆ 3.9 ರೇಟಿಂಗ್ ಸಹ ಪಡೆದುಕೊಂಡಿದೆ.
ಇತರೆ ಬೆಸ್ಟ್ ವಾಯ್ಸ್ ಅಪ್ಲಿಕೇಶನ್ಗಳು
ವಾಯ್ಸ್ ಪ್ರೋ ಆ್ಯಪ್
ವಾಯ್ಸ್ ಎಡಿಟಿಂಗ್ ಆ್ಯಪ್ ಭಿನ್ನ ಫೀಚರ್ಸ್ಗಳಿಂದ ಬಳಕೆದಾರರ ಗಮನ ಸೆಳೆದಿದ್ದು, ಒಟ್ಟು 100 ಭಿನ್ನ ಮಾದರಿ ಫಾರ್ಮ್ಯಾಟ್ಗಳಲ್ಲಿ ರೆಕಾರ್ಡಿಂಗ್ಗಳನ್ನು ಮಾಡಬಹುದಾಗಿದೆ. ವಾಯ್ಸ್ ರೆಕಾರ್ಡಿಂಗ್ ಫೈಲ್ಗಳನ್ನು ಮೊನೊ ಅಥವಾ ಸ್ಟೀರಿಯೋ ಫಾರ್ಮ್ಯಾಟ್ಗಳಲ್ಲಿ ಸೇವ್ ಮಾಡಬಹುದು. ಇದರೊಂದಿಗೆ ನಿಮ್ಮ ರೆಕಾರ್ಡಿಂಗ್ ವಾಯ್ಸ್ಗೆ ಹಿನ್ನಲೆಯಾಗಿ ಮ್ಯೂಸಿಕ್ ಸಹ ಸೇರಿಸಬಹುದಾದ ಸೌಲಭ್ಯ ಇದೆ. ಅದಕ್ಕಾಗಿ ಮಿಕ್ಸ್ ಮತ್ತು ಮರ್ಜ್ ಆಯ್ಕೆಗಳು ಇವೆ. ಈ ಮೂಲಕ ಮ್ಯೂಸಿಕ್ ಆ್ಯಡ್ ಮಾಡಬಹುದು. ಕಾಲ್ ರೆಕಾರ್ಡಿಂಗ್ ಆಯ್ಕೆ ಸಹ ಇದರಲ್ಲಿ ಲಭ್ಯವಿದೆ.
ಮ್ಯೂಸಿಕ್ ಎಡಿಟರ್ ಆ್ಯಪ್
ಮ್ಯೂಸಿಕ್ ಎಡಿಟರ್ ಅಪ್ಲಿಕೇಶನ್ ಹಾಡುಗಳನ್ನು ಎಡಿಟ್ ಮಾಡಲು ಸಹಕಾರಿಯಾಗುತ್ತದೆ. ಈ ಆ್ಯಪ್ ಮೂಲಕ ಹಾಡುಗಳನ್ನು ಕಟ್ ಮಾಡಬಹುದು, ರಿಂಗ್ಟ್ಯೂನ್ ಆಗಿ ಸೆಟ್ ಮಾಡಬಹುದಾಗಿದೆ. ಜೊತೆಗೆ ಈ ಆ್ಯಪ್ ಮೂಲಕ ಹಾಡುಗಳನ್ನು ಎಡಿಟ್ ಮಾಡಬಹುದು ಹಾಗೂ ಇನ್ನಿತರೆ ಎಡಿಟಿಂಗ್ ಸೌಲಭ್ಯಗಳು ಸಹ ಲಭ್ಯ ಇವೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರ್ತಿದೆ ಶಿಯೋಮಿ ಕಂಪೆನಿಯ ಸ್ಮಾರ್ಟ್ಫೋನ್! ಫೀಚರ್ಸ್ ಹೇಗಿದೆ ಗೊತ್ತಾ?
ಜೊತೆಗೆ ಈ ಆ್ಯಪ್ನಲ್ಲಿ ಬಳಕೆದಾರರು ಆಡಿಯೋ ಕಂಪೋಸ್, ಟ್ರಿಮ್ ಆಡಿಯೋ, ಮರ್ಜ್ ಆಡಿಯೋ, ಫೈಲ್ ಸೇರಿಸುವುದು ಸೌಲಭ್ಯಗಳನ್ನು ಸಹ ಬಳಕೆ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ